HOME » NEWS » National-international » CENTRE AND DELHI GOVT MOVE SUPREME COURT AGAINST HC ORDER ON JOINT EXECUTION OF NIRBHAYA RAPE CONVICTS RH

ನಿರ್ಭಯಾ ಪ್ರಕರಣ; ಆಪಾದಿತರನ್ನು ಒಟ್ಟಿಗೆ ನೇಣಿಗೆ ಹಾಕಬೇಕು ಎಂಬ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಕೇಂದ್ರ, ದೆಹಲಿ ಸರ್ಕಾರ

ಮುಂದಿನ ಆದೇಶದವರೆಗೆ ಪ್ರಕರಣ ನಾಲ್ವರು ಆಪಾದಿತರಾದ ಮುಕೇಶ್ ಕುಮಾರ್ ಸಿಂಗ್ (32), ಪವನ್ ಗುಪ್ತಾ (25), ವಿನಯ್ ಕುಮಾರ್ ಶರ್ಮಾ (26) ಮತ್ತು ಅಕ್ಷಯ್ ಕುಮಾರ್ (31) ಅವರನ್ನು ನೇಣಿಗೆ ಹಾಕದಂತೆ ವಿಚಾರಣಾಧೀನ ನ್ಯಾಯಾಲಯ ಜನವರಿ 31ರಂದು ಆದೇಶ ನೀಡಿತ್ತು. ಈ ಎಲ್ಲ ಆಪಾದಿತರು ತಿಹಾರ್ ಜೈಲಿನಲ್ಲಿ ಇದ್ದಾರೆ.

news18-kannada
Updated:February 5, 2020, 5:38 PM IST
ನಿರ್ಭಯಾ ಪ್ರಕರಣ; ಆಪಾದಿತರನ್ನು ಒಟ್ಟಿಗೆ ನೇಣಿಗೆ ಹಾಕಬೇಕು ಎಂಬ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಕೇಂದ್ರ, ದೆಹಲಿ ಸರ್ಕಾರ
ಸುಪ್ರೀಂಕೋರ್ಟ್
  • Share this:
ನವದೆಹಲಿ: ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆಪಾದಿತರ ಮರಣ ದಂಡನೆ ಶಿಕ್ಷೆಗೆ ತಡೆ ನೀಡಿ ವಿಚಾರಣಾಧೀನ ನ್ಯಾಯಾಲಯ ನೀಡಿದ್ದ ಆದೇಶ ಪ್ರಶ್ನಿಸಿ ಕೇಂದ್ರ ಮತ್ತು ದೆಹಲಿ ಸರ್ಕಾರದ ಸಲ್ಲಿಸಿದ್ದ ಅರ್ಜಿಗಳನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದ್ದನ್ನು ಬುಧವಾರ ಸುಪ್ರೀಂಕೋರ್ಟ್​ನಲ್ಲಿ ಮತ್ತೆ ಪ್ರಶ್ನಿಸಲಾಗಿದೆ.  

ನಿರ್ಭಯಾ ಪ್ರಕರಣದ ಆಪಾದಿತರಿಗೆ ಮರಣ ದಂಡನೆ ಶಿಕ್ಷೆ ಜಾರಿಗೆ ವಿಚಾರಣಾಧೀನ ನ್ಯಾಯಾಲಯ ತಡೆ ನೀಡಿದ್ದನ್ನು ಪ್ರಶ್ನಿಸಿ, ಕೇಂದ್ರ ಮತ್ತು ದೆಹಲಿ ಸರ್ಕಾರ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದವು. ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುರೇಶ್ ಕುಮಾರ್ ಕೇತ್ ಅವರಿದ್ದ ನ್ಯಾಯಪೀಠ, ಎಲ್ಲ ಅರ್ಜಿಗಳನ್ನು ವಜಾಗೊಳಿಸಿತ್ತು. ಅಲ್ಲದೇ, ನಾಲ್ವರು ಆಪಾದಿತರನ್ನು ಪ್ರತ್ಯೇಕವಾಗಿ ನೇಣಿಗೆ ಹಾಕದೆ, ಒಟ್ಟಿಗೆ ನೇಣಿಗೆ ಹಾಕಬೇಕು  ಹಾಗೂ ಆಪಾದಿತರು ಒಂದು ವಾರದೊಳಗೆ ಕಾನೂನಿನ ಎಲ್ಲ ಅವಕಾಶಗಳನ್ನು ಸಲ್ಲಿಸಬೇಕು ಎಂದು ಆದೇಶ ನೀಡಿತ್ತು. ಈ ಆದೇಶ ಹೊರಬಿದ್ದ ಗಂಟೆಯಲ್ಲಿ ತೀರ್ಪು ಪ್ರಶ್ನಿಸಿ ಎರಡು ಸರ್ಕಾರಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಿವೆ.

ಮುಂದಿನ ಆದೇಶದವರೆಗೆ ಪ್ರಕರಣ ನಾಲ್ವರು ಆಪಾದಿತರಾದ ಮುಕೇಶ್ ಕುಮಾರ್ ಸಿಂಗ್ (32), ಪವನ್ ಗುಪ್ತಾ (25), ವಿನಯ್ ಕುಮಾರ್ ಶರ್ಮಾ (26) ಮತ್ತು ಅಕ್ಷಯ್ ಕುಮಾರ್ (31) ಅವರನ್ನು ನೇಣಿಗೆ ಹಾಕದಂತೆ ವಿಚಾರಣಾಧೀನ ನ್ಯಾಯಾಲಯ ಜನವರಿ 31ರಂದು ಆದೇಶ ನೀಡಿತ್ತು. ಈ ಎಲ್ಲ ಆಪಾದಿತರು ತಿಹಾರ್ ಜೈಲಿನಲ್ಲಿ ಇದ್ದಾರೆ.

ಇದನ್ನು ಓದಿ: ನಿರ್ಭಯಾ ಅತ್ಯಾಚಾರಿಗಳಿಗೆ 7 ದಿನದಲ್ಲಿ ಗಲ್ಲು; ದೆಹಲಿ ಹೈಕೋರ್ಟ್​ನಿಂದ ಮಹತ್ವದ ಆದೇಶ

ಆರೋಪಿಗಳ ಶಿಕ್ಷೆ ಜಾರಿ ತಡವಾಗುತ್ತಿರುವ ಹಿನ್ನೆಲೆ ಇಡೀ ದೇಶ ಅಸಮಾಧಾನ ಹೊರಹಾಕಿದೆ. ಅಲ್ಲದೆ, ನಿರ್ಭಯಾ ತಾಯಿ ಸಹ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಈ ಸಂಬಂಧ ಇಂದು ದೆಹಲಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದ ಕೇಂದ್ರ ಸರ್ಕಾರ ಆರೋಪಿಗಳ ಶಿಕ್ಷೆಯನ್ನು ಶೀಘ್ರದಲ್ಲಿ ಜಾರಿ ಮಾಡಲು ಅನುವು ಮಾಡಿಕೊಡುವಂತೆ ಕೇಳಿಕೊಂಡಿತ್ತು. ಆದರೆ, ಓರ್ವ ಆರೋಪಿಯ ದಯಾ ಮರಣ ಅರ್ಜಿ ವಿಚಾರಣೆ ಬಾಕಿ ಇರುವಾಗ ಇತರೆ ಆಪಾದಿತರನ್ನು ಗಲ್ಲಿಗೇರಿಸುವಂತಿಲ್ಲ. ಎಲ್ಲರನ್ನೂ ಒಟ್ಟಿಗೆ ಗಲ್ಲಿಗೇರಿಸುವಂತೆ ಹೈಕೋರ್ಟ್ ಹೇಳಿದೆ. ಇದನ್ನು ಪ್ರಶ್ನೆ ಮಾಡಿ ಕೇಂದ್ರ ಮತ್ತು ದೆಹಲಿ ಸರ್ಕಾರಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಿವೆ.
First published: February 5, 2020, 5:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories