• Home
  • »
  • News
  • »
  • national-international
  • »
  • ಕತ್ತಲಲ್ಲಿ ಮುಳುಗಿದ Chandigarh; ಮೊಬೈಲ್​ ನೆಟ್​ವರ್ಕ್​, ನೀರು ಸೇರಿದಂತೆ ಅನೇಕ ಸೌಲಭ್ಯಗಳಿಲ್ಲದೇ ಪರದಾಟ

ಕತ್ತಲಲ್ಲಿ ಮುಳುಗಿದ Chandigarh; ಮೊಬೈಲ್​ ನೆಟ್​ವರ್ಕ್​, ನೀರು ಸೇರಿದಂತೆ ಅನೇಕ ಸೌಲಭ್ಯಗಳಿಲ್ಲದೇ ಪರದಾಟ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ವಿದ್ಯುತ್ ಇಲಾಖೆಯನ್ನು ಖಾಸಗೀಕರಣಗೊಳಿಸುವ  ಚಂಡೀಗಢ ಆಡಳಿತದ ನಿರ್ಧಾರದ ವಿರೋಧಿಸಿ ಸೋಮವಾರ ರಾತ್ರಿಯಿಂದ ನೂರಾರು ನೌಕರರು ಮುಷ್ಕರ ನಡೆಸಿದ್ದಾರೆ.

  • Share this:

    ಚಂಡೀಗಢ (ಫೆ. 23): ವಿದ್ಯುತ್ ಇಲಾಖೆಯ ಕಾರ್ಮಿಕರ ಮೂರು ದಿನಗಳ ಮುಷ್ಕರದಿಂದ ಚಂಡೀಗಢ (Chandigarh) ಕತ್ತಲಲ್ಲಿ ಮುಳುಗಿದೆ. ನೌಕರರ ಮುಷ್ಕರದಿಂದಾಗಿ ನಗರದಲ್ಲಿ 36 ಗಂಟೆಗಳ ಕಾಲ ವಿದ್ಯುತ್ ಕಡಿತ (Power Cut) ಎದುರಾಗಿದೆ. ಇದರಿಂದ ನೀರು ಸರಬರಾಜು (Water), ಟೆಲಿಕಾಂ ಟವರ್‌ಗಳು (Telecom Tower), ಟ್ರಾಫಿಕ್ ಲೈಟ್‌ಗಳು (Traffic Light), ಮತ್ತು ವೈದ್ಯಕೀಯ ಸೌಲಭ್ಯಗಳಂತಹ ಹಲವಾರು ಸೇವೆಗಳ ಮೇಲೆ ಪರಿಣಾಮ ಬೀರಿದೆ. ಇನ್ನು ಈ ಕತ್ತಲಲ್ಲಿ ಜನರು ಸಂಕಷ್ಟ ಪಡುವ ಹಿನ್ನಲೆ ಈಗಾಗಲೇ ಮೊಬೈಲ್​ ಆಪರೇಟರ್​ಗಳ ಸಂಘ ಟೆಲಿಕಾಂಗಳು ತಮ್ಮ ಸೈಟ್‌ಗಳು ಮತ್ತು ವಿನಿಮಯವನ್ನು ಪರ್ಯಾಯ ಮೂಲಗಳನ್ನು ಬಳಸಿಕೊಂಡು ಶಕ್ತಿಯುತಗೊಳಿಸಲು ಎಲ್ಲಾ ಕ್ರಮಗಳಿಗೆ ಮುಂದಾಗಿದೆ.


    ಯಾಕೆ ಈ ಪ್ರತಿಭಟನೆ
    ವಿದ್ಯುತ್ ಇಲಾಖೆಯನ್ನು ಖಾಸಗೀಕರಣಗೊಳಿಸುವ  ಚಂಡೀಗಢ ಆಡಳಿತದ ನಿರ್ಧಾರದ ವಿರೋಧಿಸಿ ಸೋಮವಾರ ರಾತ್ರಿಯಿಂದ ನೂರಾರು ನೌಕರರು ಮುಷ್ಕರ ನಡೆಸಿದ್ದಾರೆ. ವಿದ್ಯುತ್ ಇಲಾಖೆಯನ್ನು ಖಾಸಗೀಕರಣಗೊಳಿಸಿದರೆ, ತಮ್ಮ ಸೇವಾ ಪರಿಸ್ಥಿತಿಗಳು ಹದಗೆಡುತ್ತವೆ. ಇದು ವಿದ್ಯುತ್ ದರ ಏರಿಕೆಗೆ ಕಾರಣವಾಗಬಹುದು ಎಂದು ಪ್ರತಿಭಟನಾಕಾರರು ಪ್ರತಿಪಾದಿಸಿದರು. ಇಲಾಖೆ ಖಾಸಗೀಕರಣದ ವಿರುದ್ಧ ಈ ಹಿಂದೆಯೂ ಹಲವು ಪ್ರತಿಭಟನೆಗಳು ನಡೆದಿದ್ದವು. ದೇಶದ ಇತರ ರಾಜ್ಯಗಳಲ್ಲೂ ಇಂತಹ ಪ್ರತಿಭಟನೆಗಳು ನಡೆಯುತ್ತಿವೆ.


    ವಿದ್ಯುತ್​ ವಿತರಣೆ ಮೇಲೆ ಪ್ರತಿಕೂಲ ಪರಿಣಾಮ


    ಚಂಡೀಗಢ ಆಡಳಿತವು ಅಗತ್ಯ ಸೇವೆಗಳ ನಿರ್ವಹಣೆ ಕಾಯಿದೆಯನ್ನು ಜಾರಿಗೊಳಿಸಿತು, ವಿದ್ಯುತ್ ಇಲಾಖೆ ನೌಕರರ ಮುಷ್ಕರವನ್ನು ತಕ್ಷಣವೇ ಜಾರಿಗೆ ಬರುವಂತೆ 6 ತಿಂಗಳ ಅವಧಿಗೆ ನಿಷೇಧಿಸಿತು. ಇದು ವಿದ್ಯುತ್ ವಿತರಣೆ, ಪ್ರಸರಣ ಮತ್ತು ಪೂರೈಕೆಯ ಕಾರ್ಯಾಚರಣೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.


    ಈ ಪ್ರದೇಶಗಳಲ್ಲಿ ಅಂದಕಾರ
    ಕಿಶನ್‌ಗಢ್ ಮತ್ತು ಮಣಿಮಜ್ರಾ ವಲಯಗಳು 20, 34, 36, 40, 42, 44, 49, 36 ಸೆಕ್ಟರ್​ಗಳು ಹೆಚ್ಚಾಗಿ ಈ ವಿದ್ಯುತ್​ ಸಮಸ್ಯೆಯಿಂದ ಸಂಕಷ್ಟಕ್ಕೆ ಎದುರಾಗಿದೆ. ಮುಷ್ಕರದಿಂದಾಗಿ ಹಲವು ಸೇವೆಗಳು ಸ್ಥಗಿತಗೊಂಡಿವೆ. ಸೇವೆಗಳನ್ನು ಪುನಃಸ್ಥಾಪಿಸಲು ಅವರು ಕೆಲಸ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


    ಇದನ್ನು ಓದಿ: ಸಾರ್ವಜನಿಕ ಸ್ಥಳಗಳಲ್ಲಿ ಯೋಗ ಮಾಡುವಂತಿಲ್ಲ! ಹೊಸ ನಿಯಮಕ್ಕೆ ಬೇಸತ್ತು ಬೀದಿಗಿಳಿದ ಮುಸ್ಲಿಂ ಮಹಿಳೆಯರು!


    ವೈದ್ಯಕೀಯ ಸೇವೆಯಲ್ಲೂ ತಲೆ ದೂರಿದ ಬಿಕ್ಕಟ್ಟು
    ಇನ್ನು ಈ ವಿದ್ಯುತ್​ ಸಮಸ್ಯೆಯಿಂದಾಗಿ ವೈದ್ಯಕೀಯ ಸೇವೆ ಮೇಲೂ ಪರಿಣಾಮ ಬೀರಿದೆ. ಈ ಸಂಬಂಧ ಮಾತನಾಡಿರುವ ಚಂಡೀಗಢ ಆರೋಗ್ಯ ಸೇವೆಗಳ ನಿರ್ದೇಶಕ ಡಾ ಸುಮನ್ ಸಿಂಗ್ ನಮ್ಮಲ್ಲಿ ಜನರೇಟರ್‌ಗಳಂತೆ ಬ್ಯಾಕಪ್ ಯೋಜನೆ ಇದೆ. ಆದರೆ ಆಸ್ಪತ್ರೆಯ ಶೇಕಡ 100 ಲೋಡ್ ಅನ್ನು ಜನರೇಟರ್ ಮೇಲೆ ಹಾಕಲು ಸಾಧ್ಯವಿಲ್ಲ. ಆದ್ದರಿಂದ, ನಾವು ನಮ್ಮ ಯೋಜಿತ ಶಸ್ತ್ರಚಿಕಿತ್ಸೆಗಳನ್ನು ಮುಂದೂಡಬೇಕಾಗಿದೆ ಎಂದಿದ್ದಾರೆ.


    ಇದನ್ನು ಓದಿ: ತಿರುಪತಿಯಲ್ಲಿ ಪ್ರಸಾದದ ಬೆಲೆ ₹500ಕ್ಕೆ ಏರಿಕೆ! ಯಾವುದಕ್ಕೆ ಎಷ್ಟು ಬೆಲೆ ನಿಗದಿ ಮಾಡಿದೆ ಟಿಟಿಡಿ?


    ಬ್ಯಾಕಪ್​ ನೀಡಲು ಮುಂದಾದ ಸರ್ಕಾರ
    ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಇಲ್ಲಿನ 66 ಕೆವಿ ಸಬ್ ಸ್ಟೇಷನ್‌ಗೆ ಎಸ್‌ಇ (ಸೂಪರಿಂಟೆಂಡೆಂಟ್ ಎಂಜಿನಿಯರ್) ಅವರನ್ನು ನಿಯೋಜಿಸಲಾಗಿದೆ. ನಿರ್ಣಾಯಕ ಪ್ರದೇಶಗಳಿಗಾಗಿ, ನಾವು DG ಸೆಟ್‌ಗಳ ಬ್ಯಾಕಪ್ ಅನ್ನು ಹೊಂದಿದ್ದೇವೆ. ಯಾವುದೇ ಆಸ್ಪತ್ರೆಯ ಸೇವೆಯ ಮೇಲೆ ಪರಿಣಾಮ ಬೀರದಂತೆ ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.


    ಮೊಬೈಲ್​ ನೆಟ್​ವರ್ಕ್​ಗೆ ಪರದಾಟ


    ಚಂಡೀಗಢದ ಆಡಳಿತಾಧಿಕಾರಿ ಬನ್ವಾರಿಲಾಲ್ ಪುರೋಹಿತ್, ಚಂಡೀಗಢದಲ್ಲಿ ನಡೆಯುತ್ತಿರುವ ವಿದ್ಯುತ್ ಬಿಕ್ಕಟ್ಟನ್ನು ತಕ್ಷಣಕ್ಕೆ ಪರಿಹರಿಸಲು ಮತ್ತು ಟೆಲಿಕಾಂ ಕಂಪನಿಗಳು ಸಾರ್ವಜನಿಕರಿಗೆ ತಡೆರಹಿತ ಟೆಲಿಕಾಂ ನೆಟ್‌ವರ್ಕ್ ಸಂಪರ್ಕವನ್ನು ಒದಗಿಸಲು ಮೊಬೈಲ್ ಸಂವಹನ ಟವರ್ ಸೈಟ್‌ಗಳಲ್ಲಿ ನಿರಂತರ ವಿದ್ಯುತ್ ಸರಬರಾಜು ಮಾಡಲು ಅಗತ್ಯ ವ್ಯವಸ್ಥೆಗಳನ್ನು ಮಾಡುವಂತೆ ನಾವು ವಿನಂತಿಸಿದ್ದೇವೆ. ಚಂಡೀಗಢದಲ್ಲಿ ನಡೆಯುತ್ತಿರುವ ವಿದ್ಯುತ್ ಬಿಕ್ಕಟ್ಟಿನಿಂದಾಗಿ, ಅಕ್ಕಪಕ್ಕದ ರಾಜ್ಯಗಳ ಎಲ್ಲಾ ಪ್ರದೇಶಗಳಲ್ಲಿ ಟೆಲಿಕಾಂ ಸೇವೆಗಳ ಮೇಲು ಪ್ರಭಾವ ಬೀರಿದೆ.

    Published by:Seema R
    First published: