Crime News| ಚೆನ್ನೈ: ಡ್ರೋನ್ ಮೂಲಕ ಚೈನ್​ ಸ್ನ್ಯಾಚರ್​ ಪತ್ತೆ, ಗುಂಡಿಕ್ಕಿ ಹತ್ಯೆ!

ಮೃತ ಆರೋಪಿಯನ್ನು ಮೂರ್ತಸಾ (25) ಎಂದು ಗುರುತಿಸಲಾಗಿದ್ದು, ಆತನ ಬಂಧಿತ ಸಹಚರ ಅಖ್ತರ್ (28) ಎನ್ನಲಾಗಿದೆ. ಭಾನುವಾರದ ಚೈನ್-ಸ್ನ್ಯಾಚಿಂಗ್ ಘಟನೆಯ ಹೊರತಾಗಿ, ಅಕ್ಟೋಬರ್ 4 ರಂದು ಮದ್ಯದಂಗಡಿಯಲ್ಲಿ ಇದೇ ಗ್ಯಾಂಗ್ ಬಂದೂಕು ತೋರಿಸಿ ದರೋಡೆ ನಡೆಸಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಡ್ರೋನ್ ಸಾಂದರ್ಭಿಕ ಚಿತ್ರ.

ಡ್ರೋನ್ ಸಾಂದರ್ಭಿಕ ಚಿತ್ರ.

  • Share this:
    ಚೆನ್ನೈ (ಅಕ್ಟೋಬರ್​​ 12); ಚೈನ್​ ಸ್ನ್ಯಾಚರ್​ (Chain Snatching) ಓರ್ವನನ್ನು ಡ್ರೋನ್ (Drone) ಮೂಲಕ ಪತ್ತೆಹಚ್ಚಿ ಆತನನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಅಲ್ಲದೆ, ಆತನ ಮತ್ತೋರ್ವ ಸಹಚರನನ್ನು ಬಂಧಿಸಿರುವ ಘಟನೆ ತಮಿಳುನಾಡಿನ (Tamilnad) ಚೆನ್ನೈನಲ್ಲಿ (Chennai) ನಡೆದಿದೆ. ಈ ಕಾರ್ಯಾಚರಣೆಯಲ್ಲಿ 300ಕ್ಕೂ ಅಧಿಕ ಪೊಲೀಸ್​ ಸಿಬ್ಬಂದಿಗಳು ಪಾಲ್ಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಇನ್ನೂ ಈ ಇಬ್ಬರೂ ಚೈನ್ ಸ್ನ್ಯಾಚರ್​ಗಳು ಜಾರ್ಖಂಡ್​ (Jharkhand) ಮೂಲದವರಾ ಗಿದ್ದು, ನಗರದಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಇವರು ಚೆನ್ನೈ ಸ್ನ್ಯಾಚಿಂಗ್​ನಲ್ಲೂ ತೊಡಗಿದ್ದರು ಎಂದು ಪೊಲೀಸ್ ಅಧಿಕಾರಿಗಳು (Tamilnadu Police Department) ಮಾಹಿತಿ ನೀಡಿದ್ದಾರೆ.

    ಶಂಕಿತ ಚೈನ್​ ಸ್ನ್ಯಾಚರ್​ಗಳು ಪೊಲೀಸ್​ ಅಧಿಕಾರಿಗಳ ಮೇಲೆ ಗುಂಡಿನ ದಾಳಿ ನಡೆಸಲು ಮುಂದಾಗಿದ್ದರು. ಇದೇ ಕಾರಣಕ್ಕೆ ಅವರ ಮೇಲೆ ಪೊಲೀಸರು ಪ್ರತಿದಾಳಿ ನಡೆಸಬೇಕಾದ ಅನಿವಾರ್ಯತೆ ಎದುರಾಗಿತ್ತು. ಅಗತ್ಯ ಇದ್ದಲ್ಲಿ ಗುಂಡು ಹಾರಿಸುವಂತೆ ಪೊಲೀಸ್ ಸಿಬ್ಬಂದಿಗಳಿಗೆ ಸೂಚನೆ ನೀಡಲಾಗಿತ್ತು. ಅದರಂತೆ ಚೈನ್ ಸ್ನ್ಯಾಚರ್ ಒಬ್ಬನ ಮೇಲೆ ಗುಂಡು ಹಾರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಮೃತ ಆರೋಪಿಯನ್ನು ಮೂರ್ತಸಾ (25) ಎಂದು ಗುರುತಿಸಲಾಗಿದ್ದು, ಆತನ ಬಂಧಿತ ಸಹಚರ ಅಖ್ತರ್ (28) ಎನ್ನಲಾಗಿದೆ. ಭಾನುವಾರದ ಚೈನ್-ಸ್ನ್ಯಾಚಿಂಗ್ ಘಟನೆಯ ಹೊರತಾಗಿ, ಅಕ್ಟೋಬರ್ 4 ರಂದು ಮದ್ಯದಂಗಡಿಯಲ್ಲಿ ಇದೇ ಗ್ಯಾಂಗ್ ಬಂದೂಕು ತೋರಿಸಿ ದರೋಡೆ ನಡೆಸಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಇಬ್ಬರು ಆರೋಪಿಗಳು ಶ್ರೀಪೆರುಂಬದೂರು ಸಮೀಪದ ಟೋಲ್ ಪ್ಲಾಜಾದಲ್ಲಿ ಬಸ್‌ಗಾಗಿ ಕಾಯುತ್ತಿದ್ದ 55 ವರ್ಷದ ಮಹಿಳೆಯ ಚಿನ್ನದ ಸರವನ್ನು ಕಸಿದುಕೊಳ್ಳಲು ಯತ್ನಿಸಿದಾಗ, ಆಕೆ ಚೈನ್ ಅನ್ನು ಹಿಡಿದುಕೊಂಡು ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಇದರಿಂದ ಗಲಿಬಿಲಿಗೊಂಡ ಚೈನ್ ಸ್ನ್ಯಾಚರ್​ಗಳು ಗಾಳಿಯಲ್ಲಿ ಗುಂಡು ಹಾರಿಸಿ ಸ್ಥಳದಲ್ಲಿ ಉದ್ವಿಗ್ನತೆಗೆ ಕಾರಣರಾಗಿದ್ದರು.

    ಇದನ್ನೂ ಓದಿ: Lakhimpur Kheri Massacre: ಉಪ್ರ. ಚುನಾವಣೆಯ ಮೇಲೆ ಪರಿಣಾಮ ಬೀರಲಿದೆಯೇ ಲಖೀಂಪುರ್​ ರೈತ ಹತ್ಯಾಕಾಂಡ; ಬಿಜೆಪಿಯಲ್ಲಿ ತಳಮಳ

    ಹೀಗಾಗಿ ಈ ಇಬ್ಬರನ್ನೂ ಹುಡುಕುವ ಕಾರ್ಯಾಚರಣೆಗೆ 300ಕ್ಕೂ ಹೆಚ್ಚು ಪೊಲೀಸ್​ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಮಧ್ಯಾಹ್ನದ ವೇಳೆಗೆ ಆರೋಪಿಗಳನ್ನು ಪತ್ತೆ ಹಚ್ಚಿದ್ದು, ಅನಿವಾರ್ಯವಾಗಿ ಗುಂಡು ಹಾರಿಸಲಾಗಿದೆ. ಅಲ್ಲದೆ, ಮೃತ ವ್ಯಕ್ತಿ ಮತ್ತು ಆತನ ಸಹಚರರು ಉತ್ತರ ಭಾರತದಿಂದ ಬಂದೂಕನ್ನು ತಂದಿದ್ದಾರೆ ಎಂದು ನಮಗೆ ಮಾಹಿತಿ ಇದೆ" ಎಂದು ಅಧಿಕಾರಿ ತಿಳಿಸಿದ್ದಾರೆ.
    Published by:MAshok Kumar
    First published: