Bipin Rawat ನಿಧನ: 7 ದಿನಗಳಲ್ಲಿ ಹೊಸ ಸಿಡಿಎಸ್ ನೇಮಿಸಲಿದೆ ಕೇಂದ್ರ ಸರಕಾರ!

ನಿಯಮಗಳ ಪ್ರಕಾರ ಯಾವುದೇ ಕಮಾಂಡಿಂಗ್ ಅಧಿಕಾರಿಗಳು ಅಥವಾ ಸಶಸ್ತ್ರ ಪಡೆಗಳ ಅಧಿಕಾರಿಗಳು ಈ ಸ್ಥಾನಕ್ಕೆ ಬರಲು ಅರ್ಹರಾಗಿರುತ್ತಾರೆ

ಜನರಲ್ ಬಿಪಿನ್ ರಾವತ್

ಜನರಲ್ ಬಿಪಿನ್ ರಾವತ್

  • Share this:
ಮಿಲಿಟರಿ ಹೆಲಿಕಾಪ್ಟರ್ ಅಪಘಾತದಲ್ಲಿ ಜನರಲ್ ಬಿಪಿನ್ ರಾವತ್ (General Bipin Rawat) ಅವರು ಹಠಾತ್ ಮತ್ತು ದುರದೃಷ್ಟಕರ ಪರಿಸ್ಥಿತಿಯಲ್ಲಿ ನಿಧನವಾಗಿದ್ದು(Unfortunate demise) ಇದು ದೇಶದ ಜನರಿಗೆ ತುಂಬಾನೇ ಆಘಾತಕಾರಿ ಸುದ್ದಿಯಾಗಿದೆ.ಇವರ ನಿಧನದ ನಂತರ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರ (ಸಿಡಿಎಸ್) ಪ್ರಮುಖ ಹುದ್ದೆ ಈಗ ಖಾಲಿಯಾಗಿದ್ದು, ಇವರ ಸ್ಥಾನಕ್ಕೆ ಹೊಸ ಅಧಿಕಾರಿಯನ್ನು(Appointment new CDS) ನೇಮಿಸುವುದು ಕೇಂದ್ರ ಸರಕಾರಕ್ಕೆ (Government )ತುಂಬಾನೇ ದೊಡ್ಡ ಸವಾಲಿನ ಕೆಲಸ ಎಂದರೆ ತಪ್ಪಾಗುವುದಿಲ್ಲ. ಉನ್ನತ ಮೂಲಗಳ ಪ್ರಕಾರ, ಮುಂದಿನ ಏಳರಿಂದ ಹತ್ತು ದಿನಗಳಲ್ಲಿ (Next seven to ten days) ಹೊಸ ಸಿಡಿಎಸ್ ಅನ್ನು(Chief of Defence Staff) ನೇಮಕ ಮಾಡುವ ಬಗ್ಗೆ ಮೋದಿ ಸರ್ಕಾರವು ಯೋಚಿಸುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.

ಜನರಲ್ ಮನೋಜ್ ಮುಕುಂದ್ ನರವಾನೆ
ಜನರಲ್ ಬಿಪಿನ್ ರಾವತ್ ಅವರ ನಿಧನದೊಂದಿಗೆ, ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾನೆ ಅವರು ಈಗ ದೇಶದ ಅತ್ಯಂತ ಹಿರಿಯ ಮಿಲಿಟರಿ ಅಧಿಕಾರಿಯಾಗಿದ್ದಾರೆ. ಸೇನಾ ಉಪ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಸಿ ಪಿ ಮೊಹಂತಿ ಮತ್ತು ಉತ್ತರಭಾಗದ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ವೈ ಕೆ ಜೋಶಿ ಅವರು ಶ್ರೇಣಿಯಲ್ಲಿ ನಂತರದ ಸ್ಥಾನದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ದಿನದಲ್ಲಿ ಸಿಡಿಎಸ್‌ ಯಾರೆಂಬುದು ಗೊತ್ತಲಿದೆ.

ಇದನ್ನೂ ಓದಿ: Bipin Rawat ಯಾರು? ಭಾರತದ ಮೊದಲ ಸಿಡಿಎಸ್ ಕುಟುಂಬ ಎಂದೇ ಖ್ಯಾತಿ ಪಡೆದ ಈ ಫ್ಯಾಮಿಲಿ ಹಿನ್ನೆಲೆ ಏನು? ಫುಲ್ ಡೀಟೆಲ್ಸ್ ಇಲ್ಲಿದೆ

2020 ರಲ್ಲಿ ದೇಶದ ಮೊದಲ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ
ಜನರಲ್ ಬಿಪಿನ್ ರಾವತ್ ಅವರು ಜನವರಿ 2020 ರಲ್ಲಿ ದೇಶದ ಮೊದಲ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರಾದರು (ಸಿಡಿಎಸ್). 2019 ರಲ್ಲಿ ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೂರು ಸಶಸ್ತ್ರ ಪಡೆಗಳ ಮುಖ್ಯಸ್ಥರಿಗಿಂತ ಮೇಲಿರುವ ಒಬ್ಬ ಸಿಡಿಎಸ್ ಅನ್ನು ನೇಮಕ ಮಾಡಲಿದ್ದೇವೆ ಎಂದು ಘೋಷಿಸಿದ್ದರು.

ದೇಶದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ಲೋಕಸಭೆಯಲ್ಲಿ ಮತ್ತು ರಾಜ್ಯಸಭೆಯಲ್ಲಿ ಈ ವಿಷಯದ ಕುರಿತು ಮಧ್ಯಾಹ್ನ 12 ಗಂಟೆ ಸುಮಾರಿಗೆ ಹೇಳಿಕೆ ನೀಡುವ ನಿರೀಕ್ಷೆಯಿದೆ. ಭಾರತವು ಚೀನಾದೊಂದಿಗಿನ ಗಡಿ ಬಿಕ್ಕಟ್ಟಿನಲ್ಲಿರುವ ಸಮಯದಲ್ಲಿ ಹೊಸ ಸಿಡಿಎಸ್ ಅನ್ನು ನೇಮಕ ಮಾಡುವುದು ಹೆಚ್ಚು ಮುಖ್ಯವಾಗುತ್ತದೆ.

ಸಿಡಿಎಸ್ ಹುದ್ದೆಗೆ ಇರಬೇಕಾದ ಅರ್ಹತಾ ಮಾನದಂಡಗಳು ಇಲ್ಲಿವೆ:

1. ನಿಯಮಗಳ ಪ್ರಕಾರ ಯಾವುದೇ ಕಮಾಂಡಿಂಗ್ ಅಧಿಕಾರಿಗಳು ಅಥವಾ ಸಶಸ್ತ್ರ ಪಡೆಗಳ ಅಧಿಕಾರಿಗಳು ಈ ಸ್ಥಾನಕ್ಕೆ ಬರಲು ಅರ್ಹರಾಗಿರುತ್ತಾರೆ.

2. ಸಾಮಾನ್ಯವಾಗಿ, ರಕ್ಷಣಾ ಮುಖ್ಯಸ್ಥರ (ಸಿಡಿಎಸ್) ಗರಿಷ್ಠ ವಯಸ್ಸಿನ ಮಿತಿಯನ್ನು 65 ವರ್ಷಗಳಿಗೆ ನಿಗದಿಪಡಿಸಲಾಗಿದೆ.

3. ಶೆಕಾಟ್ಕರ್ ಸಮಿತಿ ಶಿಫಾರಸು ಮಾಡಿದ ಪ್ರಕಾರ ಮೂವರು ಸೇವಾ ಮುಖ್ಯಸ್ಥರಲ್ಲಿ ಸಿಡಿಎಸ್ ಅನ್ನು ಸರ್ಕಾರ ಆಯ್ಕೆ ಮಾಡಬೇಕು ಎಂದು ಹೇಳುತ್ತದೆ.

4. ಭದ್ರತಾ ಸಂಸ್ಥೆಯಲ್ಲಿ ಅನೇಕರು ಮೊದಲ ಎರಡು ಅಥವಾ ಮೂರು ಸಿಡಿಎಸ್ ನೇಮಕಾತಿಗಳು ಸೈನ್ಯದಿಂದ ಇರಬೇಕು ಎಂದು ನಂಬುತ್ತಾರೆ. ಏಕೆಂದರೆ ದೇಶ ಎದುರಿಸುತ್ತಿರುವ ಭದ್ರತಾ ಸವಾಲುಗಳು ಮತ್ತು ಗಡಿಗಳಲ್ಲಿರುವ ಸವಾಲುಗಳನ್ನು ಚೆನ್ನಾಗಿ ಅರಿತುಕೊಂಡವರಾಗಿರುತ್ತಾರೆ.

ಇದನ್ನೂ ಓದಿ: Gen Bipin Rawat ಬಗ್ಗೆ ಮಡಿಕೇರಿಯ ಲೆಫ್ಟಿನೆಂಟ್ ಜನರಲ್ ಪ್ರಸಾದ್​ ಭಾವುಕ ಮಾತುಗಳು..!

ಇಬ್ಬರು ಉನ್ನತ ಜನರಲ್ ಹಿಂದಿಕ್ಕಿದ್ದರು
ಜಮ್ಮು ಮತ್ತು ಕಾಶ್ಮೀರ ಮತ್ತು ಈಶಾನ್ಯ ದಲ್ಲಿ ಜನರಲ್ ರಾವತ್ ಅವರ ಅನುಭವವು ಅವರನ್ನು ಸಿಡಿಎಸ್ ಹುದ್ದೆಗೆ ನೇಮಕ ಮಾಡಲು ಕಾರಣವಾಗಿತ್ತು. ಜನರಲ್ ರಾವತ್ ಅವರು ಲೆಫ್ಟಿನೆಂಟ್ ಜನರಲ್ ಪ್ರವೀಣ್ ಭಕ್ಷಿ ಮತ್ತು ಲೆಫ್ಟಿನೆಂಟ್ ಜನರಲ್ ಪಿ ಎಂ ಹರಿಜ್ ಎಂಬ ಇಬ್ಬರು ಉನ್ನತ ಜನರಲ್ ಗಳನ್ನು ಹಿಂದಿಕ್ಕಿ ಸಿಡಿಎಸ್ ಹುದ್ದೆಗೆ ನೇಮಕಗೊಂಡಿದ್ದರು.
Published by:vanithasanjevani vanithasanjevani
First published: