HOME » NEWS » National-international » CHANGING SOCIAL FABRIC PUTS PRESSURE ON WATER RESOURCES AND HYGIENE IN INDIA SNVS

Mission Paani - ಬದಲಾಗುತ್ತಿರುವ ಸಾಮಾಜಿಕ ರಚನೆಯಿಂದ ಜಲ ಸಂಪನ್ಮೂಲ ಮತ್ತು ನೈರ್ಮಲ್ಯಕ್ಕೆ ಧಕ್ಕೆ

News18 ಮತ್ತು Harpic ಸಂಸ್ಥೆ ಕೈಗೊಂಡಿರುವ ‘Mission Paani’ ಆಂದೋಲನಕ್ಕೆ ನೀವು ಕೈಜೋಡಿಸಿ. ಜನವರಿ 26, ಮಧ್ಯಾಹ್ನ 12:30ರಿಂದ ನಡೆಸಲಾಗುತ್ತಿರುವ Mission Paani Waterthon ಅಭಿಯಾನದಲ್ಲಿ ಭಾಗಿಯಾಗಿ.

news18
Updated:January 23, 2021, 9:41 AM IST
Mission Paani - ಬದಲಾಗುತ್ತಿರುವ ಸಾಮಾಜಿಕ ರಚನೆಯಿಂದ ಜಲ ಸಂಪನ್ಮೂಲ ಮತ್ತು ನೈರ್ಮಲ್ಯಕ್ಕೆ ಧಕ್ಕೆ
ಸಾಂದರ್ಭಿಕ ಚಿತ್ರ
  • News18
  • Last Updated: January 23, 2021, 9:41 AM IST
  • Share this:
ಅಭಿವೃದ್ಧಿ ವಿಚಾರಕ್ಕೆ ಬಂದರೆ ಭಾರತ ಗಮನಾರ್ಹ ಬೆಳವಣಿಗೆ ಸಾಧಿಸಿದೆ. 73 ವರ್ಷಗಳ ಹಿಂದೆ ಸ್ವಾತಂತ್ರ್ಯ ಬಂದಾಗ ತುಮುಲದಲ್ಲಿದ್ದ ದೇಶ ಈಗ ಒಂದು ಪ್ರಬಲ ಶಕ್ತಿಯಾಗಿ ಬೆಳೆದಿದೆ. ಮೂಲಸೌಕರ್ಯ, ಆರ್ಥಿಕತೆ, ಸಾಮಾಜಿಕ-ರಾಜಕೀಯ ಬೆಳವಣಿಗೆ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ, ಪ್ರತಿಯೊಂದು ಅಂಶದಲ್ಲೂ ಭಾರತ ಬಹಳಷ್ಟು ಮುನ್ನಡೆದಿದೆ. ಆದರೆ, ಈ ಅಭಿವೃದ್ಧಿಯ ಜೊತೆಯಲ್ಲೇ ಬರುವ ಸಮಸ್ಯೆಗಳೂ ದೇಶವನ್ನ ಬಾಧಿಸುತ್ತಿವೆ. ಭಾರತದ ಈ ಅಭಿವೃದ್ಧಿ ಓಟ ಸುಗಮವಾಗಿ ಸಾಗಬೇಕಾದರೆ ಹಲವು ಸಮಸ್ಯೆಗಳನ್ನ ಬಗೆಹರಿಸಬೇಕಾಗುತ್ತದೆ. ಅಂಥವುಗಳಲ್ಲಿ ನೀರಿನ ಕೊರತೆ ಮತ್ತು ನೈರ್ಮಲ್ಯತೆ (Sanitation) ಸಮಸ್ಯೆಗಳೂ ಇವೆ. ಇದಕ್ಕೆ ಕೆಲ ಮೂಲಭೂತ ಕಾರಣಗಳಿವೆ. ಬದಲಾಗುತ್ತಿರುವ ಸಾಮಾಜಿಕ ಎಳೆ ಮತ್ತು ಅಭಿವೃದ್ಧಿ ಚಟುವಟಿಕೆಗಳು ನಮ್ಮ ಜಲ ಸಂಪನ್ಮೂಲಕ್ಕೆ ಧಕ್ಕೆ ತಂದಿದೆ. ದೇಶದ ಸ್ವಚ್ಛತೆಗೆ ಹಿನ್ನಡೆ ತಂದಿದೆ.

ಜನಸಂಖ್ಯಾ ಸ್ಫೋಟ ನಮ್ಮ ನೀರಿನ ಸಂಪನ್ಮೂಲ ನಶಿಸಲು ಬಹುದೊಡ್ಡ ಕಾರಣ ಇರಬಹುದು. ನಗರಗಳಿಗಿಂತ ಗ್ರಾಮೀಣ ಭಾಗದ ಪ್ರದೇಶಗಳು ಈ ವಿಚಾರದಲ್ಲಿ ಹೆಚ್ಚು ಬಾಧಿತವಾಗಿವೆ. ಅಂತರ್ಜಲವನ್ನ ಹೆಕ್ಕಿ ತೆಗೆಯುವ ಕೆಲಸವಾಗುತ್ತಿದೆಯೇ ಹೊರತು ಅದಕ್ಕೆ ತಕ್ಕಂತೆ ಮರುಪೂರಣ ಆಗುತ್ತಿಲ್ಲ. ಮರುಬಳಕೆ ಜಲ ಸಂಪನ್ಮೂಲದ ದೀರ್ಘಾವಧಿ ಲಭ್ಯತೆ ಹೆಚ್ಚು ಇಲ್ಲದಿರುವುದು ಭಾರತಕ್ಕೆ ಹಿನ್ನಡೆಯಾಗಿದೆ. ಪ್ರತಿ ಸೆಕೆಂಡ್​ಗೂ ಜನಸಂಖ್ಯೆ ಹೆಚ್ಚುತ್ತಿರುವುದು ಒತ್ತಡವನ್ನೂ ಹೆಚ್ಚಿಸುತ್ತಿದೆ. ನೀರಿನ ಸಂಪನ್ಮೂಲದ ಕೊರತೆಯೂ ನೈರ್ಮಲ್ಯೀಕರಣದ ಸಮಸ್ಯೆ ಹೆಚ್ಚಿಸುತ್ತಿದೆ. ಗ್ರಾಮೀಣ ಭಾಗದ ಜನರಿಗೆ ಸರ್ಕಾರ 11 ಕೋಟಿ ಶೌಚಾಲಯ ಒದಗಿಸಿರುವುದೇನೋ ಹೌದಾದರೂ ಸರಿಯಾದ ಚರಂಡಿ, ಸ್ವಚ್ಛ ನೀರಿನ ಕೊರತೆಯು ಈ ಅನೇಕ ಶೌಚಾಲಯಗಳು ನಿರುಪಯುಕ್ತವಾಗಿವೆ.

ಇದನ್ನೂ ಓದಿ: Mission Paani: ಜ. 26ಕ್ಕೆ ಮಿಷನ್ ಪಾನಿ ವಾಟರಥಾನ್; ಜಲ ಅಭಿಯಾನದ ಮಹತ್ವವೇನು?

ಸಂಪನ್ಮೂಲದ ಕೊರತೆ ಒಂದು ವಿಷಯವಾದರೆ, ಸರಿಯಾದ ಸೌಕರ್ಯದ ಕೊರತೆ ಇರುವುದು ಹಾಗೂ ಇರುವ ಸಂಪನ್ಮೂಲದ ಸರಿಯಾದ ವಿತರಣೆ ಆಗದಿರುವುದು ನಮ್ಮ ಸವಾಲನ್ನು ಕಠಿಣಗೊಳಿಸಿವೆ. ಸರಬರಾಜಾಗುವ ನೀರಿನಲ್ಲಿ ನಗರ ಪ್ರದೇಶಗಳಿಗೇ ಸಿಂಹಪಾಲು ಇರುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ನೀರು ಸಿಗುವುದಿಲ್ಲ. ಚರಂಡಿ ವ್ಯವಸ್ಥೆ, ಕೈಗಾರಿಕೆ ಮತ್ತು ಮಾನವ ತ್ಯಾಜ್ಯ ವರ್ಗೀಕರಣ ಮತ್ತು ವಿಲೇವಾರಿಯ ವ್ಯವಸ್ಥೆಯಲ್ಲಿನ ಅಸಮರ್ಪಕತೆಯು ನೈರ್ಮಲ್ಯೀಕರಣದ ಸವಾಲನನ್ನು ಹೆಚ್ಚಿಸುತ್ತಿವೆ. ಜಾಗತಿಕವಾಗಿ ನೀರಿನ ಕೊರತೆ ಇದೆ. ಜೊತೆಗೆ ನೈರ್ಮಲ್ಯೀಕರಣ ಕೊರತೆಯೂ ಕಾಡುತ್ತಿದೆ. ಇದರಿಂದ ಆರ್ಥಿಕತೆಗೆ ಪೆಟ್ಟು ಬೀಳುವುದು ನಿಶ್ಚಿತ. ನೀರು ಮತ್ತು ನೈರ್ಮಲ್ಯೀಕರಣದ ಕೊರತೆ ಎಂದರೆ ರೋಗಗಳಿಗೆ ಆಸ್ಪದ ಕೊಟ್ಟಂತೆ. ನೀರಿನ ಕೊರತೆಯಿಂದ ಪ್ರತೀ ಇಬ್ಬರು ಮಕ್ಕಳಲ್ಲಲಿ ಒಂದು ಮಗು ಕುಪೋಷಣೆಯಿಂದ ಬಳಲುತ್ತದೆ. ಇದಕ್ಕೆ ನೀರಿನ ಕೊರತೆ ಮತ್ತು ಸ್ವಚ್ಛತೆ ಕೊರತೆಯೇ ಕಾರಣ.

ಇದನ್ನೂ ಓದಿ: Mission Paani: ಭಾರತದಲ್ಲಿ ಶುದ್ಧ ನೀರೇ ಇಲ್ಲವಾದರೆ ಏನಾದೀತು?; ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಸಂಕಷ್ಟ ಖಚಿತ

ಈ ನಿಟ್ಟಿನಲ್ಲಿ ಸರ್ಕಾರ ಕೂಡ ಕೆಲವಾರು ಕ್ರಮಗಳನ್ನ ಕೈಗೊಳ್ಳುತ್ತಿದೆ. ‘ಹರ್ ಘರ್ ಮೇ ಜಲ್’ (ಪ್ರತೀ ಮನೆಗೂ ನೀರು), ‘ಸ್ವಚ್ಛ ಭಾರತ’ ಮೊದಲಾದ ರಾಷ್ಟ್ರಮಟ್ಟದ ಆಂದೋಲನಗಳು ಪ್ರತ್ಯೇಕ ಸಚಿವಾಲಯದೊಂದಿಗೆ ಕಾರ್ಯನಿರ್ವಹಿಸುತ್ತಿವೆ. ನಾವೆಲ್ಲರೂ ನಮ್ಮದೇ ರೀತಿಯಲ್ಲಿ ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಿದೆ. ನ್ಯೂಸ್18 ಮತ್ತು ಹಾರ್ಪಿಕ್ ಸಂಸ್ಥೆ ಕೈಗೊಂಡಿರುವ ‘ಮಿಷನ್ ಪಾನಿ’ (Mission Paani) ಆಂದೋಲನಕ್ಕೆ ಕೈಜೋಡಿಸಿ. ಜನವರಿ 26, ಮಧ್ಯಾಹ್ನ 12:30ರಿಂದ ನಡೆಸಲಾಗುತ್ತಿರುವ Mission Paani Waterthon ಅಭಿಯಾನದಲ್ಲಿ ಭಾಗಿಯಾಗಿ. ಜಾಗೃತ ನಾಗರಿಕರಾಗಿ ದೇಶವನ್ನ ಉಳಿಸುವ ಕೆಲಸಕ್ಕೆ ಸಹಾಯವಾಗಿ.
Published by: Vijayasarthy SN
First published: January 23, 2021, 9:41 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories