Central Universities Amendment Bill 2022: ಕೇಂದ್ರೀಯ ವಿಶ್ವವಿದ್ಯಾಲಯಗಳ ತಿದ್ದುಪಡಿ ಮಸೂದೆಗೆ ಸಿಗುತ್ತಾ ಅಂಗೀಕಾರ?

ಅಲ್ಲದೇ ಇದರ ಜೊತೆಗೆ ಕೇಂದ್ರ ಸಚಿವರಾದ ಪಂಕಜ್ ಚೌಧರಿ, ಪ್ರಹ್ಲಾದ್ ಸಿಂಗ್ ಪಟೇಲ್ ಮತ್ತು ಭಾನು ಪ್ರತಾಪ್ ಸಿಂಗ್ ವರ್ಮಾ ಅವರು ತಮ್ಮ ಸಚಿವಾಲಯಗಳ ಇಲಾಖೆ ಸಂಬಂಧಿತ ಸಂಸದೀಯ ಸ್ಥಾಯಿ ಸಮಿತಿಯ ವರದಿಗಳಲ್ಲಿರುವ ಶಿಫಾರಸುಗಳ ಅನುಷ್ಠಾನದ ಸ್ಥಿತಿಯ ಕುರಿತು ಹೇಳಿಕೆಗಳನ್ನು ನೀಡಲಿದ್ದಾರೆ.

ರಾಜ್ಯಸಭಾ

ರಾಜ್ಯಸಭಾ

  • Share this:
    ಕೇಂದ್ರ ಸರ್ಕಾರವು ಸೋಮವಾರ ರಾಜ್ಯಸಭೆಯಲ್ಲಿ (Rajya Sabha) ಕೇಂದ್ರೀಯ ವಿಶ್ವವಿದ್ಯಾಲಯಗಳ (ತಿದ್ದುಪಡಿ) ಮಸೂದೆ, 2022 ಅನ್ನು (Central Universities (Amendment) Bill, 2022) ಪರಿಗಣನೆ ಮತ್ತು ಅಂಗೀಕಾರ ಪಡೆಯಲು ಮಂಡನೆ ನಡೆಸಲಿದೆ. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಕೇಂದ್ರೀಯ ವಿಶ್ವವಿದ್ಯಾಲಯಗಳ (ತಿದ್ದುಪಡಿ) ಮಸೂದೆ, 2022 ಅನ್ನು ಲೋಕಸಭೆಯಲ್ಲಿ (Lok Sabha) ಅಂಗೀಕಾರಕ್ಕೆ ಪ್ರಸ್ತಾಪಿಸಲಿದ್ದಾರೆ. ಕೇಂದ್ರೀಯ ವಿಶ್ವವಿದ್ಯಾಲಯಗಳ ಕಾಯಿದೆ, 2009 ಅನ್ನು ಮತ್ತಷ್ಟು ತಿದ್ದುಪಡಿ ಮಾಡಲು ಮತ್ತು ಪರಿಗಣನೆಗೆ ತೆಗೆದುಕೊಂಡು ಅಂಗೀಕರಿಸುವ ಕುರಿತು ಮೂಲಗಳು ಮಾಹಿತಿ ನೀಡಿವೆ. ರಾಷ್ಟ್ರೀಯ ಔಷಧೀಯ ಶಿಕ್ಷಣ ಮತ್ತು ಸಂಶೋಧನೆ (ತಿದ್ದುಪಡಿ) ಕಾಯಿದೆಯಡಿ ಸ್ಥಾಪಿಸಲಾದ ಸಂಸ್ಥೆಗಳ ಕೌನ್ಸಿಲ್‌ನ ಸದಸ್ಯರನ್ನಾಗಿ ಸದನದಿಂದ ಓರ್ವ ಸದಸ್ಯರನ್ನು ಅಧ್ಯಕ್ಷರು ನಿರ್ದೇಶಿಸಿದಂತೆ ಆಯ್ಕೆ ಮಾಡಲಾಗುತ್ತದೆ. ಇದರಂತೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಪ್ರಸ್ತಾವನೆಯನ್ನು ಮಂಡಿಸಲಿದ್ದಾರೆ.

    ಭುವನೇಶ್ವರ್ ಕಲಿತಾ ಮತ್ತು ಶಕ್ತಿಸಿಂಗ್ ಗೋಹಿಲ್ ಅವರು ಸಾರ್ವಜನಿಕ ಲೆಕ್ಕಪತ್ರ ಸಮಿತಿಯ (2022-23) `ಮತದಾನ ಮಾಡಿದ ಅನುದಾನ ಮತ್ತು ಚಾರ್ಜ್ಡ್ ಅಪ್ರೋಪ್ರಿಯೇಷನ್‌ಗಳ (2019-20) ಮೇಲೆ ಹೆಚ್ಚುವರಿಗಳು' ಕುರಿತು 53 ನೇ ವರದಿಯನ್ನು ನೀಡಲಿದ್ದಾರೆ.

    ಶಿಫಾರಸು ಮಾಡಿದ ಸಂಗತಿಗಳ ಸ್ಥಿತಿಗತಿ ಬಹಿರಂಗ
    ಕಲ್ಲಿದ್ದಲು, ಗಣಿ ಮತ್ತು ಉಕ್ಕಿನ ಇಲಾಖೆ ಸಂಬಂಧಿತ ಸಂಸದೀಯ ಸ್ಥಾಯಿ ಸಮಿತಿಯ 19ನೇ ವರದಿಯಲ್ಲಿನ ಕಲ್ಲಿದ್ದಲು ಸಂರಕ್ಷಣೆ ಮತ್ತು ದೇಶಾದ್ಯಂತ ಕಲ್ಲಿದ್ದಲು ಸಾಗಣೆಗೆ ಮೂಲಸೌಕರ್ಯಗಳ ಅಭಿವೃದ್ಧಿಯಲ್ಲಿ ಒಳಗೊಂಡಿರುವ ಶಿಫಾರಸುಗಳ ಅನುಷ್ಠಾನದ ಸ್ಥಿತಿಗತಿ ಕುರಿತು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿಕೆ ನೀಡಲಿದ್ದಾರೆ.

    ಈ ಅಂಶಗಳನ್ನೂ ಒಳಗೊಂಡಿರಲಿದೆ ಮಾಂಡವಿಯಾ ಹೇಳಿಕೆ
    ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ಆರೋಗ್ಯ ಸಂಶೋಧನಾ ಇಲಾಖೆಗಳಿಗೆ ಸಂಬಂಧಿಸಿದ ಅನುದಾನದ ಬೇಡಿಕೆಗಳ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಬಂಧಿತ ಸಂಸದೀಯ ಸ್ಥಾಯಿ ಸಮಿತಿಯ ವರದಿಗಳಲ್ಲಿರುವ ಶಿಫಾರಸುಗಳ ಅನುಷ್ಠಾನದ ಸ್ಥಿತಿಯ ಕುರಿತು ಮಾಂಡವಿಯಾ ಹೇಳಿಕೆ ನೀಡಲಿದ್ದಾರೆ ಎನ್ನಲಾಗಿದೆ.

    ಇದನ್ನೂ ಓದಿ: Bulldozer Government: ಮಹಿಳೆ ಮೇಲೆ ಹಲ್ಲೆ; ಬುಲ್ಡೋಜರ್​ನಿಂದ ರಾಜಕೀಯ ನಾಯಕನ ಮನೆ ಕೆಡವಿದ ಪೊಲೀಸ್!

    ವಿವಿಧ ಇಲಾಖೆಗಳ ಶಿಫಾರಸು
    ಅಲ್ಲದೇ ಇದರ ಜೊತೆಗೆ ಕೇಂದ್ರ ಸಚಿವರಾದ ಪಂಕಜ್ ಚೌಧರಿ, ಪ್ರಹ್ಲಾದ್ ಸಿಂಗ್ ಪಟೇಲ್ ಮತ್ತು ಭಾನು ಪ್ರತಾಪ್ ಸಿಂಗ್ ವರ್ಮಾ ಅವರು ತಮ್ಮ ಸಚಿವಾಲಯಗಳ ಇಲಾಖೆ ಸಂಬಂಧಿತ ಸಂಸದೀಯ ಸ್ಥಾಯಿ ಸಮಿತಿಯ ವರದಿಗಳಲ್ಲಿರುವ ಶಿಫಾರಸುಗಳ ಅನುಷ್ಠಾನದ ಸ್ಥಿತಿಯ ಕುರಿತು ಹೇಳಿಕೆಗಳನ್ನು ನೀಡಲಿದ್ದಾರೆ.

    ಇದನ್ನೂ ಓದಿ: Partha Chatterjee: ಕಂಬಳಿ ಮೇಲೆ ಮಲಗಿಕೊಂಡ ಪಾರ್ಥ ಚಟರ್ಜಿ! ಜೈಲಿನಲ್ಲಿ ಮೊದಲ ದಿನ ಹೇಗಿತ್ತು?

    ಡೋಲಾ ಸೇನ್ ಮತ್ತು ಹರ್ದ್ವಾರ್ ದುಬೆ ಅವರು ಲಾಭದ ಕಚೇರಿಗಳ ಜಂಟಿ ಸಮಿತಿಯ 80 ನೇ ವರದಿಯನ್ನು ಮಂಡಿಸಿದ್ದರು. ಹಲವಾರು ಸಚಿವರು ತಮ್ಮ ತಮ್ಮ ಸಚಿವಾಲಯಗಳಿಗೆ ಸಂಬಂಧಿಸಿದ ವರದಿಗಳನ್ನು ಇಲ್ಲಿ ಮಂಡಿಸಬಹುದಾಗಿದೆ.

    ಆಮ್‌ ಆದ್ಮಿಯಿಂದ ಗುಜರಾತ್ ಮತದಾರರಿಗೆ ಉಚಿತ ಕೊಡುಗೆ
    ಗುಜರಾತ್ ವಿಧಾನಸಭಾ ಚುನಾವಣೆಗೆ ಆಮ್‌ ಆದ್ಮಿ  ಸಜ್ಜಾಗುತ್ತಿದೆ. ದೆಹಲಿಯ  ಬಳಿಕ ಪಂಜಾಬ್‌ನಲ್ಲೂ ಅಧಿಕಾರದ ಗದ್ದುಗೆ ಹಿಡಿದಿರುವ ಆಪ್ ಪಕ್ಷ ಈಗ ಗುಜರಾತ್‌ ಚುನಾವಣೆ ಮೇಲೆ ಕಣ್ಣಿಟ್ಟಿದೆ. ಶತಾಯ ಗತಾಯ ಗುಜರಾತ್ ಗದ್ದುಗೆ ಏರಲೇಬೇಕು ಆತ ಪ್ರಯತ್ನಿಸುತ್ತಿರುವ ಆಮ್ ಆದ್ಮಿ, ಇದೀಗ ಮತದಾರರಿಗೆ ಉಚಿತ ಕೊಡುಗೆಯ  ಆಮಿಷ ಒಡ್ಡಿದೆ. ಗುಜರಾತ್‌ನಲ್ಲಿ ಆಮ್ ಆದ್ಮಿ ಅಧಿಕಾರಕ್ಕೆ ಬಂದರೆ ಉಚಿತ ವಿದ್ಯುತ್ ನೀಡುವುದಾಗಿ ಘೋಷಿಸಿದೆ. ಆಮ್ ಆದ್ಮಿಯ ಈ ಉಚಿತ ಘೋಷಣೆ ಬಗ್ಗೆ ಇದೀಗ ಭಾರೀ ಚರ್ಚೆ ಶುರುವಾಗಿದೆ. ಪ್ರತಿ ಸಲ ಸರ್ಕಾರ ಬರುವಾಗ ಉಚಿತವಾಗಿ ಮತದಾರರಿಗೆ ಕೊಡುಗೆಗಳನ್ನು ನೀಡುವ ಭರವಸೆ ನೀಡುತ್ತದೆ. ಇದೀಗ ಸರ್ಕಾರಗಳು ನೀಡುವ ಉಚಿತ ಯೋಜನೆಗಳ ಬಗ್ಗೆ ಭಾರೀ ಚರ್ಚೆ ನಡೆಯುತ್ತದೆ. ಉಚಿತ ಯೋಜನೆಗಳನ್ನು ಕೊಡುವುದರಿಂದ ಸರ್ಕಾರಕ್ಕೆ ಭಾರೀ ಪ್ರಮಾಣದಲ್ಲಿ ನಷ್ಟವಾಗುತ್ತದೆ ಅಂತ ತಜ್ಞರು ಹೇಳುತ್ತಿದ್ದಾರೆ.
    Published by:guruganesh bhat
    First published: