ಹರ್ಮನ್​ಪ್ರೀತ್​ ಕೌರ್​ಗೆ ಬಿಗ್​ ಶಾಕ್!: DSP ಯಿಂದ ಕಾನ್ಸ್​ಸ್ಟೇಬಲ್​ ಆಗ್ತಾರಾ ಟಿ20 ಕ್ಯಾಪ್ಟನ್​?


Updated:July 10, 2018, 1:55 PM IST
ಹರ್ಮನ್​ಪ್ರೀತ್​ ಕೌರ್​ಗೆ ಬಿಗ್​ ಶಾಕ್!: DSP ಯಿಂದ ಕಾನ್ಸ್​ಸ್ಟೇಬಲ್​ ಆಗ್ತಾರಾ ಟಿ20 ಕ್ಯಾಪ್ಟನ್​?

Updated: July 10, 2018, 1:55 PM IST
ನ್ಯೂಸ್ 18 ಕನ್ನಡ

ಚಂಡೀಗಡ್​(ಜು. 10): ಭಾರತೀಯ ಮಹಿಳಾ ಟಿ20 ಕ್ರಿಕೆಟ್​ ತಂಡದ ನಾಯಕಿ ಹರ್ಮನ್​ಪ್ರೀತ್​ ಕೌರ್​ಗೆ ಪಂಜಾಬ್​ ಸರ್ಕಾರ ಬಿಗ್​ ಶಾಕ್​ ನೀಡಿದೆ. ಈ ಹಿಂದೆ ಅವರಿಗೆ ನೀಡಲಾಗಿದ್ದ ಡಿಎಸ್​ಪಿ ಹುದ್ದೆಯನ್ನು ಪಂಜಾಬ್​ ಸರ್ಕಾರ ಹಿಂಪಡೆದಿದೆ. ಇನ್ನು ಅವರಿಗೆ ಕಾನ್ಸ್​ಸ್ಟೇಬಲ್​ ಹುದ್ದೆ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ. ಹರ್ಮನ್​ಪ್ರೀತ್​ ಕೌರ್​ರವರ ಸ್ನಾತಕೋತ್ತರ ಪದವಿ ನಕಲಿ ಎಂದು ಸಾಬೀತಾಗಿದ್ದು, ಪಂಜಾಬ್​ ಸರ್ಕಾರ ಅವರಿಗೆ ನೀಡಿದ್ದ ಡಿಎಸ್​ಪಿ ಹುದ್ದೆಯನ್ನು ಹಿಂಪಡೆದಿದೆ.

ಹರ್ಮನ್​ಪ್ರೀತ್​ಗೆ ಪತ್ರ ಬರೆದ ಪಂಜಾಬ್​ ಪೊಲೀಸ್​ ಇಲಾಖೆಯು "ನೀವು ಕೇವಲ 12ನೇ ತರಗತಿಯವರೆಗೆ ಶಿಕ್ಷಣ ಪಡೆದಿದ್ದೀರಿ. ಇದರ ಅನ್ವಯ ಕೇವಲ ಕಾನ್ಸ್​ಸ್ಟೇಬಲ್​ ಆಗಲು ಅರ್ಹರಾಗಿದ್ದೀರಿ" ಎಂದಿದ್ದಾರೆ. ಪಂಜಾಬ್​ ಪೊಲೀಸರ ಮಾತು ಅನ್ವಯ ಹರ್ಮನ್​ಪ್ರೀತ್​ ಪಡೆದಿರುವ ಶಿಕ್ಷಣದ ಅನ್ವಯ ಅವರಿಗೆ ಡಿಎಸ್​ಪಿ ಹುದ್ದೆ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.ಇನ್ನು ಡಿಎಸ್​ಪಿ ಹುದ್ದೆ ಪಡೆಯಲು ಹರ್ಮನ್​ಪ್ರೀತ್​ ಕೌರ್​, ಮೀರತ್​ನ ಚೌಧರಿ ಚರಣ್​ ಸಿಂಗ್​ ವಿಶ್ವವಿದ್ಯಾನಿಲಯದಿಂದ ನಕಲಿ ಡಿಗ್ರಿ ಸರ್ಟಿಫಿಕೇಟ್​ ಪಡೆದಿದ್ದಾರೆಂಬ ಆರೋಪ ಕೇಳಿ ಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್​ ಪೊಲೀಸರು ಯುನಿವರ್ಸಿಟಿಯ ವಿಜಿಲೆನ್ಸ್​ ವಿಭಾಗದಿಂದ ಗೌಪ್ಯ ತನಿಖೆ ನಡೆಸಿತ್ತು. ಈ ಪ್ರಕರಣದ ತನಿಖೆಯಲ್ಲಿ ಕೌರ್​ ಪಡೆದಿದ್ದ ಪದವಿ ನಕಲಿ ಎಂದು ತಿಳಿದು ಬಂದಿತ್ತು.
First published:July 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...