news18-kannada Updated:November 12, 2020, 9:08 PM IST
ಟ್ವಿಟ್ಟರ್
ಲೇಹ್ ಅನ್ನು ಕೇಂದ್ರಾಡಳಿತ ಪ್ರದೇಶವಾದ ಲಡಾಖ್ ಬದಲಿಗೆ ಜಮ್ಮು ಕಾಶ್ಮೀರದ ಭಾಗವಾಗಿ ತೋರಿಸಿದ್ದಕ್ಕೆ ಟ್ವಿಟರ್ಗೆ ಕೇಂದ್ರ ಸರ್ಕಾರ ನೋಟಿಸ್ ಜಾರಿ ಮಾಡಿದೆ.. ನ.9ರಂದು ಈ ನೋಟಿಸ್ ಜಾರಿಯಾಗಿದೆ. ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಈ ನೋಟಿಸ್ ನೀಡಿದ್ದು, ಐದು ದಿನದೊಳಗೆ ಇದಕ್ಕೆ ಉತ್ತರಿಸುವಂತೆ ಟ್ವಿಟರ್ಗೆ ಸೂಚಿಸಿದೆ. ಅಲ್ಲದೇ ಭಾರತದ ಪ್ರಾದೇಶಿಕ ಸಮಗ್ರತೆಗೆ ಅಗೌರ ತೋರಿದ ಕಾರಣ ಯಾಕೆ ಕಾನೂನು ಕ್ರಮ ಕೈಗೊಳ್ಳಬಾರದು ಎಂದು ಕೇಳಿದೆ ಎಂದು ಎಎನ್ಐ ವರದಿ ಮಾಡಿದೆ. ಸೈಬರ್ ಕ್ರೈಮ್ ಕೋರ್ಡಿನೇಷನ್ ಸೆಂಟರ್ನ ನಿರ್ದೇಶಕರು ಟ್ವಿಟರ್ ನ ಜಾಗತಿಕ ಉಪಾಧ್ಯಕ್ಷರಿಗೆ ಈ ನೋಟಿಸ್ ಜಾರಿ ಮಾಡಿದ್ದಾರೆ ಎಂದು ಎಕಾನಾಮಿಕ್ ಟೈಮ್ಸ್ ವರದಿ ಮಾಡಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಟ್ವಿಟರ್ ವಕ್ತಾರ, ಭಾರತ ಸರ್ಕಾರ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದೊಂದಿಗೆ ಸಹಭಾಗಿತ್ವಕ್ಕೆ ಟ್ವಿಟರ್ ಬದ್ಧವಾಗಿದೆ. ನಿಮ್ಮ ಪತ್ರಕ್ಕೆ ಉತ್ತಮವಾಗಿ ಪ್ರತಿಕ್ರಿಯಿಸುತ್ತೇವೆ. ಜಿಯೋ-ಟ್ಯಾಗ್ ಸಮಸ್ಯೆಗೆ ಸಂಬಂಧಿಸಿದ ಬೆಳವಣಿಗೆಗ ಹಾಗೂ ಇದರ ಕುರಿತ ಮಾಹಿತಿಯನ್ನು ಹಂಚಿಕೊಳ್ಳುತ್ತೇವೆ ಎಂದಿದ್ದಾರೆ.
ಈ ಹಿಂದೆ ಲೇಹ್ ಅನ್ನು ಚೀನಾದ ಭಾಗವಾಗಿ ಟ್ವಿಟರ್ ತೋರಿಸಿತ್ತು. ಈ ಕುರಿತು ಸಿಇಒ ಜ್ಯಾಕ್ಡಾರ್ಸಿ ಅವರಿಗೆ ಆಕ್ಷೇಪಣೆಯನ್ನು ಸಚಿವಾಲಯದ ಕಾರ್ಯದರ್ಶಿ ಸಲ್ಲಿಸಿದ್ದರು. ಇದಕ್ಕೆ ಇದಾದ ಬಳಿಕ ಈ ತಪ್ಪನ್ನು ಸರಿಮಾಡಲಾಗಿದೆ ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿತು. ಈ ತಪ್ಪನ್ನು ಸರಿಮಾಡಲಾಗಿಲ್ಲ. ಕಾರಣ ಕೇಂದ್ರಾಡಳಿತ ಪ್ರದೇಶವಾದ ಲಡಾಖ್ ಭಾಗವಾಗಿ ಲೇಹ್ ತೋರಿಸಲು ನಕ್ಷೆ ತಯಾರಿಸಲ್ಲ ಎಂದಿದ್ದಾರೆ.
ಇದನ್ನು ಓದಿ: ನ.16ರಂದು ಆರನೇ ಬಾರಿ ಸಿಎಂ ಆಗಿ ನಿತೀಶ್ ಕುಮಾರ್ ಪ್ರಮಾಣವಚನ
ಈ ಹಿಂದಿನ ಪತ್ರದಲ್ಲಿ ಸಚಿವಾಲಯದ ಕಾರ್ಯದರ್ಶಿ ಅಜಯ್ ಸಾಹ್ನಿ, ಟ್ವಿಟರ್ನ ತಪ್ಪನ್ನು ಸರಿಪಡಿಸುವಂತೆ ತಿಳಿಸಿದ್ದರು. ಭಾರತದ ನಕ್ಷೆಯನ್ನು ತಪ್ಪಾಗಿ ತೋರಿಸಲಾಗಿದೆ. ಕೇಂದ್ರಾಡಳಿತ ಪ್ರದೇಶದ ಹೆಡ್ಕ್ವಾಟ್ರಸ್ ಲೇಹ್ ಆಗಿದೆ ಎಂದಿದ್ದರು. ಅಲ್ಲದೇ ಜಮ್ಮು ಮತ್ತು ಕಾಶ್ಮಿ ಹಾಗೂ ಲಡಾಖ್ ಎರಡೂ ಭಾರತದ ಅವಿಭಾಜ್ಯ ಅಂಗ ಎಂದಿದ್ದರು.
ಟ್ವಿಟರ್ನ ಇಂತಹ ತಪ್ಪುಗಳು ಸಂಸ್ಥೆಯ ಪ್ರತಿಷ್ಠೆಗೆ ಕಳಂಕ ತರುತ್ತದೆ ಎಂದು ಕೂಡ ಇದೇ ವೇಳೆ ಎಚ್ಚರಿಸಲಾಗಿದೆ. ಭಾರತೀಯರ ಸೂಕ್ಷ್ಮತೆಗಳನ್ನು ಗೌರವಿಸುವಂತೆ ಸರ್ಕಾರದ ಪರವಾಗಿ ಕೋರಲಾಗಿದೆ. ಭಾರತದ ಸಾರ್ವಭೌಮತ್ವ, ಸಮಗ್ರತೆಗೆ ಧಕ್ಕೆ ತರುವ ಕೆಲಸಗಳು ಸಹಿಸಲು ಅಸಾಧ್ಯ ಎಂದು ಎಚ್ಚರಿಸಿದ್ದಾರೆ.
Published by:
Seema R
First published:
November 12, 2020, 9:05 PM IST