ಬಯಲಾಯ್ತು ಪಂಜಾಬ್​ನ ಮೊದಲ ಮಹಿಳಾ ಕ್ಯಾಬ್​ ಡ್ರೈವರ್​ ಕರಾಳ ಮುಖ!: ಬೆಚ್ಚಿ ಬಿದ್ದ ಜನರು!


Updated:August 28, 2018, 5:12 PM IST
ಬಯಲಾಯ್ತು ಪಂಜಾಬ್​ನ ಮೊದಲ ಮಹಿಳಾ ಕ್ಯಾಬ್​ ಡ್ರೈವರ್​ ಕರಾಳ ಮುಖ!: ಬೆಚ್ಚಿ ಬಿದ್ದ ಜನರು!

Updated: August 28, 2018, 5:12 PM IST
ನ್ಯೂಸ್​ 18 ಕನ್ನಡ

ಪಂಜಾಬ್​(ಆ.28): ಮೊಹಾಲಿಯ ಅಕೌಂಟೆಂಟ್​ ಒಬ್ಬರ ಮೇಲೆ ಆಗಸ್ಟ್​ 18 ರಂದು ನಡೆದಿದ್ದ ದರೋಡೆ ಪ್ರಕರಣವು ಬಹುದೊಡ್ಡ ತಿರುವು ಪಡೆದುಕೊಂಡಿದೆ. ಈ ಪ್ರಕರಣದಲ್ಲಿ ಚಂಡೀಘಡ್​ನ ಮೊದಲ ಮಹಿಳಾ ಕ್ಯಾಬ್​ ಡ್ರೈವರ್​ ಎಂದೇ ಖ್ಯಾತಿ ಗಳಿಸಿದ್ದ ಫಿರೋಜ್​ಪುರ್​ನ ತಲ್​ವಂಡಿಯ ನಿವಾಸಿ ನವದೀಪ್​ ಕೌರ್​ ಹಾಗೂ ಅವರ ಇಬ್ಬರು ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ. ಇವರೆಲ್ಲರೂ ಒಂದಾಗಿ ಗನ್​ ತೋರಿಸಿ ಈ ದರೋಡೆ ನಡೆಸಿದ್ದರೆನ್ನಲಾಗಿದೆ. ಪ್ರಕರಣದಲ್ಲಿ ಬಂಧಿಸಲಾಗಿರುವ ಉಳಿದಿಬ್ಬರು ಸಹಚರರನ್ನು ಗುರುಪ್ರೀತ್​ ಹಾಗೂ ಅನಿಲ್​ ಕುಮಾರ್​ ಸೋನು ಎಂದು ಗುರುತಿಸಲಾಗಿದೆ. ಇನ್ನು ಇವರ ಮತ್ತೊಬ್ಬ ಸಹಚರ ರಿಂಕಾ ಎಂಬಾತ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಆರೋಪಿಗಳು ವಿಚಾರಣೆ ವೇಳೆ ಸ್ಪೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ತಾವು ಲುದಿಯಾನಾ ಜೈಲಿನಲ್ಲಿ ಬಂಧಿಯಾಗಿರುವ ಗ್ಯಾಂಗ್​ಸ್ಟರ್​ ದೀಪಕ್​ ಕುಮಾರ್​(ಬಿನ್ನಿ ಗುಜ್ಜರ್​)ನನ್ನು ಕೋರ್ಟ್​ಗೆ ಕರೆತರುವ ವೇಳೆ ಕಿಡ್ನ್ಯಾಪ್​ ಮಾಡಲು ಯೋಜನೆ ರೂಪಿಸಿದ್ದೆವು ಎಂದು ಆರೋಪಿಗಳು ತಿಳಿಸಿದ್ದಾರೆ. ಅಲ್ಲದೇ ಈ ಯೋಜನೆಯನ್ನು ಪೂರ್ಣಗೊಳಿಸಲೆಂದೇ ದರೋಡೆ ನಡೆಸಿದ್ದೆವೆಂದೂ ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ. ಪೊಲೀಸರು ದರೋಡೆಗೆ ಬಳಸಿದ್ದ ವಾಹನ, ಒಂದು ಪಿಸ್ತೂಲ್​, ಒಂದು ರಿವಾಲ್ವರ್​, 2 ಮ್ಯಾಗಜೀನ್​, 11 ಕಾಡತೂಸುಗಳು ಹಾಗೂ 350 ನಶೆಯೇರಿಸುವ ಪೌಡರ್​ ಆರೋಪಿಗಳಿಂದ ವಶಪಡಿಸಿಕೊಂಡಿದ್ದಾರೆ.

ಈ ಕುರಿತಾಗಿ ಪ್ರತಿಕ್ರಿಯಿಸಿರುವ ಪೊಲೀಸ್​ ಕಮಿಷನರ್​ "ಇವರೆಲ್ಲರೂ ಸೇರಿ ಸೇರಿ ಇಂದ್ರಜಿತ್​ ಸಿಂಗ್​ರನ್ನು ಗನ್​ ತೋರಿಸಿ ಅಪಹರಿಸಿದ್ದಾರೆ. ಬಳಿಕ ಅವರ ಗಾಡಿಯನ್ನು ವಶಪಡಿಸಿಕೊಂಡಿದ್ದಾರೆ. ಇದಾದ ಬಳಿಕ ಇಂದ್ರಜಿತ್​ರನ್ನು ದೆಹಲಿಗೆ ಕರೆದೊಯ್ದು ಎಟಿಎಂನಿಂದ 40 ಸಾವಿರ ರೂಪಾಯಿ ತೆಗೆಸಿ ಶಾಪಿಂಗ್​ ಮಾಡಿದ್ದಾರೆ. ಬಳಿಕ ರಿಂಕಾ ತನ್ನ ಕೆಲಸದಿಂದ ದೆಹಲಿಯಲ್ಲೇ ಉಳಿದುಕೊಂಡಿದ್ದು, ಉಳಿದವರು ಇಂದ್ರಜಿತ್​ರನ್ನು ಫಗ್ವಾಡಾ ಬಳಿ ಬಿಟ್ಟು, ಜಲಂಧರ್​ಗೆ ತೆರಳಿದ್ದರು. ಅವರೆಲ್ಲರೂ ಲಾಂಬಡಾ ಬಳಿ ಇರುವ ಗೋಪಿಯ ಮನೆಗೆ ತೆರಳಿದ್ದರು. ಅಲ್ಲಿ ಅವರು ಬಿನ್ನಿ ಗುಜ್ಜರ್​ನನ್ನು ಬಿಡಿಸಿಕೊಳ್ಳುವ ಪ್ಲಾನ್​ ರಚಿಸಿದ್ದರು. ಸದ್ಯ ಅವರೆಲ್ಲರನ್ನೂ ಎರಡು ದಿನಗಳ ನ್ಯಾಯಾಂಗ ಬಮಧನದಲ್ಲಿರಿಸಿದ್ದೇವೆ" ಎಂದು ತಿಳಿಸಿದ್ದಾರೆ.

ಈ ಇಡೀ ಪ್ರಕರಣದಲ್ಲಿ ಎಲ್ಲರನ್ನೂ ದಂಗಾಗಿಸಿದ್ದು, ಪಂಜಾಬ್​ನ ಮೊದಲ ಮಹಿಳಾ ಟ್ಯಾಕ್ಸಿ ಡ್ರೈವರ್​ ನವದೀಪ್​ ಕೌರ್​ ಗ್ಯಾಂಗ್​ಸ್ಟರ್​ ಎಂಬ ವಿಚಾರ. ಹೌದು ಕೆಲ ಸಮಯದ ಹಿಂದೆ ಮೊದಲ ಮಹಿಳಅ ಕ್ಯಾಬ್​ ಡ್ರೈವರ್​ ಆಗಿ ಖ್ಯಾತಿ ಗಳಿಸಿದ್ದ ಅವರು ಇದೀಗ ತಮ್ಮ ಕುಕೃತ್ಯದಿಂದ ಕುಖ್ಯಾತಿ ಗಳಿಸಿದ್ದಾರೆ. ಇಷ್ಟೇ ಅಲ್ಲದೇ ಗನ್​ ಹಿಡಿದುಕೊಂಡಿರುವ ಅವರ ಫೋಟೋಗಳೂ ಭಾರೀ ವೈರಲ್​ ಆಗಿವೆ.
First published:August 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...