ಹಲ್ದ್ವಾನಿ(ಆ.15): 1984 ರಲ್ಲಿ, ಸಿಯಾಚಿನ್‌ನಲ್ಲಿ (Siachen) ಭಾರತ ಮತ್ತು ಪಾಕಿಸ್ತಾನದ (Pakistan) ನಡುವಿನ ಘರ್ಷಣೆಯ ಸಂದರ್ಭದಲ್ಲಿ, 19 ಕುಮಾವೂನ್ ರೆಜಿಮೆಂಟ್‌ನ ಲ್ಯಾನ್ಸ್ ನಾಯಕ್ ಚಂದ್ರಶೇಖರ್ (Chandrashekhar) ಹೆರ್ಬೋಲಾ ಹಿಮಪಾತದಲ್ಲಿ ಕೊಲ್ಲಲ್ಪಟ್ಟರು. ಆ ಚಂಡಮಾರುತದಲ್ಲಿ 19 ಸೈನಿಕರು ಹುತಾತ್ಮರಾಗಿದ್ದರು, ಅದರಲ್ಲಿ 14 ಮಂದಿಯ ದೇಹಗಳನ್ನು ಪತ್ತೆಯಾಗಿತ್ತು, ಆದರೆ ಐದು ಮೃತದೇಹಗಳು ಪತ್ತೆಯಾಗಿರಲಿಲ್ಲ.
ಆದರೀಗ 38 ವರ್ಷಗಳ ನಂತರ, ದೇಶವು ಸ್ವಾತಂತ್ರ್ಯದ ಅಮೃತೋತ್ಸವವನ್ನು ಆಚರಿಸುತ್ತಿರುವಾಗ, ಹುತಾತ್ಮ ಚಂದ್ರಶೇಖರ್ ಅವರ ಪಾರ್ಥಿವ ಶರೀರವು ಹಲ್ದ್ವಾನಿಯಲ್ಲಿರುವ ಅವರ ಮನೆಗೆ ತಲುಪಲಿದೆ. ಚಂದ್ರಶೇಖರ್ ಹುತಾತ್ಮರಾದಾಗ ಅವರಿಗೆ 27 ವರ್ಷ ವಯಸ್ಸಾಗಿತ್ತು ಮತ್ತು 7 ವರ್ಷ ಮತ್ತು 4 ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದರು. ಇಂದು ಅವರ ವಯಸ್ಸು 45 ಮತ್ತು 42 ವರ್ಷ.
38 ವರ್ಷಗಳ ಬಳಿಕ ಚಂದ್ರಶೇಖರ್ ಶವ ಸಿಯಾಚಿನ್ನಲ್ಲಿ ಪತ್ತೆಯಾಗಿದೆ. ಈ ಮಾಹಿತಿಯನ್ನು ಸೇನೆಯು ಅವರ ಕುಟುಂಬಗಳಿಗೆ ನೀಡಿದೆ. ಸೋಮವಾರ ಅಂದರೆ ಸ್ವಾತಂತ್ರ್ಯ ದಿನದಂದು ಅವರ ಪಾರ್ಥಿವ ಶರೀರವನ್ನು ಹಲ್ದ್ವಾನಿಗೆ ತರಲಾಗುವುದು ಎಂದು ಹೇಳಲಾಗುತ್ತಿದೆ. ಇದಾದ ಬಳಿಕ ಸೇನಾ ಗೌರವಗಳೊಂದಿಗೆ ಹುತಾತ್ಮರ ಅಂತಿಮ ಸಂಸ್ಕಾರ ನೆರವೇರಲಿದೆ.
ಹುತಾತ್ಮ ಚಂದ್ರಶೇಖರ್ ಅವರ ಪತ್ನಿ ಶಾಂತಿ ದೇವಿ ಅವರು ಹಲ್ದ್ವಾನಿಯ ಪ್ಯಾಡಿ ಮಿಲ್ ಬಳಿಯ ಸರಸ್ವತಿ ವಿಹಾರ್ ಕಾಲೋನಿಯಲ್ಲಿ ವಾಸಿಸುತ್ತಿದ್ದಾರೆ ಎಂಬುವುದು ಉಲ್ಲೇಖನೀಯ. 38 ವರ್ಷಗಳ ಹಿಂದೆ ಪತಿ ಹುತಾತ್ಮರಾದಾಗ ಮೃತದೇಹವನ್ನು ಪಡೆಯದೇ ವಿಧಿವಿಧಾನಗಳೊಂದಿಗೆ ಅಂತ್ಯಸಂಸ್ಕಾರ ಮಾಡಿದರು. ಮೃತದೇಹ ಪತ್ತೆಯಾಗದ ಕಾರಣ ಶಾಂತಿ ದೇವಿ ಹಾಗೂ ಅವರ ಪುತ್ರಿಯರಿಗೆ ಅವರನ್ನು ಕೊನೆಯದಾಗಿ ನೋಡಲೂ ಸಾಧ್ಯವಾಗಿರಲಿಲ್ಲ. ಇದೀಗ ಸೇನೆಯು ಮೃತದೇಹ ಪತ್ತೆಯಾಗಿದೆ ಎಂಬ ಮಾಹಿಇತಿ ನೀಡಿದ್ದು, ಅಪ್ಪನನ್ನು ಕಳೆದುಕೊಂಡ ಹೆಣ್ಣು ಮಕ್ಕಳು ತಮ್ಮ ತಂದೆಯನ್ನು ಕೊನೆಯ ಬಾರಿ ನೋಡುವಂತಾಗಿದೆ.
ಇದನ್ನೂ ಓದಿ: Agniveer Recruitment: ಸೇನೆಯಲ್ಲಿ ಅಗ್ನಿವೀರರ ನೇಮಕಾತಿ; ಇಲ್ಲಿದೆ ಹುದ್ದೆಯ ಸಂಪೂರ್ಣ ವಿವರ
ಗಮನಾರ್ಹವಾಗಿ, 1984 ರಲ್ಲಿ, ಸಿಯಾಚಿನ್ ಬಗ್ಗೆ ಭಾರತ ಮತ್ತು ಪಾಕಿಸ್ತಾನಕ್ಕೆ ಆಪರೇಷನ್ ಮೇಘದೂತ್ ಅಡಿಯಲ್ಲಿ 19 ಕುಮಾನ್ ರೆಜಿಮೆಂಟ್ ಸೈನಿಕರ ತುಕಡಿಯನ್ನು ಕಳುಹಿಸಲಾಯಿತು, ಆದರೆ ಚಂದ್ರಶೇಖರ್ ಹೆರ್ಬೋಲಾ ಸೇರಿದಂತೆ ಎಲ್ಲರೂ ಹಿಮಪಾತದಿಂದಾಗಿ ಹುತಾತ್ಮರಾದರು. ಇಂದು ದೇಶವು 76ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಹುತಾತ್ಮ ಯೋಧ ಚಂದ್ರಶೇಖರ್ ಅವರ ಪಾರ್ಥಿವ ಶರೀರ ಅವರ ಮನೆಗೆ ತಲುಪಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ