• Home
 • »
 • News
 • »
 • national-international
 • »
 • Chandigarh: ನಿರ್ಬಂಧಿತ ಇಂಜೆಕ್ಷನ್​ ಶೇಖರಿಸಿಟ್ಟಾತನಿಗೆ 15 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದ ಕೋರ್ಟ್​!

Chandigarh: ನಿರ್ಬಂಧಿತ ಇಂಜೆಕ್ಷನ್​ ಶೇಖರಿಸಿಟ್ಟಾತನಿಗೆ 15 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದ ಕೋರ್ಟ್​!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಪಪ್ಪು ಎಂಬ ವ್ಯಕ್ತಿಯು ಪ್ಯಾಟ್ರೋಲಿಂಗ್ ಮಾಡುತ್ತಿದ್ದ ವೇಳೆ ಪೊಲೀಸ್ ವಾಹನ ನೋಡಿದ ತಕ್ಷಣ ಸಂದೇಹಾಸ್ಪದ ರೀತಿಯಲ್ಲಿ ನಡೆದುಕೊಳ್ಳುತ್ತ ರಭಸವಾಗಿ ಸಾಗತೊಡಗಿದರು. ಇದರಿಂದ ಸಂಶಯಗೊಂಡ ಪೊಲೀಸರು ಅವರನ್ನು ತಡೆ ಹಿಡಿದು ಪರಿಶೀಲಿಸಿದಾಗ ಅವರ ಬಳಿ 205 ಫೆನಿರಮೈನ್ ಮಾಲಿಯೇಟ್ ಹಾಗೂ 205 ಬುಪ್ರೆನೋರ್ಫೈನ್ ವಯಲ್ ಗಳು ಪತ್ತೆಯಾಗಿದ್ದವು.

ಮುಂದೆ ಓದಿ ...
 • Trending Desk
 • Last Updated :
 • New Delhi, India
 • Share this:

  ಮೂರು ವರ್ಷಗಳ ಹಿಂದೆ ನಡೆದಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಚಂಡೀಗಢ್​ನ (Chandigarh) ಜಿಲ್ಲಾ ಸೆಷನ್ ನ್ಯಾಯಾಲಯವು 50 ವರ್ಷದ ವ್ಯಕ್ತಿಯೊಬ್ಬರಿಗೆ 15 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಅಲ್ಲದೆ, ನ್ಯಾಯಮೂರ್ತಿ ಜೈಬೀರ್ ಸಿಂಗ್ ಅವರು ಅಪರಾಧಿಯು ರೂ. 1.5 ಲಕ್ಷವನ್ನು ದಂಡವನ್ನೂ ಸಹ ಕಟ್ಟುವಂತೆ ಆದೇಶ ನೀಡಿದ್ದಾರೆ. ಚಂಡೀಗಢ್​ನ ಬಾಪು ಧಾಮ್ (Bapudham) ಎಂಬಲ್ಲಿ ವಾಸಿಸುತ್ತಿದ್ದ ಪಪ್ಪು ಎಂಬುವವರೇ ಸದ್ಯ ಶಿಕ್ಷೆಗೆ ಗುರಿಯಾಗಿರುವ ವ್ಯಕ್ತಿಯಾಗಿದ್ದಾರೆ.


  ಏನಿದು ಪ್ರಕರಣ?


  ಪೊಲೀಸರ ವರದಿಗಳ ಅನುಸಾರ, ಮಾರ್ಚ್ 7, 2019 ರಂದು ಸೆಕ್ಟರ್ 26 ರಲ್ಲಿದ್ದ ಪಪ್ಪು ಎಂಬ ವ್ಯಕ್ತಿಯು ಪ್ಯಾಟ್ರೋಲಿಂಗ್ ಮಾಡುತ್ತಿದ್ದ ವೇಳೆ ಪೊಲೀಸ್ ವಾಹನ ನೋಡಿದ ತಕ್ಷಣ ಸಂದೇಹಾಸ್ಪದ ರೀತಿಯಲ್ಲಿ ನಡೆದುಕೊಳ್ಳುತ್ತ ರಭಸವಾಗಿ ಸಾಗತೊಡಗಿದರು. ಇದರಿಂದ ಸಂಶಯಗೊಂಡ ಪೊಲೀಸರು ಅವರನ್ನು ತಡೆ ಹಿಡಿದು ಪರಿಶೀಲಿಸಿದಾಗ ಅವರ ಬಳಿ 205 ಫೆನಿರಮೈನ್ ಮಾಲಿಯೇಟ್ ಹಾಗೂ 205 ಬುಪ್ರೆನೋರ್ಫೈನ್ ವಯಲ್ ಗಳು ಪತ್ತೆಯಾಗಿದ್ದವು. ಅಸಲಿಗೆ ಈ ಎರಡೂ ಇಂಜೆಕ್ಷನ್ ಗಳನ್ನು ನಾರ್ಕೊಟಿಕ್ಸ್ ಡ್ರಗ್ಸ್ ಆಂಡ್ ಸೈಕೊಟ್ರೊಪಿಕ್ ಸಬ್ ಸ್ಟನ್ಸಸ್ ಕಾಯ್ದೆಯ ಸೆಕ್ಷನ್ 22ರ ಅಡಿಯಲ್ಲಿ ನಿಷೇಧಿಸಲಾಗಿದ್ದು ಇದನ್ನು ಹೊಂದಿದ್ದರೆ ಅದೊಂದು ಶಿಕ್ಷಾರ್ಹ ಅಪರಾಧವಾಗಿದೆ.


  ಇದನ್ನೂ ಓದಿ: Niranjan Deshpande : ಬರ್ತ್‍ಡೇಗೆ ಹೆಂಡತಿ ಕೊಟ್ಟ ಸರ್ಪೈಸ್ ನೋಡಿ ನಿರಂಜನ್ ಭಾವುಕ! ಏನದು?


  ಚಿತ್ರಹಿಂಸೆ ನೀಡಿದ ಆರೋಪ


  ಇನ್ನು, ನ್ಯಾಯಾಲಯದಲ್ಲಿ ಪಪ್ಪು ಪರ ವಕೀಲರು ಪೊಲೀಸರೆ ಬೇಕಂತಲೇ ಪಪ್ಪು ಅವರನ್ನು ಈ ಪ್ರಕರಣದಲ್ಲಿ ಸಿಲುಕಿಸಲು ಪ್ರಯತ್ನಿಸುತ್ತಿದ್ದಾರೆಂದು ಆರೋಪಿಸಿದ್ದರು. ಈ ಬಗ್ಗೆ ಅವರು ನ್ಯಾಯಾಲಯಕ್ಕೆ, ಆ ದಿನದಂದು ಪಪ್ಪು ಅವರು ಸಾಯಂಕಾಲದ ಸಮಯದಲ್ಲಿ ಮಾರುಕಟ್ಟೆಗೆ ಹೋಗುವಾಗ ಸೆಕ್ಟರ್ 26 ರಿಂದ ಅವರನ್ನು ಪೊಲೀಸರು ಸೆಕ್ಟರ್ 11 ರ ಆರಕ್ಷಕ ಠಾಣೆಗೆ ಕರೆದೊಯ್ದು ಅಲ್ಲಿ ಅವರಿಗೆ ಥಳಿಸುವ ಮೂಲಕ ಚಿತ್ರಹಿಂಸೆ ನೀಡಿದ್ದಾರೆಂದು ವಾದಿಸಿದ್ದರು.


  ಈ ಸಂದರ್ಭದಲ್ಲಿ ಆರೋಪಿ ಪರ ವಕೀಲರು ಬಿಎಸ್‍ಎನ್‍ಎಲ್ ಸಂಸ್ಥೆಯ ನೋಡಲ್ ಅಧಿಕಾರಿಗೆ ಕರೆ ಮಾಡಿ ಪಪ್ಪು ಅವರನ್ನು ಬಂಧಿಸುವ ಸಮಯದಲ್ಲಿ ಪೊಲೀಸರು ಆ ಸ್ಥಳದಲ್ಲಿಯೇ ಇರಲಿಲ್ಲ ಎಂದು ಸಾಬೀತುಪಡಿಸಲು ಸ್ಥಳ ಪರಿಚಯದ ವಿವರಗಳನ್ನು ಪಡೆದು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.


  ಕಂಪ್ಯೂಟರ್ ಸೆಟ್ಟಿಂಗ್ ಗಳ ಕೆಲ ಪ್ರಮಾದ ಎಂದಿದ್ದರು


  ಆದಾಗ್ಯೂ, ಪ್ರಾಸೆಕ್ಯೂಷನ್ ಕಂಪ್ಯೂಟರ್ ಸೆಟ್ಟಿಂಗ್ ಗಳ ಕೆಲ ಪ್ರಮಾದದಿಂದಾಗಿ ಸಮಯದ ಕರಾರುವಕ್ಕಾದ ಅಂಕಿಅಂಶಗಳಿಲ್ಲವೆಂದು ಹೇಳಿದ್ದರು. ಅಲ್ಲದೆ, ಅರೋಪಿಯು ಈ ಹಿಂದೆಯೂ NDPS Act ಅಡಿಯಲ್ಲಿ ಅಪರಾಧ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿರುವರೆಂದು ನ್ಯಾಯಾಲಯಕ್ಕೆ ತಿಳಿಸಿದ್ದರು.


  FATHER Hires Killer To Murder 17 Year Old Daughter


  ನ್ಯಾಯಾಲಯದ ಗಮನ


  ಈ ಸಂದರ್ಭದಲ್ಲಿ ಆರೋಪಿಯಿಂದ ವಶಪಡಿಸಿಕೊಳ್ಳಲಾಗಿರುವ ಪದಾರ್ಥಗಳು, ವಿಚಾರಿಸಲಾದ ಒಂಭತ್ತು ಸಾಕ್ಷ್ಯಗಳು ಹಾಗೂ ಸ್ಥಳ ಪರಿಚಯ ಮತ್ತು ಸಮಯಗಳಲ್ಲಿ ವ್ಯತ್ಯಾಸಗಳಿದ್ದರೂ ಹೆಚ್ಚು ಕಡಿಮೆ ಅದೇ ಸಂದರ್ಭದಲ್ಲಿ ಇದಾಗಿರುವುದೆಂದು, ಅಲ್ಲದೆ ಆರೋಪಿಯು ಈ ಹಿಂದೆಯೂ ಇದೇ ರೀತಿಯ ಅಪರಾಧಗಳಲ್ಲಿ ಭಾಗಿಯಾಗಿರುವ ಬಗ್ಗೆ ತಪ್ಪೊಪ್ಪಿಕೊಂಡಿರುವುದನ್ನುಮನಗಂಡಿರುವ ನ್ಯಾಯಾಲಯವು ಪ್ರಾಸೆಕ್ಯೂಷನ್ ಅವರ ವಾದವನ್ನು ಪುರಸ್ಕರಿಸಿದೆ.


  ಹಾಗಾಗಿ, ಈ ಪ್ರಕರಣದಲ್ಲಿ ಪಪ್ಪು ಅವರನ್ನು ಅಪರಾಧಿ ಎಂದು ತೀರ್ಪಿತ್ತಿರುವ ಘನ ನ್ಯಾಯಾಲಯವು ಅವರಿಗೆ 15 ವರ್ಷಗಳ ಕಠಿಣ ಸೆರೆಮನೆ ವಾಸದ ಶಿಕ್ಷೆ ನೀಡಿ ಆದೇಶ ಹೊರಡಿಸಿದೆ ಎಂದು ವರದಿಯಾಗಿದೆ.


  ಇದನ್ನೂ ಓದಿ: Nivedita Gowda: ನಿವೇದಿತಾ ಗೌಡ ಮನೆಯ ಗ್ಯಾಸ್​ ಸಿಲಿಂಡರ್​ ಒಂದು ವರ್ಷ ಬರುತ್ತಂತೆ ; ಇಲ್ಲಿದೆ ಅಡುಗೆ ಮನೆ ಸೀಕ್ರೆಟ್


  ಏನಿವು ಫೆನಿರಮೈನ್ ಮಾಲಿಯೇಟ್ ಹಾಗೂ ಬುಪ್ರೆನೋರ್ಫೈನ್


  ಈ ಔಷಧಿಗಳನ್ನು ಮೂಲತಃ ಶೆಡ್ಯೂಲ್ ಹೆಚ್ ಗುಂಪಿನಲ್ಲಿ ವರ್ಗೀಕರಿಸಲಾಗಿದೆ. ಫೆನಿರಮೈನ್ ಮಾಲಿಯೇಟ್ ರಿಲ್ಯಾಕ್ಸಿಂಗ್ ಅನುಭವ ನೀಡುವಂತಹ ಒಂದು ಸೆಡೇಟಿವ್ ಆಗಿದ್ದರೆ, ಬುಪ್ರೆನೋರ್ಫೈನ್ ಒಂದು ಅಡಿಕ್ಟಿವ್ ಪದಾರ್ಥವಾಗಿದೆ. ಇವೆರಡೂ ರಾಸಾಯನಿಕಗಳು ಹೆರಾಯಿನ್ ರೀತಿಯ ಮಾದಕತೆಯನ್ನುಂಟು ಮಾಡುವಂತಹ ಪದಾರ್ಥಗಳಾಗಿದ್ದು ದೇಹಕ್ಕ ಅಪಾಯಕಾರಿಯಾಗಿದೆ. ಹಾಗಾಗಿ, ಇವುಗಳನ್ನು ನಿರ್ಬಂಧಿಸಲಾಗಿದೆ ಅಥವಾ ವೈದ್ಯರ ಅನುಮತಿ ಇಲ್ಲದೆ ನೀಡಲಾಗುವುದಿಲ್ಲ.

  Published by:Precilla Olivia Dias
  First published: