ನವದೆಹಲಿ(ಆ. 19): ಕೇಂದ್ರ ಸರ್ಕಾರದ ಬಂಡವಾಳ ಹಿಂಪಡೆಯುವ ಯೋಜನೆಯ ಭಾಗವಾಗಿ ಈಗ ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿ (ಹೆಚ್ಎಎಲ್) ಸಂಸ್ಥೆಯ ಕೆಲ ಪಾಲನ್ನು ಮಾರಾಟ ಮಾಡುವ ಚಿಂತನೆ ನಡೆದಿದೆ. ಮೂಲಗಳ ಪ್ರಕಾರ, ಹೆಚ್ಎಎಲ್ನ ಶೇ. 5 ಭಾಗವನ್ನು ಮಾರಲು ಕೇಂದ್ರ ಸರ್ಕಾರ ಯೋಜಿಸಿದೆ. ಇದೇ ಆಗಸ್ಟ್ನಷ್ಟರಲ್ಲಿ ಮಾರಾಟ ಪ್ರಕಿಯೆಯನ್ನು ಮುಗಿಸುವ ಉದ್ದೇಶ ಹೊಂದಿದೆ ಎನ್ನಲಾಗಿದೆ. ಈ 5 ಪರ್ಸೆಂಟ್ ಪಾಲು ಮಾರಾಟದಿಂದ ಸರ್ಕಅರಕ್ಕೆ 2 ಸಾವಿರ ಕೋಟಿ ರೂ ಆದಾಯ ಸಿಗಲಿದೆ.
ಹೆಚ್ಎಎಲ್ ಸಂಸ್ಥೆಯಲ್ಲಿ ಕೇಂದ್ರ ಸರ್ಕಾರದ ಈಗಿನ ಪಾಲು ಶೇ. 90ರಷ್ಟಿದೆ. ಈಗ ಶೇ. 5 ಪಾಲು ಮಾರಿದರೆ ಸರ್ಕಾರಕ್ಕೆ ಉಳಿದುಕೊಳ್ಳುವುದು ಶೇ. 85 ಭಾಗ ಮಾತ್ರ.
ಇದನ್ನೂ ಓದಿ: Government Jobs - ಸರ್ಕಾರಿ ಹುದ್ದೆಗಳ ನೇಮಕಾತಿಗೆ ಸಿಇಟಿ ಅರ್ಹತಾ ಪರೀಕ್ಷೆ: ಕೇಂದ್ರ ಸಂಪುಟ ಸಮ್ಮತಿ
ಬೆಂಗಳೂರಿನ ಹಲವು ಪ್ರಮುಖ ಐಕಾನ್ ಸಂಸ್ಥೆಗಳಲ್ಲಿ ಹೆಚ್ಎಎಲ್ ಕೂಡ ಒಂದು. ಭಾರತೀಯ ವಾಯು ಸೇನೆ ಬೇಕಾದ ವಿಮಾನ, ಉಪಕರಣ ಇತ್ಯಾದಿಗಳನ್ನು ಇಲ್ಲಿ ತಯಾರಿಸಲಾಗುತ್ತದೆ. 2019-20ರ ಸಾಲಿನ ಹಣಕಾಸು ವರ್ಷದಲ್ಲಿ ಹೆಚ್ಎಎಲ್ ಸಂಸ್ಥೆ 21 ಸಾವಿರ ಕೋಟಿಗೂ ಅಧಿಕ ಟರ್ನೋವರ್ ತೋರಿಸಿದೆ. ಹಿಂದಿನ ವರ್ಷದಕ್ಕಿಂತ 1,300 ಕೋಟಿಯಷ್ಟು ವಹಿವಾಟು ಹೆಚ್ಚಳವಾಗಿದೆ.
ಹೆಚ್ಎಎಲ್ನ ಮಾರುಕಟ್ಟೆ ಹೂಡಿಕೆ ಮೊತ್ತ 42 ಸಾವಿರ ಕೋಟಿಯಷ್ಟಿದೆ. ಇವತ್ತಿನ ಅದರ ಒಂದು ಷೇರು ಬೆಲೆ 1,261 ರೂ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ