ಕೇರಳ ಪ್ರವಾಹ; ಕೇಂದ್ರ ಸರ್ಕಾರದಿಂದ 3048 ಕೋಟಿ ರೂ. ಪರಿಹಾರ ಬಿಡುಗಡೆ

ಕೇರಳದ ಪ್ರವಾಹಕ್ಕೆ ಪರಿಹಾರದ ಜೊತೆಗೆ ಸೈಕ್ಲೋನ್​ ದಾಳಿಗೆ ತುತ್ತಾಗಿರುವ ಆಂಧ್ರಪ್ರದೇಶಕ್ಕೆ 539 ಕೋಟಿ ರೂ. ಹಾಗೂ ಪ್ರವಾಹಕ್ಕೆ ತುತ್ತಾಗಿದ್ದ ನಾಗಾಲ್ಯಾಂಡ್​ಗೆ 131 ಕೋಟಿ ರೂ. ಪರಿಹಾರವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.

sushma chakre | news18
Updated:December 7, 2018, 12:01 PM IST
ಕೇರಳ ಪ್ರವಾಹ; ಕೇಂದ್ರ ಸರ್ಕಾರದಿಂದ 3048 ಕೋಟಿ ರೂ. ಪರಿಹಾರ ಬಿಡುಗಡೆ
ಸಾಂದರ್ಭಿಕ ಚಿತ್ರ
sushma chakre | news18
Updated: December 7, 2018, 12:01 PM IST
ತಿರುವನಂತಪುರಂ (ಡಿ. 7): ಈ ಬಾರಿಯ ಭಾರೀ ಮಳೆಗೆ ಕೇರಳದ 14 ಜಿಲ್ಲೆಗಳು ಸಂಪೂರ್ಣ ಮುಳುಗಿಹೋಗಿತ್ತು. ಸುಮಾರು 488 ಜನರು ಪ್ರವಾಹಕ್ಕೆ ಸಿಕ್ಕಿ ಸಾವನ್ನಪ್ಪಿದ್ದರು. ನೂರಾರು ಎಕರೆ ಜಮೀನು, ಮನೆಗಳು ಕೊಚ್ಚಿಹೋಗಿದ್ದವು. ಕೇರಳದ ಇತಿಹಾಸದಲ್ಲೇ ಅತಿ ಭೀಕರವೆನ್ನಲಾದ ಈ ಪ್ರವಾಹದಿಂದ ರಾಜ್ಯಕ್ಕೆ ಅಪಾರ ಹಾನಿಯಾಗಿರುವುದರಿಂದ 4,700 ಕೋಟಿ ಪರಿಹಾರ ಧನ ಬಿಡುಗಡೆ ಮಾಡಬೇಕೆಂದು ಕೇರಳ ಸಿಎಂ ಪಿಣರಾಯ್​ ವಿಜಯನ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು.

ಇದೀಗ, ಕೇರಳಕ್ಕೆ ಕೇಂದ್ರ ಸರ್ಕಾರದಿಂದ 3,048 ಕೋಟಿ ರೂ. ಪರಿಹಾರ ಮೊತ್ತವನ್ನು ಬಿಡುಗಡೆ ಮಾಡಲಾಗಿದೆ. ಇದರ ಜೊತೆಗೆ ಸೈಕ್ಲೋನ್​ ದಾಳಿಗೆ ತುತ್ತಾಗಿರುವ ಆಂಧ್ರಪ್ರದೇಶಕ್ಕೆ 539 ಕೋಟಿ ರೂ. ಹಾಗೂ ಪ್ರವಾಹಕ್ಕೆ ತುತ್ತಾಗಿದ್ದ ನಾಗಾಲ್ಯಾಂಡ್​ಗೆ 131 ಕೋಟಿ ರೂ. ಪರಿಹಾರ ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ: ಸಿಎಂ ವಸುಂಧರಾ ಫಿಟ್​ನೆಸ್ ಬಗ್ಗೆ ಶರದ್​ ಯಾದವ್ ಕಮೆಂಟ್​; ಭಾಷೆ ಮೇಲೆ ಹಿಡಿತವಿರಲಿ ಎಂದ ರಾಜೇ

ಗೃಹ ಸಚಿವ ರಾಜನಾಥ ಸಿಂಗ್​ ನೇತೃತ್ವದ ಉನ್ನತ ಮಟ್ಟದ ಸಮಿತಿ ಈ ಮೂರು ರಾಜ್ಯಗಳಿಗೆ ಆಗಿರುವ ಹಾನಿಯನ್ನು ಪರಿಶೀಲಿಸಿ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡಲು ಶಿಫಾರಸು ಮಾಡಿತ್ತು. ಆ ಹಿನ್ನೆಲೆಯಲ್ಲಿ ನಿನ್ನೆ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡಲಾಗಿದೆ.

ಆದರೆ, ಕೇರಳ ಸರ್ಕಾರ ಕೇಂದ್ರ ಸರ್ಕಾರದಿಂದ 4,700 ಕೋಟಿ ರೂ. ಪರಿಹಾರದ ಬದಲಾಗಿ 3048 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಲಾಗಿದೆ. ಇನ್ನೂ ಹೆಚ್ಚುವರಿ ಹಣ ಬಿಡುಗಡೆಯಾಗುವ ಬಗ್ಗೆ ಯಾವುದೇ ಭರವಸೆ ನೀಡಲಾಗಿಲ್ಲ.

ಇದನ್ನೂ ಓದಿ: ರಸ್ತೆ ಗುಣಮಟ್ಟ ಕೆಟ್ಟದಾಗಿದ್ದರೆ, ಗುತ್ತಿಗೆದಾರರ ಮೇಲೆ ಹರಿಯಲಿದೆ ಬುಲ್ಡೋಜರ್​; ನಿತಿನ್​ ಗಡ್ಕರಿ ಎಚ್ಚರಿಕೆ

First published:December 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ