ಹೆಚ್ಚಿದ ಕೊರೋನಾ ಪ್ರಕರಣ: ಕೇಂದ್ರದಿಂದ ಹೊಸ ಮಾರ್ಗಸೂಚಿ ಪ್ರಕಟ

ಮಾಸ್ಕ್​ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು. ಮಾರುಕಟ್ಟೆ ಮತ್ತು ವಾರಾಂತ್ಯದ ಬಜಾರ್​ಗಳಿಗೆ ನಿಯಮ ಹೊರಡಿಸುವಂತಹ ಕಟ್ಟು ನಿಟ್ಟಿನ ಕ್ರಮವನ್ನು ಸರ್ಕಾರಗಳು ಜಾರಿಗೆ ಗೊಳಿಸುವಂತೆ ಸೂಚನೆ ನೀಡಲಾಗಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ದಸರಾ, ದೀಪಾವಳಿಯಂತಹ ಹಬ್ಬಗಳ ಸಾಲುಗಳು ಮುಗಿದ ಬಳಿದ ದೇಶದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಿದೆ. ಎರಡನೇ ಅಲೆ ಕೊರೋನಾ ಪ್ರಕರಣಗಳು ಕಂಡು ಬರುತ್ತಿರುವ ಬಗ್ಗೆ ಕೇಂದ್ರ ಸರ್ಕಾರ ಕಳವಳ ವ್ಯಕ್ತಪಡಿಸಿದೆ. ದೆಹಲಿ, ರಾಜಸ್ಥಾನ, ಹರಿಯಾಣ, ಮಹಾರಾಷ್ಟ್ರ, ಅಹಮದಾಬಾದ್​ಗಳು ಈಗಾಗಲೇ ಕೋವಿಡ್​ ತಡೆಗಟ್ಟಲು ರಾತ್ರಿ ಕರ್ಫ್ಯೂ ಸೇರಿದಂತೆ ಅನೇಕ ನಿಯಮಗಳನ್ನು ಬಿಗಿಗೊಳಿಸಿದೆ. ಚಳಿಗಾಲದ ಸಮಯದಲ್ಲಿ ಪ್ರಕರಣ ಹೆಚ್ಚಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದ ಪ್ರಧಾನಿ ನರೇಂದ್ರ ಮೋದಿ ನಿನ್ನೆ ಪ್ರಕರಣ ಹೆಚ್ಚಿರುವ ಎಂಟು ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್​ ನಡೆಸಿದ್ದು, ಲಸಿಕೆ ವಿತರಣೆ ಹಾಗೂ ಸೋಂಕು ನಿಯಂತ್ರಣ ಕುರಿತು ಚರ್ಚೆ ನಡೆಸಿದ್ದರು. ಇದರ ಬೆನ್ನಲ್ಲೇ ಇಂದು ಕೇಂದ್ರ ಗೃಹ ಸಚಿವಾಲಯ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಡಿ.1ರಿಂದ ಅನ್ವಯವಾಗುವಂತೆ ಈ ಮಾರ್ಗಸೂಚಿ ಪ್ರಕಟವಾಗಲಿದೆ. ಅಲ್ಲದೇ ಕಂಟೈನ್‌ಮೆಂಟ್ ವಲಯಗಳಲ್ಲಿ ಈ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಸೂಚಿಸಲಾಗಿದೆ.

  ಕೋವಿಡ್​ ಎರಡು, ಮೂರನೇ ಅಲೆಗೆ ದೆಹಲಿ, ಹರಿಯಾಣ, ಪಂಜಾಬ್​, ಮಹಾರಾಷ್ಟ್ರ ಸೇರಿದಂತೆ ಏಂಟು ರಾಜ್ಯಗಳು ತತ್ತಿರಿಸಿವೆ. ಈ ರಾಜ್ಯಗಳಲ್ಲಿ ನಿಯಂತ್ರಣಕ್ಕೆ ಬಂದಿದ್ದ ಸೋಂಕು ಒಮ್ಮೆಲ್ಲೆ ಹೆಚ್ಚಾಗಿದೆ.  ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಜನ ಸೇರುವುದಕ್ಕೆ ಹೆಚ್ಚುವರಿ ದಂಡ ಹಾಗೂ ನಿರ್ಬಂಧ ವಿಧಿಸಬಹುದು. ಆದರೆ, ಕಂಟೈನ್​ಮೆಂಟ್​ ವಲಯದ ಹೊರಗೆ ಯಾವುದೇ ಅನುಮತಿಯಿಲ್ಲದೇ ಲಾಕ್​ಡೌನ್​ ಮಾಡುವಂತಿಲ್ಲ.

  ಮಾಸ್ಕ್​ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು. ಮಾರುಕಟ್ಟೆ ಮತ್ತು ವಾರಾಂತ್ಯದ ಬಜಾರ್​ಗಳಿಗೆ ನಿಯಮ ಹೊರಡಿಸುವಂತಹ ಕಟ್ಟು ನಿಟ್ಟಿನ ಕ್ರಮವನ್ನು ಸರ್ಕಾರಗಳು ಜಾರಿಗೆ ಗೊಳಿಸುವಂತೆ ಸೂಚನೆ ನೀಡಲಾಗಿದೆ.  ಕಂಟೈನ್​ಮೆಟ್​ ವಲಯಗಳಲ್ಲಿ ಅಗತ್ಯ ಚಟುವಟಿಕೆಗಳಿಗೆ ಮಾತ್ರ ಅವಕಾಶ. ವೈದ್ಯಕೀಯ ತುರ್ತು ಸ್ಥಿತಿ ಹೊರತು ಪಡಿಸಿ ಹಾಗೂ ಅಗತ್ಯ ಸೇವೆ ಸರಕುಗಳ ಪೂರೈಕೆಗೆ ಮಾತ್ರ ಜನರು ಓಡಾಡುತ್ತಿದ್ದಾರೆ ಎಂಬುದನ್ನು ಖಾತ್ರಿ ಪಡಿಸಿ ಅವಕಾಶ ನೀಡುವುದು, ಇದಕ್ಕಾಗಿ ಕಣ್ಗಾವಲು ಕಾಯುವುದು

  ಅಂತಾರಾಷ್ಟ್ರೀಯ ವಿಮಾನ‌ಹಾರಾಟ ರದ್ದುಗೊಳಿಸಲಾಗಿದ್ದು, ಕಂಟೈನ್​ಮೆಂಟ್​ ವಲಯಗಳ ಚಿತ್ರಮಂದಿರಗಳಲ್ಲಿ ಶೇ.‌ 50ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ. ಈಜುಕೊಳ ವ್ಯಾಪಾರ ಪ್ರದರ್ಶನ ಹಾಲ್, ಸಾರ್ವಜನಿಕ ಕಾರ್ಯಕ್ರಮದಲ್ಲಿ 20 ಕ್ಕೂ ಹೆಚ್ಚು ಜನರಿಗೆ ಅವಕಾಶ ಇಲ್ಲ
  Published by:Seema R
  First published: