News18 India World Cup 2019

ಜಮ್ಮು - ಕಾಶ್ಮೀರ ಸೇರಿದಂತೆ ಏಳು ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕ

news18
Updated:August 21, 2018, 7:54 PM IST
ಜಮ್ಮು - ಕಾಶ್ಮೀರ ಸೇರಿದಂತೆ ಏಳು ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕ
ಜಮ್ಮು - ಕಾಶ್ಮೀರ ರಾಜ್ಯಪಾಲರಾಗಿ ನೇಮಕರಾದ ಸತ್ಯಪಾಲ್​ ಮಲಿಕ್​
news18
Updated: August 21, 2018, 7:54 PM IST
ನವದೆಹಲಿ (ಆಗಸ್ಟ್​ 21): ಏಳು ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ನೇಮಕ ಮಾಡಿ ಆದೇಶಿಸಿದ್ದಾರೆ. ಕಳೆದ ವಾರವಷ್ಟೇ ಚತ್ತೀಸ್​ಗಢದ ರಾಜ್ಯಪಾಲರಾಗಿದ್ದ ಬಲರಾಮ್​ ದಾಸ್​ ಟಂಡನ್​ ವಿಧಿವಶರಾಗಿದ್ದರು. ಚತ್ತೀಸ್​ಗಢದ ಉಸ್ತುವಾತಿ ರಾಜ್ಯಪಾಲರನ್ನಾಗಿ ಆನಂದಿ ಬೇನ್​ ಪಟೇಲ್​ರನ್ನು ರಾಷ್ಟ್ರಪತಿಗಳು ನೇಮಿಸಿದ್ದರು.

ಇಂದು ರಾಮನಾಥ್​ ಕೋವಿಂದ್​ ಹೊರಡಿಸಿದ ನೇಮಕಾತಿಯಲ್ಲಿ ದಿವಂಗತ ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಆಪ್ತ ಲಾಲ್​ ಜಿ ಟಂಡನ್​ ಸೇರಿದಂತೆ ಒಟ್ಟೂ 7 ರಾಜ್ಯಗಳಿಗೆ ರಾಜ್ಯಪಾಲರ ನೇಮಕವಾಗಿದೆ. ಲಾಲ್​ ಜಿ ಟಂಡನ್​ ವಾಜಪೇಯಿ ಅವರ ಅತ್ಯಾಪ್ತರಲ್ಲಿ ಒಬ್ಬರಾಗಿದ್ದವರು. ಜತೆಗೆ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರನ್ನಾಗಿ ಸತ್ಯಪಾಲ್​ ಮಲಿಕ್​ರನ್ನು ನೇಮಿಸಲಾಗಿದೆ.

ಬಿಹಾರ ರಾಜ್ಯಪಾಲರಾಗಿ ಲಾಲ್​ ಜಿ ಟಂಡನ್ ನೇಮಕವಾದರೆ, ಹರಿಯಾಣ ರಾಜ್ಯಪಾಲರಾಗಿ ಸತ್ಯದೇವ್ ನಾರಾಯಣ್ ಆರ್ಯ ನೇಮಕವಾಗಿದ್ದಾರೆ. ಉತ್ತರಾಖಂಡ್ ರಾಜ್ಯಪಾಲರಾಗಿ ಬೇಬಿರಾಣಿ ಮೌರ್ಯ, ಜಮ್ಮುಕಾಶ್ಮೀರ ರಾಜ್ಯಪಾಲರಾಗಿ ಸತ್ಯಪಾಲ್ ಮಲಿಕ್, ಸಿಕ್ಕಿಂ ರಾಜ್ಯಪಾಲರಾಗಿ ಗಂಗಾಪ್ರಸಾದ್ ನೇಮಕವಾಗಿದ್ದಾರೆ.

ಮೇಘಾಲಯ ರಾಜ್ಯಪಾಲರಾಗಿ ತಥಾಗತ ರಾಯ್​ರನ್ನು ವರ್ಗಾವಣೆ ಮಾಡಲಾಗಿದೆ. ಇನ್ನೂ ತ್ರಿಪುರಾ ರಾಜ್ಯಪಾಲರಾಗಿ ಕಪ್ತಾನ್​ ಸಿಂಗ್ ಸೋಲಂಕಿ ನೇಮಕವಾಗಿದ್ದಾರೆ.
First published:August 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...