'ಚಂದ್ರಯಾನ 2' ಯೋಜನೆಗೆ ಕೂಡಿಬರದ ಕಾಲ; ಮುಂದಿನ ವರ್ಷ ಉಡಾವಣೆಗೆ ಇಸ್ರೋ ಯೋಜನೆ

news18
Updated:August 5, 2018, 1:34 PM IST
'ಚಂದ್ರಯಾನ 2' ಯೋಜನೆಗೆ ಕೂಡಿಬರದ ಕಾಲ; ಮುಂದಿನ ವರ್ಷ ಉಡಾವಣೆಗೆ ಇಸ್ರೋ ಯೋಜನೆ
news18
Updated: August 5, 2018, 1:34 PM IST

ನ್ಯೂಸ್ 18 ಕನ್ನಡ

ನವದೆಹಲಿ (ಆ.5) : ಇಸ್ರೋದ ಮಹತ್ವಾಕಾಂಕ್ಷಿ ಯೋಜನೆಯಾದ 'ಚಂದ್ರಯಾನ-2' ಕ್ಕೆ ಮತ್ತೊಮ್ಮೆ ಹಿನ್ನಡೆಯಾಗಿದೆ. ಇದೇ ವರ್ಷ ಚಂದ್ರನ ಅಂಗಳದಲ್ಲಿ ಇಳಿಯಬೇಕಿದ್ದ ಇಸ್ರೋ ರೋಬೋಟ್ ಮುಂದಿನ ವರ್ಷದ ಜನವರಿಗೆ ಇಳಿಯಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.ಈ ಯೋಜನೆಯನ್ನು ಈ ವರ್ಷದ ಏಪ್ರಿಲ್​ನಲ್ಲಿ ಉಡ್ಡಯನ ಮಾಡಬೇಕಿತ್ತು. ಆದರೆ, ತಾಂತ್ರಿಕ ಕಾರಣಗಳಿಂದ ಈ ಯೋಜನೆಯನ್ನು ಇದೇ ವರ್ಷ ಆಕ್ಟೋಬರ್​ಗೆ ಮುಂದೂಡಲಾಗಿತ್ತು. ಇದೀಗ ಮತ್ತೆ ಉಡಾವಣೆಯನ್ನು ಮುಂದಿನ ವರ್ಷದ ಜನವರಿಗೆ ಮುಂದೂಡಲಾಗಿದೆ.


ಕಳೆದ ವರ್ಷ ಇಸ್ರೋ ಜಿಎಸ್ಎಟಿ-6ಎ ಮಿಲಿಟರಿ ಸಂವಹನ ಸ್ಯಾಟಲೈಟ್ ಅನ್ನು ಉಡಾವಣೆ ಮಾಡಿತ್ತು. ಆದರೆ, ಇದು ವಿಫಲವಾಗಿತ್ತು. ಆನಂತರ ಕಳೆದ ಸೆಪ್ಟೆಂಬರ್​ನಲ್ಲಿ ನಡೆಸಿದ ಪಿಎಸ್ಎಲ್ವಿ-ಸಿ39 ಯೋಜನೆಯಡಿ ಐಆರ್​ಎನ್ಎಸ್ಎಸ್-1ಎಚ್ ನ್ಯಾವಿಗೇಷನ್ ಸ್ಯಾಟಲೈಟ್ ಉಡಾವಣೆಯೂ ವಿಫಲವಾಗಿತ್ತು.

Loading...


ಈ ಎರಡು ಯೋಜನೆಗಳು ವಿಫಲವಾದ ಹಿನ್ನೆಲೆಯಲ್ಲಿ ಮಹತ್ವಾಕಾಂಕ್ಷೆ ಹಾಗೂ ಸಂಕೀರ್ಣವಾದ ಚಂದ್ರಯಾನ-2ರಲ್ಲಿ ಮತ್ತದೇ ತಪ್ಪು ಮರುಕಳಿಸದಂತೆ ಇಸ್ರೋ ಸಾಕಷ್ಟು ಮುಂಜಾಗ್ರತೆ ವಹಿಸಿದ್ದು, ತಾಂತ್ರಿಕ ಲೋಷದೋಷ ಕಾಣಿಸಿಕೊಳ್ಳದಂತೆ ನೋಡಿಕೊಳ್ಳಲು ಚಂದ್ರಯಾನ- 2 ಅನ್ನು ತಡ ಮಾಡಲಾಗುತ್ತಿದೆ ಎನ್ನಲಾಗಿದೆ.


ಇಸ್ರೋ ಅಧ್ಯಕ್ಷರಾದ ಕೆ. ಸಿವನ್ ಅವರು ಕಳೆದ ಏಪ್ರಿಲ್​ನಲ್ಲಿ ಚಂದ್ರಯಾನ-2 ಉಡಾವಣೆಯನ್ನು ಅಕ್ಟೋಬರ್ ಅಥವಾ ನವೆಂಬರ್​ಗೆ ಮುಂದೂಡುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿದ್ದರು. ರಾಷ್ಟ್ರೀಯ ಮಟ್ಟದ ಸಮಿತಿಯೂ ಉಡಾವಣೆಗೂ ಮುನ್ನ ಹೆಚ್ಚುವರಿ ಪರೀಕ್ಷೆಗಳನ್ನು ಮಾಡುವಂತೆ ಸಲಹೆ ನೀಡಿತ್ತು.


ಚಂದ್ರಯಾನ-2 ರಲ್ಲಿ ಇಸ್ರೋ ಮೊದಲ ಬಾರಿಗೆ ರೋವರನ್ನು ಚಂದ್ರನ ಮೇಲೆ ಇಳಿಸುವ ಯೋಜನೆ ಹಾಕಿಕೊಂಡಿದೆ. ಸುಮಾರು 800 ಕೋಟಿ ರೂಪಾಯಿಗಳ ಯೋಜನೆ ಇದಾಗಿದೆ.

ಈವರೆಗೂ ಅಮೆರಿಕ, ರಷ್ಯಾ ಹಾಗೂ ಚೀನಾ ದೇಶಗಳು ಮಾತ್ರ ಚಂದ್ರನ ಮೇಲೆ ಯಶಸ್ವಿಯಾಗಿ ರೋವರ್​ ಅನ್ನು ಲ್ಯಾಂಡ್​ ಮಾಡಿವೆ. ಇದೀಗ ಇಸ್ರೋದ ಉದ್ದೇಶಿತ ಯೋಜನೆ ಸಫಲವಾದಲ್ಲಿ ಚಂದ್ರನ ಮೇಲೆ ಯಶಸ್ವಿಯಾಗಿ ರೋವರ್ ಲ್ಯಾಂಡಿಂಗ್ ಮಾಡಿದ ನಾಲ್ಕನೇ ದೇಶವಾಗಿ ಭಾರತ ಹೊರಹೊಮ್ಮಲಿದೆ.First published:August 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...