HOME » NEWS » National-international » CENTRE TO RESTORE JAMMU KASHMIR STATEHOOD PM MODI TO DISCUSS BLUEPRINT IN JUNE 24 MEET MAK

Exclusive: ಜಮ್ಮು-ಕಾಶ್ಮೀರಕ್ಕೆ ಮತ್ತೆ ಸಿಗಲಿದೆಯೇ ರಾಜ್ಯ ಸ್ಥಾನಮಾನ; ಜೂನ್.24ರ ಸರ್ವಪಕ್ಷ ಸಭೆಯಲ್ಲಿ ಚರ್ಚೆ ಸಾಧ್ಯತೆ!

ಕೇಂದ್ರ ಸರ್ಕಾರ ಐತಿಹಾಸಿಕ ಕ್ರಮವು ಕಾಶ್ಮೀರ ಕಣಿವೆಯಲ್ಲಿ ಹಲವಾರು ರಾಜಕೀಯ ಮುಖಂಡರು ಮತ್ತು ಕಾರ್ಯಕರ್ತರ ಮೇಲೆ ನಿರ್ಬಂಧ ಹೇರಲು ಕಾರಣವಾಯಿತು. ರಾಜಕಾರಣಿಗಳನ್ನು ಬಂಧನದಲ್ಲಿಡಲಾಗಿತ್ತು. 

news18-kannada
Updated:June 20, 2021, 4:27 PM IST
Exclusive: ಜಮ್ಮು-ಕಾಶ್ಮೀರಕ್ಕೆ ಮತ್ತೆ ಸಿಗಲಿದೆಯೇ ರಾಜ್ಯ ಸ್ಥಾನಮಾನ; ಜೂನ್.24ರ ಸರ್ವಪಕ್ಷ ಸಭೆಯಲ್ಲಿ ಚರ್ಚೆ ಸಾಧ್ಯತೆ!
ಅಮಿತ್ ಶಾ-ನರೇಂದ್ರ ಮೋದಿ.
  • Share this:
ನವ ದೆಹಲಿ (ಜೂನ್​ 20); ಪ್ರಧಾನಿ ನರೇಂದ್ರ ಮೋದಿ ಗುರುವಾರ (ಜೂನ್.24) ಮೊಟ್ಟ ಮೊದಲ ಬಾರಿಗೆ ಜಮ್ಮು-ಕಾಶ್ಮೀರದಲ್ಲಿ ಸರ್ವಪಕ್ಷಗಳ ಸಭೆಯನ್ನು ಕರೆದಿದ್ದಾರೆ. ಈ ಸಭೆಯಲ್ಲಿ ಜಮ್ಮು-ಕಾಶ್ಮೀರಕ್ಕೆ ಮತ್ತೆ ರಾಜ್ಯ ಸ್ಥಾನಮಾನ ನೀಡುವ ಕುರಿತು ಚರ್ಚೆ ನಡೆಸುವ ಸಾಧ್ಯತೆ ಇದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರರ ಅಜಿತ್ ದೋವಲ್, ಸಿಎನ್ಎನ್-ನ್ಯೂಸ್ 18 ಅಧಿಕೃತ ಮೂಲಗಳಿಂದ ಮಾಹಿತಿ ನೀಡಿದ್ದಾರೆ. ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಅವರು ಭರವಸೆ ನೀಡಿದಂತೆ ಜೆ & ಕೆ ಗೆ ಶೀಘ್ರದಲ್ಲೇ ರಾಜ್ಯತ್ವ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ. ಆದರೆ ಕಣಿವೆ ರಾಜ್ಯದ ವಿಶೇಷ ಸ್ಥಾನಮಾನವನ್ನು ಮರುಸ್ಥಾಪಿಸುವ ಕುರಿತು ಯಾವುದೇ ಮಾತುಕತೆ ನಡೆಯುವುದಿಲ್ಲ ಎನ್ನಲಾಗುತ್ತಿದೆ.

ಅಲ್ಲದೆ, ಆಗಸ್ಟ್‌ 5 2019 ರಂದು ಕೇಂದ್ರ ಸರ್ಕಾರ ಏಕಾ ಏಕಿ ಸಂವಿಧಾನದ ಅನುಚ್ಛೇಧ 370 ರ ಅಡಿ ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇ‍ಷ ಅಧಿಕಾರವನ್ನು ಕಿತ್ತುಕೊಂಡು ಜಮ್ಮು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿತ್ತು. ಹೀಗೆ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕಸಿದುಕೊಂಡ ನಂತರ ಕಣಿವೆ ರಾಜ್ಯದಲ್ಲಿ ನಡೆಯುತ್ತಿರುವ ಮೊದಲ ಸರ್ವ ಪಕ್ಷಗಳ ಸಭೆ ಇದಾಗಿದೆ.

ಕೇಂದ್ರ ಸರ್ಕಾರ ಐತಿಹಾಸಿಕ ಕ್ರಮವು ಕಾಶ್ಮೀರ ಕಣಿವೆಯಲ್ಲಿ ಹಲವಾರು ರಾಜಕೀಯ ಮುಖಂಡರು ಮತ್ತು ಕಾರ್ಯಕರ್ತರ ಮೇಲೆ ನಿರ್ಬಂಧ ಹೇರಲು ಕಾರಣವಾಯಿತು. ರಾಜಕಾರಣಿಗಳನ್ನು ಬಂಧನದಲ್ಲಿಡಲಾಗಿತ್ತು.

ಕಳೆದ 2 ವರ್ಷಗಳ ಅವಧಿಯಲ್ಲಿ ಕಾಶ್ಮೀರದಲ್ಲಿ ಸಾಕಷ್ಟು ಬಂಧನಗಳಾಗಿವೆ. ಫಾರುಕ್ ಅಬ್ದುಲ್ಲಾ, ಓಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಸೇರಿ ಕಾಶ್ಮೀರದ ನಾಯಕರನ್ನೆಲ್ಲ ಕೇಂದ್ರ ಸರ್ಕಾರ ಬಂಧನದಲ್ಲಿ ಇರಿಸಿತ್ತು. ಕಾಶ್ಮೀರಿಗಳ ಮೂಲಭೂತ ಹಕ್ಕುಗಳನ್ನು ಕಿತ್ತುಕೊಂಡಿತ್ತು. 22 ತಿಂಗಳ ನಂತರವೂ ಜಮ್ಮು ಕಾಶ್ಮೀರದಲ್ಲಿ ನಿರ್ಭಂಧಗಳು ತೆರವಾಗಿಲ್ಲ.

ಈಗ ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರದ ರಾಜಕೀಯ ಪಕ್ಷಗಳ ಜೊತೆ ಸರ್ವಪಕ್ಷ ಸಭೆಯನ್ನು ನಡೆಸಲು ಮುಂದಾಗಿದೆ. 22 ತಿಂಗಳುಗಳ ನಂತರ ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರದ ವಿಷಯದಲ್ಲಿ ತನ್ನ ಕಾಠಿಣ್ಯವನ್ನು ಒಂದಷ್ಟು ಸಡಿಲಿಸಿದಂತೆ ಕಾಣುತ್ತಿದೆ.

ಜೂನ್‌ 24 ರಂದು ಪ್ರಧಾನಿ ಮೋದಿ ಜಮ್ಮು ಕಾಶ್ಮೀರದ ಎಲ್ಲಾ ರಾಜಕೀಯ ನಾಯಕರ ಜೊತೆ ದೆಹಲಿಯಲ್ಲಿ ಚರ್ಚೆ ನಡೆಸಲಿದ್ದಾರೆ. ಸರ್ವಪಕ್ಷ ಸಭೆಯ ಅಧ್ಯಕ್ಷತೆಯನ್ನೂ ಪ್ರಧಾನಿಗಳೇ ವಹಿಸಲಿದ್ದಾರೆ ಎಂದು ಪ್ರಧಾನ ಮಂತ್ರಿಗಳ ಕಾರ್ಯಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಮೊಟ್ಟಮೊದಲ ಬಾರಿಗೆ ಜಮ್ಮು-ಕಾಶ್ಮೀರದಲ್ಲಿ ಸರ್ವ ಪಕ್ಷಗಳ ಸಭೆ ಕರೆದ ಪ್ರಧಾನಿ ಮೋದಿ; ಕುತೂಹಲ ಮೂಡಿಸಿದ ಕೇಂದ್ರದ ನಡೆ!ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಮತಕ್ಷೇತ್ರಗಳ ಮರು ವಿಂಗಡಣೆ ಮತ್ತು ಹಿಂದೆ ನೀಡಲಾಗಿದಗ್ದ ವಿಶೇಷ ಸ್ಥಾನಮಾನವನ್ನು ಮರಳಿ ನೀಡುವ ಕುರಿತು ಪ್ರಧಾನಿಯವರೊಂದಿಗೆ ಚರ್ಚೆ ನಡೆಸಲು ಸಿದ್ಧರಿದ್ದೇವೆ ಎಂದು ಜಮ್ಮು ಕಾಶ್ಮೀರದ ರಾಜಕೀಯ ನಾಯಕರುಗಳು ತಿಳಿಸಿದ್ದಾರೆ.

ಜಮ್ಮು-ಕಾಶ್ಮೀರದ ಒಂಬತ್ತು ಪಕ್ಷಗಳನ್ನು ಸಭೆಗೆ ಆಹ್ವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಈ ಪಟ್ಟಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಎರಡು ಪ್ರಮುಖ ಪಕ್ಷಗಳಿಗೆ ಈವರೆಗೆ ಔಪಚಾರಿಕ ಆಹ್ವಾನವನ್ನು ಕಳುಹಿಸಲಾಗಿಲ್ಲ. ಹೀಗಾಗಿ ರಾಜಕೀಯ ಪ್ರಕ್ರಿಯೆ ನಡೆಯಲು ಸಮಯವಿದೆ ಎಂದು ಪೀಪಲ್ಸ್ ಕಾನ್ಫರೆನ್ಸ್ ಮುಖಂಡ ಸಜಾದ್ ಲೋನ್ ಮತ್ತು ಅಪ್ನಿ ಪಕ್ಷದ ನಾಯಕ ಅಲ್ತಾಫ್ ಬುಖಾರಿ ಪುನರುಚ್ಚರಿಸಿದ್ದಾರೆ.

ಇದನ್ನೂ ಓದಿ: Karnataka Unlock 2.O: ಸಂಜೆವರೆಗೆ ಅಂಗಡಿ-ಮುಗ್ಗಟ್ಟು ಓಪನ್​: ಮಾಲ್​​, ದೇವಸ್ಥಾನಕ್ಕಿಲ್ಲ ಅವಕಾಶಈ ಹಿನ್ನೆಲೆಯಲ್ಲಿ ಜೂನ್ 24 ರ ಸಭೆ ಮಹತ್ವದ್ದಾಗಿದೆ. ಏಕೆಂದರೆ ಇದನ್ನು ಈ ಮಟ್ಟದಲ್ಲಿ ಕಣಿವೆಯ ನಾಯಕತ್ವ ಮತ್ತು ಕೇಂದ್ರದ ನಡುವಿನ ನೇರ ಮಾತುಕತೆಯ ಪ್ರಾರಂಭವೆಂದು ಪರಿಗಣಿಸಲಾಗುತ್ತಿದೆ. ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮತ್ತು ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಯಂತಹ ಪ್ರಾದೇಶಿಕ ಶಕ್ತಿ ಕೇಂದ್ರಗಳ ಪ್ರತಿನಿಧಿಗಳು ಹಾಗೂ ಕೇಂದ್ರದ ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಕಾಂಗ್ರೆಸ್ ನ ಪ್ರತಿನಿಧಿಗಳನ್ನು ದೆಹಲಿಯಲ್ಲಿ ಮಾತುಕತೆಗೆ ಆಹ್ವಾನಿಸಲಾಗಿದೆ .
Youtube Video

ಸಭೆಯಲ್ಲಿ, ಕಣಿವೆಯಲ್ಲಿ ರಾಜಕೀಯ ಪ್ರಕ್ರಿಯೆಯನ್ನು ಪ್ರಾರಂಭಿಸಲು ನೀಲನಕ್ಷೆ ಕುರಿತು ಪ್ರಧಾನಿ ಚರ್ಚಿಸಲಿದ್ದಾರೆ. ಸಿಎನ್ಎನ್-ನ್ಯೂಸ್ 18 ಮಾತನಾಡಿದ ಮೂಲಗಳ ಪ್ರಕಾರ, ಜಮ್ಮು- ಕಾಶ್ಮೀರಕ್ಕೆ ರಾಜ್ಯತ್ವವನ್ನು ಘೋಷಿಸಲು ಸರ್ಕಾರ ಚಿಂತಿಸುತ್ತಿದೆ, ಆದರೆ ಕಳೆದ ವರ್ಷದ ಆರಂಭದಲ್ಲಿ ಸ್ಥಾಪಿಸಲಾದ ಡಿಲಿಮಿಟೇಶನ್ ಆಯೋಗವು ತನ್ನ ವರದಿಯನ್ನು ಸಲ್ಲಿಸುವವರೆಗೆ ಈ ಕ್ರಮವು ಕಾಯಬೇಕಾಗಬಹುದು. ಸದ್ಯಕ್ಕೆ ಲಡಾಖ್ ಸ್ಥಿತಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಅಜಿತ್ ದೋವಲ್ ತಿಳಿಸಿದ್ದಾರೆ.
Published by: MAshok Kumar
First published: June 20, 2021, 3:54 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories