ಐಎನ್​​ಎಕ್ಸ್​​ ಪ್ರಕರಣ: ಪಿ. ಚಿದಂಬರಂ ವಿರುದ್ಧ ತನಿಖೆಗೆ ಮುಂದಾದ ಸಿಬಿಐ!

ಇತ್ತೀಚೆಗೆ ಹಿರಿಯ ಕಾಂಗ್ರೆಸ್​​​ ನಾಯಕ ಪಿ. ಚಿದಂಬರಂ ವಿರುದ್ಧ ತನಿಖೆಗೆ ಸಿಬಿಐ ಕೇಂದ್ರದ ಅನುಮತಿ ಕೋರಿತ್ತು. ಇದೀಗ ಖುದ್ದು ಕೇಂದ್ರ ಸರ್ಕಾರವೇ ತನಿಖೆಗೆ ಆದೇಶಿಸಿದ್ದು, ಸದ್ಯದಲ್ಲೇ ಚಿದಂಬರಂ ವಿರುದ್ದ ದೋಷಾರೋಪಣ ಪಟ್ಟಿ ಸಲ್ಲಿಕೆಯಾಗಲಿದೆ ಎನ್ನಲಾಗಿದೆ.

Ganesh Nachikethu | news18
Updated:February 22, 2019, 10:12 PM IST
ಐಎನ್​​ಎಕ್ಸ್​​ ಪ್ರಕರಣ: ಪಿ. ಚಿದಂಬರಂ ವಿರುದ್ಧ ತನಿಖೆಗೆ ಮುಂದಾದ ಸಿಬಿಐ!
ಪಿ. ಚಿದಂಬರಂ
Ganesh Nachikethu | news18
Updated: February 22, 2019, 10:12 PM IST
ನವದೆಹಲಿ(ಫೆ.22): ಬಹುಕೋಟಿ ಹಗರಣ ಐಎನ್​​ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವ ಮತ್ತು ಹಿರಿಯ ಕಾಂಗ್ರೆಸ್​​ ಮುಖಂಡ ಪಿ. ಚಿದಂಬರಂ ವಿರುದ್ಧ ಸಿಬಿಐ ತನಿಖೆಗೆ ಕೇಂದ್ರ ಸರ್ಕಾರ ಸೂಚಿಸಿದೆ. ಕೂಡಲೇ ತನಿಖೆಗೆ ಮುಂದಾಗಿ ಪಿ ಚಿದಂಬರಂ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳುವಂತೆ ಸಿಬಿಐಗೆ ಕೇಂದ್ರ ಸೂಚಿಸಿದೆ. ಹೀಗಾಗಿ ಶೀಘ್ರದಲ್ಲಿಯೇ ಮಾಜಿ ಕೇಂದ್ರ ಸಚಿವರ ವಿರುದ್ಧ ಚಾರ್ಜ್​​ಶೀಟ್ ದಾಖಲಿಸುವ ಸಾಧ್ಯತೆಯಿದೆ.

ಇತ್ತೀಚೆಗೆ ಹಿರಿಯ ಕಾಂಗ್ರೆಸ್​​​ ನಾಯಕ ಪಿ. ಚಿದಂಬರಂ ವಿರುದ್ಧ ತನಿಖೆಗೆ ಸಿಬಿಐ ಕೇಂದ್ರದ ಅನುಮತಿ ಕೋರಿತ್ತು. ಇದೀಗ ಖುದ್ದು ಕೇಂದ್ರ ಸರ್ಕಾರವೇ ತನಿಖೆಗೆ ಆದೇಶಿಸಿದ್ದು, ಸದ್ಯದಲ್ಲೇ ಚಿದಂಬರಂ ವಿರುದ್ದ ದೋಷಾರೋಪಣ ಪಟ್ಟಿ ಸಲ್ಲಿಕೆಯಾಗಲಿದೆ ಎನ್ನಲಾಗಿದೆ. ಈಗಾಗಲೇ ಜಾರಿ ನಿರ್ದೇಶನಾಲಯವೂ ಚಿದಂಬರಂ ಕುಟುಂಬವನ್ನು ವಿಚಾರಣೆಗೊಳಪಡಿಸಿದ್ದು, ಸಾಕಷ್ಟು ದಾಖಲೆ ಸಂಗ್ರಹಿಸಿದೆ ಎಂದು ತಿಳಿದು ಬಂದಿದೆ.

ಈ ಹಿಂದೆಯೇ ಐಎನ್​​ಎಕ್ಸ್​​ ಪ್ರಕರಣಕ್ಕೆ ಕುರಿತಂತೆ ಪಿ. ಚಿದಂಬರಂ ಅವರು ಜಾರೀ ನಿರ್ದೇಶನಾಲ(ಇ.ಡಿ) ಮುಂದೆ ವಿಚಾರಣೆ ಹಾಜರಾಗಿದ್ದಾರೆ. ಇದೇ ತಿಂಗಳು ಫೆ.08 ರಂದು ಶುಕ್ರವಾರ ಬೆಳಿಗ್ಗೆ 11ಕ್ಕೆ ಕೇಂದ್ರ ದೆಹಲಿಯಲ್ಲಿರುವ ಇ.ಡಿ. ಕಚೇರಿಗ ಆಗಮಿಸಿದ್ದ ಚಿದಂಬರ ಅವರನ್ನು ಅಧಿಕಾರಿಗಳು ಹಲವು ಪ್ರಶ್ನೆಗಳನ್ನು ಕೇಳಿದ್ದರು. ಅಲ್ಲದೇ ವಿಚಾರಣೆ ಸಂದರ್ಭದಲ್ಲಿ ಜಾರೀ ನಿರ್ದೇಶನಾಲಯ ಅಧಿಕಾರಿಗಳಿಗೆ ಪಿ. ಚಿದಂಬರಂ ಅವರು ಎಲ್ಲಾ ರೀತಿಯಾಗಿ ಸಹಕರಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಕಾಂಗ್ರೆಸ್​​​ ಟಿಕೆಟ್​​​ ಕೊಟ್ರೆ ಪಕ್ಕಾ ಗೆಲ್ತಾರೇ: ಸುಮಲತಾ ಅಂಬರೀಶ್​​​ ಪರ ಗೃಹ ಸಚಿವ ಎಂ.ಬಿ ಪಾಟೀಲ್​​​ ಬ್ಯಾಟಿಂಗ್​​!

ಏನಿದು ಪ್ರಕರಣ?: 2007ರಲ್ಲಿ ಪೀಟರ್ ಮತ್ತು ಇಂದ್ರಾಣಿ ಒಡೆತನದಲ್ಲಿದ್ದ ಐಎನ್​ಎಕ್ಸ್ ಮೀಡಿಯಾ ಸಂಸ್ಥೆಗೆ ವಿದೇಶಿ ಹೂಡಿಕೆಗೆ ಅವಕಾಶ ಮಾಡಿಕೊಟ್ಟು, 3.5 ಕೋಟಿ ರೂ. ಕಿಕ್ ಬ್ಯಾಕ್ ಪಡೆದ ಆರೋಪ ಪಿ.ಚಿದಂಬರಂ ಹಾಗೂ ಪುತ್ರ ಕಾರ್ತಿ ಚಿದಂಬರಂ ಮೇಲಿದೆ. ಈಗಾಗಲೇ ಪ್ರಕರಣದಲ್ಲಿ ಆರೋಪಿ ಇಂದ್ರಾಣಿ ಮುಖರ್ಜಿ ಅವರು, ದೆಹಲಿ ಹೋಟೆಲ್​​ವೊಂದರಲ್ಲಿ ಕಾರ್ತಿ ಚಿದಂಬರಂ ನನ್ನ ಭೇಟಿ ಮಾಡಿದ್ದರು. ಪಿಐಪಿಬಿ ವ್ಯವಹಾರಕ್ಕೆ ಅನುವು ಮಾಡಿಕೊಡಲು 1 ಮಿಲಿಯನ್ ಡಾಲರ್ 1 ಮಿಲಿಯನ್ ಡಾಲರ್ ಭೇಡಿಕೆ ಇಟ್ಟಿದ್ದರು ಎಂದು ಮ್ಯಾಜಿಸ್ಟ್ರೇಟ್ ಮುಂದೆ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: ಆಪರೇಷನ್​​ ಕಮಲ: ಅತೃಪ್ತ ಕಾಂಗ್ರೆಸ್​​ ಮುಖಂಡರು ಬಿಜೆಪಿಗೆ ಸೇರ್ಪಡೆ!

ಚಿಂದಬರಂ ಮೇಲಿನ ಆರೋಪ: ಅಲ್ಲದೇ ನವದೆಹಲಿಯ ಕಚೇರಿಯಲ್ಲಿ ಅಂದಿನ ಹಣಕಾಸು ಸಚಿವ ಪಿ.ಚಿದಂಬರಂ ಅವರನ್ನ ಭೇಟಿ ಮಾಡಿದ್ದ ಪೀಟರ್ ಮತ್ತು ಇಂದ್ರಾಣಿ, ಐಎನ್​ಎಕ್ಸ್ ಮೀಡಿಯಾ ವಿದೇಶಿ ಹೂಡಿಕೆಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದರು ಎನ್ನಲಾಗಿದೆ. ಇದೇವೇಳೆ, ಚಿದಂಬರಂ ಇದಕ್ಕೆ ಪ್ರತಿಯಾಗಿ ತಮ್ಮ ಮಗನ ಉದ್ಯಮಕ್ಕೆ ಅನುಕೂಲ ಮಾಡಿಕೊಡುವಂತೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪವಿದೆ.
Loading...

-------------
First published:February 22, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...