Chandrashekhar Bawankule: ಮಹಾರಾಷ್ಟ್ರ ಬಿಜೆಪಿಗೆ ಹೊಸ ನಾಯಕ! ಒಬಿಸಿ ಲೀಡರ್ ಈಗ ಮಹಾ ಬಿಜೆಪಿ ಅಧ್ಯಕ್ಷ

Maharashtra BJP: ಬಿಜೆಪಿಯು ಏಕನಾಥ ಶಿಂಧೆ ಬಣದೊಂದಿಗೆ ಕೈಜೋಡಿಸಿ ಬೃಹನ್​ಮುಂಬೈ ಚುನಾವಣೆಗಳನ್ನು ಗೆಲ್ಲಲು ಮತ್ತು ಸುಮಾರು ಮೂರು ದಶಕಗಳ ಕಾಲ ಭಾರತದ ಶ್ರೀಮಂತ ನಾಗರಿಕ ಸಂಸ್ಥೆಯನ್ನು ಆಳಿದ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯನ್ನು ಸೋಲಿಸಲು ಮಿಷನ್ 2022 ಅನ್ನು ಪ್ರಾರಂಭಿಸಿದೆ.

ಚಂದ್ರಶೇಖರ್ ಬವಾನ್‌ಕುಲೆ

ಚಂದ್ರಶೇಖರ್ ಬವಾನ್‌ಕುಲೆ

  • Share this:
    ಮುಂಬೈ: ಮಹಾರಾಷ್ಟ್ರದಲ್ಲಿ ಬಿಜೆಪಿಯಲ್ಲಿ ಭಾರೀ ಬದಲಾವಣೆಯ ಗಾಳಿ ಬೀಸುತ್ತಿದೆ. ಏಕನಾಥ ಶಿಂಧೆ ಅವರ ಜೊತೆಗೂಡಿ ಹೊಸ ಸರ್ಕಾರ ರಚಿಸಿದ ಬೆನ್ನಲ್ಲೇ ಮಹಾರಾಷ್ಟ್ರ ಘಟಕಕ್ಕೆ ಹೊಸ ಅಧ್ಯಕ್ಷರನ್ನೂ ಸಹ ಬಿಜೆಪಿ (Maharashtra BJP) ನೇಮಿಸಿದೆ. ಮಾಜಿ ಇಂಧನ ಸಚಿವ ಮತ್ತು ಒಬಿಸಿ ನಾಯಕ ಚಂದ್ರಶೇಖರ್ ಬವಾನ್‌ಕುಲೆ ಅವರನ್ನು ಮಹಾರಾಷ್ಟ್ರ ಬಿಜೆಪಿ ಘಟಕದ ಮುಖ್ಯಸ್ಥರನ್ನಾಗಿ ಶುಕ್ರವಾರ ನೇಮಿಸಲಾಗಿದೆ. ಮಾಜಿ ಶಾಲಾ ಶಿಕ್ಷಣ ಸಚಿವ ಮತ್ತು ಮರಾಠ ನಾಯಕ ಆಶಿಶ್ ಶೆಲಾರ್ ಮುಂಬೈ ಘಟಕದ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಬವಾಂಕುಲೆ ಮತ್ತು ಶೇಲಾರ್ ಇಬ್ಬರೂ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ಗೆ ಆಪ್ತರು.

    2019 ರ ವಿಧಾನಸಭಾ ಚುನಾವಣೆಯಲ್ಲಿ ಬವಾನ್​ಕುಲೆ ಅವರಿಗೆ ಟಿಕೆಟ್ ನಿರಾಕರಿಸಲಾಗಿತ್ತು. ಆದರೆ ಅವರು ಜೂನ್ 20 ರಂದು ರಾಜ್ಯ ಪರಿಷತ್ತಿಗೆ ಆಯ್ಕೆಯಾಗಿದ್ದರು.  ಈ ಹಿಂದೆ ಮುಂಬೈ ಬಿಜೆಪಿ ಮುಖ್ಯಸ್ಥರಾಗಿದ್ದ ಶೇಲಾರ್ ಪ್ರಕರಣದಲ್ಲಿ ಸಚಿವ ಸ್ಥಾನವನ್ನು ನಿರಾಕರಿಸಲಾಗಿತ್ತು.

    ಮುಂಬೈ ಆಳಲು ಬಿಜೆಪಿ ಚಿಂತನೆ
    ಆದರೆ ಅವರಿಗೆ ಇದೀಗ ಹೊಸ ಜವಾಬ್ದಾರಿ ನೀಡಲಾಗಿದೆ. ಬಿಜೆಪಿಯು ಏಕನಾಥ ಶಿಂಧೆ ಬಣದೊಂದಿಗೆ ಕೈಜೋಡಿಸಿ ಬೃಹನ್​ಮುಂಬೈ ಚುನಾವಣೆಗಳನ್ನು ಗೆಲ್ಲಲು ಮತ್ತು ಸುಮಾರು ಮೂರು ದಶಕಗಳ ಕಾಲ ಭಾರತದ ಶ್ರೀಮಂತ ನಾಗರಿಕ ಸಂಸ್ಥೆಯನ್ನು ಆಳಿದ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯನ್ನು ಸೋಲಿಸಲು ಮಿಷನ್ 2022 ಅನ್ನು ಪ್ರಾರಂಭಿಸಿದೆ.

    ಅರುಣ್ ಸಿಂಗ್ ಘೋಷಣೆ
    ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರು ಬವಾನ್​ಕುಲೆ ಮತ್ತು ಶೆಲಾರ್ ನೇಮಕದ ಘೋಷಣೆ ಮಾಡಿದ್ದಾರೆ.

    ಬಿಜೆಪಿ ಮಾಸ್ಟರ್ ಪ್ಲಾನ್ ಏನು?
    ಬವಾನ್​ಕುಲೆ ಅವರು ವಿದರ್ಭ ಮೂಲದ ನಾಯಕರಾಗಿದ್ದು ಬಿಜೆಪಿಯು ದುರ್ಬಲಗೊಳ್ಳುತ್ತಿರುವ ಕಾಂಗ್ರೆಸ್ ಪಕ್ಷದ ಲಾಭವನ್ನು ಪಡೆದುಕೊಂಡು ಈ ಅವಧಿಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ನಗರ ಮತ್ತು ಗ್ರಾಮೀಣ ಸಂಸ್ಥೆಗಳಲ್ಲಿ 27% OBC ಕೋಟಾವನ್ನು ಸುಪ್ರೀಂ ಕೋರ್ಟ್ ಮರುಸ್ಥಾಪಿಸಿದ ಕೆಲವು ದಿನಗಳ ನಂತರ ಬವಾಂಕುಲೆ ಅವರ ನೇಮಕಾತಿ ನಡೆದಿದೆ. 14 ಮುನ್ಸಿಪಲ್ ಕಾರ್ಪೊರೇಶನ್‌ಗಳು, 25 ಜಿಲ್ಲಾ ಪರಿಷತ್ತು ಮತ್ತು ಒಂದೆರಡು ನಗರ ಸ್ಥಳೀಯ ಸಂಸ್ಥೆಗಳಿಗೆ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ OBC ಗಳಿಗೆ ಮೀಸಲಾತಿಯೊಂದಿಗೆ ಚುನಾವಣೆಗಳು ನಡೆಯಲಿವೆ. ಶಿವಸೇನೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಅವಧಿಯಲ್ಲಿ ನಗರ ಮತ್ತು ಗ್ರಾಮಾಂತರ ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿ ಕೋಟಾವನ್ನು ಮರುಸ್ಥಾಪಿಸಲು ಒತ್ತಾಯಿಸುವಲ್ಲಿ ಫಡ್ನವಿಸ್ ಮತ್ತು ಇತರ ಪಕ್ಷದ ನಾಯಕರೊಂದಿಗೆ ಬವಾನ್​ಕುಲೆ ಮುಂಚೂಣಿಯಲ್ಲಿದ್ದರು.

    ಇದನ್ನೂ ಓದಿ: Maharashtra Cabinet: ಶಿಂಧೆ ಸಂಪುಟ ಸೇರಿದ 18 ಶಾಸಕರು, 50:50 ಸೂತ್ರದಲ್ಲಿ ಕ್ಯಾಬಿನೆಟ್ ವಿಸ್ತರಣೆ

    ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತ್ತು ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಮಿಷನ್ 45 ಅನ್ನು ಸಾಧಿಸಲು ಬಿಜೆಪಿ ಒಬಿಸಿ ಕಾರ್ಡ್ ಪ್ರಯೋಗಿಸಲು ಯೋಜನೆ ರೂಪಿಸುತ್ತಿದೆ ಎನ್ನಲಾಗಿದೆ. ಈ ಮೂಲಕ ಬಿಜೆಪಿ ಪಕ್ಷವು ಗರಿಷ್ಠ 48 ಲೋಕಸಭಾ ಸ್ಥಾನಗಳನ್ನು ಮತ್ತು 288 ವಿಧಾನಸಭಾ ಸ್ಥಾನಗಳಲ್ಲಿ 170 ಪ್ಲಸ್ ಸ್ಥಾನಗಳನ್ನು ಗೆಲ್ಲಲು ಯೋಜಿಸಿದೆ. ಶಿಂಧೆ ನೇತೃತ್ವದ ಶಿವಸೇನೆಯ ರೆಬೆಲ್ ಬಣದ ಶಾಸಕುರ ಬಿಜೆಪಿಗೆ ನೆರವಾಗಲಿದ್ದಾರೆ ಎನ್ನುವುದು ಬಿಜೆಪಿಯ ಯೋಚನೆ.

    ಇದನ್ನೂ ಓದಿ: Maharastra Politics: ಮಹಾರಾಷ್ಟ್ರ ರಾಜಕಾರಣಕ್ಕೆ ಮಹಾ ಟ್ವಿಸ್ಟ್, ಉದ್ಧವ್ ಠಾಕ್ರೆ-ದೇವೇಂದ್ರ ಫಡ್ನವೀಸ್ ಮಾತುಕತೆ!

    ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯನ್ನು ಸೋಲಿಸಲು ಇತರ ಸಮುದಾಯಗಳ ಮತದಾರರನ್ನು ಸೆಳೆಯುವ ಗುರಿ ಬಿಜೆಪಿ ಮುಂದಿದೆ. ಅಲ್ಲದೇ ಬಿಜೆಪಿ ಪಕ್ಷವು ಪ್ರಧಾನಿ ನರೇಂದ್ರ ಮೋದಿ ಅಲೆಯ ಮೇಲೆ ವೋಟ್ ಪಡೆಯಲು ಯೋಜಿಸುತ್ತಿದೆ.
    Published by:guruganesh bhat
    First published: