ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಕೇಂದ್ರ ಸರ್ಕಾರದ ವಿರುದ್ದ ಮತ್ತೊಮ್ಮೆ ಗುಡುಗಿದ್ದಾರೆ. ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು ಮತ್ತು ಭಾರತದಲ್ಲಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯದ ಬಗ್ಗೆ ಕೇಂದ್ರವು ಕಣ್ಣು ಮುಚ್ಚಿಕೊಂಡು ನಾಟಕವಾಡುತ್ತದೆ ಎಂದು ಹೇಳಿದರು.
ಒಂದು ವರದಿಯ ಪ್ರಕಾರ, ಭಾರತದಲ್ಲಿ ಒಂಬತ್ತು ಹೆಣ್ಣು ಮಕ್ಕಳಲ್ಲಿ ಒಬ್ಬರು 5 ವರ್ಷಕ್ಕಿಂತ ಮೊದಲೇ ಸಾಯುತ್ತಾರೆ. ಇಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಗಳು ಮತ್ತು ಅಪರಾಧಗಳು ದಿನ . ಆದರೆ, ಅವರು (ಕೇಂದ್ರ) ಅಫ್ಘಾನಿಸ್ತಾನದಲ್ಲಿ ಮಹಿಳೆಯರಿಗೆ ಏನಾಗುತ್ತಿದೆ ಎಂದು ಚಿಂತೆ ಮಾಡ್ತಾ ಕೂತಿದ್ದಾರೆ. ಇದು ಇಲ್ಲಿ ನಮ್ಮಲ್ಲಿ ನಡೆಯುತ್ತಿಲ್ಲವೇ? ಎಂದು "ಒವೈಸಿ ಹೇಳಿದರು. ಹಾಗೂ ಹರ್ದೋಯಿ ಪ್ರಕರಣವನ್ನೂ ಉಲ್ಲೇಖಿಸಿ ಕಿಡಿ ಕಾರಿದರು.
ಪ್ರವಾದಿ ಮೊಹಮ್ಮದ್ ಅವರ ಮೊಮ್ಮಗ ಹಜರತ್ ಇಮಾಮ್ ಹುಸೇನ್ ಅವರ ಹುತಾತ್ಮ ದಿನವನ್ನು ಆಚರಿಸಲು ಹೈದರಾಬಾದ್‌ನಲ್ಲಿ ಗುರುವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಒವೈಸಿ ಮಾತನಾಡಿದರು.
ಕಾಬೂಲ್ ಮೂಲಕ ಇರಾನ್‌ಗೆ ರಸ್ತೆ ಸಂಪರ್ಕ ಕಲ್ಪಿಸುವ ಚೀನಾದ ಉದ್ದೇಶಿತ ಯೋಜನೆಗಳನ್ನು ಉಲ್ಲೇಖಿಸಿದ ಒವೈಸಿ, "ಇದನ್ನು ನಿಲ್ಲಿಸಲು ನೀವು (ಪ್ರಧಾನಿ) ಏನು ಮಾಡುತ್ತಿದ್ದೀರಿ? ರಷ್ಯಾ, ಉಜ್ಬೇಕಿಸ್ತಾನ್, ತುರ್ಕಮೆನಿಸ್ತಾನ್, ತಜಕಿಸ್ತಾನ್, ಅಮೆರಿಕದೊಂದಿಗಿನ ಕ್ವಾಡ್ ಒಪ್ಪಂದದ ಮೂಲಕ, ತಜಕಿಸ್ತಾನ್, ಉಜ್ಬೇಕಿಸ್ತಾನ್, ತುರ್ಕಮೆನಿಸ್ತಾನ್ ಮೂಲಕ ಕಾಬೂಲ್ ಗೆ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಅಮೆರಿಕ ಇದನ್ನು ಮಾಡಿದೆ. ಮತ್ತು ನೀವು ಟ್ರಂಪ್ ಅನ್ನು ತಬ್ಬಿಕೊಳ್ಳುವಲ್ಲಿ ನಿರತರಾಗಿದ್ದೀರಿ ಎಂದು ಮೋದಿಯನ್ನು ವ್ಯಂಗ್ಯವಾಡಿದ್ದಾರೆ.
ಅಫ್ಘಾನಿಸ್ತಾನದಿಂದ ಸಿಖ್ಖರು ಮತ್ತು ಹಿಂದೂಗಳಿಗೆ ಭಾರತ ಆಶ್ರಯ ನೀಡಬೇಕು ಎಂಬ ಮೋದಿ ಸರ್ಕಾರದ ಹೇಳಿಕೆಯನ್ನು ಉಲ್ಲೇಖಿಸಿದ ಒವೈಸಿ, ಸರ್ಕಾರವು ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ಮೊದಲು ಗಮನ ಹರಿಸಬೇಕು, ಎಂದಿದ್ದಾರೆ.
ಇದನ್ನೂ ಓದಿ: ಬದುಕು ಕಟ್ಟಿಕೊಳ್ಳಲು ಸಮಾಜದಲ್ಲಿ ಮಹಿಳೆಯರು ಪ್ರತಿ ಕ್ಷಣವೂ ಹೋರಾಡಬೇಕಿದೆ: ನಟಿ ಶಿಲ್ಪಾ ಶೆಟ್ಟಿ ವಿಡಿಯೋ ವೈರಲ್
ಈ ವಾರದ ಆರಂಭದಲ್ಲಿ, ಮೋದಿ ಸರ್ಕಾರವು ತಾಲಿಬಾನ್ ಜೊತೆ ಸರಿಯಾದ ಮಾತುಕತೆ ಆರಂಭಿಸಿಲ್ಲ ಎಂದು ಟೀಕಿಸಿದ್ದರು. "ಭಾರತವು ಮಾತುಕತೆ ಮಾಡಬೇಕಿತ್ತು. ನಾವು ತಾಲಿಬಾನ್ ಜೊತೆ ಅನೌಪಚಾರಿಕ ಅಥವಾ ಔಪಚಾರಿಕ ಮಾತುಕತೆಗಳನ್ನು ಆರಂಭಿಸಬೇಕಿತ್ತು. ನಾವು ಸಮಯ ಕಳೆದುಕೊಂಡೆವು. ಕಳೆದ ಏಳು ವರ್ಷಗಳಿಂದ ಮೋದಿ ಸರ್ಕಾರ ಏನಾಗುತ್ತಿದೆ ಎಂಬುದನ್ನು ಕಲ್ಪಿಸಿಕೊಳ್ಳಲು ವಿಫಲವಾಗಿದೆ "ಎಂದು ಓವೈಸಿ ಆಗಸ್ಟ್ 16 ರಂದು ಹೇಳಿದ್ದನ್ನು ದಿ ನ್ಯೂಸ್ ಮಿನಿಟ್ ಉಲ್ಲೇಖಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ