Chandigarh University Row: ವಿದ್ಯಾರ್ಥಿನಿಯರ ಸ್ನಾನ ಮಾಡುವ ವಿಡಿಯೋ ಲೀಕ್; ರಾತ್ರಿಯಿಡೀ ಧರಣಿ, ಇಬ್ಬರು ಅರೆಸ್ಟ್

ಜಿಲ್ಲಾಡಳಿತ ಹಾಗೂ ಪೊಲೀಸರಿಂದ ಹಿರಿಯ ಅಧಿಕಾರಿಗಳು ಭರವಸೆ ನೀಡಿದ ಬಳಿಕ ವಿದ್ಯಾರ್ಥಿಗಳು ಭಾನುವಾರ ರಾತ್ರಿ ಪ್ರತಿಭಟನೆ ಅಂತ್ಯಗೊಳಿಸಿದ್ದಾರೆ.

ಧರಣಿಯ ದೃಶ್ಯ

ಧರಣಿಯ ದೃಶ್ಯ

  • Share this:
    ರಾಂಚಿ: ವಿದ್ಯಾರ್ಥಿನಿಯರು ಸ್ನಾನ ಮಾಡುತ್ತಿದ್ದ ವಿಡಿಯೋವನ್ನು ಸ್ವತಃ ಇನ್ನೋರ್ವ ವಿದ್ಯಾರ್ಥಿನಿಯೇ ಸೆರೆಹಿಡಿದು ತನ್ನ ಬಾಯ್​ಫ್ರೆಂಡ್​ಗೆ ಕಳಿಸಿದ ಘಟನೆ ಚಂಡೀಗಢ ವಿಶ್ವವಿದ್ಯಾನಿಲಯದಲ್ಲಿ (Chandigarh University Row) ಭಾರೀ ರಾದ್ದಾಂತವನ್ನೇ ಸೃಷ್ಟಿಸಿದೆ. ಪೊಲೀಸರು ವಿದ್ಯಾರ್ಥಿ ನಾಯಕರ (Student Leaders) ಜೊತೆ ಸರಣಿ ಸಭೆಗಳನ್ನು ನಡೆಸಿದ ಪರಿಣಾಮವಾಗಿ ಅಂತೂ ವಿದ್ಯಾರ್ಥಿನಿಯರ ಧರಣಿ ಅಂತ್ಯಗೊಂಡಿದೆ. ಸದ್ಯ ವಿದ್ಯಾರ್ಥಿನಿಯರು ಕೆಲವು ಬೇಡಿಕೆಗಳನ್ನು ಇಟ್ಟಿದ್ದು ಈ ಬೇಡಿಗಳ ಈಡೇರಿಕೆಗಾಗಿ ಪಟ್ಟು ಹಿಡಿದಿದ್ದಾರೆ. ಚಂಡೀಗಢ ವಿಶ್ವವಿದ್ಯಾಲಯದ ಹಾಸ್ಟೆಲ್‌ನ ವಿದ್ಯಾರ್ಥಿಗಳು ಮಹಿಳಾ ಹಾಸ್ಟೆಲರ್‌ಗಳ ಆಕ್ಷೇಪಾರ್ಹ ವಿಡಿಯೊಗಳನ್ನು ಇಬ್ಬರೂ ಸೋರಿಕೆ ಮಾಡಿದ್ದಾರೆ ಎಂದು ಆರೋಪಿಸಿ ಹಿಮಾಚಲ ಪ್ರದೇಶದ ವಿದ್ಯಾರ್ಥಿನಿ ಮತ್ತು ಆಕೆಯ ಗೆಳೆಯನನ್ನು ಭಾನುವಾರ ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಮಾಚಲ ಪೊಲೀಸರು ಮತ್ತೊಬ್ಬ 31 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ.

    10 ಸದಸ್ಯರ ವಿದ್ಯಾರ್ಥಿಗಳ ಸಮಿತಿಗೆ ಪ್ರಕರಣದ ತನಿಖೆಗೆ ಸಂಬಂಧಿಸಿದ ಎಲ್ಲ ವಿವರಗಳನ್ನು ನೀಡಬೇಕು. ಘಟನೆ ನಡೆದ ಹಾಸ್ಟೆಲ್ ವಾರ್ಡನ್ ಅನ್ನು ಅಮಾನತುಗೊಳಿಸಬೇಕು ಮತ್ತು ಬಾಲಕಿಯರ ಹಾಸ್ಟೆಲ್ ಅನ್ನು ಪರಿಶೀಲಿಸಬೇಕು. ಪ್ರತಿಭಟನೆಯ ಸಮಯದಲ್ಲಿ ಒಡೆದ ವಿದ್ಯಾರ್ಥಿಗಳ ಮೊಬೈಲ್ ಫೋನ್‌ಗಳನ್ನು ಬದಲಾಯಿಸಿಕೊಡಬೇಕು. ಜೊತೆಗೆ ವಿದ್ಯಾರ್ಥಿನಿಯರ ಹಾಸ್ಟೆಲ್ ವಾಶ್‌ರೂಮ್‌ಗಳ ಬಾಗಿಲುಗಳನ್ನು ಬದಲಾಯಿಸಲಾಗುವುದು ಎಂಬ ಬೇಡಿಕೆಗೆ ವಿಶ್ವವಿದ್ಯಾನಿಲಯವು ಒಪ್ಪಿಗೆ ನೀಡಿದೆ.

    ಬೇರೆ ವಿಡಿಯೋಗಳು ಸೋರಿಕೆ ಆಗಿಲ್ಲ
    ಪಂಜಾಬ್‌ನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಗುರುಪ್ರೀತ್ ಡಿಯೋ ಈ ಪ್ರಕರಣದ ಕುರಿತು ಮಾತನಾಡಿ, ವಿದ್ಯಾರ್ಥಿನಿಯು ತನ್ನ ಗೆಳೆಯನಿಗೆ ಆಕ್ಷೇಪಾರ್ಹ ವಿಡಿಯೋವನ್ನು ಕಳುಹಿಸಿದ್ದನ್ನು ಹೊರತುಪಡಿಸಿ ಅಂತಹ ಯಾವುದೇ ಆಕ್ಷೇಪಾರ್ಹ ವೀಡಿಯೊಗಳು ಸೋರಿಕೆಯಾಗಿಲ್ಲ ಎಂದು ಖಚಿತಪಡಿಸಿದ್ದಾರೆ. ಸ್ಥಳೀಯ ಜಿಲ್ಲಾಡಳಿತ ಹಾಗೂ ಪೊಲೀಸರಿಂದ ಹಿರಿಯ ಅಧಿಕಾರಿಗಳು ಭರವಸೆ ನೀಡಿದ ಬಳಿಕ ವಿದ್ಯಾರ್ಥಿಗಳು ಭಾನುವಾರ ರಾತ್ರಿ ಪ್ರತಿಭಟನೆ ಅಂತ್ಯಗೊಳಿಸಿದ್ದಾರೆ.

    ಸುರಕ್ಷತೆ ಮತ್ತು ಭದ್ರತೆ ಖಚಿತಪಡಿಸಿ
    ಪಂಜಾಬ್ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮನೀಶಾ ಗುಲಾಟಿ ವಿಶ್ವವಿದ್ಯಾಲಯದ ಕ್ಯಾಂಪಸ್‌ಗೆ ಭೇಟಿ ನೀಡಿದ್ದಾರೆ. ಈ ಪ್ರಕರಣದ ತನಿಖೆಯನ್ನು ಕಟ್ಟುನಿಟ್ಟಾಗಿ ಮತ್ತು ಯಾವುದೇ ಸಡಿಲಿಕೆ ಇಲ್ಲದೆ ವ್ಯವಹರಿಸುವಂತೆ ಪಂಜಾಬ್‌ನ ಪೊಲೀಸ್ ಮಹಾನಿರ್ದೇಶಕರಿಗೆ ಅಧ್ಯಕ್ಷೆ ರೇಖಾ ಶರ್ಮಾ ಪತ್ರ ಬರೆದಿದ್ದಾರೆ ಎಂದು ರಾಷ್ಟ್ರೀಯ ಮಹಿಳಾ ಆಯೋಗವು (NCW) ಹೇಳಿಕೆಯಲ್ಲಿ ತಿಳಿಸಿದೆ. ಸಂತ್ರಸ್ತರಿಗೆ ಸರಿಯಾದ ಸಮಾಲೋಚನೆ ನೀಡಬೇಕು. ಅವರ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ರಾಷ್ಟ್ರೀಯ ಮಹಿಳಾ ಆಯೋಗವು ಹೇಳಿದೆ.

    ಕಠಿಣ ಕ್ರಮದ ಭರವಸೆ
    ಪಂಜಾಬ್ ಶಾಲಾ ಶಿಕ್ಷಣ ಸಚಿವ ಹರ್ಜೋತ್ ಸಿಂಗ್ ಬೈನ್ಸ್ ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ್ದು, ವಿದ್ಯಾರ್ಥಿಗಳು ಶಾಂತವಾಗಿರುವಂತೆ ಕೇಳಿಕೊಂಡಿದ್ದಾರೆ. ತಪ್ಪಿತಸ್ಥರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ. "ನಾನು ಚಂಡೀಗಢ ವಿಶ್ವವಿದ್ಯಾನಿಲಯದ ಎಲ್ಲಾ ವಿದ್ಯಾರ್ಥಿಗಳನ್ನು ಶಾಂತವಾಗಿರಲು ವಿನಂತಿಸುತ್ತೇನ. ಯಾವುದೇ ತಪ್ಪಿತಸ್ಥರನ್ನು ಬಿಡುವುದಿಲ್ಲ. ಇದು ಅತ್ಯಂತ ಸೂಕ್ಷ್ಮ ವಿಷಯ. ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳ ಘನತೆಗೆ ಸಂಬಂಧಿಸಿದ ಈ ವಿಷಯ ನಮ್ಮ ಸಮಾಜದವನ್ನು ಪರೀಕ್ಷಗೆ ಒಡ್ಡಿದೆ ಎಂದು ಅವರು ತಿಳಿಸಿದ್ದಾರೆ.
    Published by:ಗುರುಗಣೇಶ ಡಬ್ಗುಳಿ
    First published: