Modi: ಮಕ್ಕಳ ರಿಯಾಲಿಟಿ ಶೋನಲ್ಲಿ ನೋಟ್​ ಬ್ಯಾನ್​ ಮತ್ತು ಮೋದಿ ಬಗ್ಗೆ ತಮಾಷೆ; ಖಾಸಗಿ ವಾಹಿನಿಗೆ ಕೇಂದ್ರದಿಂದ ನೋಟಿಸ್​

ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿಯಾಗಿರುವ ಟೀಕೆಗಳನ್ನು ಮಾಡಲಾಗಿದೆ ಎಂಬುದಾಗಿ ಆರೋಪಿಸಿರುವ ನಿರ್ಮಲ್ ಕುಮಾರ್ ಕಾರ್ಯಕ್ರಮವನ್ನು ಪ್ರಸಾರ ಮಾಡದಂತೆ ಚಾನಲ್‌ಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.

ಪ್ರಧಾನಿ ಮೋದಿ

ಪ್ರಧಾನಿ ಮೋದಿ

  • Share this:
ಜನವರಿ 15ರಂದು ಝೀ ಎಂಟರ್‌ಟೈನ್ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್‌ನಲ್ಲಿ ಪ್ರಸಾರಗೊಂಡ ರಿಯಾಲಿಟಿ ಶೋ(Reality Show)ದಲ್ಲಿ 2 ಮಕ್ಕಳು ನೋಟು ಅಮಾನ್ಯೀಕರಣದ ಮೇಲೆ ವಿಡಂಬನೆ ನಡೆಸುವ ಪ್ರದರ್ಶನವನ್ನು ಪ್ರಸಾರ ಮಾಡಿದ್ದು ಪ್ರಧಾನಿ ಮೋದಿ(PM Modi) ಮತ್ತು ಅವರ ಉಡುಪನ್ನು ಅಪಹಾಸ್ಯ ಮಾಡಿದ್ದಾರೆ ಎಂಬುದಾಗಿ ಆರೋಪಿಸಲಾಗಿದೆ. ಈ ಸಂಬಂಧಿತವಾಗಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ವಿವರಣೆ ನೀಡುವಂತೆ ಸಂಸ್ಥೆಯನ್ನು ಕೋರಿದೆ ಎನ್ನಲಾಗಿದೆ.

ಜೀ ತಮಿಳಿನಲ್ಲಿ ಪ್ರಸಾರವಾದ ‘ಜೂನಿಯರ್ ಸೂಪರ್‌ಸ್ಟಾರ್ಸ್ ಸೀಸನ್ 4’ ರಿಯಾಲಿಟಿ ಶೋನ ಇತ್ತೀಚೆಗೆ ಪ್ರಸಾರವಾದ ಸಂಚಿಕೆಯಲ್ಲಿ ಪ್ರಧಾನಿ ಮೋದಿಯವರನ್ನು ಅಣಕಿಸುವ ನಾಟಕವನ್ನು ಮಕ್ಕಳು ಪ್ರದರ್ಶಿಸಿದ್ದು, ಸಂಸ್ಥೆಯು ಈ ಸಂಬಂಧಿತವಾಗಿ ಹೆಚ್ಚಿನ ವಿವರಣೆ ನೀಡಬೇಕು ಎಂದು ತಮಿಳುನಾಡಿನ ಬಿಜೆಪಿ ಪಕ್ಷ ಸಹ ಒತ್ತಾಯಪಡಿಸಿದೆ.

ಮೋದಿ ವಿರುದ್ಧ ಅವಹೇಳನಕಾರಿಯಾಗಿರುವ ಟೀಕೆಗಳು:

ತಮಿಳುನಾಡಿನ ಬಿಜೆಪಿಯ ಐಟಿ ಹಾಗೂ ಸಾಮಾಜಿಕ ಮಾಧ್ಯಮದ ಅಧ್ಯಕ್ಷರಾಗಿರುವ ನಿರ್ಮಲ್ ಕುಮಾರ್ ನೀಡಿದ ದೂರಿನ ಅನ್ವಯ, 7 ದಿನಗಳ ಒಳಗಾಗಿ ಮೀಡಿಯಾ ಸಂಸ್ಥೆ ಘಟನೆ ಸಂಬಂಧಿತವಾಗಿ ಉತ್ತರಿಸಬೇಕೆಂದು ಸಚಿವಾಲಯ ವಿನಂತಿಸಿದೆ. ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿಯಾಗಿರುವ ಟೀಕೆಗಳನ್ನು ಮಾಡಲಾಗಿದೆ ಎಂಬುದಾಗಿ ಆರೋಪಿಸಿರುವ ನಿರ್ಮಲ್ ಕುಮಾರ್ ಕಾರ್ಯಕ್ರಮವನ್ನು ಪ್ರಸಾರ ಮಾಡದಂತೆ ಚಾನಲ್‌ಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ. ಜೂನಿಯರ್ ಸೂಪರ್ ಸ್ಟಾರ್ ಅನ್ನು ಹಿಂದಿ ಹಾಗೂ ಇತರ ಭಾಷೆಗಳಲ್ಲಿ ಕೂಡ ನಡೆಸಲಾಗುತ್ತಿದೆ.

ಇದನ್ನೂ ಓದಿ: Government Job: ಸೆಬಿಯಲ್ಲಿ 120 ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳು ಖಾಲಿ, ತಿಂಗಳಿಗೆ ₹ 55,000 ಸಂಬಳ

‘ಇಮ್ಸೈ ಅರಸನ್ 23 ಆಮ್ ಪುಲಿಕೇಶಿ (Imsai Arasan 23am Pulikesi) ಹೆಸರಿನ ರಾಜಕೀಯ ವಿಡಂಬನಾತ್ಮಕ ಚಲನಚಿತ್ರದ ಥೀಮ್ ಒಂದನ್ನು ಮಕ್ಕಳು ಆಯ್ದುಕೊಂಡಿದ್ದು ರಾಜ ಹಾಗೂ ಮಂತ್ರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಸಿಂಧಿಯಾ ದೇಶದ ಆಡಳಿತಗಾರನನ್ನು ಗೇಲಿ ಮಾಡುವ ಅಂಶ ನಾಟಕದಲ್ಲಿದೆ. ಬ್ರಿಟಿಷರ ನಿಯಂತ್ರಣದಲ್ಲಿರುವ ರಾಜ (ವಡಿವೇಲು) ವ್ಯರ್ಥ ಹಾಗೂ ಮೂರ್ಖನಾಗಿದ್ದು ರಾಜ್ಯದಲ್ಲಿ ಬಡತನ, ಬರಗಾಲ ಇದ್ದಾಗಲೂ ದುಂದುವೆಚ್ಚದಲ್ಲಿ ಬದುಕುತ್ತಾನೆ.

ಇದೇ ಅಂಶವನ್ನು ಮಕ್ಕಳು ಪ್ರಧಾನಿ ನರೇಂದ್ರ ಮೋದಿಗೆ ಹೋಲಿಸಿದ್ದು ಕಾರ್ಯಕ್ರಮದ ಉದ್ದಕ್ಕೂ ಮಕ್ಕಳು ಪ್ರಧಾನಿ ಮೋದಿಯ ವಿರುದ್ಧ ಅವಹೇಳನಕಾರಿ ಕಮೆಂಟ್‌ಗಳನ್ನು ನಡೆಸುತ್ತಿದ್ದರು. ನೋಟು ಅಮಾನ್ಯೀಕರಣದ ಕುರಿತಾಗಿಯೂ ಬಹಳಷ್ಟು ವಿಡಂಬನೆಗಳನ್ನು ಮಕ್ಕಳು ಮಾಡಿದ್ದು ಬೇರೆ ಬೇರೆ ದೇಶಗಳಿಗೆ ಮೋದಿಯವರ ರಾಜತಾಂತ್ರಿಕ ಪ್ರಯಾಣ ಅದಕ್ಕೆ ತಗಲುತ್ತಿದ್ದ ಖರ್ಚು ವೆಚ್ಚಗಳು, ಅವರು ಧರಿಸುತ್ತಿದ್ದ ಉಡುಪುಗಳು, ಬಂಡವಾಳ ಹಿಂತೆಗೆದುಕೊಳ್ಳುವಿಕೆ ಹೀಗೆ ಪ್ರಧಾನಿ ಮೋದಿಯವರನ್ನು ಉದ್ದೇಶವಾಗಿರಿಸಿಕೊಂಡು ಅವರ ಮೇಲೆ ವ್ಯಂಗ್ಯಗಳನ್ನು, ಟೀಕೆಗಳನ್ನು ನಡೆಸಿದ್ದು ಮೀಡಿಯಾ ಸಂಸ್ಥೆ ಆ ಕಾರ್ಯಕ್ರಮ ತಿಳಿದೇ ಪ್ರಸಾರ ಮಾಡಿದೆ ಎಂದು ನಿರ್ಮಲ್ ಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ.

ಪ್ರಧಾನಿಯವನ್ನು ಗೇಲಿ ಮಾಡುವಂತೆ ಮಕ್ಕಳ ಮೇಲೆ ಒತ್ತಾಯ:

ಚಿತ್ರದಲ್ಲಿ ಬರುವ ಕೆಲವೊಂದು ಅವಹೇಳನಕಾರಿ ಕಮೆಂಟ್‌ಗಳನ್ನು ಮಕ್ಕಳು ಪ್ರಧಾನಿ ಮೋದಿಯವರನ್ನು ಉದ್ದೇಶಿಸಿ ನಡೆಸಿದ್ದು, ದೇಶದಲ್ಲಿ ಮೋದಿಯವರು ಕೈಗೊಂಡಿದ್ದ ಕೆಲವೊಂದು ಪ್ರಮುಖ ಯೋಜನೆಗಳನ್ನು ಗುರಿಯಾಗಿರಿಸಿಕೊಂಡು ಮಕ್ಕಳು ಗೇಲಿಮಾಡಿದ್ದಾರೆ. ಇದಕ್ಕೆ ಸುದ್ದಿ ಸಂಸ್ಥೆ ಬೆಂಬಲ ನೀಡಿದೆ ಎಂಬುದಾಗಿ ನಿರ್ಮಲ್ ಕುಮಾರ್ ಆಪಾದಿಸಿದ್ದಾರೆ. ಸರಿಸುಮಾರು 10 ವರ್ಷ ವಯಸ್ಸಿನ ಮಕ್ಕಳನ್ನು ಪ್ರಧಾನಿಯ ವಿರುದ್ಧ ಕಾಮೆಂಟ್ ಮಾಡುವಂತೆ ಉದ್ದೇಶಪೂರ್ವಕವಾಗಿ ಹೇಳಲಾಗಿದೆ ಎಂಬುದಾಗಿ ನಿರ್ಮಲ್ ಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ: UP Election: ರಂಗೇರಿದ ಯುಪಿ ಚುನಾವಣಾ ಕಣ- ವಿಧಾನಸಭೆಗೆ ಸ್ಪರ್ಧಿಸಲು ಅಖಿಲೇಶ್ ಯಾದವ್ ನಿರ್ಧಾರ

ನೋಟು ಅಮಾನ್ಯೀಕರಣ, ಪ್ರಧಾನಿಯವರ ಉಡುಪು, ಬಂಡವಾಳ ಹಿಂತೆಗೆತ ಮೊದಲಾದ ಅಂಶಗಳು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಅರ್ಥೈಸಿಕೊಳ್ಳುವುದು ಕಷ್ಟ. ಆದರೆ ಹಾಸ್ಯದ ಹೆಸರಿನಲ್ಲಿ ಈ ಅಂಶಗಳನ್ನು ಮಕ್ಕಳ ಮೇಲೆ ಹೇರಲಾಗಿದೆ ಎಂಬುದಾಗಿ ನಿರ್ಮಲ್ ಕುಮಾರ್ ತಿಳಿಸಿದ್ದಾರೆ.

ಇಂತಹ ತಪ್ಪುಗಳನ್ನು ಸುದ್ದಿಸಂಸ್ಥೆ ಸರಿಪಡಿಸದೇ ಹಾಗೆಯೇ ಬಿಟ್ಟಿದ್ದು ಮೋದಿಯವರನ್ನು ಮಕ್ಕಳು ಗೇಲಿ ಮಾಡುತ್ತಿದ್ದರೂ ಆ ಅಂಶಗಳನ್ನು ತೆಗೆದುಹಾಕದೇ ಇಲ್ಲವೇ ಪ್ರಸಾರವನ್ನು ಕೈಬಿಡುವ ಯೋಜನೆಗೆ ಮುಂದಾಗದೇ ಜೀ ತಂಡ ಕಾರ್ಯಕ್ರಮವನ್ನು ಪ್ರಸಾರ ಮಾಡಿದೆ ಎಂಬುದಾಗಿ ಆರೋಪಿಸಿದ್ದಾರೆ.

ಝೀ ಎಂಟರ್‌ಟೈನ್‌ಮೆಂಟ್‌ನ ಮುಖ್ಯ ಕ್ಲಸ್ಟರ್ ಅಧಿಕಾರಿಯಾಗಿರುವ ಸಿಜು ಪ್ರಭಾಕರನ್ ಕಾರ್ಯಕ್ರಮದ ಕುರಿತಾಗಿರುವ ಎಲ್ಲಾ ವಿಷಯಗಳನ್ನು ತೆಗೆದುಹಾಕುವುದಾಗಿ ತಿಳಿಸಿದ್ದಾರೆ ಎಂದು ನಿರ್ಮಲ್ ಹೇಳಿದ್ದು ಅದಾಗ್ಯೂ ಘಟನೆಗೆ ಸಂಬಂಧಿತವಾಗಿ ವಿವರಣೆಯನ್ನು ನೀಡಬೇಕು ಎಂಬುದಾಗಿ ಹೇಳಿದ್ದಾರೆ. ಪ್ರಭಾಕರನ್ ಅವರನ್ನು ಸಂಪರ್ಕಿಸಿದಾಗ ಕಾರ್ಪೋರೇಟ್ ಕಮ್ಯುನಿಕೇಶನ್ ತಂಡವು ಸಮಸ್ಯೆಯನ್ನು ನಿವಾರಿಸುವ ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿಸಿದ್ದಾರೆ.
Published by:Latha CG
First published: