ಚಂದ್ರಬಾಬು ನಾಯ್ಡು ಸೇರಿದಂತೆ 13 ಶಾಸಕರು 1 ದಿನದ ಮಟ್ಟಿಗೆ ಆಂಧ್ರ ವಿಧಾನಸಭೆಯಿಂದ ಅಮಾನತು
ಆಂಧ್ರಪ್ರದೇಶ ವಿಧಾನಸಭೆಯ ಸದನಸ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದ್ದ ಕಾರಣಕ್ಕಾಗಿ ಆಂಧ್ರಪ್ರದೇಶದ ಮಾಜಿ ಸಿಎಂ ಮತ್ತು ಪ್ರಸ್ತುತ ವಿರೋಧ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಮತ್ತು ಅವರ 12 ಬೆಂಬಲಿಗರನ್ನು ಒಂದು ದಿನದ ಮಟ್ಟಿಗೆ ಸದನದಿಂದ ಅಮಾನತುಗೊಳಿಸಿ ಸ್ಪೀಕರ್ ಆದೇಶಿಸಿದ್ದಾರೆ.
news18-kannada Updated:November 30, 2020, 4:20 PM IST

ಚಂದ್ರಬಾಬು ನಾಯ್ಡು-ಜಗನ್ಮೋಹನ್ ರೆಡ್ಡಿ.
- News18 Kannada
- Last Updated: November 30, 2020, 4:20 PM IST
ವಿಜಯವಾಡ (ನವೆಂಬರ್ 30): ಆಂಧ್ರಪ್ರದೇಶ ವಿಧಾನಸಭೆಯ ಸದನಸ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದ್ದ ಕಾರಣಕ್ಕಾಗಿ ಆಂಧ್ರಪ್ರದೇಶದ ಮಾಜಿ ಸಿಎಂ ಮತ್ತು ಪ್ರಸ್ತುತ ವಿರೋಧ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಮತ್ತು ಅವರ 12 ಬೆಂಬಲಿಗರನ್ನು ಒಂದು ದಿನದ ಮಟ್ಟಿಗೆ ಸದನದಿಂದ ಅಮಾನತುಗೊಳಿಸಿ ಸ್ಪೀಕರ್ ಆದೇಶಿಸಿದ್ದಾರೆ. ಚಳಿಗಾಲದ ಅಧಿವೇಶನದ ಮೊದಲ ದಿನವೇ ಆಂಧ್ರಪ್ರದೇಶದ ವಿಕೇಂದ್ರೀಕರಣ ಮತ್ತು ಎಲ್ಲಾ ಕ್ಷೇತ್ರಗಳ ಸಮಗ್ರ ಅಭಿವೃದ್ಧಿ ಮಸೂದೆ ಕುರಿತು ಚರ್ಚೆ ಕೈಗೊಳ್ಳಲಾಗಿತ್ತು. ಆದರೆ, ಈ ವೇಳೆ ಸದನದಲ್ಲಿ ತಮ್ಮ ಅಭಿಪ್ರಾಯವನ್ನು ಮಂಡಿಸಲು ಚಂದ್ರಬಾಬು ನಾಯ್ಡು ಅವರಿಗೆ ಅವಕಾಶ ನೀಡಲಾಗಿಲ್ಲ. ಹೀಗಾಗಿ ಚಂದ್ರಬಾಬು ನಾಯ್ಡು ಸ್ಪೀಕರ್ ಅವರ ನಡೆಯನ್ನು ವಿರೋಧಿಸಿ ತಮ್ಮ ಬೆಂಬಲಿಗರ ಜೊತೆ ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದ್ದರು. ಇದೇ ಕಾರಣಕ್ಕೆ ಅವರಿಗೆ ಈ ಶಿಕ್ಷೆಯನ್ನು ವಿಧಿಸಲಾಗಿದೆ ಎಂದು ವರದಿಯಾಗಿದೆ.
ಸದನದಲ್ಲಿ ನಿವಾರ್ ಚಂಡಮಾರುತದಿಂದ ಉಂಟಾದ ಹಾನಿಗೆ ಟಿಡಿಪಿ ಸದಸ್ಯೆ ನಿಮ್ಮಲಾ ರಾಮಾನಾಯ್ಡು ಪ್ರವಾಹ ಪರಿಹಾರದ ವಿಷಯವನ್ನು ಎತ್ತಿದಾಗ ಸದನ ಕೃಷಿ ಮತ್ತು ಸಹಕಾರದ ಕುರಿತು ಒಂದು ಸಣ್ಣ ಚರ್ಚೆಯನ್ನು ಕೈಗೊಂಡಿತು. ನಷ್ಟದ ಎಣಿಕೆಯನ್ನು ಡಿಸೆಂಬರ್ 15 ರೊಳಗೆ ಪೂರ್ಣಗೊಳಿಸಲು ಮತ್ತು ಇನ್ಪುಟ್ ಸಬ್ಸಿಡಿ ರೂಪದಲ್ಲಿ ಡಿಸೆಂಬರ್ 31 ರೊಳಗೆ ಪರಿಹಾರವನ್ನು ಪಾವತಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಈ ವೇಳೆ ಪ್ರತಿಪಕ್ಷದ ನಾಯಕ ಚಂದ್ರಬಾಬು ನಾಯ್ಡು ಅವರು ಮಾತನಾಡಲು ಮೈಕ್ ನೀಡುವಂತೆ ಸ್ಪೀಕರ್ ಅವರಿಗೆ ಒತ್ತಾಯಿಸಿದರು. ಆದರೆ, ಆಡಳಿತರೂಢ ಪಕ್ಷದ ಸದಸ್ಯೆ ರಾಮಾನಾಯ್ಡು ಮಾತನಾಡುತ್ತಿರುವುದರಿಂದ ಇದನ್ನು ನಿರಾಕರಿಸಲಾಯಿತು. ಇದರಿಂದಾಗಿ ಟಿಡಿಪಿ ಸದಸ್ಯರು ಚಂದ್ರಬಾಬು ನಾಯ್ಡು ಅವರಿಗೆ ಮಾತನಾಡಲು ಅವಕಾಶ ನೀಡಬೇಕು ಎಂದು ಸ್ಪೀಕರ್ ಬಳಿ ಒತ್ತಾಯಿಸಿದರು. ಆದರೂ ಸ್ಪೀಕರ್ ವಿರೋಧ ಪಕ್ಷದ ಮನವಿಗೆ ಕಿವಿಗೊಡದ ಕಾರಣ ಚಂದ್ರಬಾಬು ನಾಯ್ಡು ತಮ್ಮ ಬೆಂಬಲಿಗರ ಜೊತೆಯಲ್ಲಿ ಸದನದ ಬಾವಿಗೆ ಇಳಿದು ಪ್ರತಿಭಟಿಸಿದ್ದಾರೆ.
ಆದರೆ, ಚಂದ್ರಬಾಬು ನಾಯ್ಡು ಅವರ ಕ್ರಮವನ್ನು ಆಕ್ಷೇಪಿಸಿರುವ ಮುಖ್ಯಮಂತ್ರಿ ಜಗಮೋಹನ್ ರೆಡ್ಡಿ, "ಪ್ರತಿಪಕ್ಷದವರು ರೌಡಿ ಧರ್ಮವನ್ನು ಆಶ್ರಯಿಸುತ್ತಿದ್ದಾರೆ. ಸದನದ ಬಾವಿಗೆ ಇಳಿದು ಪ್ರತಿಭಟಿಸುತ್ತಾರೆ. ನಮ್ಮ ಪಕ್ಷದ ಸದಸ್ಯರೊಬ್ಬರು ಮಾತನಾಡುತ್ತಿರುವಾಗ ಪ್ರತಿಪಕ್ಷದ ನಾಯಕ ಮಧ್ಯಪ್ರವೇಶಿಸಲು ಮುಂದಾದರೆ ಅದಕ್ಕೆ ಹೇಗೆ ಅವಕಾಶ ನೀಡುವುದು? ಹೀಗಾಗಿ ನಮ್ಮ ಸದಸ್ಯೆ ಭಾಷಣದೊಂದಿಗೆ ಮುಂದುವರೆಯಲು ಅವಕಾಶ ನೀಡಿ" ಎಂದು ಸ್ಪೀಕರ್ ಬಳಿ ವಿನಂತಿಸಿದ್ದಾರೆ.
ಇದನ್ನೂ ಓದಿ : Farmers Protest: ರೈತ ಹೋರಾಟಕ್ಕೆ ಆಪ್ ಬೆಂಬಲ, ಕೇಜ್ರಿವಾಲ್ ನಿರ್ದೇಶನದಂತೆ ಹೋರಾಟಗಾರರಿಗೆ ಆಹಾರ ನೀರು ಸರಬರಾಜು
ಪ್ರವಾಹದಿಂದ ತತ್ತರಿಸಿದ ಜನ ಈ ಕುರಿತು ಸರ್ಕಾರ ಏನು ಹೇಳುತ್ತದೆ? ಎಂದು ಕೇಳಲು ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಆದರೆ, ಪ್ರತಿಪಕ್ಷಗಳು ಅದಕ್ಕೆ ಅವಕಾಶ ನೀಡುತ್ತಿಲ್ಲ. ಇಂತಹ ವರ್ತನೆಗಳು ಸದನಕ್ಕೆ ಅಗೌರವ ತಂದಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಮಾರ್ಷಲ್ಗಳ ಮೂಲಕ ಪ್ರತಿಭಟನಾ ನಿರತ ನಾಯಕರನ್ನು ಸದನದಿಂದ ಹೊರಹಾಕಿಸಿ ಚಂದ್ರಬಾಬು ನಾಯ್ಡು ಸೇರಿದಂತೆ ಎಲ್ಲಾ 13 ಜನ ಶಾಸಕರನ್ನು ಒಂದು ದಿನದ ಮಟ್ಟಿಗೆ ಅಮಾನತುಗೊಳಿಸಿದ್ದಾರೆ.
ಸದನದಲ್ಲಿ ನಿವಾರ್ ಚಂಡಮಾರುತದಿಂದ ಉಂಟಾದ ಹಾನಿಗೆ ಟಿಡಿಪಿ ಸದಸ್ಯೆ ನಿಮ್ಮಲಾ ರಾಮಾನಾಯ್ಡು ಪ್ರವಾಹ ಪರಿಹಾರದ ವಿಷಯವನ್ನು ಎತ್ತಿದಾಗ ಸದನ ಕೃಷಿ ಮತ್ತು ಸಹಕಾರದ ಕುರಿತು ಒಂದು ಸಣ್ಣ ಚರ್ಚೆಯನ್ನು ಕೈಗೊಂಡಿತು. ನಷ್ಟದ ಎಣಿಕೆಯನ್ನು ಡಿಸೆಂಬರ್ 15 ರೊಳಗೆ ಪೂರ್ಣಗೊಳಿಸಲು ಮತ್ತು ಇನ್ಪುಟ್ ಸಬ್ಸಿಡಿ ರೂಪದಲ್ಲಿ ಡಿಸೆಂಬರ್ 31 ರೊಳಗೆ ಪರಿಹಾರವನ್ನು ಪಾವತಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಆದರೆ, ಚಂದ್ರಬಾಬು ನಾಯ್ಡು ಅವರ ಕ್ರಮವನ್ನು ಆಕ್ಷೇಪಿಸಿರುವ ಮುಖ್ಯಮಂತ್ರಿ ಜಗಮೋಹನ್ ರೆಡ್ಡಿ, "ಪ್ರತಿಪಕ್ಷದವರು ರೌಡಿ ಧರ್ಮವನ್ನು ಆಶ್ರಯಿಸುತ್ತಿದ್ದಾರೆ. ಸದನದ ಬಾವಿಗೆ ಇಳಿದು ಪ್ರತಿಭಟಿಸುತ್ತಾರೆ. ನಮ್ಮ ಪಕ್ಷದ ಸದಸ್ಯರೊಬ್ಬರು ಮಾತನಾಡುತ್ತಿರುವಾಗ ಪ್ರತಿಪಕ್ಷದ ನಾಯಕ ಮಧ್ಯಪ್ರವೇಶಿಸಲು ಮುಂದಾದರೆ ಅದಕ್ಕೆ ಹೇಗೆ ಅವಕಾಶ ನೀಡುವುದು? ಹೀಗಾಗಿ ನಮ್ಮ ಸದಸ್ಯೆ ಭಾಷಣದೊಂದಿಗೆ ಮುಂದುವರೆಯಲು ಅವಕಾಶ ನೀಡಿ" ಎಂದು ಸ್ಪೀಕರ್ ಬಳಿ ವಿನಂತಿಸಿದ್ದಾರೆ.
ಇದನ್ನೂ ಓದಿ : Farmers Protest: ರೈತ ಹೋರಾಟಕ್ಕೆ ಆಪ್ ಬೆಂಬಲ, ಕೇಜ್ರಿವಾಲ್ ನಿರ್ದೇಶನದಂತೆ ಹೋರಾಟಗಾರರಿಗೆ ಆಹಾರ ನೀರು ಸರಬರಾಜು
ಈ ನಡುವೆ ಸ್ಪೀಕರ್ ಪದೇ ಪದೇ ವಿನಂತಿಸಿದರೂ ಸಹ ಪ್ರತಿಭಟನಾನಿರತ ನಾಯಕರು ತಮ್ಮ ಸ್ಥಾನಗಳಿಗೆ ಮರಳದ ಕಾರಣ ವಿಷಾಧ ವ್ಯಕ್ತಪಡಿಸಿರುವ ಸ್ಪೀಕರ್, "ಕೋವಿಡ್ ಸಂಕಷ್ಟದ ನಡುವೆಯೂ ಆಂಧ್ರಪ್ರದೇಶದಲ್ಲಿ ನಾವು ಚಳಿಗಾಲದ ಅಧಿವೇಶನವನ್ನು ನಡೆಸುತ್ತಿದ್ದೇವೆ ಏಕೆಂದರೆ ಹಲವಾರು ಪ್ರಮುಖ ಮಸೂದೆಗಳನ್ನು ಅಂಗೀಕರಿಸಬೇಕಾಗಿದೆ ಮತ್ತು ಇದು ಕಾರ್ಯವಿಧಾನದ ಪ್ರಕಾರ ಅವಶ್ಯಕತೆಯಾಗಿದೆ. ನಾವೂ ವಿರೋಧ ಪಕ್ಷದಲ್ಲಿದ್ದೆವು, ಆದರೂ ವಿಚಾರಣೆಯನ್ನು ಅಡ್ಡಿಪಡಿಸುವ ರೀತಿಯಲ್ಲಿ ಎಂದಿಗೂ ವರ್ತಿಸಲಿಲ್ಲ.