Punjab Crisis: ಇಂದು ಪಂಜಾಬಿನ ಮೊದಲ ದಲಿತ ಸಿಎಂ ಆಗಿ ಚರಣ್​ಜೀತ್ ಸಿಂಗ್ ಚನ್ನಿ ಪ್ರಮಾಣ ವಚನ ಸ್ವೀಕಾರ

ಮುಖ್ಯಮಂತ್ರಿ ಸ್ಥಾನಕ್ಕೆ ಹೆಸರು ಕೇಳಿಬಂದಿದ್ದ ಸುಖಜಿಂದರ್ ಸಿಂಗ್ ರಂಧವಾ (Sukhajindar Sing Rawath) ಅವರಿಗೆ ಉಪ ಮುಖ್ಯಮಂತ್ರಿ (Deputy Chief Minister) ಸ್ಥಾನ ನೀಡಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದ್ದು, ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ ಅವರೊಂದಿಗೆ ರಾವತ್ ಕೂಡ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಚರಣ್​ಜೀತ್ ಸಿಂಗ್ ಚನ್ನಿ

ಚರಣ್​ಜೀತ್ ಸಿಂಗ್ ಚನ್ನಿ

  • Share this:
ಅಮೃತಸರ(ಸೆ. 20): ಕ್ಯಾಪ್ಟನ್ ಅಮರೀಂದರ್ ಸಿಂಗ್ (Captain Amarindar Sing) ರಾಜೀನಾಮೆಯಿಂದ ತೆರವಾಗಿರುವ ಪಂಜಾಬ್ ಮುಖ್ಯಮಂತ್ರಿ (Punjab Chief Minister) ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ಮತ್ತು ಸುಖಜಿಂದರ್ ಸಿಂಗ್ ರಾಂಧವ ಹೆಸರುಗಳು ದಟ್ಟವಾಗಿ ಕೇಳಿ ಬಂದಿದ್ದವು. ಆದರೆ ಅಂತಿಮವಾಗಿ ಕಾಂಗ್ರೆಸ್ ಪಕ್ಷದ ಹೈಕಮಾಂಡ್ (Congress High Command) ಚರಣ್​ಜೀತ್ ಸಿಂಗ್ ಚನ್ನಿ (Charanjith Sing Channi) ಅವರನ್ನು ಆಯ್ಕೆ ಮಾಡಿದೆ. ಭಾನುವಾರ ಸಂಜೆ ಪಂಜಾಬ್ ಕಾಂಗ್ರೆಸ್ ಉಸ್ತುವಾರಿ ಹರೀಶ್ ರಾವತ್ (Punjab Congress In Charge Harish Rawath) ಅವರು ಚರಣ್​ಜೀತ್ ಸಿಂಗ್ ಚನ್ನಿ ಮುಂದಿನ ಪಂಜಾಬ್ ಸಿಎಂ ಎಂದು ಹೆಸರು ಪ್ರಕಟಿಸಿದ್ದರು.‌ ಇಂದು 58 ವರ್ಷದ ಚರಣ್​ಜೀತ್ ಸಿಂಗ್ ಚನ್ನಿ ಪಂಜಾಬಿನ ಮೊದಲ ದಲಿತ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ದಲಿತ ಸಮುದಾಯದ ಚರಣ್​ಜೀತ್ ಸಿಂಗ್ ಚನ್ನಿ ಅವರು ಇದ್ದದ್ದರಲ್ಲಿ ಕಾಂಗ್ರೆಸ್ ಪಾಲಿಗೆ ಇದ್ದ ಸೇಫ್ ಆಯ್ಕೆಯಾಗಿದೆ. ಅದೇ ಕಾರಣಕ್ಕೆ ಪಂಜಾಬ್ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಚರಣಜೀತ್ ಸಿಂಗ್ ಚನ್ನಿ ಅವರನ್ನು ಒಮ್ಮತದಿಂದ ಆಯ್ಕೆ ಮಾಡಲಾಗಿದೆ. ಚರಣ್​ಜೀತ್ ಸಿಂಗ್ ಚನ್ನಿ ಅವರು ಪಂಜಾಬ್ ರಾಜ್ಯದ ಮೊದಲ ದಲಿತ ಮುಖ್ಯಮಂತ್ರಿ ಎಂಬ ದಾಖಲೆಗೆ ಭಾಜನರಾಗಲಿದ್ದಾರೆ. ಈ ಹಿಂದೆ ಅವರು ಅಮರೀಂದರ್ ಸಿಂಗ್ ಸಂಪುಟದಲ್ಲಿ ತಾಂತ್ರಿಕ ಶಿಕ್ಷಣ ಸಚಿವರಾಗಿದ್ದರು. ‌ದಲಿತರ ಪೈಕಿ ಚಮ್ಮಾರ್ ಸಮುದಾಯದ ಚರಣಜಿತ್ ಸಿಂಗ್ ಚನ್ನಿ ಚಮಕೌರ್ ಸಾಹಿಬ್ ಕ್ಷೇತ್ರದಿಂದ ಮೂರನೇ ಬಾರಿ ಶಾಸಕರಾಗಿದ್ದಾರೆ. 2015 ರಿಂದ 2016 ರವರೆಗೆ ಪಂಜಾಬ್ ವಿಧಾನಸಭೆಯಲ್ಲಿ ಇವರು ವಿರೋಧ ಪಕ್ಷದ ನಾಯಕರಾಗಿ ಕೂಡ ಕೆಲಸ ಮಾಡಿದ್ದರು.

ಇದನ್ನೂ ಓದಿ:CM Channi- ಬಿಜೆಪಿಯಂತೆ ಅಚ್ಚರಿ ಕೊಟ್ಟ ಕಾಂಗ್ರೆಸ್; ದಲಿತ ನಾಯಕ ಚನ್ನಿ ನೂತನ ಪಂಜಾಬ್ ಸಿಎಂ

ಡಿಸಿಎಂ ಆಗಲಿರುವ ರಾವಂತ್

ಮುಖ್ಯಮಂತ್ರಿ ಸ್ಥಾನಕ್ಕೆ ಹೆಸರು ಕೇಳಿಬಂದಿದ್ದ ಸುಖಜಿಂದರ್ ಸಿಂಗ್ ರಂಧವಾ (Sukhajindar Sing Rawath) ಅವರಿಗೆ ಉಪ ಮುಖ್ಯಮಂತ್ರಿ (Deputy Chief Minister) ಸ್ಥಾನ ನೀಡಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದ್ದು, ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ ಅವರೊಂದಿಗೆ ರಾವತ್ ಕೂಡ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದಲ್ಲದೆ ‌ಇನ್ನೂ ಒಂದು ಉಪ ಮುಖ್ಯಮಂತ್ರಿ ಸ್ಥಾನ ಸೃಷ್ಟಿ ಆಗಲಿದೆ ಎಂದು ಪಂಜಾಬ್ ಕಾಂಗ್ರೆಸ್ ಉಸ್ತುವಾರಿ ಹರೀಶ್ ರಾವತ್ ಹೇಳಿದ್ದಾರೆ. ಅದು ಯಾರು ಎಂಬುದು ಇನ್ನಷ್ಟೇ ನಿರ್ಧಾರವಾಗಬೇಕಿದೆ.

ಸಿಧು ಕೈತಪ್ಪಿದ ಅವಕಾಶ

ನವಜೋತ್ ಸಿಂಗ್ ಸಿಧು (Navajoth Sing Sidhu) ಅವರೂ ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಯತ್ನಿಸಿದ್ದರು. ಗಾಂಧಿ ಕುಟುಂಬಕ್ಕೆ ನಿಕಟವಾಗಿರುವ ನವಜೋತ್ ಸಿಂಗ್ ಸಿಧು ಅವರಿಗೆ ಮುಖ್ಯಮಂತ್ರಿ ಸ್ಥಾನ ಸದ್ಯಕ್ಕೆ ಸಿಗಲಿಲ್ಲವಾದರೂ ಮುಂದಿನ ದಿನಗಳಲ್ಲಿ ಪಂಜಾಬ್ ಅಧಿಕಾರದಲ್ಲಿ ಅವರ ಪಾತ್ರ ಮಹತ್ತರ ಇರಲಿದೆ ಎನ್ನಲಾಗುತ್ತಿದೆ. ಸಿಧು ಅವರ ಆಪ್ತರೊಬ್ಬರ ಪ್ರಕಾರ, ಪಂಜಾಬ್ ಕಾಂಗ್ರೆಸ್​ನಲ್ಲಿ ಯಾರು ಬಾಸ್ ಎಂಬುದು ಈಗ ಸ್ಪಷ್ಟವಾಗಿದೆ. ಯಾರೇ ಸಿಎಂ ಆಗಲಿ ಸಿಧು ಅವರೇ ಮ್ಯಾನ್ ಆಫ್ ದ ಮ್ಯಾಚ್ ಆಗುತ್ತಾರೆ ಎಂದು ನೂತನ ಸಿಎಂ ಆಯ್ಕೆಗೂ ಕೆಲ ಹೊತ್ತಿನ ಮೊದಲು ಹೇಳಿದ್ದರು.

ನವಜೋತ್ ಸಿಂಗ್ ಸಿಧು ಅವರನ್ನ ಸಿಎಂ ಮಾಡಲು ಗಾಂಧಿ ಕುಟುಂಬದ ಸದಸ್ಯರು ಒಲವು ತೋರಿದ್ದರು. ಮುಂದಿನ ಚುನಾವಣೆ ದೃಷ್ಟಿಯಿಂದ ಸಿಧು ಸಿಎಂ ಆಗುವುದು ಒಳ್ಳೆಯದು ಎಂಬುದು ಅವರ ಅಭಿಪ್ರಾಯವಾಗಿತ್ತು. ಆದರೆ ಸಾಕಷ್ಟು ಅಳೆದು ತೂಗಿ ಜಾತಿ ಲೆಕ್ಕಾಚಾರ ಹಾಕಲಾಯಿತು. ಸುನೀಲ್ ಜಖರ್, ಅಂಬಿಕಾ ಸೋನಿ, ನವಜೋತ್ ಸಿಂಗ್ ಸಿಂಧು, ಸುಖಜಿಂದರ್ ಸಿಂಗ್ ರಂಧವಾ, ಚರಣ್​ಜೀತ್ ಸಿಂಗ್ ಚನ್ನಿ ಅವರ ಹೆಸರು ಈ ವೇಳೆ ಚರ್ಚೆಗೆ ಬಂದವು. ಈ ವೇಳೆ ಸಿಧು ಬೆಂಬಲಿಗರೆನಿಸಿದ ಪ್ರಬಲ ಜಾಟ್ ಸಮುದಾಯದ ರಂಧವಾ ಹೆಸರು ಬಹುತೇಕ ಖಚಿತ ಎಂಬಂತಿತ್ತು. ಬಹುತೇಕ ಎಲ್ಲಾ ಶಾಸಕರ ಬೆಂಬಲ ಅವರಿಗಿದೆ ಎನ್ನಲಾಗುತ್ತಿತ್ತು. ಆದರೆ ಅಂತಿಮವಾಗಿ ದಲಿತ ಸಮುದಾಯದ ಚನ್ನಿಗೆ ಕಾಂಗ್ರೆಸ್ ಕೈಹಿಡಿದಿದೆ. ಪಂಜಾಬ್​ನ ಎಲ್ಲಾ ಧರ್ಮಗಳನ್ನು ಪರಿಗಣಿಸಿದರೆ ದಲಿತ ವರ್ಗದವರ ಸಂಖ್ಯೆ ಮೂರನೇ ಒಂದರಷ್ಟಿದೆ. ಅಂದರೆ ಪಂಜಾಬ್​ನ ಅತಿ ದೊಡ್ಡ ಸಮುದಾಯವಾಗಿರುವ ದಲಿತ ವ್ಯಕ್ತಿಯನ್ನ ಸಿಎಂ ಸ್ಥಾನಕ್ಕೇರಿಸಿದರೆ ಮುಂದಿನ ಚುನಾವಣೆಯಲ್ಲಿ ಬೆಂಬಲ ಹೆಚ್ಚಿಸಿಕೊಳ್ಳಬಹುದು ಎಂಬ ಲೆಕ್ಕಾಚಾರ ಕಾಂಗ್ರೆಸ್ ಪಕ್ಷದ್ದಾಗಿದೆ.

ಇದನ್ನೂ ಓದಿ:Photos: 3 ಬಾರಿ ಶಾಸಕರಾದ ಚರಣಜಿತ್ ಸಿಂಗ್ ಚನ್ನಿಯನ್ನು ಪಂಜಾಬ್‌ನ ಮೊದಲ ದಲಿತ ಸಿಎಂ ಆಗಿ ಆಯ್ಕೆ ಮಾಡಿದ ಕಾಂಗ್ರೆಸ್!

ಚನ್ನಿ ಮತ್ತು ಮೀಟೂ ಆರೋಪ

ಸಿಎಂ ಸ್ಥಾನಕ್ಕೆ ಚನ್ನಿ ಹೆಸರು ಖಚಿತವಾದಂತೆ ಅವರ ಮೇಲೆ ಈ ಹಿಂದೆ ಬಂದಿದ್ದ ಮೀಟೂ ಆರೋಪದ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಮುನ್ನೆಲೆಗೂ ಬಂದಿದೆ. ಮೂರು ವರ್ಷಗಳ ಹಿಂದೆ 2018ರಲ್ಲಿ ಚರಣ್​ಜೀತ್ ಸಿಂಗ್ ಚನ್ನಿ ಅವರು ಮಹಿಳಾ ಐಎಎಸ್ ಅಧಿಕಾರಿಯೊಬ್ಬರಿಗೆ ಅಶ್ಲೀಲ ಸಂದೇಶ ಕಳುಹಿಸಿದ ಆರೋಪ ಎದುರಿಸಿದ್ದರು. ಈ ವಿಚಾರವನ್ನು ತಮ್ಮ ಟ್ವೀಟ್​ನಲ್ಲಿ ಪ್ರಸ್ತಾಪಿಸಿದ ಬಿಜೆಪಿ ವಕ್ತಾರ ಅಮಿತ್ ಮಾಳವಿಯಾ, ಮುಚ್ಚಿಹಾಕಲಾಗಿದ್ದ ಚನ್ನಿಯ ಮೀಟೂ ಪ್ರಕರಣ ಪಂಜಾಬ್ ಮಹಿಳಾ ಆಯೋಗ ನೀಡಿದ ನೋಟೀಸ್ ಬಳಿಕ ಮತ್ತೆ ಪ್ರತ್ಯಕ್ಷವಾಗಿತ್ತು ಎಂದಿದ್ದಾರೆ.
Published by:Latha CG
First published: