Chandrayaan 2: ಇಸ್ರೋದಿಂದ ಹೊಸ ಮೈಲಿಗಲ್ಲು; ಚಂದ್ರನ ಕಕ್ಷೆ ಸೇರಿದ ಚಂದ್ರಯಾನ 2

ಕಕ್ಷೆ ಬದಲಾವಣೆಯ ಮೊದಲ ಹಂತ ಇಂದು ನಡೆದಿದೆ. ಚಂದ್ರನ ಅಂಗಳಕ್ಕೆ ತಲುಪಲು ಇನ್ನೂ ನಾಲ್ಕು ಕಾರ್ಯಾಚರಣೆ ನಡೆಯಬೇಕಿದೆ. ಜಿಎಸ್​ಎಲ್​ವಿ-MkIII-M1 ರಾಕೆಟ್ ನಭಕ್ಕೆ ಜುಲೈ 22ರಂದು ಗಗನಕ್ಕೆ ಹಾರಿತ್ತು.

Rajesh Duggumane | news18
Updated:August 20, 2019, 12:47 PM IST
Chandrayaan 2: ಇಸ್ರೋದಿಂದ ಹೊಸ ಮೈಲಿಗಲ್ಲು; ಚಂದ್ರನ ಕಕ್ಷೆ ಸೇರಿದ ಚಂದ್ರಯಾನ 2
ಚಂದ್ರಯಾನ 2
  • News18
  • Last Updated: August 20, 2019, 12:47 PM IST
  • Share this:
ಬೆಂಗಳೂರು (ಆ.20): ಇಂದು ಭಾರತೀಯರ ಪಾಲಿಗೆ ವಿಶೇಷ ದಿನ. ತಿಂಗಳ ಹಿಂದೆ ಆಗಸಕ್ಕೆ ನೆಗೆದಿದ್ದ ಚಂದ್ರಯಾನ 2 ನೌಕೆಯನ್ನು ಇಂದು ಭೂಮಿಯ ಕಕ್ಷೆಯಿಂದ ಚಂದ್ರನ ಕಕ್ಷೆಗೆ ಯಶಸ್ವಿಯಾಗಿ ಸೇರಿದೆ.

ಬೆಳಗ್ಗೆ 8.30-9.30ರ ಅವಧಿಯಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಚಂದ್ರಯಾನ 2 ಉಪಗ್ರಹವನ್ನು ಚಂದ್ರನ ಕಕ್ಷೆಗೆ ಸೇರಿಸುವ ಕೆಲಸ ಮಾಡಿದೆ. ಇದೊಂದು ಕಷ್ಟದ ಕೆಲಸ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್​ ತಿಳಿಸಿದ್ದರು.

ಕಕ್ಷೆ ಬದಲಾವಣೆಯ ಮೊದಲ ಹಂತ ಇಂದು ನಡೆದಿದೆ. ಚಂದ್ರನ ಅಂಗಳಕ್ಕೆ ತಲುಪಲು ಇನ್ನೂ ನಾಲ್ಕು ಕಾರ್ಯಾಚರಣೆ ನಡೆಯಬೇಕಿದೆ. ಜಿಎಸ್​ಎಲ್​ವಿ-MkIII-M1 ರಾಕೆಟ್ ನಭಕ್ಕೆ ಜುಲೈ 22ರಂದು ಗಗನಕ್ಕೆ ಹಾರಿತ್ತು. ಸೆಪ್ಟೆಂಬರ್​ 7ರಂದು ಚಂದ್ರನ ಅಂಗಳಕ್ಕೆ ಈ ಉಪಗ್ರಹ ತಲುಪಲಿದೆ.


ಈ ಬಗ್ಗೆ ಮಾಹಿತಿ ನೀಡಿದ ಇಸ್ರೋ ಅಧ್ಯಕ್ಷ ಕೆ. ಶಿವನ್​, "ಇಂದು ನಾವು ಮಹತ್ವದ ಮೈಲಿಗಲ್ಲನ್ನು ದಾಟಿದ್ದೇವೆ. ಸೆ.7 ಬೆಳಗ್ಗೆ 1.55 ನಿಮಿಷಕ್ಕೆ ನಾವು ಚಂದ್ರನ ಅಂಗಳ ತಲುಪಲಿದ್ದೇವೆ. ಈ ಮೊದಲು ನಡೆದ ತಪ್ಪುಗಳನ್ನು ನಾವು ತಿದ್ದುಕೊಂಡಿದ್ದೇವೆ," ಎಂದರು.

ಚಂದ್ರನ ದಕ್ಷಿಣ ಧ್ರುವಕ್ಕೆ ಅಡಿ ಇಡುತ್ತಿರುವ ವಿಶ್ವದ ಮೊದಲ ಮೂನ್ ಮಿಷನ್ ಇದಾಗಿದೆ ಎಂಬುದು ಮೊದಲ ಗಮನಾರ್ಹ ಸಾಧನೆ. ಹಾಗೆಯೇ, ಭಾರತ ತನ್ನ ದೇಶೀಯ ತಂತ್ರಜ್ಞಾನದ ಸಹಾಯದಿಂದ ಚಂದ್ರನ ಮೇಲೆ ಅಡಿ ಇಡುತ್ತಿರುವುದು ಇದೇ ಮೊದಲು. ಚಂದ್ರನ ಮೇಲೆ ಅಡಿ ಇಡುವ ವಿಶ್ವದ ನಾಲ್ಕನೇ ರಾಷ್ಟ್ರ ಭಾರತವಾಗಿದೆ.

First published: August 20, 2019, 10:33 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading