Kuldeep Bishnoi: ಕಾಂಗ್ರೆಸ್​ಗೆ ಮತ್ತೊಂದು ಆಘಾತ, ಕಮಲ ಪಾಳಯದತ್ತ ಮತ್ತೊಬ್ಬ ಪ್ರಭಾವಿ ನಾಯಕ!

ಕುಲದೀಪ್ ಬಿಷ್ಣೋಯ್ ಕಮಲ ಪಾಳಯ ಸೇರ್ಪಡರೆಗೊಳ್ಳುವ ಸೂಚನೆಯನ್ನು ನೀಡಿದ್ದಾರೆ. ಈ ಬಗ್ಗೆ ಸುಳಿವು ನೀಡುತ್ತಾ ಟ್ವೀಟ್​ ಮಾಡಿರುವ ಬಿಷ್ಣೋಯ್ ಇಲ್ಲಿ ಪ್ರತಿ ಹಕ್ಕಿಯೂ ಗಾಯಗೊಂಡಿದೆ, ಆದರೆ ಮತ್ತೆ ಹಾರಬಲ್ಲವನಷಚ್ಟೇ ಜೀವಂತವಾಗಿರಲು ಸಾಧ್ಯ ಎಂದು ಬರೆದಿದ್ದಾರೆ

ಬಿಜೆಪಿಯತ್ತ ಕಾಂಗ್ರೆಸ್​ ನಾಯಕ

ಬಿಜೆಪಿಯತ್ತ ಕಾಂಗ್ರೆಸ್​ ನಾಯಕ

  • Share this:
ಚಂಡೀಗಢ(ಅ.02): ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿರುವ ಕಾಂಗ್ರೆಸ್ ಬಂಡಾಯ ಶಾಸಕ ಕುಲದೀಪ್ ಬಿಷ್ಣೋಯ್ (Kuldeep Bishnoi) ಆಗಸ್ಟ್ 4 ರಂದು ಬಿಜೆಪಿ ಸೇರುವ ಸಾಧ್ಯತೆ ಇದೆ. ಕುಲದೀಪ್ ಬಿಷ್ಣೋಯ್ ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ. ಕುಲದೀಪ್ ಬಿಷ್ಣೋಯ್ ಟ್ವೀಟ್ ಮಾಡುವ ಮೂಲಕ ತಮ್ಮ ಉದ್ದೇಶವನ್ನು ವ್ಯಕ್ತಪಡಿಸಲು ಪ್ರಯತ್ನಿಸಿದ್ದಾರೆ. ಕಾಂಗ್ರೆಸ್ (Indian National Congress)​ ಪಾಳಯ ಬಿಡುವ ಬಗ್ಗೆ ಕಾವ್ಯಾತ್ಮಕ ಶೈಲಿಯಲ್ಲಿ ಟ್ವೀಟ್ ಮಾಡಿರುವುದು ಕೂಡ ಹಾಸ್ಯಾಸ್ಪದವಾಗಿದೆ. ಇಲ್ಲಿ ಪ್ರತಿಯೊಂದು ಹಕ್ಕಿಯೂ ಗಾಯಗೊಂಡಿದೆ, ಆದರೆ ಮತ್ತೆ ಹಾರಬಲ್ಲವನಷ್ಟೇ ಇಲ್ಲಿ ಜೀವಂತವಾಗಿರುತ್ತಾನೆ ಎಂದು ಕುಲದೀಪ್ ಬಿಷ್ಣೋಯ್ ಟ್ವೀಟ್ ಮಾಡಿದ್ದಾರೆ.

ಅದೇ ಸಮಯದಲ್ಲಿ, ಬಿಷ್ಣೋಯ್ ಅವರು ಆಗಸ್ಟ್ 4 ರಂದು 10:10 ನಿಮಿಷಕ್ಕೆ ಅವರು ಈ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಬಳಿಕ ಅವರ ಬೆಂಬಲಿಗರು ಬಿಷ್ಟೋಯ್ ಬಿಜೆಪಿ ಸೇರುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ. ಆದರೆ, ಕುಲದೀಪ್ ಟ್ವೀಟ್ ನಿಂದ ಊಹಾಪೋಹಗಳು ಮಾತ್ರ ಕೇಳಿ ಬರುತ್ತಿವೆವೆ. ಸದ್ಯ ಅವರು ಕುಲದೀಪ್ ಬಿಷ್ಣೋಯ್ ಕಾಂಗ್ರೆಸ್ ತೊರೆಯಲು ಸಜ್ಜಾಗಿದ್ದಾರೆ ಎಂಬುವುದು ಮಾತ್ರ ಖಚಿತ. ಕುಲದೀಪ್ ಬಿಷ್ಣೋಯ್ ಅವರು ಸಿಎಂ ಮನೋಹರ್ ಲಾಲ್ ಅವರನ್ನು ಗೃಹ ಸಚಿವ ಅಮಿತ್ ಶಾ ಮತ್ತು ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿದ್ದಾರೆ.

ಇದನ್ನೂ ಓದಿ: Explained: BJP ಹುಟ್ಟಿ 42 ವರ್ಷ! ಭಾರತದ ಅತಿದೊಡ್ಡ ರಾಜಕೀಯ ಪಕ್ಷದ ಇತಿಹಾಸ, ಸಾಧನೆ, ವೈಫಲ್ಯಗಳೇನು?

ಕಾಂಗ್ರೆಸ್​ ತೊರೆದಿದ್ದ ಬಿಷ್ಣೋಯ್:

ಕುಲದೀಪ್ ಬಿಷ್ಣೋಯ್ ಅವರು ಕಾಂಗ್ರೆಸ್ ತೊರೆದು 2009 ರಲ್ಲಿ ಹರಿಯಾಣ ಜನಹಿತ್ ಕಾಂಗ್ರೆಸ್ ಅನ್ನು ಸ್ಥಾಪಿಸಿದರು ಎಂಬುವುದು ಉಲ್ಲೇಖನೀಯ. ಚುನಾವಣೆಯಲ್ಲಿ ಪಕ್ಷದ 7 ಶಾಸಕರು ಗೆದ್ದಿದ್ದರು, ಆದರೆ 5 ಶಾಸಕರು ಕಾಂಗ್ರೆಸ್ ಸೇರಿದ್ದರು. ಕುಲದೀಪ್ ಮತ್ತು ಅವರ ಪತ್ನಿ ರೇಣುಕಾ ಬಿಷ್ಣೋಯ್ ಮಾತ್ರ ಪಕ್ಷದಲ್ಲಿ ಉಳಿದಿದ್ದರು. ಇದಾದ ಬಳಿಕ 2014ರ ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿತ್ತು.

ಇದನ್ನೂ ಓದಿ: AnantRaju Suicide: ಹನಿಟ್ರ್ಯಾಪ್​ಗೆ ಬಿಜೆಪಿ ಮುಖಂಡ ಬಲಿ; ಡೆತ್​ ನೋಟ್​ನಲ್ಲಿ ಯಾರ ಹೆಸರಿದೆ ಗೊತ್ತಾ?

ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ್ದವು. ಬಿಜೆಪಿ 8 ಮತ್ತು ಎಚ್‌ಜೆಸಿ 2 ಸ್ಥಾನಗಳಲ್ಲಿ ಸ್ಪರ್ಧಿಸಿದ್ದವು. ಎಚ್‌ಜೆಸಿ ತನ್ನ ಎರಡೂ ಕೋಟಾ ಸ್ಥಾನಗಳನ್ನು ಕಳೆದುಕೊಂಡರೆ, ಬಿಜೆಪಿ 7 ಮತ್ತು ಕಾಂಗ್ರೆಸ್ 1 ಸ್ಥಾನವನ್ನು ಗೆದ್ದಿದೆ. ಲೋಕಸಭಾ ಚುನಾವಣೆಯ ನಂತರ, ವಿಧಾನಸಭಾ ಚುನಾವಣೆಯಲ್ಲಿ ಸೀಟು ಹಂಚಿಕೆಯ ಕೊರತೆಯಿಂದ ಬಿಜೆಪಿಯೊಂದಿಗಿನ ಮೈತ್ರಿ ಮುರಿದುಬಿತ್ತು ಮತ್ತು ಕುಲದೀಪ್ ಎಚ್‌ಜೆಸಿಯನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸಿ ಘರ್​ ವಾಪಸಿ ಮಾಡಿದ್ದರು.
Published by:Precilla Olivia Dias
First published: