news18 Updated:January 5, 2021, 11:29 AM IST
ಸುಪ್ರೀಂಕೋರ್ಟ್
- News18
- Last Updated:
January 5, 2021, 11:29 AM IST
ನವದೆಹಲಿ(ಜ. 05): ನೂತನ ಸಂಸತ್ ಭವನ ನಿರ್ಮಾಣ ಒಳಗೊಂಡಿರುವ ಸೆಂಟ್ರಲ್ ವಿಸ್ತಾ ಯೋಜನೆಗೆ ಸರ್ವೋಚ್ಚ ನ್ಯಾಯಾಲಯ ಒಪ್ಪಿಗೆ ನೀಡಿದೆ. ಯೋಜನೆಯಿಂದ ಪರಿಸರಕ್ಕೆ ಧಕ್ಕೆಯಾಗುತ್ತದೆ ಎಂಬಿತ್ಯಾದಿ ಆಕ್ಷೇಪಗಳನ್ನ ವ್ಯಕ್ತಪಡಿಸಿ ಸಲ್ಲಿಕೆಯಾದ ವಿವಿಧ ದೂರುಗಳ ವಿಚಾರಣೆ ನಡೆಸಿದ ಬಳಿಕ ಸುಪ್ರೀಂ ಕೋರ್ಟ್ ಈ ಬೃಹತ್ ಯೋಜನೆಗೆ ಅನುಮತಿ ಕೊಟ್ಟಿದೆ. ನ್ಯಾಯಮೂರ್ತಿಗಳಾದ ಎ.ಎಂ. ಖನ್ವಿಲ್ಕರ್, ದಿನೇಶ್ ಮಹೇಶ್ವರಿ ಮತ್ತು ಸಂಜೀವ್ ಖನ್ನಾ ಅವರಿದ್ದ ತ್ರಿಸದಸ್ಯ ಸುಪ್ರೀಂ ಪೀಠ ಇಂದು ಈ ತೀರ್ಪು ನೀಡಿದೆ. ನವೆಂಬರ್ 5ರಂದು ನ್ಯಾಯಪೀಠ ತನ್ನ ತೀರ್ಪನ್ನ ಕಾಯ್ದಿರಿಸಿತ್ತು.
ಸೆಂಟ್ರಲ್ ವಿಸ್ಟಾ ಯೋಜನೆ ಅಡಿ ನೂತನ ಸಂಸದತ್ ಭವನ, ಸಾಮಾನ್ಯ ಕೇಂದ್ರ ಸಚಿವಾಲಯ (Central Secretariat) ಹಾಗೂ ವಿವಿಧ ಸರ್ಕಾರಿ ಕಚೇರಿಗಳಿರುವ ಕಟ್ಟಡಗಳು ನಿರ್ಮಾಣ ಆಗಲಿವೆ. ತ್ರಿಭುಜ (Triangle) ಆಕಾರದ ಸಂಸತ್ ಭವನವನ್ನು ಸುಮಾರು 971 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. 2022ರಷ್ಟರಲ್ಲಿ ಇದರ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. 2024ರಷ್ಟರಲ್ಲಿ ನೂತನ ಸಚಿವಾಲಯದ ಕಟ್ಟಡಗಳು ತಲೆ ಎತ್ತಲಿವೆ.
ಇದನ್ನೂ ಓದಿ: Farmers Protest: ಕೃಷಿ ಕಾನೂನುಗಳನ್ನು ಹಿಂಪಡೆಯುವ ವಿಚಾರ; 43ನೇ ದಿನಕ್ಕೆ ಕಾಲಿಟ್ಟ ರೈತರ ಪ್ರತಿಭಟನೆ
ಸದ್ಯ ಇರುವ ಸಂಸತ್ ಭವನದಲ್ಲಿ 545 ಲೋಕಸಭಾ ಸದಸ್ಯರು ಹಾಗೂ 245 ರಾಜ್ಯಸಭಾ ಸದಸ್ಯರು ಸದನಗಳಲ್ಲಿ ಕೂರಬಹುದಾಗಿದೆ. ಯೋಜಿಸಲಾಗಿರುವ ನೂತನ ಸಂಸತ್ ಭವನದಲ್ಲಿ 900ರಿಂದ 1200 ಸದಸ್ಯರು ಕೂರಬಹುದಾಗುವಷ್ಟು ವಿಶಾಲವಾಗಿರಲಿದೆ. ಭವಿಷ್ಯದ ದಿನಗಳನ್ನ ಗಣನೆಯಲ್ಲಿಟ್ಟುಕೊಂಡು ಈ ಯೋಜನೆ ರೂಪಿಸಲಾಗಿದೆ ಎಂಬುದು ಕೇಂದ್ರ ಸರ್ಕಾರದ ವಾದ. ರಾಷ್ಟ್ರಪತಿ ಭವನ ಮತ್ತು ಇಂಡಿಯಾ ಗೇಟ್ ನಡುವಿನ 3 ಎಕರೆ ಪ್ರದೇಶದಲ್ಲಿ ಸೆಂಟ್ರಲ್ ವಿಸ್ಟಾ ಯೋಜನೆ ಅಸ್ತಿತ್ವಕ್ಕೆ ಬರುತ್ತಿದೆ. ಇಲ್ಲಿ ಹೇರಳ ಸಂಖ್ಯೆಯಲ್ಲಿ ಹಸಿರು ಇದೆ. ನವದೆಹಲಿಗೆ ಶೋಭೆ ತರುತ್ತಿದ್ದ ಗಿಡಮರಗಳು ಈ ಯೋಜನೆಯಿಂದಾಗಿ ಧರೆಗುರುಳುತ್ತವೆ ಎಂಬುದು ಈ ಯೋಜನೆಗೆ ಇರುವ ಪ್ರಮುಖ ಆಕ್ಷೇಪಗಳಾಗಿವೆ. ಆದರೆ, ಸಂಸತ್ ಸದಸ್ಯರ ಸಂಖ್ಯೆಯ ವಿಚಾರ ಮಾತ್ರ ಅಲ್ಲ, ವಿವಿಧ ಸರ್ಕಾರಿ ಇಲಾಖೆಗಳ ಕಚೇರಿಗಳಿಗೆ ಈಗ ಕೊಡಲಾಗುತ್ತಿರುವ ಬಾಡಿಗೆ ಹಣವನ್ನು ಈ ಯೋಜನೆ ಮೂಲಕ ಉಳಿಸಬಹುದು. ಈ ಯೋಜನೆಗೆ ಯಾವುದೇ ಕಾನೂನು ಮುರಿದಿಲ್ಲ. ಆತುರವಾಗಿ ನಿರ್ಧಾರವಾದ ಯೋಜನೆಯೂ ಇದಲ್ಲ ಎಂಬುದು ಸರ್ಕಾರದ ವಾದ.
ಗುಜರಾತ್ ರಾಜ್ಯದ ಹೆಚ್ಸಿಪಿ ಡಿಸೈನ್ಸ್ ಎಂಬ ಸಂಸ್ಥೆಗೆ ಈ ಯೋಜನೆಯ ಕನ್ಸಲ್ಟೆಂಟ್ ಆಗಿದೆ.
Published by:
Vijayasarthy SN
First published:
January 5, 2021, 11:29 AM IST