ಸ್ಪೈಸ್ ಜೆಟ್​ಗೆ ಭಾರೀ ಸಂಕಟ, ಬಹುತೇಕ ವಿಮಾನಗಳು ಸ್ಥಗಿತ; ಟಿಕೆಟ್ ದರ ಏರಿಕೆ ಸಾಧ್ಯತೆ

ಇಥಿಯೋಪಿಯಾದಲ್ಲಿ ಬೋಯಿಂಗ್​ 737 ಮ್ಯಾಕ್ಸ್​ 8 ವಿಮಾನ ಪತನಗೊಂಡು ನಾಲ್ವರು ಭಾರತೀಯರೂ ಸೇರಿದಂತೆ 157 ಜನರು ಸಜೀವ ದಹನವಾಗಿದ್ದರು. ಇದಾದ ಬಳಿಕ, ಜಗತ್ತಿನ ಅನೇಕ ದೇಶಗಳು ಬೋಯಿಂಗ್​ ವಿಮಾನ ಹಾರಾಟವನ್ನು ನಿಲ್ಲಿಸುವಂತೆ ಸೂಚನೆ ನೀಡಿವೆ.

sushma chakre | news18
Updated:March 14, 2019, 3:17 PM IST
ಸ್ಪೈಸ್ ಜೆಟ್​ಗೆ ಭಾರೀ ಸಂಕಟ, ಬಹುತೇಕ ವಿಮಾನಗಳು ಸ್ಥಗಿತ; ಟಿಕೆಟ್ ದರ ಏರಿಕೆ ಸಾಧ್ಯತೆ
ಬೋಯಿಂಗ್​ ಸ್ಪೈಸ್​ ಜೆಟ್​
sushma chakre | news18
Updated: March 14, 2019, 3:17 PM IST
 ನವದೆಹಲಿ (ಮಾ. 14): ಭಾರತೀಯ ಏರ್​ಲೈನ್ಸ್​ನಿಂದ ಕಾರ್ಯ ನಿರ್ವಹಿಸಲ್ಪಡುವ ಎಲ್ಲ ಬೋಯಿಂಗ್ 737 ಮ್ಯಾಕ್ಸ್​ 8 ಮಾದರಿಯ ವಿಮಾನಗಳು ಇಂದು ಕಾರ್ಯ ಸ್ಥಗಿತಗೊಳಿಸಿವೆ. ಇದರ ಬೆನ್ನಲ್ಲೇ ಸ್ಪೈಸ್​ ಜೆಟ್​ನ 30ರಿಂದ 35 ವಿಮಾನಗಳು ಕೂಡ ಹಾರಾಟ ನಿಲ್ಲಿಸುವ ಸಾಧ್ಯತೆಯಿದೆ.

ಇಥಿಯೋಪಿಯಾದಲ್ಲಿ ಬೋಯಿಂಗ್​ 737 ಮ್ಯಾಕ್ಸ್​ 8 ವಿಮಾನ ಪತನಗೊಂಡು ನಾಲ್ವರು ಭಾರತೀಯರೂ ಸೇರಿದಂತೆ 157 ಜನರು ಸಜೀವ ದಹನವಾಗಿದ್ದರು. ಇದಾದ ಬಳಿಕ, ಜಗತ್ತಿನ ಅನೇಕ ದೇಶಗಳು ಬೋಯಿಂಗ್​ ವಿಮಾನ ಹಾರಾಟವನ್ನು ನಿಲ್ಲಿಸುವಂತೆ ಸೂಚನೆ ನೀಡಿವೆ. ಅದರಲ್ಲಿ ಭಾರತ ಕೂಡ ಒಂದು. ಹೀಗಾಗಿ, ಬೋಯಿಂಗ್​ ಮಾದರಿಯ ವಿಮಾನಗಳನ್ನು ಸ್ಥಗಿತಗೊಳಿಸುವಂತೆ ನಿನ್ನೆ ರಾತ್ರಿ ನಾಗರಿಕ ವಿಮಾನಯಾನದ ಡೈರೆಕ್ಟರೇಟ್​ ಜನರಲ್ ಬಿ.ಎಸ್​. ಬುಲ್ಲಾರ್​ ಸೂಚಿಸಿದ್ದರು.

ಇಥಿಯೋಪಿಯಾ ವಿಮಾನ ದುರಂತದಲ್ಲಿ 157 ಸಾವು: ಪರಿಸರ ಇಲಾಖೆ ಸಲಹೆಗಾರ್ತಿ ಸೇರಿದಂತೆ ನಾಲ್ವರು ಭಾರತೀಯರ ದುರ್ಮರಣ

ಭಾರತದ ಸ್ಪೈಸ್​ ಜೆಟ್​ ಸಂಸ್ಥೆಯ ಬೋಯಿಂಗ್ 737 ಮ್ಯಾಕ್ಸ್​ 8 ಮಾದರಿಯ ಒಟ್ಟು 13 ವಿಮಾನಗಳ ಮೇಲೆ ನಿಷೇಧ ಹೇರಲಾಗಿದೆ. ಈ ಮಾದರಿಯ ವಿಮಾನಗಳಲ್ಲಿನ ತಾಂತ್ರಿಕ ತೊಡಕಿನ ಬಗ್ಗೆ ಅನುಮಾನ ವ್ಯಕ್ತಪಡಿಸಲಾಗಿದೆ. ಭಾರತ, ಚೀನಾ, ಮಲೇಷ್ಯಾ, ಸಿಂಗಾಪುರ್​, ಆಸ್ಟ್ರೇಲಿಯ, ಬ್ರಿಟನ್ ಸೇರಿದಂತೆ ಇನ್ನೂ ಕೆಲವು ದೇಶಗಳು ಬೋಯಿಂಗ್​ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸುವಂತೆ ಸೂಚಿಸಿವೆ.

ಭಾರತದ ಸ್ಪೈಸ್​ ಜೆಟ್​ ಸಂಸ್ಥೆ ಬೋಯಿಂಗ್​ ಮಾದರಿಯ 12 ವಿಮಾನಗಳನ್ನು ಹೊಂದಿದೆ. ಜೆಟ್​ ಏರ್​ವೇಸ್​ 5 ವಿಮಾನಗಳನ್ನು ಹೊಂದಿದೆ. ಈಗಾಗಲೇ ಜೆಟ್​ ಏರ್​ವೇಸ್​ನ 5 ವಿಮಾನಗಳು ಹಾರಾಟ ನಿಲ್ಲಿಸಿವೆ. ಈ ವಿಮಾನಗಳು ಕಾರ್ಯ ಸ್ಥಗಿತಗೊಳಿಸಿರುವುದರಿಂದ ವಿಮಾನ ದರ ಹೆಚ್ಚಳವಾಗುವ ಸಾಧ್ಯತೆಯಿದೆ.

ಸಮಯ ಪ್ರಜ್ಞೆ ಕೊರತೆಯೇ ಜೀವ ಉಳಿಸಿತು; ವಿಮಾನ ದುರಂತದಲ್ಲಿ ಬಚಾವ್​ ಆದವನ ಕಥೆನಾಗರಿಕ ವಿಮಾನಯಾನ ಇಲಾಖೆಯ ಈ ನಿರ್ಧಾರದಿಂದ ಸ್ಪೈಸ್​ ಜೆಟ್​ನ 30ರಿಂದ 35 ವಿಮಾನಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಹೀಗಾಗಿ, ನಾಳೆ (ಗುರುವಾರ) ನಮಗೆ ಅತ್ಯಂತ ಸವಾಲಿನ ದಿನವಾಗಲಿದೆ ಎಂದು ನಾಗರಿಕ ವಿಮಾನಯಾನದ ಕಾರ್ಯದರ್ಶಿ ಪಿ.ಎಸ್​. ಖರೋಲ ಹೇಳಿದ್ದಾರೆ. ಕ್ಯಾನ್ಸಲ್​ ಆಗಿರುವ ಸ್ಪೈಸ್​ ಜೆಟ್​ ತನ್ನ ಬಹುತೇಕ ಪ್ರಯಾಣಿಕರನ್ನು ತನ್ನದೇ ವಿಮಾನದಲ್ಲಿ ಅಡ್ಜಸ್ಟ್​ ಮಾಡಲಿದೆ. ಒಂದುವೇಳೆ ಇನ್ನೂ ಹೆಚ್ಚು ವಿಮಾನಗಳ ಅಗತ್ಯ ಕಂಡುಬಂದರೆ ಆ ಬಗ್ಗೆಯೂ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

First published:March 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ