Maharashtra Crisis: ಶಿವಸೇನೆಯ ಬಂಡಾಯ ಶಾಸಕರಿಗೆ Y-plus CRPF ಭದ್ರತೆ ನೀಡಿದ ಕೇಂದ್ರ ಸರ್ಕಾರ

ರೆಸಾರ್ಟ್​​ನಲ್ಲಿ ಉಳಿದುಕೊಂಡಿರುವ ಶಿವಸೇನೆ ಬಂಡಾಯ ಶಾಸಕರಿಗೆ ಕೇಂದ್ರ ಸರ್ಕಾರ ಭದ್ರತೆ ಒದಗಿಸಿದೆ. ಮಹಾರಾಷ್ಟ್ರ ಸರ್ಕಾರ ಭದ್ರತೆ ಹಿಂಪಡೆದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ.

CRPF ಭದ್ರತೆ

CRPF ಭದ್ರತೆ

  • Share this:
ಮುಂಬೈ: ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿನ (Maharashtra Political Crisis) ಮಧ್ಯೆ, ಭಾರತೀಯ ಜನತಾ ಪಕ್ಷ (BJP) ನೇತೃತ್ವದ ಕೇಂದ್ರವು 15 ಬಂಡಾಯ ಶಿವಸೇನೆ ಶಾಸಕರಿಗೆ (Shiv Sena MLAs ) ಸಿಆರ್‌ಪಿಎಫ್ (CRPF) ಕಮಾಂಡೋಗಳ ವೈ-ಪ್ಲಸ್ (Y-plus) ಭದ್ರತೆಯನ್ನು ವಿಸ್ತರಿಸಿದೆ. ರೆಸಾರ್ಟ್​​ನಲ್ಲಿ ಉಳಿದುಕೊಂಡಿರುವ ಶಾಸಕರಾದ ರಮೇಶ್ ಬೋರ್ನಾರೆ, ಮಂಗೇಶ್ ಕುಡಾಲ್ಕರ್, ಸಂಜಯ್ ಶಿರ್ಸಾತ್, ಲತಾಬಾಯಿ ಸೋನಾವಾನೆ, ಪ್ರಕಾಶ್ ಸುರ್ವೆ ಸೇರಿದಂತೆ 10 ಮಂದಿ ವೈ ಪ್ಲಸ್​​​ ಭದ್ರತೆ ನೀಡಲಾಗಿದೆ. ಮಹಾರಾಷ್ಟ್ರದಲ್ಲಿ ವಾಸಿಸುವ ಶಾಸಕರ ಕುಟುಂಬಗಳಿಗೂ ಇದು ಭದ್ರತೆಯನ್ನು ಒದಗಿಸುತ್ತದೆ. ಶಿವಸೇನೆಯ ಭಿನ್ನಮತೀಯ ನಾಯಕ ಏಕನಾಥ್ ಶಿಂಧೆ ಅವರು ಮಹಾರಾಷ್ಟ್ರ ಸರ್ಕಾರವು ಅವರ ಕುಟುಂಬ ಸೇರಿದಂತೆ 38 ಪಕ್ಷದ ಬಂಡಾಯ ಶಾಸಕರ ನಿವಾಸಗಳಿಂದ ಭದ್ರತೆಯನ್ನು ಹಿಂತೆಗೆದುಕೊಂಡಿದೆ ಎಂದು ಆರೋಪಿಸಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ. ಗೃಹ ಸಚಿವರ ಈ ಕ್ರಮವನ್ನು "ರಾಜಕೀಯ ಸೇಡು" ಎಂದು ಟೀಕಿಸಿದರು. ಆದರೆ ಈ ಆರೋಪವನ್ನು ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್ ನಿರಾಕರಿಸಿದ್ದಾರೆ.

ಬಂಡಾಯ ಶಾಸಕ ಕುಟುಂಬಗಳಿಗೂ ಭದ್ರತೆ

ಆದರೆ ಇಂದು, ಕೇಂದ್ರ ಭದ್ರತಾ ಏಜೆನ್ಸಿಗಳು ಗೃಹ ಸಚಿವಾಲಯಕ್ಕೆ ಮಾಡಿದ ಶಿಫಾರಸಿನ ಮೇರೆಗೆ ಶಾಸಕರಿಗೆ ಭದ್ರತೆಯನ್ನು ಮಂಜೂರು ಮಾಡಲಾಗಿದೆ. ಮಹಾರಾಷ್ಟ್ರದ ಪ್ರಸ್ತುತ ರಾಜಕೀಯ ಸನ್ನಿವೇಶದಿಂದಾಗಿ ಶಾಸಕರು ಮತ್ತು ಅವರ ಕುಟುಂಬಗಳು ಬೆದರಿಕೆಯನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಸುಮಾರು ನಾಲ್ಕರಿಂದ ಐದು ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (ಸಿಆರ್‌ಪಿಎಫ್) ಕಮಾಂಡೋಗಳು, ಪಾಳಿಯಲ್ಲಿ ಪ್ರತಿ ಶಾಸಕರು ಮಹಾರಾಷ್ಟ್ರಕ್ಕೆ ಬಂದ ನಂತರ ಅವರನ್ನು ರಕ್ಷಿಸುತ್ತಾರೆ ಎಂದು ಅವರು ಹೇಳಿದರು.

ಇದನ್ನೂ ಓದಿ: Bypoll: ಪಂಜಾಬ್ ಉಪಚುನಾವಣೆಯಲ್ಲಿ AAPಗೆ ಭಾರೀ ಮುಖಭಂಗ; ಸಿಎಂ ಮಾನ್ ಕ್ಷೇತ್ರದಲ್ಲೇ ಸೋಲು!

ಬಂಡಾಯ ಶಾಸಕರ ಪತ್ರ

ಪ್ರಸ್ತುತ ಬಂಡಾಯ ಶಾಸಕರ ಜೊತೆಗೆ ಗುವಾಹಟಿಯಲ್ಲಿ ಬೀಡುಬಿಟ್ಟಿರುವ ಶಿಂಧೆ ಅವರು ಮತ್ತು ಇತರ ಶಾಸಕರು ಸಹಿ ಮಾಡಿರುವ ಪತ್ರವನ್ನು ಶನಿವಾರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ವಾಲ್ಸೆ ಪಾಟೀಲ್ ಅವರಿಗೆ ಬರೆದು ಟ್ವೀಟ್ ಮಾಡಿದ್ದಾರೆ. ಅವರ ಕುಟುಂಬ ಸದಸ್ಯರಿಗೆ ಯಾವುದೇ ಹಾನಿ ಉಂಟಾದರೆ ಸಿಎಂ ಠಾಕ್ರೆ ಮತ್ತು ಆಡಳಿತಾರೂಢ ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟದ ನಾಯಕರು ಹೊಣೆಯಾಗುತ್ತಾರೆ ಎಂದು ಶಾಸಕರು ಪತ್ರದಲ್ಲಿ ತಿಳಿಸಿದ್ದಾರೆ.

ಮಹಾರಾಷ್ಟ್ರದಲ್ಲಿನ ರಾಜಕೀಯ ಬಿಕ್ಕಟ್ಟಿನ ಚಿತ್ರಣ

ಶಿವಸೇನಾ ಪಕ್ಷದಲ್ಲಿನ ಭಿನ್ನಾಭಿಪ್ರಾಯವು ಆಡಳಿತಾರೂಢ ಎಂವಿಎ ಮೈತ್ರಿಕೂಟದ ಅಸ್ತಿತ್ವವನ್ನು ಅಪಾಯಕ್ಕೆ ತಳ್ಳಿದ್ದು,  ಮಹಾರಾಷ್ಟ್ರದಲ್ಲಿ ರಾಜಕೀಯ ಪ್ರಕ್ಷುಬ್ಧತೆ ಇಂದು 6ನೇ ದಿನಕ್ಕೆ ಕಾಲಿಟ್ಟಿದೆ. ಪಕ್ಷದ ವಿಪ್ ಪಾಲಿಸದ ಶಿಂಧೆ ಸೇರಿದಂತೆ 16 ಬಂಡಾಯ ಶಾಸಕರಿರು ಗುವಾಹಟಿಯಲ್ಲಿ ಬೀಡುಬಿಟ್ಟಿದ್ದಾರೆ. ಮಹಾರಾಷ್ಟ್ರ ಉಪ ಸ್ಪೀಕರ್ ನರಹರಿ ಝಿರ್ವಾಲ್ ಅವರು ಅನರ್ಹತೆ ನೋಟಿಸ್ ನೀಡಿದರೂ ಹಿರಿಯ ನಾಯಕ ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಬಣ ಪಟ್ಟು ಬಿಡುತ್ತಿಲ್ಲ. ಆದಾಗ್ಯೂ, ಉಪಸಭಾಪತಿ ವಿರುದ್ಧ ಬಂಡಾಯ ಪಾಳಯದಿಂದ ಪದಚ್ಯುತಿ ಪ್ರಸ್ತಾವನೆಯನ್ನು ಈಗಾಗಲೇ ಮಂಡಿಸಲಾಗಿದ್ದು, ಸಮನ್ಸ್ ಅನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಅಚಲ ಶಿಂಧೆ ಪಾಳಯ ಸಮರ್ಥಿಸಿಕೊಂಡಿದೆ.

ಶನಿವಾರ ನಡೆದ ಶಿವಸೇನೆಯ ರಾಷ್ಟ್ರೀಯ ಕಾರ್ಯಕಾರಿಣಿಯು "ಪಕ್ಷಕ್ಕೆ ದ್ರೋಹ ಬಗೆದವರ" ವಿರುದ್ಧ ಕ್ರಮ ಕೈಗೊಳ್ಳಲು ಸಿಎಂ ಮತ್ತು ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರಿಗೆ ಅಧಿಕಾರ ನೀಡುವ ನಿರ್ಣಯವನ್ನು ಅಂಗೀಕರಿಸಿದೆ. ಆದರೆ ಬಂಡಾಯ ನಾಯಕ ಏಕನಾಥ್ ಶಿಂಧೆ ವಿರುದ್ಧ ತಕ್ಷಣದ ಕ್ರಮ ಕೈಗೊಳ್ಳುವುದನ್ನು ತಪ್ಪಿಸಿದೆ. ರಾಜ್ಯದ ಕೆಲವೆಡೆ ಬಂಡಾಯ ಶಾಸಕರ ಕಚೇರಿ ಮೇಲೆ ದಾಳಿ ನಡೆಸಿದ ಘಟನೆಗಳು ನಡೆದಿವೆ. ಮಹಾ ವಿಕಾಸ್ ಅಘಾಡಿಯ ಹಿಡಿತದಿಂದ ಪಕ್ಷವನ್ನು ಉಳಿಸಲು ಅವರು ಹೋರಾಡುತ್ತಿದ್ದಾರೆ ಎಂಬುದನ್ನು ಶಿವಸೇನೆ ಕಾರ್ಯಕರ್ತರು ಅರ್ಥಮಾಡಿಕೊಳ್ಳಬೇಕು ಎಂದು ಶಿಂಧೆ ಹಿಂಸಾತ್ಮಕ ಘಟನೆಗಳಿಗೆ ಪ್ರತಿಕ್ರಿಯಿಸಿದರು.
Published by:Kavya V
First published: