Dr. Bimal Patel: ಸೆಂಟ್ರಲ್ ವಿಸ್ಟಾ ಅವೆನ್ಯೂ ವಿನ್ಯಾಸಕಾರ ಡಾ. ಬಿಮಲ್‌ ಪಟೇಲ್‌ ಬಗ್ಗೆ ನಿಮಗೆ ತಿಳಿಯದ ವಿಚಾರಗಳಿವು!

ಸೆಂಟ್ರಲ್ ವಿಸ್ಟಾ ಅವೆನ್ಯೂ ಪುನರಾಭಿವೃದ್ಧಿ ವಿನ್ಯಾಸದ ಹರಿಕಾರ, ಪದ್ಮಶ್ರೀ ವಿಜೇತ ಡಾ. ಬಿಮಲ್‌ ಅವರು ಆಗಾ ಖಾನ್ ಅಕಾಡೆಮಿ ಹೈದರಾಬಾದ್, ಉದ್ಯಮಶೀಲತೆ ಅಭಿವೃದ್ಧಿ ಸಂಸ್ಥೆ, ಗುಜರಾತ್ ಹೈಕೋರ್ಟ್, IIM ಅಹಮದಾಬಾದ್‌ನ ಹೊಸ ಕ್ಯಾಂಪಸ್, ಸಬರಮತಿ ರಿವರ್‌ಫ್ರಂಟ್ ಅಭಿವೃದ್ಧಿ, ಹಲವಾರು ಪ್ರಸಿದ್ಧ ಯೋಜನೆಗಳಲ್ಲಿ ಕೆಲಸ ಮಾಡಿದ್ದಾರೆ. 2019 ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಡಾ. ಬಿಮಲ್ ಅವರ ಸಾಧನೆಗಳ ಕುರಿತು ಇಲ್ಲಿ ತಿಳಿಯೋಣ ಬನ್ನಿ.

ಪದ್ಮಶ್ರೀ ವಿಜೇತ ಡಾ. ಬಿಮಲ್‌ ಪಟೇಲ್‌

ಪದ್ಮಶ್ರೀ ವಿಜೇತ ಡಾ. ಬಿಮಲ್‌ ಪಟೇಲ್‌

  • Share this:
ದೇಶದ ಅಭಿವೃದ್ಧಿಯ ಸಂಕೇತ ಎನ್ನುವಂತೆ ಸಂಪೂರ್ಣವಾಗಿ ನವೀಕರಣಗೊಂಡಿರುವ ಸೆಂಟ್ರಲ್‌ ವಿಸ್ತಾ ಅವೆನ್ಯೂವನ್ನು (Central Vista Avenue) ಪ್ರಧಾನಿ ನರೇಂದ್ರ ಮೋದಿ ಗುರುವಾರ ಅನಾವರಣ ಮಾಡಿದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ತಮ್ಮ ಬೆಂಗಾವಲು ಪಡೆಯೊಂದಿಗೆ ಸೆಂಟ್ರಲ್‌ ವಿಸ್ತಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕರ್ತವ್ಯ ಪಥವನ್ನು ( Kartavya Path) ತಲುಪಿತ್ತು. ಡಿಸೆಂಬರ್ 2020ರಲ್ಲಿ ಪ್ರಾರಂಭವಾದ ಸೆಂಟ್ರಲ್ ವಿಸ್ಟಾ ಪುನರಾಭಿವೃದ್ಧಿ ಯೋಜನೆಯು ವಿಶೇಷ ಮೈಲಿಗಲ್ಲೊಂದನ್ನು ತಲುಪಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ಸೆಪ್ಟೆಂಬರ್ 8 ರಂದು ರಾಜಧಾನಿಯಲ್ಲಿ ಸೆಂಟ್ರಲ್ ವಿಸ್ಟಾ ಅವೆನ್ಯೂವನ್ನು ಅನಾವರಣಗೊಳಿಸಿದ್ದಾರೆ. ಇದು ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‌ವರೆಗಿನ (India Gate) 3 - ಕಿಲೋಮೀಟರ್ ಮಾರ್ಗವನ್ನು ಒಳಗೊಂಡಿದೆ, ಈ ಮಾರ್ಗವನ್ನೆ 'ಕರ್ತವ್ಯ ಪಥ' ಎಂದು ಮರುನಾಮಕರಣ ಮಾಡಲಾಗಿದೆ. 

ರಾಜಪಥಕ್ಕೆ ಕರ್ತವ್ಯಪಥ ಹೆಸರಿಡಲು ಕಾರಣ ಏನು 
ಈ ಮಾರ್ಗಕ್ಕೆ ಕರ್ತವ್ಯಪಥ ಎನ್ನುವ ಹೆಸರೇ ಏಕೆ ಎನ್ನುವ ಬಗ್ಗೆಯೂ ಪ್ರಧಾನಿ ಮಾತನಾಡಿದ್ದಾರೆ. "ಇದು ಬರೀ ಇಟ್ಟಿಗೆ ಹಾಗೂ ಕಲ್ಲುಗಳಿಂದಾದ ಮಾರ್ಗವಲ್ಲ ಎನ್ನುವುದು ಎಲ್ಲರೂ ಅರಿಯಬೇಕು. ಭಾರತ ಎನ್ನುವ ದೇಶದ ಪ್ರಜಾಪ್ರಭುತ್ವದ ಮಾರ್ಗ, ಇಷ್ಟು ವರ್ಷಗಳ ಕಾಲ ಸಿದ್ಧಾಂತಕ್ಕಾಗಿ ನಿಂತ ದೇಶದ ಪಥ. ಇಂಡಿಯಾ ಗೇಟ್‌ನ ಬಳಿ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಪ್ರತಿಮೆ ಅಥವಾ ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ನೋಡಲು ದೇಶದ ಜನ ಬರುತ್ತಾರೆ. ಇವೆಲ್ಲವೂ ಅವರಿಗೆ ಯಾವ ರೀತಿಯ ಸ್ಫೂರ್ತಿ ನೀಡುತ್ತದೆ ಎಂದರೆ, ದೇಶಕ್ಕಾಗಿ ಅವರ ಕರ್ತವ್ಯವನ್ನು ನೆನಪಿಸುತ್ತದೆ. ಅದಕ್ಕಾಗಿಯೇ ಈ ಹೆಸರನ್ನು ಇಡಲಾಗಿದೆ" ಎಂದು ಪ್ರಧಾನಿ ಹೇಳಿದರು.

ಇದನ್ನೂ ಓದಿ:   New Stars: ಇದು ನಕ್ಷತ್ರಗಳು ಹುಟ್ಟುವ ಸ್ಥಳ, ನಾಸಾ ತೆಗೆದ ಅದ್ಭುತ ಚಿತ್ರಗಳನ್ನು ನೋಡಿ

ವಾಸ್ತುಶಿಲ್ಪಿ ಡಾ. ಬಿಮಲ್ ಪಟೇಲ್ ಯಾರು 
ಈ ಕಟ್ಟಡವು 2024 ರ ವೇಳೆಗೆ ಸಿದ್ಧವಾಗಲು ಈಗಾಗಲೇ ಯೋಜನೆಯನ್ನು ರೂಪಿಸಲಾಗಿದೆ. ಇದರ ಅಭಿವೃದ್ಧಿಯನ್ನು ವಾಸ್ತುಶಿಲ್ಪಿ ಡಾ. ಬಿಮಲ್ ಪಟೇಲ್ ನೇತೃತ್ವ ವಹಿಸಿದ್ದಾರೆ. ಅವರು ಆಗಾ ಖಾನ್ ಅಕಾಡೆಮಿ ಹೈದರಾಬಾದ್, ಉದ್ಯಮಶೀಲತೆ ಅಭಿವೃದ್ಧಿ ಸಂಸ್ಥೆ, ಗುಜರಾತ್ ಹೈಕೋರ್ಟ್, IIM ಅಹಮದಾಬಾದ್‌ನ ಹೊಸ ಕ್ಯಾಂಪಸ್, ಸಬರಮತಿ ರಿವರ್‌ಫ್ರಂಟ್ ಅಭಿವೃದ್ಧಿ, ಹಲವಾರು ಪ್ರಸಿದ್ಧ ಯೋಜನೆಗಳಲ್ಲಿ ಕೆಲಸ ಮಾಡಿದ್ದಾರೆ. 2019 ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಡಾ. ಬಿಮಲ್ ಅವರ ಸಾಧನೆಗಳ ಕುರಿತು ಇಲ್ಲಿ ತಿಳಿಯೋಣ ಬನ್ನಿ.

ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಡಾ. ಬಿಮಲ್ ಅವರ ಬಗ್ಗೆ ತಿಳಿದುಕೊಳ್ಳಲೇ ಬೇಕಾದ 5 ಸಂಗತಿಗಳು ಇಲ್ಲಿವೆ:

  • ಇವರು ಅಹಮದಾಬಾದ್ ಮೂಲದ ವಾಸ್ತುಶಿಲ್ಪ ಸೇಂಟ್ ಕ್ಸೇವಿಯರ್ ಶಾಲೆಯಲ್ಲಿ ಅಧ್ಯಯನ ಮಾಡಿದರು. ಬಾಲ್ಯದಲ್ಲಿ, ಅವರು ಭೌತಶಾಸ್ತ್ರಜ್ಞರಾಗಲು ಬಯಸಿದ್ದರು. ಆದರೆ ಶಾಲೆಯಲ್ಲಿ ಹಿರಿಯ ಜೆಸ್ಯೂಟ್ ಅವರು ಬಿಮಲ್‌ ಅವರನ್ನು ಸಾಮಾಜಿಕ ಮತ್ತು ರಾಷ್ಟ್ರೀಯ ಅಭಿವೃದ್ಧಿಯ ಬಗ್ಗೆ ಚಿಂತನೆ ನಡೆಸಲು ಪ್ರೇರಣೆ ನೀಡಿದರು.

  • ಅವರ ತಂದೆ ಹಸ್ಮುಖ್ ಪಟೇಲ್ ಕೂಡ ವಾಸ್ತುಶಿಲ್ಪಿ. ಅವರ ತಂದೆಯು ಉತ್ತಮ ವಾಸ್ತುಶಿಲ್ಪಿ ಆಗಿದ್ದರಿಂದ ಅವರು ಹಲವಾರು ನಿರೀಕ್ಷಿತ ಗ್ರಾಹಕರನ್ನು ಸಹ ಹೊಂದಿದ್ದರು. ಅವರ ತಂದೆ ತಮ್ಮ ಮನೆಯ ವಿನ್ಯಾಸವನ್ನು ಅತಿಥಿಗಳಿಗೆ ವಿವರಿಸುವುದನ್ನು ಬಿಮಲ್‌ ಅವರು ಆಗಾಗ ಅದೆಲ್ಲವನನು ನೋಡುತ್ತಿದ್ದರು. ಇದರಿಂದಲೂ ಹೆಚ್ಚಿನ ಪ್ರೇರಣೆ ಪಡೆದಿದ್ದಾರೆ.

  • 12 ನೇ ತರಗತಿಯ ನಂತರ, ಅವರು ವಾಸ್ತುಶಿಲ್ಪವನ್ನು ಅಧ್ಯಯನ ಮಾಡಲು ನಿರ್ಧರಿಸಿ ನಂತರ CEPT ವಿಶ್ವವಿದ್ಯಾನಿಲಯದ ಪ್ರವೇಶ ಪರೀಕ್ಷೆಯಲ್ಲಿ ಪರೀಕ್ಷೆ ಬರೆದು ಅಗ್ರಸ್ಥಾನ ಪಡೆದರು. ಆರ್ಕಿಟೆಕ್ಚರ್‌ನಲ್ಲಿ ಡಿಪ್ಲೊಮಾ ಮಾಡಿದರು. ನಂತರ ಅವರು ಆರ್ಕಿಟೆಕ್ಚರ್‌ನಲ್ಲಿ ಮಾಸ್ಟರ್ಸ್, ಸಿಟಿ ಪ್ಲಾನಿಂಗ್‌ನಲ್ಲಿ ಸ್ನಾತಕೋತ್ತರ ಮತ್ತು ಬರ್ಕ್ಲಿ ವಿಶ್ವವಿದ್ಯಾಲಯದ ಕ್ಯಾಲಿಫೋರ್ನಿಯಾದಿಂದ ನಗರ ಮತ್ತು ಪ್ರಾದೇಶಿಕ ಯೋಜನೆಯಲ್ಲಿ ಪಿಎಚ್‌ಡಿ ಮಾಡಿದರು.


ಇದನ್ನೂ ಓದಿ:   Netaji Statue: ನೇತಾಜಿಗೆ ಮೋದಿ ಸರ್ಕಾರದ ಗೌರವ; 28 ಅಡಿ ಎತ್ತರದ ಸುಭಾಷ್ ಚಂದ್ರ ಬೋಸ್ ಪ್ರತಿಮೆ ಅನಾವರಣ

  • ಇಂದು, ಅವರು CEPT ವಿಶ್ವವಿದ್ಯಾಲಯದ ಅಧ್ಯಕ್ಷರಾಗಿದ್ದಾರೆ. ಅವರು ಎಚ್‌ಸಿಪಿ ಡಿಸೈನ್, ಪ್ಲಾನಿಂಗ್ ಮತ್ತು ಮ್ಯಾನೇಜ್‌ಮೆಂಟ್ ಪ್ರೈವೇಟ್ ಲಿಮಿಟೆಡ್, ಡಿಸೈನ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರೂ ಆಗಿದ್ದಾರೆ.

  • ಇಷ್ಟು ವರ್ಷಗಳಲ್ಲಿ , ಅವರು ವರ್ಲ್ಡ್ ಆರ್ಕಿಟೆಕ್ಚರ್ ಅವಾರ್ಡ್, ಯುಎನ್ ಸೆಂಟರ್ ಫಾರ್ ಹ್ಯೂಮನ್ ಸೆಟ್ಲ್ಮೆಂಟ್ಸ್ ಅವಾರ್ಡ್ ಆಫ್ ಎಕ್ಸಲೆನ್ಸ್, ಪ್ರಧಾನಮಂತ್ರಿಯವರ ನಗರ ಯೋಜನೆ ಮತ್ತು ವಿನ್ಯಾಸದಲ್ಲಿ ಶ್ರೇಷ್ಠತೆಗಾಗಿ ರಾಷ್ಟ್ರೀಯ ಪ್ರಶಸ್ತಿ, ಪದ್ಮಶ್ರೀ ಮತ್ತು ಹೆಚ್ಚಿನವುಗಳಂತಹ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

Published by:Ashwini Prabhu
First published: