Farmers Protest: ರಿಹಾನಾ, ಗ್ರೇಟಾ ಥನ್ಬರ್ಗ್​ ವಿರುದ್ಧ ಕೇಂದ್ರ ಸರ್ಕಾರ ಸಚಿನ್​ ತೆಂಡೂಲ್ಕರ್​ರನ್ನು ಕಣಕ್ಕಿಳಿಸಿದೆ; ಆರ್​ಜೆಡಿ ಆರೋಪ

ಆರ್​ಜೆಡಿ ನಾಯಕ ಶಿವಾನಂದ ತಿವಾರಿ ಅವರ ಹೇಳಿಕೆಯು ಬಿಹಾರದ ಆಡಳಿತಾರೂಢ ಬಿಜೆಪಿ ಮತ್ತು ಅದರ ಮಿತ್ರ ಪಕ್ಷ ಜೆಡಿಯುವನ್ನು ಕೆರಳಿಸಿದ್ದು, ತಿವಾರಿ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದೆ ಎಂದು ಎಎನ್‌ಐ ವರದಿ ಮಾಡಿದೆ.

ದೆಹಲಿಯಲ್ಲಿ ರೈತರ ಪ್ರತಿಭಟನೆ.

ದೆಹಲಿಯಲ್ಲಿ ರೈತರ ಪ್ರತಿಭಟನೆ.

 • Share this:
  ಪಾಟ್ನಾ (ಫೆಬ್ರವರಿ 05); ಭಾರತದ ಕೃಷಿ ಕಾಯ್ದೆಯ ವಿರುದ್ಧ ಮತ್ತು ರೈತ ಹೋರಾಟವನ್ನು ಬೆಂಬಲಿಸಿ ರೆಹಾನಾ, ಗ್ರೇಟಾ ಥನ್ಬರ್ಗ್​ ಸೇರಿದಂತೆ ಅನೇಕ ಅಂತಾರಾಷ್ಟ್ರೀಯ ಗಣ್ಯರು ಧ್ವನಿ ಎತ್ತುತ್ತಿದ್ದಾರೆ. ಆದರೆ, ಈ ಗಣ್ಯರ ವಿರುದ್ಧ ಕೇಂದ್ರ ಸರ್ಕಾರ ಇದೀಗ ಮಾಜಿ ಕ್ರಿಕೆಟ್​ ಆಟಗಾರ ಸಚಿನ್​ ತೆಂಡೂಲ್ಕರ್​ ಅವರನ್ನು ಕಣಕ್ಕಿಳಿಸಿದೆ ಎಂದು ಆರ್​ಜೆಡಿ ಪಕ್ಷದ ನಾಯಕ ಶಿವಾನಂದ ತಿವಾರಿ ಇಂದು ಆರೋಪಿಸಿದ್ದಾರೆ. ಭಾರತದ ರೈತ ಹೋರಾಟವನ್ನು ಬೆಂಬಲಿಸಿ ಖ್ಯಾತ ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ್​ ಮತ್ತು ಪಾಪ್ ಸಿಂಗರ್ ರಿಹಾನಾ ಕಳೆದ ಬುಧವಾರ ಟ್ವೀಟ್ ಮಾಡಿದ್ದರು. ಆದರೆ, ಇದನ್ನು ಖಂಡಿಸಿ ಕ್ರಿಕೆಟರ್‌ಗಳಾದ ಸಚಿನ್ ತೆಂಡೂಲ್ಕರ್, ರವಿಶಾಸ್ತ್ರಿ, ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟರಾದ ಅಕ್ಷಯ್ ಕುಮಾರ್, ಅಜಯ್ ದೇವಗನ್​ ಮತ್ತು ಕಂಗನಾ ರಣಾವತ್ ಸೇರಿ ಅನೇಕರು ಟ್ವೀಟ್​ ಮೂಲಕ ಸಮರ ಸಾರಿದ್ದರು.

  ಭಾರತದ ಕ್ರಿಕೆಟರ್​​ಗಳ ಮತ್ತು ಬಾಲಿವುಡ್​ ಸಿನಿಮಾ ತಾರೆಯರ ಟ್ವೀಟ್​ಗಳಿಗೆ ನಟಿಯರಾದ ತಾಪ್ಸಿ ಪನ್ನು ಮತ್ತು ಸ್ವರಾ ಭಾಸ್ಕರ್​ ಖಂಡಿಸಿದ ಬೆನ್ನಿಗೆ ಈ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಆರ್‌ಜೆಡಿಯ ರಾಷ್ಟ್ರೀಯ ಉಪಾಧ್ಯಕ್ಷರಾದ ಶಿವಾನಂದ ತಿವಾರಿ, "ಕ್ರಿಕೆಟರ್​ ಸಚಿನ್​ ಅಂಥವರಿಂದ ಹೇಳಿಕೆಗಳನ್ನು ಕೊಡಿಸುವ ಮೂಲಕ ರೈತರ ಹೋರಾಟಕ್ಕೆ ಜಗತ್ತು ಕುರುಡಾಗಿರಬೇಕು ಎಂದು ಕೇಂದ್ರ ಬಯಸುತ್ತಿದೆಯೇ” ಎಂದು ಪ್ರಶ್ನಿಸಿದ್ದಾರೆ.

  "ರೈತರಿಗೆ ಟ್ವಿಟರ್ ಬಗ್ಗೆ ಗೊತ್ತಿಲ್ಲ. ಟ್ವಿಟರ್ ರಾಜಕೀಯ ಇತ್ತೀಚೆಗೆ ಪ್ರಾರಂಭವಾಗಿದೆ. ಎಲ್ಲರೂ ಇದನ್ನು ಬಳಸಿಕೊಳ್ಳುತ್ತಿದ್ದಾರೆ. ಗ್ರೇಟಾ ಥನ್ಬರ್ಗ್​‌ ಅಥವಾ ರಿಹಾನಾ ಬಗ್ಗೆ ರೈತರಿಗೆ ಏನು ಗೊತ್ತು? ನೀವು ಅವರ ವಿರುದ್ಧ ಸಚಿನ್ ತೆಂಡೂಲ್ಕರ್ ಅವರನ್ನು ಕಣಕ್ಕಿಳಿಸಿದ್ದೀರಿ" ಎಂದು ತಿವಾರಿ ವಾಗ್ದಾಳಿ ನಡೆಸಿದ್ದಾರೆ.

  ತಿವಾರಿ ಅವರ ಹೇಳಿಕೆಯು ಬಿಹಾರದ ಆಡಳಿತಾರೂಢ ಬಿಜೆಪಿ ಮತ್ತು ಅದರ ಮಿತ್ರ ಪಕ್ಷ ಜೆಡಿಯುವನ್ನು ಕೆರಳಿಸಿದ್ದು, ತಿವಾರಿ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದೆ ಎಂದು ಎಎನ್‌ಐ ವರದಿ ಮಾಡಿದೆ.

  ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ದೆಹಲಿ ಪೊಲೀಸರು ಘರ್ಷಣೆ ನಡೆಸಿದ ನಂತರ ಅಲ್ಲಿ ಇಂಟರ್ನೆಟ್ ಕಡಿತಗೊಳಿಸಿರುವುದನ್ನು ಉಲ್ಲೇಖಿಸಿ ಸಿಎನ್‌ಎನ್ ಹೋರಾಟದ ಬಗ್ಗೆ ವರದಿ ಮಾಡಿತ್ತು. ಇದನ್ನು ತನ್ನ ಟ್ವಿಟ್ಟರ್‌ನಲ್ಲಿ ಶೇರ್‌ ಮಾಡಿದ್ದ ಪಾಪ್ ತಾರೆ ರಿಹಾನಾ "ರೈತ ಹೋರಾಟದ ಬಗ್ಗೆ ನಾವೇಕೆ ಮಾತನಾಡುತ್ತಿಲ್ಲ" ಎಂದು ಪ್ರಶ್ನಿಸಿದ್ದರು.

  ಇದನ್ನೂ ಓದಿ: Farmers Protest: ರಿಹಾನಾ ಅವರ ಮುಂದಿನ ವಿಡಿಯೋದಲ್ಲಿ ನೀವಿರುತ್ತೀರಿ; ತಾಪ್ಸಿ, ಸ್ವರ ಭಾಸ್ಕರ್​ ಬೆನ್ನಿಗೆ ನಿಂತ ಅಭಯ್​ ಡಿಯೋಲ್

  ರಿಹಾನಾ ಟ್ವೀಟ್ ಮಾಡಿದ ನಂತರ ಹೋರಾಟವು ಜಾಗತಿಕವಾಗಿ ಸದ್ದು ಮಾಡಿದ್ದು ಹಲವಾರು ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳು ರೈತ ಹೋರಾಟದ ಪರವಾಗಿ ಟ್ವೀಟ್ ಮಾಡಿದ್ದರು. ಇದರಿಂದ ಅಸಮಧಾನಗೊಂಡಿದ್ದ ಕೇಂದ್ರ ಸರ್ಕಾರ ರೈತರ ಸಮಸ್ಯೆಯು ದೇಶದ ಆಂತರಿಕ ವಿಷಯ, ವಿದೇಶಿಯರು ತಲೆ ಹಾಕಬಾರದು ಎಂದು ಹೇಳಿತ್ತು. ಜೊತೆಗೆ ರೈತರನ್ನು ಬೆಂಬಲಿಸಿದ ಹ್ಯಾಶ್‌ಟ್ಯಾಗ್‌ಗಳ ವಿರುದ್ದ ಕೆಲವು ಹ್ಯಾಶ್‌ಟ್ಯಾಗ್‌ಗಳನ್ನು ನೀಡಿತ್ತು. ಇದನ್ನು ಅನುಸರಿಸಿ ಭಾರತೀಯ ಸೆಲೆಬ್ರಿಟಿಗಳು ಸರ್ಕಾರದ ಪರ ಬ್ಯಾಟ್ ಬೀಸಿದ್ದರು.

  ಈ ಮಧ್ಯೆ ರೈತ ಹೋರಾಟದ ಪರವಾಗಿ ಮಾತನಾಡಿದ್ದ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ್​, ತನ್ನ ಟ್ವೀಟ್‌ ಒಂದರಲ್ಲಿ ಹೋರಾಟಕ್ಕೆ ಹೇಗೆ ಬೆಂಬಲಿಸಬಹುದು ಎಂಬ ಟೂಲ್‌ಕಿಟ್‌ ಅನ್ನು ಹಂಚಿಕೊಂಡಿದ್ದರು. ಇದೀಗ ಪೊಲೀಸರು ಈ ಟೂಲ್‌‌ಕಿಟ್‌ ಅನ್ನು ರಚಿಸಿದವರ ಮೇಲೆ ಎಫ್‌ಐಆರ್‌ ದಾಖಲಿಸಿದ್ದಾರೆ. ಗ್ರೇಟಾ ಅವರನ್ನು ಬೆಂಬಲಿಸಿ ಸೆಲಬ್ರಿಟಿಗಳಾದ ಸೋನಾಕ್ಷಿ ಸಿನ್ಹಾ, ತಾಪ್ಸಿ ಪನ್ನು, ರಮ್ಯಾ, ಮನೋಜ್ ತಿವಾರಿ, ರೋಹಿತ್ ಶರ್ಮಾ ಮುಂತಾದವರು ಟ್ವೀಟ್ ಮಾಡಿದ್ದಾರೆ.
  Published by:MAshok Kumar
  First published: