Smriti Irani: ಮಗಳ ವಿರುದ್ಧದ ಆರೋಪಕ್ಕೆ ಕೇಂದ್ರ ಸಚಿವೆ ಗರಂ, ಕಾಂಗ್ರೆಸ್‌ಗೆ ಲೀಗಸ್ ನೋಟಿಸ್ ಕೊಟ್ಟ ಸ್ಮೃತಿ ಇರಾನಿ

ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಕಾಂಗ್ರೆಸ್ ನಾಯಕರಾದ ಪವನ್ ಖೇರಾ, ಜೈರಾಮ್ ರಮೇಶ್, ನೆಟ್ಟಾ ಡಿಸೋಜಾ ಅವರಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಲಿಖಿತವಾಗಿಯೇ ಬೇಷರತ್ ಕ್ಷಮೆಯಾಚಿಸಬೇಕೆಂದು ಈ ನೋಟಿಸ್​ ಮೂಲಕ ಆಗ್ರಹಿಸಿದ್ದಾರೆ.

ಕೇಂದ್ರ ಸಚಿವೆ ಸ್ಮೃತಿ ಇರಾನಿ

ಕೇಂದ್ರ ಸಚಿವೆ ಸ್ಮೃತಿ ಇರಾನಿ

  • Share this:
ನವದೆಹಲಿ: ಕೇಂದ್ರ ಸಚಿವೆ (Central Minister) ಸ್ಮೃತಿ ಇರಾನಿ (Smriti Irani) ಕಾಂಗ್ರೆಸ್ ನಾಯಕರ (Congress Minister) ವಿರುದ್ದ ಕಾನೂನು ಸಮರ (Legal Fight) ಸಾರಿದ್ದಾರೆ. ಸ್ಮೃತಿ ಇರಾನಿ ಪುತ್ರಿ ಜೋಯಿಸ್ ಇರಾನಿ (Zoish Irani) ಗೋವಾದಲ್ಲಿ (Goa) ಸತ್ತವರ ಹೆಸರಲ್ಲಿ ಲೈಸೆನ್ಸ್ (Licence) ಪಡೆದು, ಅಕ್ರಮವಾಗಿ ಬಾರ್ (Illegal Bar) ನಡೆಸುತ್ತಿದ್ದಾರೆ ಅಂತ ಕಾಂಗ್ರೆಸ್ ನಾಯಕರು ಆರೋಪಿಸಿದ್ದರು. ಈ ಆರೋಪ ಸಂಬಂಧ ಕಾಂಗ್ರೆಸ್ ಪಕ್ಷದ ನಾಯಕರಾದ ಪವನ್ ಖೇರಾ (Pawan Khera), ಜೈರಾಮ್ ರಮೇಶ್ (Jairam Ramesh), ನೆಟ್ಟಾ ಡಿಸೋಜಾ (Netta D' Souza) ಅವರಿಗೆ ಲೀಗಲ್ ನೋಟಿಸ್ (Legal Notice) ಕಳುಹಿಸಿದ್ದಾರೆ. ಲಿಖಿತವಾಗಿಯೇ ಬೇಷರತ್ ಕ್ಷಮೆಯಾಚಿಸಬೇಕೆಂದು ಈ ನೋಟಿಸ್​ ಮೂಲಕ ಆಗ್ರಹಿಸಿದ್ದಾರೆ.

 ಕಾಂಗ್ರೆಸ್ ನಾಯಕರ ಆರೋಪವೇನು?

 ಸ್ಮತಿ ಇರಾನಿ ಅವರು ಮಗಳು ಜೋಯಿಸ್ ಇರಾನಿ ಗೋವಾದಲ್ಲಿ ರೆಸ್ಟೋರೆಂಟ್ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದರು.  ಗೋವಾದಲ್ಲಿ "ನಕಲಿ ಪರವಾನಗಿ" ಮೇಲೆ ಬಾರ್ ಕಾರ್ಯನಿರ್ವಹಿಸುತ್ತಿದೆ. ಸ್ಮೃತಿ ಇರಾನಿ ಅವರ ಮಗಳ ಪರವಾನಗಿಯು ಮೇ 2021ರಲ್ಲಿ ನಿಧನರಾದ ವ್ಯಕ್ತಿಯ ಹೆಸರಿನಲ್ಲಿದೆ. 2022 ರ ಜೂನ್‌ನಲ್ಲಿ ಗೋವಾದಲ್ಲಿ ಪರವಾನಗಿ ತೆಗೆದುಕೊಳ್ಳಲಾಗಿದೆ. ಆದರೆ ಪರವಾನಗಿ ಹೊಂದಿರುವ ವ್ಯಕ್ತಿ 13 ತಿಂಗಳ ಹಿಂದೆ ಸಾವನ್ನಪ್ಪಿದ್ದಾರೆ. ಇದು ಕಾನೂನುಬಾಹಿರವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದರು.

ಸ್ಮತಿ ಇರಾನಿ ರಾಜೀನಾಮೆಗೆ ಆಗ್ರಹಿಸಿದ್ದ ಕಾಂಗ್ರೆಸ್ ನಾಯಕರು

 ಗೋವಾ ನಿಯಮಗಳ ಪ್ರಕಾರ ಒಂದು ರೆಸ್ಟೋರೆಂಟ್‌ಗೆ ಕೇವಲ ಒಂದು ಬಾರ್ ಲೈಸೆನ್ಸ್ ಸಿಗುತ್ತದೆ. ಆದರೆ ಈ ರೆಸ್ಟೊರೆಂಟ್‌ಗೆ ಎರಡು ಬಾರ್ ಲೈಸೆನ್ಸ್‌ಗಳಿವೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದರು. ಸ್ಮೃತಿ ಇರಾನಿ ಅವರನ್ನು ತಕ್ಷಣವೇ ಕೇಂದ್ರ ಸಂಪುಟದಿಂದ ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ನಾವು ಪ್ರಧಾನಿಯವರಲ್ಲಿ ಒತ್ತಾಯಿಸುತ್ತೇವೆ. ನೀವು ಈ ದೇಶಕ್ಕೆ, ಈ ದೇಶದ ಯುವಕರಿಗೆ ಋಣಿಯಾಗಿದ್ದೀರಿ ಎಂದು ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕರು ಹೇಳಿದ್ದರು.

ಇದನ್ನೂ ಓದಿ: Smriti Irani: ಸ್ಕೃತಿ ಇರಾನಿ ಪುತ್ರಿ ಅಕ್ರಮವಾಗಿ ಬಾರ್ ನಡೆಸುತ್ತಿದ್ದಾರಾ? ಕಾಂಗ್ರೆಸ್ ಆರೋಪಕ್ಕೆ ಸಚಿವೆಯ ತಿರುಗೇಟು

ಕಾಂಗ್ರೆಸ್ ಆರೋಪ ಅಲ್ಲಗಳೆದಿದ್ದ ಸಚಿವೆ

ಆದರೆ ಕಾಂಗ್ರೆಸ್ ಆರೋಪವನ್ನು ಸ್ಮೃತಿ ಇರಾನಿ ಅಲ್ಲಗಳೆದಿದ್ದರು. ನನ್ನ ಮಗಳು 18 ವರ್ಷದವಳಾಗಿದ್ದು, ಇನ್ನೂ ಕಾಲೇಜಿನಲ್ಲಿ ಓದುತ್ತಿದ್ದಾಳೆ. ಆಕೆ ಯಾವುದೇ ಬಾರ್​ ಹೊಂದಿಲ್ಲ. ಹೀಗಾಗಿ ಕಾಂಗ್ರೆಸ್​ ಮಾಡಿರುವ ಆರೋಪಗಳು ದುರುದ್ದೇಶಪೂರಿತದಿಂದ ಕೂಡಿವೆ ಎಂದು ಸ್ಪಷ್ಟಪಡಿಸಿದ್ದರು.

ನೋಟಿಸ್‌ ನೀಡಿರುವ ಸ್ಮೃತಿ ಇರಾನಿ

ಇದೀಗ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಕಾಂಗ್ರೆಸ್ ಪಕ್ಷದ ನಾಯಕರಾದ ಪವನ್ ಖೇರಾ, ಜೈರಾಮ್ ರಮೇಶ್, ನೆಟ್ಟಾ ಡಿಸೋಜಾ ಅವರಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಲಿಖಿತವಾಗಿಯೇ ಬೇಷರತ್ ಕ್ಷಮೆಯಾಚಿಸಬೇಕೆಂದು ಈ ನೋಟಿಸ್​ ಮೂಲಕ ಆಗ್ರಹಿಸಿದ್ದಾರೆ.

ನೋಟಿಸ್‌ನಲ್ಲಿ ಏನಿದೆ?

ಸಚಿವೆ ಪುತ್ರಿ ಜೊಯೀಸ್ ಇರಾನಿ ಅವರು ಗೋವಾದಲ್ಲಿ ಬಾರ್ ನಡೆಸುವಲ್ಲಿ ಎಂದಿಗೂ ಭಾಗಿಯಾಗಿಲ್ಲ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ. ಸುಳ್ಳು ಆರೋಪಗಳು ನಮ್ಮ ಕಕ್ಷಿದಾರರ ಪ್ರತಿಷ್ಠೆಗೆ ಮತ್ತು ಸಾರ್ವಜನಿಕ ಜೀವನದಲ್ಲಿನ ವ್ಯಕ್ತಿಗೆ ಧಕ್ಕೆ ತರಲು ಉದ್ದೇಶಿಸಲಾಗಿತ್ತು ಮತ್ತು ಅವರ ಮತ್ತು ಅವರ ಮಗಳ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಉದ್ದೇಶದಿಂದ ಕೂಡಿದೆ ಎಂದು ಸಚಿವೆ ಕಳಿಸಿರುವ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: Drunk Teacher: ಕಂಠಪೂರ್ತಿ ಕುಡಿದು, ಕ್ಲಾಸಿಗೆ ಬಂದು ಮಲಗಿದ್ಲು! ಶಿಕ್ಷಕಿ ವರ್ತನೆಗೆ ಮಕ್ಕಳು ಕಂಗಾಲು

ಸ್ಮೃತಿ ಇರಾನಿಗೆ ಶಿವಸೇನೆ ಸಂಸದೆ ಬೆಂಬಲ

ಈ ಮಧ್ಯೆ ಶಿವಸೇನಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಸ್ಮೃತಿ ಇರಾನಿ ಅವರನ್ನು ಬೆಂಬಲಿಸಿದ್ದಾರೆ. “18 ವರ್ಷ ವಯಸ್ಸಿನವರಿಗೆ ಭಾರತದಲ್ಲಿ ರೆಸ್ಟೋರೆಂಟ್ ನಡೆಸಲು ಪರವಾನಗಿ ಪಡೆಯು ಪ್ರಕ್ರಿಯೆ ತಿಳಿಯಲು ಹೇಗೆ ಸಾಧ್ಯ? ಚಿಕ್ಕ ಹುಡುಗಿಯ ವಿಚಾರದಲ್ಲಿ ಯಾರೂ ರಾಕ್ಷಸರಂತೆ ವರ್ತಿಸುವುದು ಬೇಡ. ನಾನು 19 ವರ್ಷದ ಮಗಳ ತಾಯಿಯಾಗಿ ಮಾತನಾಡುತ್ತೇನೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ, ನಾನು ನನ್ನ ರಾಜಕೀಯವನ್ನು ಬದಿಗಿಟ್ಟು ಮಾತನಾಡುತ್ತೇನೆ” ಅಂತ ಟ್ವೀಟ್ ಮಾಡಿದ್ದಾರೆ.
Published by:Annappa Achari
First published: