ಆಂಧ್ರದಲ್ಲಿ ಟಿಡಿಪಿ-ವೈಎಸ್​​ಆರ್​​​ ಸಂಘರ್ಷ; ಮುಂದುವರೆದ ಚಂದ್ರಬಾಬು ನಾಯ್ಡು ಗೃಹಬಂಧನ; ಪ್ರಕ್ಷುಬ್ಧ ವಾತಾವರಣ

ಸದ್ಯ ನಿರಾಶ್ರಿತರ ಶಿಬಿರಗಳಲ್ಲಿ ವಾಸಿಸುತ್ತಿದ್ದ ಜನರನ್ನು ಪೊಲೀಸರು ಬಲವಂತವಾಗಿ ಮನೆಗೆ ಕರೆದೊಯ್ದಿದ್ದಾರೆ. ಈ ದಾಳಿಯ ಹಿಂದೆ ರಾಜಕೀಯ ದುರುದ್ದೇಶವಿದೆ ಎಂದು ವಿರೋಧ ಪಕ್ಷಗಳು ವೈಎಸ್​ಆರ್​​ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರುತ್ತಿವೆ.​

news18
Updated:September 12, 2019, 12:35 PM IST
ಆಂಧ್ರದಲ್ಲಿ ಟಿಡಿಪಿ-ವೈಎಸ್​​ಆರ್​​​ ಸಂಘರ್ಷ; ಮುಂದುವರೆದ ಚಂದ್ರಬಾಬು ನಾಯ್ಡು ಗೃಹಬಂಧನ; ಪ್ರಕ್ಷುಬ್ಧ ವಾತಾವರಣ
ಚಂದ್ರಬಾಬು ನಾಯ್ಡು, ವೈಎಸ್​​​ ಜಗನ್​​ ಮೋಹನ್​ ರೆಡ್ಡಿ
  • News18
  • Last Updated: September 12, 2019, 12:35 PM IST
  • Share this:
ಅಮರಾವತಿ(ಸೆ.12): ಮುಖ್ಯಮಂತ್ರಿ ವೈ.ಎಸ್​​ ಜಗನ್​​ ಮೋಹನ್​​ ರೆಡ್ಡಿ ಸರ್ಕಾರದ ವಿರುದ್ಧ​​ ಚಲೊ ಆತ್ಮಕೂರ್​​​ ಕಾರ್ಯಕ್ರಮ ಹಮ್ಮಿಕೊಂಡಿದ್ದ ಟಿಡಿಪಿ ನಾಯಕರ ಗೃಹ ಬಂಧನ ಮುಂದುವರೆದಿದೆ. ಮಾಜಿ ಸಿಎಂ ಚಂದ್ರಬಾಬು ನಾಯ್ಡು ಸೇರಿದಂತೆ ಹಲವರ ಗೃಹ ಬಂಧನ ಮುಂದುವರೆಸಿ ಎಂದು ಆಂಧ್ರಪ್ರದೇಶ ಸರ್ಕಾರ ಪೊಲೀಸರಿಗೆ ಸೂಚಿಸಿದೆ. ಇದರ ಪರಿಣಾಮ ಇಲ್ಲಿ ಭಾರೀ ಉದ್ವಿಘ್ನ ಪರಿಸ್ಥಿರಿ ಉಂಟಾಗಿದ್ದು, ಚಲೋ ಆತ್ಮಕೂರ್​​​ ಮುಂದೂಡಲಾಗಿದೆ.

ಆತ್ಮಕೂರ್​​ನಲ್ಲಿ ವೈಎಸ್​​ಆರ್​ ಕಾಂಗ್ರೆಸ್ಸಿಗರು ಸ್ಥಳೀಯರ ಮೇಲೆ ದಾಳಿ ನಡೆಸಿದ್ದಾರೆ. ಈ ದಾಳಿಯಿಂದ ಮನೆ ಕಳೆದುಕೊಂಡ 127 ಕುಟುಂಬಗಳು, ನಿರಾಶ್ರಿತ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ. ಇವರಿಗೆ ಬೆಂಬಲ ನೀಡಲು ಟಿಡಿಪಿ ನೇತೃತ್ವದಲ್ಲಿ ಆತ್ಮಕೂರು ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ರ್‍ಯಾಲಿಯಲ್ಲಿ ಭಾಗಿಯಾಗಲು ಮಾಜಿ ಸಿಎಂ ಚಂದ್ರಬಾಬು ನಾಯ್ಡು, ಮಗ ಎನ್‌. ಲೋಕೇಶ್‌ ಬುಧವಾರ(ನಿನ್ನೆ) ತೆರಳಿದ್ದರು. ಈ ವೇಳೆ ಪೊಲೀಸರು ಇಬ್ಬರನ್ನೂ ತಡೆದು, ಗೃಹ ಬಂಧನದಲ್ಲಿರಿಸಿದ್ದಾರೆ ಎನ್ನುತ್ತಿವೆ ಮೂಲಗಳು.

ಮಾಜಿ ಸಿಎಂ ಚಂದ್ರಬಾಬು ನಾಯ್ಡು ಸೇರಿದಂತೆ ಕೃಷ್ಣಾ, ಗುಂಟೂರು ಜಿಲ್ಲೆಯ ಟಿಡಿಪಿ ನಾಯಕರನ್ನೂ ಗೃಹಬಂಧನದಲ್ಲಿ ಇಡಲಾಗಿದೆ. ಜತೆಗೆ ಇನ್ನೂ ಕೆಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಮಧ್ಯೆಯೇ ಪೊಲೀಸರ ನಡೆಗೆ ಆಕ್ರೋಶ ವ್ಯಕ್ತಪಡಿಸಿರುವ ಚಂದ್ರಬಾಬು ನಾಯ್ಡು, "ನಮ್ಮ ಹೋರಾಟ ಮುಂದುವರೆಯಲಿದೆ. ನಮ್ಮ ಹೋರಾಟವನ್ನು ಯಾರಿಂದಲೂ ಹತ್ತಿಕ್ಕಲು ಸಾಧ್ಯವಿಲ್ಲ" ಎಂದಿದ್ದಾರೆ.

ಇದನ್ನೂ ಓದಿ: ಅತೃಪ್ತರ ಭವಿಷ್ಯ ಮತ್ತಷ್ಟು ಕಗ್ಗಂಟು; ಸುಪ್ರೀಂ ಕೋರ್ಟ್​​​ನಲ್ಲಿ ಭಾರೀ ಹಿನ್ನಡೆ

ರಾಜ್ಯದಲ್ಲೀಗ ವೈಎಸ್ ಆರ್ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ನೂರು ದಿನಗಳು ಕಳೆದಿವೆ. ಒಂದೆಡೆ ಸಂಭ್ರಮಾಚರಣೆಗೆ ಸರ್ಕಾರ ಮುಂದಾದರೆ, ಇನ್ನೊಂದೆಡೆ ಆತ್ಮಕೂರ್​​ನಲ್ಲಿ ಸ್ಥಳೀಯರ ಮೇಲೆ ಸಿಎಂ ಜಗನ್​​ ಬೆಂಬಲಿಗರು ದಾಳಿ ನಡೆಸಿದ್ದಾರೆ. ಹಾಗೆಯೇ 545 ಕುಟುಂಬಗಳನ್ನು ಓಡಿಸಲಾಗಿದೆ. ಈ ಪೈಕಿ ಹೆಚ್ಚಿನವರು ಪರಿಶಿಷ್ಟ ಜಾತಿಗೆ ಸೇರಿದವರು ಟಿಡಿಪಿ ಮುಖಂಡರು ಆರೋಪಿಸಿದ್ದಾರೆ.

ಸದ್ಯ ನಿರಾಶ್ರಿತರ ಶಿಬಿರಗಳಲ್ಲಿ ವಾಸಿಸುತ್ತಿದ್ದ ಜನರನ್ನು ಪೊಲೀಸರು ಬಲವಂತವಾಗಿ ಮನೆಗೆ ಕರೆದೊಯ್ದಿದ್ದಾರೆ. ಈ ದಾಳಿಯ ಹಿಂದೆ ರಾಜಕೀಯ ದುರುದ್ದೇಶವಿದೆ ಎಂದು ವಿರೋಧ ಪಕ್ಷಗಳು ವೈಎಸ್​ಆರ್​​ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರುತ್ತಿವೆ.​

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್ಬುಕ್ ಮೆಸೆಂಜರ್ನಲ್ಲಿ ಸಬ್ಸ್ಕ್ರೈಬ್ ಮಾಡಿ----------
First published: September 12, 2019, 12:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading