World Peace Conference: ಸಿಎಂ ಮಮತಾ ಬ್ಯಾನರ್ಜಿ ಇಟಲಿ ಪ್ರವಾಸಕ್ಕೆ ಕೇಂದ್ರದ ಅಡ್ಡಗಾಲು ಏಕೆ?

Mamata Banerjee V/S central government: ಟಿಎಂಸಿ (TMC) ವಕ್ತಾರ ದೇಬ್ಗಾಂಶು ಭಟ್ಟಾಚಾರ್ಯ ದೇವ್ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇಟಲಿ ಪ್ರವಾಸಕ್ಕೆ ಪ್ರಧಾನಿ ಮೋದಿ (PM Narendra Modi)ತಡೆ ನೀಡಿದ್ದು ಯಾಕೆ ಎಂದು ಅರ್ಥವಾಗುತ್ತಿಲ್ಲ? ಬಂಗಾಳದ ಜೊತೆ ನಿಮಗಿರುವ ಸಮಸ್ಯೆಯಾದರು ಏನು ಎಂದು ಭಟ್ಟಾಚಾರ್ಯ ಪ್ರಶ್ನೆ ಮಾಡಿದ್ದಾರೆ.

ಮಮತಾ ಬ್ಯಾನರ್ಜಿ- ಪ್ರಧಾನಿ ಮೋದಿ

ಮಮತಾ ಬ್ಯಾನರ್ಜಿ- ಪ್ರಧಾನಿ ಮೋದಿ

  • Share this:
ನವದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (CM Mamata Banerjee) ಅವರ ಇಟಲಿ ಪ್ರವಾಸಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಲು ಹಿಂದೇಟು ಹಾಕಿದೆ. ಸಿಎಂ ಮಮತಾ ಬ್ಯಾನರ್ಜಿ ವ್ಯಾಟಿಕನ್ ನಲ್ಲಿ ನಡೆಯುವ ವಿಶ್ವ ಶಾಂತಿ ಸಮ್ಮೇಳನದಲ್ಲಿ (peace conference in Italy) ಭಾಗಿಯಾಗಲು ನಿರ್ಧರಿಸಿದ್ದರು. ಈ ಕಾರ್ಯಕ್ರಮ ಮದರ್ ಥೆರೇಸಾ ಅವರ ಆಧಾರಿತವಾಗಿದೆ. ವರದಿಗಳ ಪ್ರಕಾರ, ಕೇಂದ್ರದ ಈ ನಿರ್ಧಾರವನ್ನು ರಾಜಕೀಯವಾಗಿ ಗಮಮನಿಸಿದ್ರೆ, ಈ ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿಯೊಬ್ಬರು ಭಾಗಿಯಾಗವುದು ಸೂಕ್ತವಲ್ಲ ಎನ್ನಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಜರ್ಮನ್ ಚಾನ್ಸಲರ್ ಏಂಜೆಲಾ ಮಾರ್ಕೆಲ್ (German Chancellor Angela Merkel), ಪೋಪ್ ಫ್ರಾನ್ಸಿಸ್ (Pope Francis) ಮತ್ತು ಇಟಲಿ ಪ್ರಧಾನ ಮಂತ್ರಿ ಮಾರಿಯೋ ಡ್ರೈಗಿ (Italian Prime Minister Mario Draghi) ಸಹ ಭಾಗಿಯಾಗಿದ್ದಾರೆ.

ಇಟಲಿ ಪ್ರವಾಸಕ್ಕೆ ಅಡ್ಡಿ ಯಾಕೆ?

ಟಿಎಂಸಿ (TMC) ವಕ್ತಾರ ದೇಬ್ಗಾಂಶು ಭಟ್ಟಾಚಾರ್ಯ ದೇವ್ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಟ್ವೀಟ್ ಮೂಲಕ ಕೇಂದ್ರದ ವಿರುದ್ಧ ಆಕ್ರೋಶ ಹೊರಹಾಕಿರುವ ಭಟ್ಟಾಚಾರ್ಯ, ಕೇಂದ್ರ ಸರ್ಕಾರ ಸಿಎಂ ಬ್ಯಾನರ್ಜಿಯವರ ರೋಮ್ ಪ್ರವಾಸಕ್ಕೆ ಅನುಮತಿ ನೀಡಿಲ್ಲ. ಈ ಮೊದಲು ಚೀನಾಗೆ ತೆರಳಲು ಅನುಮತಿ ನೀಡಲಿಲ್ಲ. ನಾವು ಅಂತರಾಷ್ಟ್ರೀಯ ಸಂಬಂಧ ಮತ್ತು ಭಾರತದ ಹಿತವನ್ನು ಗಮನದಲ್ಲಿಟ್ಟುಕೊಂಡು ಎಲ್ಲ ನಿರ್ಧಾರಗಳನ್ನು ಒಪ್ಪಿಕೊಳ್ಳುತ್ತಾ ಬಂದಿದ್ದೇವೆ. ಈಗ ಇಟಲಿ ಪ್ರವಾಸಕ್ಕೆ ಪ್ರಧಾನಿ ಮೋದಿ (PM Narendra Modi)ತಡೆ ನೀಡಿದ್ದು ಯಾಕೆ ಎಂದು ಅರ್ಥವಾಗುತ್ತಿಲ್ಲ? ಬಂಗಾಳದ ಜೊತೆ ನಿಮಗಿರುವ ಸಮಸ್ಯೆಯಾದರು ಏನು ಎಂದು ಭಟ್ಟಾಚಾರ್ಯ ಪ್ರಶ್ನೆ ಮಾಡಿದ್ದಾರೆ.

ಕಮ್ಯೂನಿಟಿ ಆಫ್ ಸೇಂಟ್ ಏಗಿಡಿಯೋದಿಂದ ದೀದಿಗೆ ಆಹ್ವಾನ

ಕಮ್ಯೂನಿಟಿ ಆಫ್ ಸೇಂಟ್ ಏಗಿಡಿಯೋದ (Community of Sant'Egidio) ಅಧ್ಯಕ್ಷ ಪ್ರೊಫೆಸರ್ ಮಾರ್ಕೋ ಇಂಪಾಗ್ಲಿಯಾಜೋ (Community of Sant'Egidio) ಅಕ್ಟೋಬರ್ 6 ಮತ್ತು 7ರಂದು ನಡೆಯುವ ಕಾರ್ಯಕ್ರಮಕ್ಕೆ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಆಹ್ವಾನ ನೀಡಿದ್ದರು. ಆಮಂತ್ರಣ ಪತ್ರಿಕೆಯಲ್ಲಿ ಟಿಎಂಸಿ ಪ್ರಮುಖರೆಲ್ಲರಿಗೂ ವಿಧಾನಸಭೆ ಚುನಾವಣೆಯ (West Bengal Election Results) ಗೆಲುವಿಗೆ ಶುಭಾಶಯ ಸಹ ತಿಳಿಸಲಾಗಿತ್ತು. ಇನ್ನೂ ಇದೇ ಪತ್ರದಲ್ಲಿ ಮಮತಾ ಬ್ಯಾನರ್ಜಿಯವರು ಕಳೆದ 10 ವರ್ಷಗಳ ಸಮಾಜ ಸೇವೆ, ದೇಶದ ಅಭಿವೃದ್ಧಿ ಮತ್ತು ಶಾಂತಿ ರಕ್ಷಣೆ ಕುರಿತ ಕಾರ್ಯವೈಖರಿಗೂ ಅಭಿನಂದನೆ ಸಲ್ಲಿಸಲಾಗಿತ್ತು.

1987ರಿಂದ ಪ್ರತಿ ವರ್ಷ ನಡೆಯುತ್ತೆ ಈ ಕಾರ್ಯಕ್ರಮ

ಕಮ್ಯೂನಿಟಿ ಆಫ್ ಸೇಂಟ್ ಏಗಿಡಿಯೋ ವಿಶ್ವದಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ 1987ರಿಂದ ಪ್ರತಿ ವರ್ಷ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ವಿಶೇಷ ಪ್ರಾರ್ಥನೆ ಸಲ್ಲಿಸುತ್ತದೆ. ಈ ವಿಶೇಷ ಪ್ರಾರ್ಥನೆಯಲ್ಲಿ ಭಾಗಿಯಾಗಲು ವಿಶ್ವದ ಪ್ರಮುಖ ಗಣ್ಯರು ಆಗಮಿಸುತ್ತಾರೆ. ಅಂತರಾಷ್ಟ್ರೀಯ ಶಾಂತಿ ಕಾನ್ಫೆರೆನ್ಸ್ ನಲ್ಲಿ ಭಾಗವಹಿಸುವ ಮೊದಲ ಅವಕಾಶ ಮಮತಾ ಬ್ಯಾನರ್ಜಿ ಅವರಿಗೆ ಲಭ್ಯವಾಗಿತ್ತು.

ಇದನ್ನೂ ಓದಿ: Punjab Cabinet List: ಪಂಜಾಬ್ ಕ್ಯಾಬಿನೆಟ್ ಫೈನಲ್; ಅಮರೀಂದರ್ ಆಪ್ತರಿಗೆ ಕೊಕ್, 7 ಹೊಸ ಮುಖಗಳಿಗೆ ಮಣೆ

 ರೋಮ್ ತೆರಳಿದ್ರು ದೀದಿ

ಇದಕ್ಕೂ ಮೊದಲು ಮದರ್ ಥೆರೆಸಾ (Mother Teresa) ಅವರ ಕಾರ್ಯಕ್ರಮದಲ್ಲಿ ಭಾಗಿಯಾಗಲು ಮಮತಾ ಬ್ಯಾನರ್ಜಿ ರೋಮ್‍ಗೆ ತೆರಳಿದ್ದರು. ವ್ಯಾಟಿಕನ್ ಸಿಟಿಯ (vatican city) ಸೇಂಟ್ ಪೀಟರ್ಸ್ ಸ್ಕವೈರ್ ನಲ್ಲಿ ಆಯೋಜಿತ ಕಾರ್ಯಕ್ರಮದಲ್ಲಿ ಮದರ್ ಥೆರೆಸಾ ಅವರಿಗೆ ಸಂತ (Saint)ಪದವಿ ನೀಡಿ ಗೌರವಿಸಲಾಗಿತ್ತು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದರಿಂದ ಮಮತಾ ಬ್ಯಾನರ್ಜಿ ಅವರನ್ನು ಆಹ್ವಾನಿಸಲಾಗಿತ್ತು.

2018ರಲ್ಲಿ ಇಟಲಿ, ಜರ್ಮನಿಗೆ ತೆರಳಿದ್ರು ಮಮತಾ ಬ್ಯಾನರ್ಜಿ

2018ರಲ್ಲಿ ಮಮತಾ ಬ್ಯಾನರ್ಜಿ ಇಟಲಿ ಮತ್ತು ಜರ್ಮನಿಯ ಪ್ರವಾಸ ಕೈಗೊಂಡಿದ್ದರು. ಜರ್ಮನಿಯಲ್ಲಿ ಇಂಡೋ-ಜರ್ಮನ್ ಕಾಮರ್ಸ್ ಇಂಡಸ್ಟ್ರಿಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ತದನಂತರ ಇಟಲಿಯ ಶರದೋತ್ಸವ ಹಾಗೂ ವಿಶ್ವ ಬಂಗ್ ವಾಣಿಜ್ಯ ಸಮ್ಮೇಳನದಲ್ಲಿ ಭಾಗಿಯಾಗಿದ್ದರು.

ಮಹ್ಮದ್ ರಫೀಕ್ ಕೆ
Published by:Kavya V
First published: