ಪೌರತ್ವ ತಿದ್ದುಪಡಿ ಕಾಯ್ದೆಗೆ ಹಲವು ರಾಜ್ಯಗಳ ವಿರೋಧ; ದೇಶಾದ್ಯಂತ ಜಾರಿಯಾಗಲೇಬೇಕು ಎನ್ನುತ್ತಿದೆ ಕೇಂದ್ರ

ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂಗೀಕಾರ ಪಡೆದ ಮಸೂದೆಗೆ ರಾಷ್ಟ್ರಪತಿಗಳು ಗುರುವಾರ ಮಧ್ಯರಾತ್ರಿ ಅಂಕಿತ ಹಾಕಿದ್ದಾರೆ. ರಾಷ್ಟ್ರಪತಿಗಳ ಅನುಮೋದನೆಯೊಂದಿಗೆ ಮಸೂದೆಯಾಗಿ ಕಾಯ್ದೆಯಾಗಿ ಜಾರಿಯಾಗಿದೆ. ಈ ಕಾಯ್ದೆ ವಿರೋಧಿಸಿ ಈಶಾನ್ಯ ರಾಜ್ಯಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ.

HR Ramesh | news18-kannada
Updated:December 13, 2019, 8:06 PM IST
ಪೌರತ್ವ ತಿದ್ದುಪಡಿ ಕಾಯ್ದೆಗೆ ಹಲವು ರಾಜ್ಯಗಳ ವಿರೋಧ; ದೇಶಾದ್ಯಂತ ಜಾರಿಯಾಗಲೇಬೇಕು ಎನ್ನುತ್ತಿದೆ ಕೇಂದ್ರ
ಪೌರತ್ವ ತಿದ್ದುಪಡಿ ಮಸೂದೆ ವಿರೋಧಿ ಪ್ರತಿಭಟನೆ.
  • Share this:
ನವದೆಹಲಿ: ವಿವಾದಾತ್ಮಕ ಪೌರತ್ವ ತಿದ್ದುಪಡಿ ಮಸೂದೆ ಅನುಷ್ಠಾನಕ್ಕೆ  ಹಲವು ರಾಜ್ಯ ಸರ್ಕಾರಗಳು ವಿರೋಧಿಸಿದ್ದು, ಇದು ಜಾತ್ಯತೀತ ಭಾರತವನ್ನು ಇಬ್ಭಾಗ ಮಾಡುವ ಆಡಳಿತಾರೂಢ ಬಿಜೆಪಿಯ ಪ್ರಯತ್ನವಾಗಿದೆ ಎಂದು ಆರೋಪಿಸಿವೆ. ಆದರೆ, ಪೌರತ್ವ ತಿದ್ದುಪಡಿ ಮಸೂದೆ ಅನುಷ್ಠಾನ ವಿಚಾರದಲ್ಲಿ ರಾಜ್ಯಗಳಿಗೆ ಯಾವುದೇ ಆಯ್ಕೆಗಳು ಇಲ್ಲ ಎಂದು ಹೇಳಿದೆ.

ಕೇಂದ್ರ ಪಟ್ಟಿಯಲ್ಲಿರುವ ಕೇಂದ್ರದ ಕಾನೂನನ್ನು ಅನುಷ್ಠಾನಗೊಳಿಸದಿರುವ ಅಧಿಕಾರ  ರಾಜ್ಯ ಸರ್ಕಾರಗಳಿಗೆ ಇಲ್ಲ ಎಂದು ಗೃಹ ಸಚಿವಾಲಯದ ಹಿರಿಯ ಅಧಿಕಾರಿ ಸಿಎನ್​ಎನ್​-ನ್ಯೂಸ್ 18ಗೆ ತಿಳಿಸಿದ್ದಾರೆ. ಪಶ್ಚಿಮಬಂಗಾಳ, ಕೇರಳ, ಪಂಜಾಬ್​ ಮುಖ್ಯಮಂತ್ರಿಗಳು ಈ ವಿವಾದಾತ್ಮಕ ಮಸೂದೆಯನ್ನು ತಮ್ಮ ರಾಜ್ಯಗಳಲ್ಲಿ ಅನುಷ್ಠಾನಗೊಳಿಸಲು ಬಿಡುವುದಿಲ್ಲ ಎಂದು ಘೋಷಿಸಿದ್ದಾರೆ.

ಆದರೆ, ಕೇಂದ್ರ ಸರ್ಕಾರ ತಂದ ಮಸೂದೆಗೆ ರಾಷ್ಟ್ರಪತಿಗಳ ಅಂಕಿತ ಬಿದ್ದ ಬಳಿಕ ರಾಜ್ಯ ಸರ್ಕಾರಗಳು ಆ ಕಾಯ್ದೆಯನ್ನು ತಮ್ಮ ರಾಜ್ಯಗಳಲ್ಲಿ ಅನುಷ್ಠಾನಗೊಳಿಸಬಹುದೇ, ಇಲ್ಲವೇ ಎಂಬುದರ ಬಗ್ಗೆ ಕೇಂದ್ರ ಹಿರಿಯ ಅಧಿಕಾರಿಗಳು ಸ್ಪಷ್ಟತೆ ನೀಡಿದ್ದಾರೆ. ಸಂವಿಧಾನದ ಏಳನೇ ಶೆಡ್ಯೂಲ್​ ಪ್ರಕಾರ, ಮುಖ್ಯವಾಗಿ ಮೂರು ಪಟ್ಟಿಗಳಿವೆ. ಯೂನಿಯನ್​ ಪಟ್ಟಿಯಲ್ಲಿ ಸಂಸತ್ತು ಯಾವುದೇ ವಿಷಯವನ್ನು ಅಂಗೀಕರಿಸಿದರು ಅದನ್ನು ಎಲ್ಲ ರಾಜ್ಯ ಸರ್ಕಾರಗಳು ಅನುಷ್ಠಾನಕ್ಕೆ ತರಲೇಬೇಕು. ರಕ್ಷಣೆ, ವಿದೇಶಾಂಗ, ರೈಲ್ವೆ, ನೈಸರ್ಗೀಕರಣ ಮತ್ತು ನಾಗರಿಕತ್ವ ಮತ್ತು ಕೆಲವು ವಿಷಯಗಳು ಯೂನಿಯನ್ ಪಟ್ಟಿಯಲ್ಲಿ ಬರುತ್ತವೆ. ಈ ಪಟ್ಟಿಯಲ್ಲಿ 97 ವಿಷಯಗಳನ್ನು ಒಳಗೊಂಡಿದೆ ಎಂದು ಹೇಳುತ್ತಾರೆ.

ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪೌರತ್ವ ಮಸೂದೆ ಸಂಸತ್ತಿನಲ್ಲಿ ಅಂಗೀಕಾರ ಪಡೆಯುವುದಕ್ಕಿಂತ ಹಿಂದೆಯೇ ಮಸೂದೆ ವಿರೋಧಿಸಿದ್ದರು. ಇಂದು ಕೇರಳದ ಸಿಎಂ ಪಿಣರಾಯಿ ವಿಜಯನ್ ಮತ್ತು ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ಅವರೂ ಕೂಡ ಕಾಯ್ದೆ ಅನುಷ್ಠಾನಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ. ಮಧ್ಯಪ್ರದೇಶ ಮತ್ತು ಛತ್ತೀಸ್​ಗಢ ಸರ್ಕಾರಗಳು ಈ ಕಾನೂನು ಅನುಷ್ಠಾನಕ್ಕೆ ಅವಕಾಶ ನೀಡುವುದಿಲ್ಲ ಎಂದು ಸುಳಿವು ನೀಡಿವೆ. ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ಅಲ್ಲಿನ ಸರ್ಕಾರಗಳು ಬದ್ಧವಾಗಿರಲಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಧರ್ಮದ ಆಧಾರ ಮೇಲೆ ಭಾರತದ ಪೌರತ್ವ ನೀಡುವ ವಿವಾದಿತ ಮಸೂದೆಗೆ ರಾಷ್ಟ್ರಪತಿಗಳು ಗುರುವಾರ ಮಧ್ಯರಾತ್ರಿ ಅಂಕಿತ ಹಾಕಿದ್ದಾರೆ. ಈ ಮೂಲಕ ಮಸೂದೆ ಕಾನೂನಾಗಿ ತಕ್ಷಣದಿಂದ ಜಾರಿಗೆ ಬಂದಿದೆ.

 

2015ಕ್ಕಿಂತ ಮುಂಚಿತವಾಗಿ ನೆರೆಯ ದೇಶಗಳಾದ ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನಗಳಿಂದ ಭಾರತಕ್ಕೆ ಅಕ್ರಮವಾಗಿ ಬಂದು ನೆಲೆಸಿರುವ ನಿರಾಶ್ರಿತರಿಗೆ ದೇಶದ ಪೌರತ್ವ ದೊರೆಯುತ್ತದೆ. ಆದರೆ, ಭಾರತದ ಮೂಲದವರೇ ಆಗಿದ್ದರೂ ಇಸ್ಲಾಂ ಧರ್ಮದವರನ್ನು ಈ ಅವಕಾಶದಿಂದ ದೂರ ಇಡಲಾಗಿದೆ. ಇಸ್ಲಾಂ ಧರ್ಮದ ನಿರಾಶ್ರಿತರಿಗೆ ಮಾತ್ರ ಭಾರತ ಪೌರತ್ವ ನೀಡಲಾಗುವುದಿಲ್ಲ.ಇದನ್ನು ಓದಿ: ಕೇಂದ್ರದ ನೂತನ ಮಸೂದೆಗೆ ಕೆಂಡವಾದ ಈಶಾನ್ಯ ಭಾರತ; ಏನಿದು ಪೌರತ್ವ ತಿದ್ದುಪಡಿ ಮಸೂದೆ? ಜನಾಕ್ರೋಶಕ್ಕೆ ಕಾರಣವೇನು? ಇಲ್ಲಿದೆ ಡೀಟೈಲ್ಸ್

ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂಗೀಕಾರ ಪಡೆದ ಮಸೂದೆಗೆ ರಾಷ್ಟ್ರಪತಿಗಳು ಗುರುವಾರ ಮಧ್ಯರಾತ್ರಿ ಅಂಕಿತ ಹಾಕಿದ್ದಾರೆ. ರಾಷ್ಟ್ರಪತಿಗಳ ಅನುಮೋದನೆಯೊಂದಿಗೆ ಮಸೂದೆಯಾಗಿ ಕಾಯ್ದೆಯಾಗಿ ಜಾರಿಯಾಗಿದೆ. ಈ ಕಾಯ್ದೆ ವಿರೋಧಿಸಿ ಈಶಾನ್ಯ ರಾಜ್ಯಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ. ಅಸ್ಸಾಂನಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದ್ದು, ಭದ್ರತೆಗೆ ಸೈನಿಕರನ್ನು ನಿಯೋಜನೆ ಮಾಡಲಾಗಿದೆ.

 
First published:December 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading