ಬಿಸಿಲ ಬೇಗೆ ತಡೆಯಲು School Timeನಲ್ಲಿ ಬದಲಾವಣೆ! ಬೆಳಗ್ಗೆ 6.30ರಿಂದ 11.30ರವರೆಗೆ ಮಾತ್ರ ಕ್ಲಾಸ್!

ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳನ್ನು ಬೆಳಗಿನ ವೇಳೆಯಲ್ಲಿ ನಡೆಸಲು ನಿರ್ಧರಿಸಿವೆ. ಅಂದರೆ, ಬೆಳಿಗ್ಗೆ 6:30 ರಿಂದ 11:30 ರವರೆಗೆ ಮಾತ್ರ ತರಗತಿ ನಡೆಸಲು ನಿರ್ಧರಿಸಿವೆ. ಈ ವ್ಯವಸ್ಥೆಯು ಬೇಸಿಗೆ ರಜೆ ಪ್ರಾರಂಭವಾಗುವವರೆಗೆ ಮುಂದುವರಿಯುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬಿಹಾರ: ಬೇಸಿಗೆ (Summer) ಅಬ್ಬರಕ್ಕೆ ಇಡೀ ಭಾರತವೇ (India) ತತ್ತರಿಸುತ್ತಿದೆ. ಅದರಲ್ಲೂ ಉತ್ತರ ಭಾರತದಲ್ಲಂತೂ (North India) ಬಿಸಿಲ ಬೇಗೆ ಹೇಳತೀರದಾಗಿದೆ. ಕಳೆದ 122 ವರ್ಷಗಳಲ್ಲೇ ಕಳೆದ ಮಾರ್ಚ್‌ನಲ್ಲಿ ಭಾರತದಲ್ಲಿ ಅತ್ಯಂತ ಉಷ್ಣ ಹವಾಮಾನ (Heat Weather) ದಾಖಲಾಗಿತ್ತು ಅಂತ ವರದಿಗಳು (Report) ಹೇಳುತ್ತಿವೆ. ಹಲವು ರಾಜ್ಯಗಳಲ್ಲಿ (State) ಕುಡಿಯುವ ನೀರಿಗೆ (Drinking Water) ಹಾಹಾಕಾರ ಶುರುವಾಗಿದೆ. ಕೆಲವೆಡೆ ಬಿಸಿಗಾಳಿ (Heat Air) ಅಬ್ಬರಕ್ಕೆ ಜನ, ಜಾನುವಾರುಗಳು ಸಾಯುತ್ತಿದ್ದಾರೆ. ಇನ್ನು ಬಿಹಾರದಲ್ಲೂ ಬಿಸಿಲ ಅಬ್ಬರ ಮಿತಿ ಮೀರಿದೆ. ಜನರು ಮನೆಯಿಂದ ಹೊರ ಬರುವುದೇ ಕಷ್ಟ ಸಾಧ್ಯವಾಗಿದೆ. ಈ ಬಿಸಿಲಲ್ಲಿ ಮಕ್ಕಳು ಶಾಲೆಗೆ ಹೋಗಲಾಗದೇ ಪರದಾಡುತ್ತಿದ್ದಾರೆ. ಇದನ್ನು ಮನಗಂಡ ಬಿಹಾರ ಸರ್ಕಾರ ಮಕ್ಕಳ ಶಾಲಾ ಸಮಯದಲ್ಲೇ ಬದಲಾವಣೆ ಮಾಡಿದೆ.

ಶಾಲಾ ಸಮಯದಲ್ಲೇ ಬದಲಾವಣೆ

ಬಿಹಾರ ಬಿಸಿಗಾಳಿಯ ಬಿಗಿ ಹಿಡಿತಕ್ಕೆ ಒಳಗಾಗಿ, ತತ್ತರಿಸುತ್ತಿದೆ. ಹೀಗಾಗಿ ರಾಜಧಾನಿ  ಪಾಟ್ನಾ ಸೇರಿದಂತೆ ರಾಜ್ಯದ ಹಲವು ಜಿಲ್ಲಾಡಳಿತಗಳು ಶಾಲಾ ಸಮಯವನ್ನು ಬದಲಾಯಿಸಲು ನಿರ್ಧರಿಸಿವೆ.

ಮುಂಜಾನೆ 6.30ರಿಂದ ಬೆಳಗ್ಗೆ 11.30ರವರೆಗೆ ಕ್ಲಾಸ್

ವರದಿಯ ಪ್ರಕಾರ, ಪಾಟ್ನಾ, ರೋಹ್ತಾಸ್, ಸಮಸ್ತಿಪುರ್, ಜಮುಯಿ, ಕೈಮೂರ್, ಸಿತಾಮರ್ಹಿ, ಪೂರ್ಣಿಯಾ, ಶೇಖ್‌ಪುರ, ಭೋಜ್‌ಪುರ ಮತ್ತು ಪಶ್ಚಿಮ ಚಂಪಾರಣ್‌ನಂತಹ ಜಿಲ್ಲೆಗಳು ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳನ್ನು ಬೆಳಗಿನ ವೇಳೆಯಲ್ಲಿ ನಡೆಸಲು ನಿರ್ಧರಿಸಿವೆ. ಅಂದರೆ, ಬೆಳಿಗ್ಗೆ 6:30 ರಿಂದ 11:30 ರವರೆಗೆ ಮಾತ್ರ ತರಗತಿ ನಡೆಸಲು ನಿರ್ಧರಿಸಿವೆ. ಈ ವ್ಯವಸ್ಥೆಯು ಬೇಸಿಗೆ ರಜೆ ಪ್ರಾರಂಭವಾಗುವವರೆಗೆ ಮುಂದುವರಿಯುತ್ತದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಇದನ್ನೂ ಓದಿ: Trainನಲ್ಲಿ 'ಮುತ್ತು' ತಂದ ಕುತ್ತು; ಬಲವಂತದಿಂದ ಚುಂಬಿಸಿದವನಿಗೆ 10 ಸಾವಿರ ರೂ. ದಂಡ, 1 ವರ್ಷ ಕಠಿಣ ಶಿಕ್ಷೆ!

ಕಳೆದ ತಿಂಗಳ ಹವಾಮಾನ ವರದಿ

ಕಳೆದ ತಿಂಗಳು ಒಟ್ಟಾರೆ ದೇಶದ ಸರಾಸರಿ ಗರಿಷ್ಠ, ಕನಿಷ್ಠ ಮತ್ತು ಸರಾಸರಿ ತಾಪಮಾನ ಕ್ರಮವಾಗಿ 33.10 ಡಿಗ್ರಿ ಸಿ, 20.24 ಡಿಗ್ರಿ ಸಿ ಮತ್ತು 26.67 ಡಿಗ್ರಿ ಸೆಲ್ಸಿಯಸ್ ಆಗಿದ್ದು, ಕ್ರಮವಾಗಿ ಸಾಮಾನ್ಯ 31.24 ಡಿಗ್ರಿ ಸಿ, 18.87 ಡಿಗ್ರಿ ಸಿ ಮತ್ತು 25.06 ಡಿಗ್ರಿ ಸಿ ಆಗಿದೆ ಎಂದು ಐಎಂಡಿ ಹೇಳಿದೆ. , 1981-2010 ರ ಅವಧಿಯಲ್ಲೇ ಈ ಮಾರ್ಚ್‌ ತಿಂಗಳಲ್ಲಿ ಅತ್ಯಂಕತ ಉಷ್ಣ ದಾಖಲಾಗಿದೆ.

10 ಜಿಲ್ಲೆಗಳಲ್ಲಿ ಬಿಸಿ ಗಾಳಿ ಎಚ್ಚರಿಕೆ

ಜಾರ್ಖಂಡ್‌ನ ಕನಿಷ್ಠ 10 ಜಿಲ್ಲೆಗಳಿಗೆ ಹವಾಮಾನ ಇಲಾಖೆಯು ಬಿಸಿ ಗಾಳಿಯ ಅಲೆಯ ಎಚ್ಚರಿಕೆಯನ್ನು ನೀಡಿದೆ. ಗರ್ವಾ, ಪಲಮು, ಲತೇಹರ್, ಛತ್ರ, ಬೊಕಾರೊ, ಧನ್‌ಬಾದ್, ಸಿಮ್ಡೆಗಾ, ಪೂರ್ವ ಮತ್ತು ಪಶ್ಚಿಮ ಸಿಂಗ್‌ಭೂಮ್ ಮತ್ತು ಸೆರೈಕೆಲಾ-ಖಾರ್ಸ್ವಾನ್‌ಗಳು ಶಾಖದ ಅಲೆಯಿಂದ ಪ್ರಭಾವಿತವಾಗಬಹುದಾದ ಜಿಲ್ಲೆಗಳಾಗಿವೆ.

ಹವಾಮಾನ ಇಲಾಖೆ ಎಚ್ಚರಿಕೆ

"ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದಿಂದ ಪಶ್ಚಿಮ ಮತ್ತು ವಾಯುವ್ಯ ಮಾರುತಗಳ ಅನಿಯಂತ್ರಿತ ಹರಿವಿನಿಂದ ಜಾರ್ಖಂಡ್‌ನಾದ್ಯಂತ ಗರಿಷ್ಠ ತಾಪಮಾನ ಏರಿಕೆಯಾಗಲಿದೆ, ಅಲ್ಲಿ ಈಗಾಗಲೇ ಶಾಖದ ಅಲೆಯ ಪರಿಸ್ಥಿತಿಗಳು ಚಾಲ್ತಿಯಲ್ಲಿವೆ" ಎಂದು ರಾಂಚಿಯ ಹವಾಮಾನ ಕೇಂದ್ರದ ವಿಜ್ಞಾನಿ ಎಸ್‌ಸಿ ಮಂಡಲ್ ಹೇಳಿದ್ದಾರೆ.

ಇದನ್ನೂ ಓದಿ: ಬಿಹಾರ CM ಸ್ಥಾನಕ್ಕೆ ರಾಜೀನಾಮೆ ನೀಡ್ತಾರಾ ನಿತೀಶ್ ಕುಮಾರ್? ನಿಗೂಢ ಅರ್ಥದ ಟ್ವೀಟ್‌ನಿಂದ ಬಿಸಿ ಬಿಸಿ ಚರ್ಚೆ!

ಉತ್ತರ ಭಾರತದಾದ್ಯಂತ ಬಿಸಿಲ ಬೇಗೆ

ಒಟ್ಟಾರೆಯಾಗಿ, ಅಸ್ಸಾಂ, ಮೇಘಾಲಯ, ತ್ರಿಪುರ, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್, ಒಡಿಶಾ, ಛತ್ತೀಸ್‌ಗಢ, ಉತ್ತರ ಪ್ರದೇಶ, ಹರಿಯಾಣ ಮತ್ತು ಪಂಜಾಬ್‌ಗಳು ಹೆಚ್ಚು ಹವಾಮಾನ ಇರಲಿದೆ. ಜೊತೆಗೆ ಭಾರತದ ಎಲ್ಲಾ ರಾಜ್ಯಗಳು ಕನಿಷ್ಠ 30 ಡಿಗ್ರಿ ಸೆಲ್ಸಿಯಸ್ ಉಷ್ಣತೆ ದಾಖಲಿಸುತ್ತವೆ ಅಂತ ಎಚ್ಚರಿಕೆ ನೀಡಲಾಗಿದೆ.
Published by:Annappa Achari
First published: