ಶ್ರೀನಗರ(ಆ.15): ದೇಶವು ಸ್ವಾತಂತ್ರ್ಯದ ಅಮೃತ ಹಬ್ಬವನ್ನು (Azadi Ka Amrit Mahotsav) ಆಚರಿಸುತ್ತಿದೆ. ಕಳೆದ ಮೂರು ದಿನಗಳಿಂದ ಕಾಶ್ಮೀರದಿಂದ (Kashimir) ಕನ್ಯಾಕುಮಾರಿಯವರೆಗೆ ದೇಶದ ಮೂಲೆ ಮೂಲೆಗಳಲ್ಲಿ ತ್ರಿವರ್ಣ ಯಾತ್ರೆಯನ್ನು ಆಚರಿಸಲಾಗುತ್ತದೆ. ಆದರೆ ಇಂದು ಕಾಶ್ಮೀರದ ಶ್ರೀನಗರದ ಲಾಲ್ ಚೌಕ್‌ನಲ್ಲಿ (Lal Chowk) ಯುವಕರು ಅತ್ಯಂತ ಉತ್ಸಾಹದಿಂದ ತ್ರಿವರ್ಣ ಧ್ವಜವನ್ನು ಹಾರಿಸಿದ್ದಾರೆ. ಅವರ ಈ ಉತ್ಸಾಹ ಪ್ರತಿಯೊಬ್ಬ ಭಾರತೀಯನ ಎದೆಯನ್ನು ಹೆಮ್ಮೆಯಿಂದ ಹಿಗ್ಗುವಂತೆ ಮಾಡಿದೆ.
ಇದನ್ನೂ ಓದಿ: Independence Day 2022: ಭಾರತದಾದ್ಯಂತ ಪ್ರತಿಧ್ವನಿಸುತ್ತದೆ ಹರ್ ಘರ್ ತಿರಂಗ ಅಭಿಯಾನ, ಎಲ್ಲೆಲ್ಲಿ ಹೇಗಿದೆ ನೋಡಿ
ವಾಸ್ತವವಾಗಿ, ಶ್ರೀನಗರದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವುದು ಸವಾಲಿನ ಸಂಗತಿಯಾಗಿದೆ. ಆದರೆ ಈ ಬಾರಿ ಕಾಶ್ಮೀರದ ಜನರದ ಜನರ ದೇಶ ಪ್ರೇಮ ಹಾಗೂ ತ್ರಿವರ್ಣ ಧ್ವಜವನ್ನು ಹೆಮ್ಮೆಯಿಂದ ಹಾರಿಸಿದ ಪರಿ ಭಯೋತ್ಪಾದಕರಿಗೆ ತಕ್ಕ ಉತ್ತರ ನೀಡಿದೆ. ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವದಂದು, ಕೆಲ ಯುವಕರು ಲಾಲ್ ಚೌಕ್ಗೆ ಬಂದು ತ್ರಿವರ್ಣ ಧ್ವಜವನ್ನು ಹಾರಿಸಿ, ಭಾರತ್ ಮಾತಾ ಕಿ ಜೈ ಮತ್ತು ವಂದೇ ಮಾತರಂ ಎಂಬ ಘೋಷಣೆಗಳನ್ನು ಕೂಗಿದ್ದಾರೆ.
#WATCH Chants of 'Vande Mataram' by a group of men waving the Tricolour at Srinagar's Lal Chowk pic.twitter.com/KgFSiXG4Ck
— ANI (@ANI) August 15, 2022
ವ್ಯಕ್ತಿಯೊಬ್ಬ ತ್ರಿವರ್ಣ ಬಣ್ಣವನ್ನು ತನ್ನ ದೇಹಕ್ಕೆ ಬಣ್ಣ ಬಳಿದುಕೊಂಡು ಕೈಯಲ್ಲಿ ತ್ರಿವರ್ಣ ಧ್ವಜವನ್ನು ಬೀಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.ಆ ವ್ಯಕ್ತಿ ಭಾರೀ ಉತ್ಸಾಹದಿಂದ ವಂದೇ ಮಾತರಂ ಮತ್ತು ಭಾರತ್ ಮಾತಾ ಕಿ ಜೈ ಎಂದು ಜಪಿಸುತ್ತಿದ್ದಾರೆ. ಅವರ ಹಿಂದೆ ಇತರರು ಸಹ ಈ ಘೋಷಣೆಗಳನ್ನು ಪುನರಾವರ್ತಿಸುತ್ತಿದ್ದಾರೆ. ಈ ಗುಂಪುಗಳಲ್ಲಿ ಎಲ್ಲಾ ಸಮುದಾಯದ ಜನರು ಕಂಡು ಬಂದಿದ್ದಾರೆ. ಕಳೆದ ಕೆಲ ವರ್ಷಗಳಿಂದ, ಲಾಲ್ ಚೌಕ್‌ನಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವುದು ಸಾಮಾನ್ಯ ಅಭ್ಯಾಸವಾಗಿದೆ. ಈ ಹಿಂದೆ ಇಲ್ಲಿ ತ್ರಿವರ್ಣ ಧ್ವಜ ಹಾರಾಟ ಬಹುದೊಡ್ಡ ಸವಾಲಾಗಿತ್ತು. ಕೆಲ ದಿನಗಳ ಹಿಂದೆ ಶ್ರೀನಗರದ ಲಾಲ್ ಚೌಕ್ ವರೆಗೆ ತ್ರಿವರ್ಣ ಯಾತ್ರೆ ಕೈಗೊಳ್ಳಲಾಗಿತ್ತು. ಇದರಿಂದಾಗಿ ಇಡೀ ಲಾಲ್ ಚೌಕ್ ತ್ರಿವರ್ಣ ಧ್ವಜದಿಂದ ಆವೃತವಾಗಿತ್ತು.
ಇದನ್ನೂ ಓದಿ: Independence day: 75ನೇ ಸ್ವಾತಂತ್ರ್ಯೋತ್ಸವ, ಬ್ರಿಟಿಷ್ರಿಂದ ಬಿಡುಗಡೆಯಾದ ದಿನದ ಒಂದು ಮೆಲುಕು
ಈ ರ್ಯಾಲಿಗೆ ಭಾರತೀಯ ಜನತಾ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಚಾಲನೆ ನೀಡಿದ್ದರು. ಐತಿಹಾಸಿಕ ಲಾಲ್ ಚೌಕ್‌ನಿಂದ ಆರಂಭವಾದ ರ್ಯಾಲಿ ಕಾರ್ಗಿಲ್ ಯುದ್ಧ ಸ್ಮಾರಕದವರೆಗೆ ನಡೆಯಿತು. ರ್ಯಾಲಿಯ ನಂತರ ತೇಜಸ್ವಿ ಸೂರ್ಯ ಟ್ವೀಟ್ ಮಾಡಿ, “ಕೆಲವು ವರ್ಷಗಳ ಹಿಂದೆ ಲಾಲ್ ಚೌಕ್ ದೇಶ ವಿರೋಧಿ ಮತ್ತು ಪ್ರತ್ಯೇಕತಾವಾದಿ ಭಾವನೆಗಳಿಂದ ತುಂಬಿತ್ತು. ತ್ರಿವರ್ಣ ಧ್ವಜವನ್ನು ಹಾರಿಸಲು ಮುಂದಾದವರನ್ನು ಕೊಲ್ಲುವುದಾಗಿ ಉಗ್ರರು ಬೆದರಿಕೆ ಹಾಕಿದ್ದರು. 1992 ರಲ್ಲಿ, ನರೇಂದ್ರ ಮೋದಿ ಜಿ ಅವರು ಇಲ್ಲಿ ತ್ರಿವರ್ಣ ಧ್ವಜವನ್ನು ಹೆಮ್ಮೆಯಿಂದ ಹಾರಿಸಿದರು, ಇದರಿಂದಾಗಿ ಭಾರತೀಯ ಜನತಾ ಯುವ ಮೋರ್ಚಾ 30 ವರ್ಷಗಳ ನಂತರ ಅದನ್ನು ಮತ್ತೆ ಹಾರಿಸಲು ಸಾಧ್ಯವಾಯಿತು ಎಂದಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ