ಚನ್ನಿ, ಅಮರಿಂದರ್​ ಸಿಂಗ್​, ಸೋನು ಸೂದ್​ ಸಹೋದರಿ ಸೇರಿದಂತೆ Punjab​ನಲ್ಲಿ ಅನೇಕ ರಾಜಕೀಯ ದಿಗ್ಗಜರ ಸೋಲು

ಕಾಂಗ್ರೆಸ್​ ಅಭ್ಯರ್ಥಿಯಾಗಿದ್ದ ಮಾಳವಿಕಾ ಪರ ನಟ ಸೋನು ಸೂದ್​ ಕೂಡ ಭರ್ಜರಿ ಪ್ರಚಾರ ನಡೆಸಿದ್ದರು ಆದರೆ, ಅವರು ಕೂಡ ತಮ್ಮ ಮೊದಲ ಗೆಲುವು ಸಾಧಿಸುವಲ್ಲಿ ವಿಫಲರಾಗಿದ್ದಾರೆ.

ನವಜೋತ್ ಸಿಂಗ್ ಸಿಧು ಹಾಗೂ ಸಿಎಂ ಚರಣಜಿತ್ ಸಿಂಗ್ ಚನ್ನಿ

ನವಜೋತ್ ಸಿಂಗ್ ಸಿಧು ಹಾಗೂ ಸಿಎಂ ಚರಣಜಿತ್ ಸಿಂಗ್ ಚನ್ನಿ

 • Share this:
  ಪಂಜಾಬ್​ ಚುನಾವಣೆಯಲ್ಲಿ (Punjab Election)  ಆಮ್​ ಆದ್ಮಿ ಪಕ್ಷ (AAP) ನಿರೀಕ್ಷೆಗೂ ಮೀರಿದ ಗೆಲುವು ಸಾಧಿಸಿದೆ. ಇದೇ ವೇಳೆ ಪಂಜಾಬ್​ನ ಘಟಾನುಘಟಿ ನಾಯಕರು (Political Stalwarts in Punjab) ಕೂಡ ಸೋಲಿನ ರುಚಿ ಕಂಡಿದ್ದಾರೆ. ಅನೇಕ ರಾಜಕೀಯ ದಿಗ್ಗಜರು, ಹಿರಿಯ ನಾಯಕರು, ಪಂಜಾಬ್​ ಮುಖ್ಯಮಂತ್ರಿ ಚರಂಜಿತ್​ ಸಿಂಗ್​ ಚನ್ನಿ ಕೂಡ ಸೋಲು ಕಂಡಿದ್ದಾರೆ. ಅನೇಕ ಕಾಂಗ್ರೆಸ್​ ನಾಯಕರು ಈ ಬಾರಿ ಗೆಲುವಿಗೆ ಹರ ಸಾಹಸ ಪಟ್ಟಿದ್ದಾರೆ. ಇನ್ನು ಕಾಂಗ್ರೆಸ್(Congress)​ನಿಂದ ಇದೇ ಮೊದಲ ಬಾರಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದ ಸೋನು ಸೂದ್​ ಸಹೋದರಿ ಮಾಳವಿಕಾ ಕೂಡ ಸೋಲು ಕಂಡಿದ್ದಾರೆ. ಇನ್ನು ಮಾಜಿ ಸಿಎಂ ಅಮರಿಂದರ್​​ ಸಿಂಗ್ (Amrindar singh)​ ಮತ್ತು ಪಂಜಾಬ್​ ಕಾಂಗ್ರೆಸ್​ ಅಧ್ಯಕ್ಷ ನವಜೋತ್​ ಸಿಂಗ್ ಸಿಧು (Navjot sing sidhu)​ ಎಎಪಿ ಅಭ್ಯರ್ಥಿ ವಿರುದ್ಧ ಹಿನ್ನಡೆ ಅನುಭವಿಸಿದ್ದಾರೆ.

  ಎರಡೂ ಕ್ಷೇತ್ರದಲ್ಲೂ ಪಂಜಾಬ್​ ಸಿಎಂ ಸೋಲು
  ಪಂಜಾಬ್​ ಸಿಎಂ ಚರಂಜಿತ್ ಸಿಂಗ್​ ಚನ್ನಿ ಕಣಕ್ಕೆ ಇಳಿದಿದ್ದ ಎರಡೂ ಕ್ಷೇತ್ರದಲ್ಲೂ ಸೋಲು ಅನುಭವಿಸಿದ್ದಾರೆ. ಬಹದ್ದೂರ್​ ಕ್ಷೇತ್ರದಲ್ಲಿ ಎಎಪಿ ಅಭ್ಯರ್ಥಿ ಲಬ್​ ಸಿಂಗ್​ ಉಗೋಕೆ ವಿರುದ್ಧ 37 ಸಾವಿರ ಮತಗಳ ಅಂತರದಿಂದ ಹಾಗೂ ಚಮ್ಕೌರ್​ ಸಹೀಬ್​ನಲ್ಲಿ ಎಎಪಿ ಅಭ್ಯರ್ಥಿ 6000 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ.

  ನವಜೋತ್​ ಸಿಂಗ್​ ಸಿಧುಗೂ ಸೋಲು
  ಅಮೃತ್​ಸರ ಪೂರ್ವದಿಂದ ಕಣಕ್ಕೆ ಇಳಿದಿದ್ದ ಪಂಜಾಬ್​​ ಕಾಂಗ್ರೆಸ್​ ಅಧ್ಯಕ್ಷರಾಗಿರುವ ನವಜೋತ್​ ಸಿಂಗ್​ ಸಿಧು ಕೂಡ ಎಎಪಿ ಅಭ್ಯರ್ಥಿ ಜೀವನ್​ ಜ್ಯೊತ್​​ ಕೌರ್​ ವಿರುದ್ಧ 5000 ಮತಗಳ ಅಂತರದಿಂದ ಸೋತಿದ್ದು, ಜನರ ತೀರ್ಪಿಗೆ ತಲೆ ಬಾಗುವುದಾಗಿ ತಿಳಿಸಿದ್ದಾರೆ. ಜನರ ಧ್ವನಿ, ದೇವರ ಧ್ವನಿಯಂತೆ ನಾನು ಪಂಜಾಬ್​ ಜನರ ತೀರ್ಪು ಒಪ್ಪುತ್ತೇನೆ ಎಂದಿದ್ದಾರೆ.

  ಇದನ್ನು ಓದಿ:  ಸ್ಟ್ಯಾಂಡ್ ಅಪ್ ಕಾಮಿಡಿಯನ್ ಆಗಿದ್ದ ಭಗವಂತ್ ಮಾನ್‌ ಪಂಜಾಬ್ ಸಿಎಂ ಆಗುವ ಮಟ್ಟಕ್ಕೆ ಬೆಳೆದಿದ್ದು ಹೇಗೆ?

  ಪ್ರಕಾಶ್​ ಸಿಂಗ್​ ಬಾದಲ್​ಗೆ ಸೋಲು
  ಇನ್ನು ಶಿರೋಮಣಿ ಅಕಾಲಿ ದಳದ ನಾಯಕ, ಐದು ಬಾರಿ ಪಂಜಾಬ್​ ಸಿಎಂ ಗದ್ದುಗೆ ಏರಿದ್ದ ಪ್ರಕಾಶ್​ ಸಿಂಗ್​ ಬಾದಲ್​ ಕೂಡ ಎಎಪಿ ಅಭ್ಯರ್ಥಿ ಗುರಮೀತ್​ ಸಿಂಗ್​​ ವಿರುದ್ಧ ಲಂಬಿ ಕ್ಷೇತ್ರದಲ್ಲಿ ಸೋತಿದ್ದಾರೆ. ಇನ್ನು ಪಂಜಾಬ್​ ಚುನಾವಣೆ ಎದುರಿಸುತ್ತಿರುವ ಅತ್ಯಂತ ಹಿರಿಯ ನಾಯಕ ಕೂಡ ಇವರಾಗಿದ್ದಾರೆ. 94 ವರ್ಷದ ಬಾದಲ್​ ಮರು ಚುನಾವಣೆಗೆ ಕೂಡ ಆಗ್ರಹಿಸಿದ್ದಾರೆ.

  ಶಿರೋಮಣಿ ಅಕಾಲಿದಳದ ಮುಖ್ಯಸ್ಥ ಸುಖಬೀರ್ ಸಿಂಗ್ ಬಾದಲ್, ಮಾಜಿ ಮುಖ್ಯಮಂತ್ರಿ ರಾಜಿಂದರ್ ಕೌರ್ ಭಟ್ಟಾಲ್, ಪಂಜಾಬ್ ಕಾಂಗ್ರೆಸ್ ಮಾಜಿ ಮುಖ್ಯಸ್ಥ ಪರ್ತಾಪ್ ಸಿಂಗ್ ಬಾಜ್ವಾ, ಎಸ್ಎಡಿ ನಾಯಕ ಬಿಕ್ರಮ್ ಸಿಂಗ್ ಮಜಿಥಿಯಾ ಮತ್ತು ಮಾಜಿ ಕೇಂದ್ರ ಸಚಿವ ವಿಜಯ್ ಸಂಪ್ಲಾ ಕೂಡ ಹಿನ್ನಡೆ ಅನುಭವಿಸಿದ್ದಾರೆ.

  ಇದನ್ನು ಓದಿ: ಪಂಜಾಬ್​ನಲ್ಲಿ AAP ಗೆಲುವಿಗೆ ಚೋಟಾ ಅರವಿಂದ್​ ಕೇಜ್ರಿವಾಲ್​​ ಸಂಭ್ರಮ

  ಮಾಜಿ ಸಿಎಂ ಅಮರಿಂದರ್​ಗೂ ಸೋಲು
  ಪಾಟಿಯಾಲದಿಂದ ಕಣಕ್ಕೆ ಇಳಿದಿದ್ದ ಮಾಜಿ ಪಂಜಾಬ್​ ಸಿಎಂ ಅಮರಿಂದರ್​ ಸಿಂಗ್​ ಕೂಡ ಎಎಪಿ ಅಭ್ಯರ್ಥಿ ವಿರುದ್ಧ ಸೋಲು ಕಂಡಿದ್ದಾರೆ. ಸೋಲಿನ ಬಳಿಕ ಮಾತನಾಡಿದ ಅವರು, ಜನತೆಯ ತೀರ್ಪನ್ನು ಒಪ್ಪಿವಿದಾಗಿ ತಿಳಿಸಿದ್ದು, ರಾಜ್ಯದಲ್ಲಿ ಗೆಲುವು ಸಾಧಿಸಿದ ಎಎಪಿಗೆ ಅಭಿನಂದನೆ ತಿಳಿಸಿದ್ದಾರೆ.

  ಸೋನು ಸೂದ್​ ಸಹೋದರಿಗೂ ಸೋಲು
  ಬಾಲಿವುಡ್​ ನಟ ಸೋನು ಸೂದ್​ ಸಹೋದರಿ ಕೂಡ ಈ ಬಾರಿ ರಾಜಕೀಯ ಪ್ರವೇಶ ಮಾಡಿ ಪಂಜಾಬ್​ನ ಮೋಗಾದಿಂದ ಕಣಕ್ಕೆ ಇಳಿದಿದ್ದರು. ಕಾಂಗ್ರೆಸ್​ ಅಭ್ಯರ್ಥಿಯಾಗಿದ್ದ ಮಾಳವಿಕಾ ಪರ ನಟ ಸೋನು ಸೂದ್​ ಕೂಡ ಭರ್ಜರಿ ಪ್ರಚಾರ ನಡೆಸಿದ್ದರು ಆದರೆ, ಅವರು ಕೂಡ ತಮ್ಮ ಮೊದಲ ಗೆಲುವು ಸಾಧಿಸುವಲ್ಲಿ ವಿಫಲರಾಗಿದ್ದಾರೆ.
  Published by:Seema R
  First published: