Canada Parliament: ಕೆನಡಾ ಪಾರ್ಲಿಮೆಂಟ್​ನಲ್ಲಿ ಕಸ್ತೂರಿ ಕನ್ನಡ! ಇದು ಭಾವುಕ ಕ್ಷಣ

ಕೆನಡಾದಲ್ಲಿ ಸಂಸದರಾಗಿರುವ ತುಮಕೂರು ಮೂಲದ ಚಂದ್ರ ಆರ್ಯ

ಕೆನಡಾದಲ್ಲಿ ಸಂಸದರಾಗಿರುವ ತುಮಕೂರು ಮೂಲದ ಚಂದ್ರ ಆರ್ಯ

ಕೆನಡಾದ ಪಾರ್ಲಿಮೆಂಟ್​ನಲ್ಲಿ ಸಂಸದರಾಗಿರುವ ಕನ್ನಡಿಗ ಚಂದ್ರ ಆರ್ಯ ಅವರು ನಾನು ನನ್ನ ಮಾತೃಭಾಷೆಯಲ್ಲಿ ಮಾತನಾಡುತ್ತೇನೆ ಎಂದು ಅಪ್ಪಟ ಕನ್ನಡದಲ್ಲಿ ಮಾತುಗಳನ್ನು ಆರಂಭಿಸಿದ್ದಾರೆ.

  • Share this:

ನಮ್ಮವರೇ ಕನ್ನಡ (Kannada) ಮಾತಾಡಲ್ಲ, ಗೊತ್ತಿರುವಷ್ಟರಲ್ಲೇ ಟುಸ್-ಪುಸ್ ಎಂದು ಇಂಗ್ಲೀಷ್​ನಲ್ಲೇ (English) ಮಾತಾನಾಡುತ್ತಾರೆ ಎನ್ನುವುದು ಎಲ್ಲರ ಆರೋಪ. ಇದು ಸತ್ಯ ಕೂಡಾ. ಬೆಂಗಳೂರಿನಂತಹ (Bengaluru) ಮಹಾನಗರದಲ್ಲಿ ಅದೆಷ್ಟು ಬಗೆಯ ಜನರಿದ್ದಾರೆ, ಎಷ್ಟು ಬಗೆಯ ಭಾಷೆಗಳಿವೆ, ಎಷ್ಟು ವೆರೈಟಿ! ಇಲ್ಲಿ ಕನ್ನಡ ಮಾತನಾಡುವವರನ್ನು ನಾವು ಹುಡುಕುವಂತಾಗಿದೆ ಇಂದಿನ ಸ್ಥಿತಿ. ತಮಿಳು, ಮಲಯಾಳಂ, ತೆಲುಗು, ಹಿಂದಿ ಸೇರಿ ಇತರ ಎಲ್ಲ ಭಾಷೆಗಳನ್ನೂ ನಾವಿಲ್ಲಿ ಸುತ್ತ ಮುತ್ತ ಕೇಳುತ್ತಿರುತ್ತೇವೆ. ಆದರೆ ಕನ್ನಡ ಮಾತಾಡಿ ಅಂದ್ರೆ ಕನ್ನಡ್ ಗೊತ್ತಿಲ್ಲ ಎನ್ನುವವರೇ ಜಾಸ್ತಿ ಇದ್ದಾರೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ ವಿದೇಶದಲ್ಲಿ ಕನ್ನಡದ ಕಂಪು ಸಿಕ್ಕಿದರೆ ಹೇಗಿರುತ್ತೆ? ಕೆನಡಾದ ಸಂಸತ್ತಿನಲ್ಲಿ (Canada Parliament) ಸ್ವಚ್ಛ ಕನ್ನಡದ ಚಂದದ ಮಾತು ಕೇಳೋಕೆ ಸಾಧ್ಯವಾ? ಇಲ್ಲಿದೆ ಇಂಟ್ರೆಸ್ಟಿಂಗ್ ಸುದ್ದಿ.


ಕೆನಡಾದ ಸಂಸತ್ತಿನಲ್ಲಿ ಕನ್ನಡ ಮಾತು ಕೇಳಿಬಂದಿದೆ. ಕೆನಡಾದ ಪಾರ್ಲಿಮೆಂಟ್​ನಲ್ಲಿ ಸಂಸದರಾಗಿರುವ ಕನ್ನಡಿಗ ಚಂದ್ರ ಆರ್ಯ ಅವರು ನಾನು ನನ್ನ ಮಾತೃಭಾಷೆಯಲ್ಲಿ ಮಾತನಾಡುತ್ತೇನೆ ಎಂದು ಅಪ್ಪಟ ಕನ್ನಡದಲ್ಲಿ ಮಾತುಗಳನ್ನು ಆರಂಭಿಸಿದ್ದಾರೆ.


ನಾನು ನನ್ನ ಮಾತೃಭಾಷೆಯಾದ ಕನ್ನಡದಲ್ಲಿ ಮಾತನಾಡುತ್ತೇನೆ ಎಂದ ಚಂದ್ರ ಆರ್ಯ ಅವರು ಕೆನಡಾ ಪಾರ್ಲಿಮೆಂಟ್​ನಲ್ಲಿ ಇದೇ ಮೊದಲ ಬಾರಿ ಕನ್ನಡ ಮಾತನಾಡಿದ್ದಾರೆ. ಕೆನಡಾ ಸಂಸತ್ ಸದಸ್ಯರಾಗಿ ಆಯ್ಕೆಯಾಗಿರುವ ಚಂದ್ರ ಆರ್ಯ ಹೆಮ್ಮೆಯಿಂದ ಕನ್ನಡದಲ್ಲಿ ಮಾತನಾಡುವ ವಿಡಿಯೋ ಈಗ ಕನ್ನಡಿಗರಿಗೆ ಆಪ್ತವಾಗಿದೆ.


ಕನ್ನಡದಲ್ಲಿಯೇ ಮಾತನಾಡಿದ ಚಂದ್ರ ಆರ್ಯ


ಮಾನ್ಯ ಸಭಾಪತಿ, ಕೆನಡಾ ದೇಶದ ಸಂಸತ್ತಿನಲ್ಲಿ ನನ್ನ ಮಾತೃ ಭಾಷೆ ಕನ್ನಡದಲ್ಲಿ ಮಾತನಾಡಲು ಅವಕಾಶ ಸಿಕ್ಕಿರುವುದಕ್ಕೆ ನನಗೆ ಸಂತೋಷವಾಗುತ್ತಿದೆ. ಭಾರತ ದೇಶದ ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಸಿರಾ ತಾಲೂಕಿನ ವ್ಯಕ್ತಿಯೊಬ್ಬ ಕೆನಡಾ ಸಂಸತ್ ಸದಸ್ಯನಾಗಿ ಆಯ್ಕೆಯಾಗಿ ಕನ್ನಡದಲ್ಲಿ ಮಾತನಾಡುತ್ತಿರುವುದು ಸುಮಾರು 5 ಕೋಟಿ ಕನ್ನಡಿಗರಿಗೆ ಹೆಮ್ಮೆಯ ವಿಚಾರವಾಗಿದೆ.


ಮೆಚ್ಚುಗೆಯ ಚಪ್ಪಾಳೆ


ಕೆನಡಾದ ಕನ್ನಡಿಗರು 2018ರಲ್ಲಿ ಈ ಸಂಸತ್ತಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಿದರು. ರಾಷ್ಟ್ರಕವಿ ಕುವೆಂಪು ಬರೆದು ನಟಸಾರ್ವಭೌಮ ಡಾ. ರಾಜ್​ಕುಮಾರ್ ಹಾಡಿರುವ ಭಾವಗೀತೆಯ ಕೆಲವು ಸಾಲುಗಳೊಂದಿಗೆ ಮಾತು ಮುಗಿಸುತ್ತಿದ್ದೇನೆ ಎಂದಿದ್ದಾರೆ. ಎಲ್ಲಾದರು ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು ಎನ್ನುವ ಸಾಲುಗಳ ಮೂಲ ಚಂದ್ರ ಆರ್ಯ ಮಾತು ಮುಗಿಸಿದ್ದಾರೆ. ಅವರ ಮಾತುಗಳು ಮುಗಿಯುತ್ತಿದ್ದಂತೆ ಎಲ್ಲರ ಕರತಾಡನವನ್ನು ಸ್ಪಷ್ಟವಾಗಿ ವಿಡಿಯೋದಲ್ಲಿ ಕೇಳಬಹುದು.ಚಂದ್ರ ಆರ್ಯ ಕರ್ನಾಟಕದ ತುಮಕೂರಿನ ಸಿರಾ ತಾಲೂಕಿನ ದ್ವಾರಾಳು ಗ್ರಾಮದವರು. ಅವರು ಕನ್ನಡದಲ್ಲಿ ಮಾತನಾಡುತ್ತಿರುವ ವಿಡಿಯೋ ತಮ್ಮ ಟ್ವಿಟರ್​ ಖಾತೆಯಲ್ಲಿ ಶೇರ್ ಮಾಡಿದ್ದು 13 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ. 2800 ಕ್ಕೂ ಹೆಚ್ಚು ಬಾರಿ ಈ ಟ್ವೀಟ್ ರೀಟ್ವೀಟ್ ಆಗಿದೆ.

Published by:Divya D
First published: