• Home
  • »
  • News
  • »
  • national-international
  • »
  • Chakmas: ಅರುಣಾಚಲ ಪ್ರದೇಶದ ಚಕ್ಮಾ ಸಮುದಾಯದಲ್ಲಿ ಹೆಚ್ಚಾಗ್ತಿದೆ ಮಾನವ ಕಳ್ಳಸಾಗಣೆ, ಇದಕ್ಕೆ ಕಾರಣ ಇಲ್ಲಿದೆ

Chakmas: ಅರುಣಾಚಲ ಪ್ರದೇಶದ ಚಕ್ಮಾ ಸಮುದಾಯದಲ್ಲಿ ಹೆಚ್ಚಾಗ್ತಿದೆ ಮಾನವ ಕಳ್ಳಸಾಗಣೆ, ಇದಕ್ಕೆ ಕಾರಣ ಇಲ್ಲಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Chakmas Has Led to Rampant on Trafficking: ಅರುಣಾಚಲ ಪ್ರದೇಶದ ಚಕ್ಮಾ ವಿದ್ಯಾರ್ಥಿ ಸಂಘವು ಕಳ್ಳಸಾಗಣೆದಾರರ ಹೆಸರುಗಳನ್ನು ತಿಳಿದುಕೊಂಡು ಪೊಲೀಸರಿಗೆ ವರದಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.

  • Share this:

ಅರುಣಾಚಲ ಪ್ರದೇಶದ (Arunachalapradesh) ಮುಖ್ಯಮಂತ್ರಿ ಪೆಮಾ ಖಂಡು ರಾಜ್ಯದ ಚಕ್ಮಾ (Chakma) ನಿರಾಶ್ರಿತರನ್ನು ಭಾರತದ ಇತರ ಭಾಗಗಳಿಗೆ ಸ್ಥಳಾಂತರಿಸುವ ಕುರಿತು ನೀಡಿದ ಹೇಳಿಕೆಯು ಉದ್ವಿಗ್ನತೆಗೆ ಕಾರಣವಾಗಿದೆ. ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಬೌದ್ಧ ಜನಾಂಗೀಯ ಗುಂಪು ಚಕ್ಮಾಗಳು ಮೂಲತಃ ಚಿತ್ತಗಾಂಗ್ ಗುಡ್ಡಗಾಡು (Tribal) ಪ್ರದೇಶದಿಂದ ಬಂದವರು ಮತ್ತು 1964 ರಲ್ಲಿ ತ್ರಿಪುರಾ ಮತ್ತು ಮಿಜೋರಾಂ ಮೂಲಕ ಭಾರತವನ್ನು ಪ್ರವೇಶಿಸಿದ್ದಾರೆ.  ಹಿಂದಿನ ಪೂರ್ವ ಪಾಕಿಸ್ತಾನ (Pakistan) ಸರ್ಕಾರವು ಕರ್ಣಫುಲಿ ನದಿಯ ಮೇಲೆ ಕಪ್ಟೈ ಅಣೆಕಟ್ಟನ್ನು ನಿಯೋಜಿಸಿದಾಗ ಅವರನ್ನು ಸ್ಥಳಾಂತರಿಸಲಾಯಿತು. ವಿಭಜನೆಯ ನಂತರ ತಾವು ವಶಪಡಿಸಿಕೊಂಡ ಪ್ರದೇಶವು ಭಾರತದ ಭಾಗವಾಗಿ ಉಳಿಯಬೇಕೆಂಬ ಬೇಡಿಕೆಯಿಂದಾಗಿ ಆ ಸಮುದಾಯವು ಪಾಕಿಸ್ತಾನಿ ಅಧಿಕಾರಿಗಳ ನಿರಂತರ ಕಿರುಕುಳಕ್ಕೆ ಒಳಗಾದವು.


1964 ರಲ್ಲಿ, ಅಣೆಕಟ್ಟಿನಿಂದ ಸ್ಥಳಾಂತರಗೊಂಡ ಚಕ್ಮಾ ನಿರಾಶ್ರಿತರು ಭಾರತವನ್ನು ಪ್ರವೇಶಿಸಿದಾಗ, ಭಾರತ ಸರಕಾರವು ಅವರ ಗುಂಪನ್ನು ಅಂದಿನ ಈಶಾನ್ಯ ಫ್ರಾಂಟಿಯರ್ ಏಜೆನ್ಸಿಯ (NEFA) ತಿರಾಪ್ ಕಣಿವೆಯಲ್ಲಿ ನೆಲೆಸುವಂತೆ ಮಾಡಿತು, ಇದನ್ನು ಇಂದಿನ ಅರುಣಾಚಲ ಪ್ರದೇಶ ಎಂದು ಕರೆಯಲಾಗುತ್ತದೆ.


ಅರುಣಾಚಲ ಪ್ರದೇಶವು 1987 ರಲ್ಲಿ ರಾಜ್ಯತ್ವವನ್ನು ಪಡೆದ ನಂತರ, ಚಕ್ಮಾಗಳು ಸ್ಥಳೀಯ ಬುಡಕಟ್ಟುಗಳಿಂದ ನಿರಂತರ ಕಿರುಕುಳಕ್ಕೆ ಒಳಗಾಗಿದ್ದಾರೆ. 1972 ರಲ್ಲಿ ಭಾರತ ಸರಕಾರ ಅವರಿಗೆ ಪೌರತ್ವ ನೀಡಲು ನಿರ್ಧರಿಸಿತು ಮತ್ತು 2015 ರಲ್ಲಿ ಭಾರತದ ಸುಪ್ರೀಂ ಕೋರ್ಟ್ ಅವರಿಗೆ ಪೌರತ್ವ ಹಕ್ಕುಗಳನ್ನು ಒದಗಿಸುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದ್ದರೂ, ಅರುಣಾಚಲ ಪ್ರದೇಶ ರಾಜ್ಯವು ಅಂತಹ ಎಲ್ಲಾ ಆದೇಶಗಳನ್ನು ನಿರ್ಲಕ್ಷಿಸಿದೆ.


ಭಾರತದಲ್ಲಿ ಚಕ್ಮಾ ಸಮುದಾಯವು ಯಾವುದೇ ಹಕ್ಕುಗಳನ್ನು ಹೊಂದಿಲ್ಲದ ಕಾರಣ, ಚಕ್ಮಾ ಸಮುದಾಯದ ಮಕ್ಕಳ ಕಳ್ಳಸಾಗಣೆ ಸಂಬಂಧಿಸಿದ ಯಾವುದೇ ಪ್ರಕರಣಗಳ ಬಗ್ಗೆ ಪೊಲೀಸರ ಬಳಿ ಯಾವುದೇ ದಾಖಲೆಗಳಿಲ್ಲ. ಒಂದು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ಚಕ್ಮಾಗಳಲ್ಲಿ ಇತ್ತೀಚಿನ ದಿನಗಳಲ್ಲಿ ಸಾವಿರಾರು ಮಕ್ಕಳ ಕಳ್ಳಸಾಗಣೆ ಆಗುತ್ತಿರುವುದು ವರದಿಗಳಿಂದ ತಿಳಿದು ಬಂದಿದೆ.


ಅರುಣಾಚಲ ಪ್ರದೇಶದ ಚಾಂಗ್ಲಾಂಗ್, ನಮ್ಸಾಯಿ ಮತ್ತು ಪಾಪಮ್ ಪಾರೆ ಜಿಲ್ಲೆಗಳಲ್ಲಿ ಚಕ್ಮಾ ಸಮುದಾಯದಿಂದ ಕಾಣೆಯಾದ ಮಕ್ಕಳು ಸಾಕಷ್ಟು ಮಂದಿ ಇದ್ದು, ಚಾಂಗ್ಲಾಂಗ್ ಜಿಲ್ಲೆಯ ಡಿಯೋನ್ ಸರ್ಕಲ್‌ನಲ್ಲಿರುವ ಅರಣ್ಯಪುರ, ಉದಯಪುರ, ಧರ್ಮಪುರ, ಮೂಡೋಯಿಡ್‌ವೀಪ್ ಮತ್ತು ದುಂಪಾನಿ ಗ್ರಾಮಗಳ ಬಹುತೇಕ ಪ್ರತಿಯೊಂದು ಮನೆಯವರು ಮಾನವ ಕಳ್ಳಸಾಗಣೆಯಿಂದ ಮಕ್ಕಳನ್ನು ಕಳೆದುಕೊಂಡಿದ್ದಾರೆ. ಕೆಲವು ಮಕ್ಕಳು ಅಂತಿಮವಾಗಿ ಪತ್ತೆಯಾದರು ಮತ್ತು ಗುಲಾಮಗಿರಿ ಮತ್ತು ನಿಂದನೆಯ ಕ್ರೂರತೆಯಿಂದ ಅವರನ್ನು ರಕ್ಷಿಸಲಾಯಿತು ಅದರೆ ಅನೇಕ ಮಕ್ಕಳು ಕಾಣೆಯಾಗಿದ್ದಾರೆ.


ಅಧಿಕವಾಗುತ್ತಿರುವ ಮಕ್ಕಳ ಕಳ್ಳಸಾಗಣಿಕೆ


ಮಕ್ಕಳ ಕಳ್ಳಸಾಗಣಿಕೆಯ ಒಂದು ಉದಾಹರಣೆಯನ್ನು ತೆಗೆದುಕೊಳ್ಳುವುದಾದರೆ ಜ್ಯೋತಿಪುರ ಗ್ರಾಮದ 13 ವರ್ಷದ ರಿತು ಚಕ್ಮಾಳನ್ನು ಮಾನವ ಕಳ್ಳಸಾಗಣೆ ಮಾಡಲಾಯಿತು, ಆದರೆ ಆಕೆಯ ಪೋಷಕರಿಗೆ ಮಗಳು ಉತ್ತಮ ಭವಿಷ್ಯವನ್ನು ಹೊಂದುತ್ತಾಳೆ ಎಂಬ ಭರವಸೆ ನೀಡಿ ಆಕೆಯನ್ನು ಕರೆದುಕೊಂಡು ಹೋಗುತ್ತಾರೆ.


ಆದರೆ, ಅವಳನ್ನು ಸೆರೆಹಿಡಿದು ಆಕೆಗೆ ಲೈಂಗಿಕ ಕಿರುಕುಳವನ್ನು ನೀಡಲಾಯಿತು. ಅದೃಷ್ಟವಶಾತ್ ಅಪರಿಚಿತರು ನೀಡಿದ ದೂರಿನ ಮೇರೆಗೆ ಪೊಲೀಸರು ಹಾಗೂ ಮಕ್ಕಳ ಕಲ್ಯಾಣ ಕೇಂದ್ರದ ಸಿಬ್ಬಂದಿ ಆಕೆಯನ್ನು ರಕ್ಷಿಸಿದ್ದು, ಇದೀಗ ಮನೆಗೆ ಮರಳಿದ್ದಾಳೆ.


ಇದನ್ನೂ ಓದಿ: ಬ್ರಿಟನ್​ ಪಿಎಂ ಭಾರತ ಮೂಲದವರಾಗಿರುತ್ತಾರೆ, 2015ರಲ್ಲಿ ಮೋದಿ ಎದುರೇ ಆಗಿತ್ತು ಈ ಭವಿಷ್ಯವಾಣಿ!


ಆಕೆಯ ತಂದೆ ಅರುಣ್ ಕುಮಾರ್ ಚಕ್ಮಾ ದಿನಗೂಲಿ ಕೆಲಸಗಾರನಾಗಿ ಕೆಲಸ ಮಾಡುತ್ತಿದ್ದು, ತಮ್ಮ ಮಗಳು ಮಾನವ ಕಳ್ಳಸಾಗಣೆಯ ಜಾಲಕ್ಕೆ ಬಲಿಯಾಗುತ್ತಾಳೆ ಎಂಬುದು ತಿಳಿದಿರಲಿಲ್ಲ ಎಂದು ದುಃಖಿತರಾಗುತ್ತಾರೆ.


ಮಗಳನ್ನು ಅವರಿಗೆ ಪರಿಚಯವಿರುವ ವ್ಯಕ್ತಿಯೊಂದಿಗೆ ನಮ್ಸಾಯಿಗೆ ಕಳುಹಿಸಿದ್ದಾಗಿ ಹೇಳುವ ಅರುಣ್, ಆಕೆಗೆ ಕೆಲಸ ನೀಡುವುದಾಗಿ ಅವರು ಭರವಸೆಯನ್ನು ನೀಡಿದ್ದರು ಎಂದು ಹೇಳುತ್ತಾರೆ. ಆರು ಮಕ್ಕಳನ್ನು ಸಾಕಬೇಕಾಗಿರುವ ಅಳಲು ತೋಡಿಕೊಂಡ ಅರುಣ್ ಕುಮಾರ್ ದಿನವೂ ಕೂಲಿಮಾಡಿ ಮಕ್ಕಳನ್ನು ಸಾಕುವುದು ಕಷ್ಟ ಎಂಬುದು ಅವರ ಅಳಲಾಗಿದೆ.


ಚಕ್ಮಾ ಸಮುದಾಯದವರಾದ ಅರುಣ್ ಕುಮಾರ್, ಪೌರತ್ವ ಹಕ್ಕುಗಳಿಂದ ವಂಚಿತರಾದ್ದಾರೆ, ಹೀಗಾಗಿ ಅರುಣ್ ಕುಮಾರ್ ಚಕ್ಮಾ ಮತ್ತು ಅವರ ಕುಟುಂಬಕ್ಕೆ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಪಡಿತರ, ಅಟಲ್ ಅಮೃತ್ ಅಭಿಯಾನ್ ಆರೋಗ್ಯ ಯೋಜನೆ, ಪ್ರಧಾನ ಮಂತ್ರಿ ಆವಾಸ್ ಯೋಜನೆ ವಸತಿ ಯೋಜನೆ ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸೌಲಭ್ಯಗಳಿಲ್ಲ.


ಚಕ್ಮಾ ಗ್ರಾಮಗಳು ಇನ್ನೂ ವಿದ್ಯುತ್ ಮತ್ತು ನೀರಿನ ಪೂರೈಕೆಯಿಂದ ವಂಚಿತವಾಗಿವೆ. ಅರುಣಾಚಲ ಪ್ರದೇಶದ ಚಕ್ಮಾ ಸಮುದಾಯದ ಯಾರೂ ಗ್ರಾಮ ಪಂಚಾಯತ್ (ಗ್ರಾಮ ಮಂಡಳಿ) ಸದಸ್ಯರಾಗಲು ಅಥವಾ ಯಾವುದೇ ಚುನಾವಣೆಯಲ್ಲಿ ಮತ ಚಲಾಯಿಸಲು ಸಾಧ್ಯವಿಲ್ಲ.


ಇನ್ನು ಈ ಜಿಲ್ಲೆಗಳಲ್ಲಿ ಹರಿಯುವ ದಿಹಿಂಗ್ ನದಿ ಪ್ರತೀ ವರ್ಷ ಪ್ರವಾಹಕ್ಕೆ ಕಾರಣವಾಗಿದೆ ಇದರಿಂದ ಚಕ್ಮಾ ಜನಾಂಗದವರ ಸ್ಥಿತಿ ಇನ್ನಷ್ಟು ಶೋಚನೀಯವಾಗಿದೆ. ಪ್ರವಾಹದಿಂದ ಭಾರೀ ಸವೆತ ಉಂಟಾಗುವುದರಿಂದ 1971 ರಿಂದ, ಮೊಯಿತ್ರಿಪುರ, ಗೌತಮ್‌ಪುರ, ಶಾಂತಿಪುರ, ದುಂಪನಿ, ಉದಯಪುರ, ಮೂಡೋಯಿಡ್‌ವೀಪ್ ಮತ್ತು ಅರಣ್ಯಪುರ ಗ್ರಾಮಗಳ ಸಾವಿರಾರು ಚಕ್ಮಾ ಜನರು ದಿಹಿಂಗ್‌ ನದಿಯಿಂದ ಉಂಟಾದ ಸವೆತದಿಂದ ಸ್ಥಳಾಂತರಗೊಂಡಿದ್ದಾರೆ.


ಇದನ್ನೂ ಓದಿ: ನೋಟುಗಳ ಮೇಲೆ ಗಣೇಶ, ಲಕ್ಷ್ಮೀ ದೇವಿಯರ ಚಿತ್ರ ಛಾಪಿಸಿ; ಅರವಿಂದ್ ಕೇಜ್ರಿವಾಲ್ ಆಗ್ರಹ


ಅರಣ್ಯಾಪುರ ಗ್ರಾಮದಲ್ಲಿ 200 ಮನೆಗಳಿಗೆ ಒಂದೇ ಬಾವಿಯಿದ್ದು, ಮಹಿಳೆಯರು ನಿತ್ಯ ಐದರಿಂದ 10 ಕಿ.ಮೀ ನಡೆದುಕೊಂಡು ನೀರು ತರುತ್ತಿದ್ದಾರೆ. 1994 ರಲ್ಲಿ, ಮಲೇರಿಯಾ ಸಾಂಕ್ರಾಮಿಕವು ಪ್ರದೇಶವನ್ನು ಧ್ವಂಸಗೊಳಿಸಿದಾಗ ಚಕ್ಮಾಗಳ ಕಡೆಗೆ ರಾಜ್ಯದ ನಿರಾಸಕ್ತಿಯು ಸ್ಪಷ್ಟವಾಯಿತು, ಸರಾಸರಿಯಾಗಿ ಪ್ರತಿ ಮನೆಯಲ್ಲಿ ಕನಿಷ್ಠ ಒಬ್ಬೊಬ್ಬ ವ್ಯಕ್ತಿ ಮಲೇರಿಯಾದಿಂದ ಅಸುನೀಗಿದ್ದಾರೆ.


ಅರಣ್ಯಪುರ ಗ್ರಾಮದ 12 ವರ್ಷದ ಬಾಪು ಚಕ್ಮಾ ಅವರನ್ನು ಅವರ ಪೋಷಕರು ಗೋಪಾಲ್ ಚಕ್ಮಾ ಎಂಬ ವ್ಯಕ್ತಿಯ ಸುಪರ್ದಿಗೆ ಬಿಟ್ಟರು. ತಮ್ಮ ಮಗ ಚೆನ್ನಾಗಿ ಸಂಪಾದಿಸುತ್ತಾನೆ ಮತ್ತು ತಮ್ಮನ್ನು ನೋಡಿಕೊಳ್ಳುತ್ತಾರೆ ಎಂಬ ಭರವಸೆಯ ಮೇಲೆ ಬಾಪುವನ್ನು ಗೋಪಾಲ್‌ನೊಂದಿಗೆ ಕಳುಹಿಸಿಕೊಟ್ಟರು.


ಆದರೆ ಕೆಲವು ದಿನಗಳ ನಂತರ, ಬಾಪು ನಿಗೂಢ ಪರಿಸ್ಥಿತಿಯಲ್ಲಿ ಸತ್ತರು. ಅವರ ಸಾವಿನ ಬಗ್ಗೆ ಅವರ ಕುಟುಂಬಕ್ಕೆ ವರದಿಯಾಗಿರಲಿಲ್ಲ. ಅರುಣಾಚಲ ಪ್ರದೇಶ ಚಕ್ಮಾ ಸ್ಟೂಡೆಂಟ್ಸ್ ಯೂನಿಯನ್ (APCSU) ದ ಕಳ್ಳಸಾಗಣೆ ವಿರೋಧಿ ಘಟಕದ ಮೂಲಕ ಬಾಪು ಮನೆಯವರು ತಮ್ಮ ಪುತ್ರ ಕಳ್ಳಸಾಗಣೆ ದಂಧೆಗೆ ಒಳಪಟ್ಟಿರುವುದು ತಿಳಿದು ಬರುತ್ತದೆ.


ಹದಗೆಡುತ್ತಿರುವ ಪರಿಸ್ಥಿತಿಗಳು


78 ರ ಹರೆಯದ ಪೂರ್ಣ ಕುಮಾರ್ ಚಕ್ಮಾ ಅವರು 15 ವರ್ಷ ವಯಸ್ಸಿನವರಾಗಿದ್ದಾಗ, ಸುಮಾರು 20 ರಿಂದ 25 ಕುಟುಂಬಗಳ ಗುಂಪಿನೊಂದಿಗೆ ಕಪ್ಟೈ ಅಣೆಕಟ್ಟಿನಿಂದ ತಮ್ಮ ಹಳ್ಳಿಗಳು ಮುಳುಗಿದ ನಂತರ ಏಪ್ರಿಲ್ 13, 1964 ರ ರಾತ್ರಿ ಚಿತ್ತಗಾಂಗ್ ಗುಡ್ಡಗಾಡು ಪ್ರದೇಶವನ್ನು ತೊರೆದರು.


ಇದನ್ನೂ ಓದಿ: ಕಾರ್ ಪಾರ್ಕಿಂಗ್ ವಿವಾದ, ನಿವೃತ್ತ ಪೊಲೀಸ್ ಅಧಿಕಾರಿಯ ಮಗನ ಹತ್ಯೆ


ತ್ರಿಪುರಾ ಗಡಿಯ ಮೂಲಕ ಭಾರತವನ್ನು ಪ್ರವೇಶಿಸಿದ ಈ ಕುಟುಂಬಗಳು ಒಂದು ತಿಂಗಳ ನಂತರ ಅಸ್ಸಾಂನ ಕರೀಂಗಂಜ್‌ನಿಂದ ರೈಲಿನಲ್ಲಿ ಈಶಾನ್ಯ ಗಡಿನಾಡು ಪ್ರದೇಶಗಳಾದ NEFA ಅನ್ನು ಪ್ರವೇಶಿಸಿದರು ಎಂಬುದನ್ನು ನೆನಪಿಸಿಕೊಳ್ಳುತ್ತಾರೆ. ಆಗಿನ ಸಹಾಯಕ ರಾಜಕೀಯ ಅಧಿಕಾರಿ, U. ಚಕ್ಮಾ ನಿರಾಶ್ರಿತರಿಗೆ ಅಭಯ ಹಸ್ತ ನೀಡುವುದಾಗಿ ಬಹುತೇಕ ಜನನಿಬಿಡ ಮತ್ತು ದಟ್ಟವಾದ ಕಾಡುಗಳಿಂದ ತುಂಬಿರುವ ಚಾಂಗ್ಲಾಂಗ್ ಜಿಲ್ಲೆಯಲ್ಲಿ ನೆಲೆಸುವಂತೆ ಮಾಡಿದರು.


ಅರುಣಾಚಲ ಪ್ರದೇಶದ ಚಕ್ಮಾ ವಿದ್ಯಾರ್ಥಿ ಸಂಘವು ಕಳ್ಳಸಾಗಣೆದಾರರ ಹೆಸರುಗಳನ್ನು ತಿಳಿದುಕೊಂಡು ಪೊಲೀಸರಿಗೆ ವರದಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದ್ದಾರೆ. ಸಮುದಾಯವು ಮೂಲಭೂತ ಪೌರತ್ವ ಹಕ್ಕುಗಳನ್ನು ಹೊಂದಿಲ್ಲದಿರುವುದರಿಂದ ಪೊಲೀಸರು ಕಳ್ಳಸಾಗಣೆದಾರರ ವಿರುದ್ಧ ಕ್ರಮ ಕೈಗೊಳ್ಳುವ ಹೊಣೆಗಾರಿಕೆಯನ್ನು ಹೊಂದಿರುವುದಿಲ್ಲ ಎಂಬುದು ಈ ಪಂಗಡದವರ ಅಳಲಾಗಿದೆ.

Published by:Sandhya M
First published: