Sadananda Gowda: ಕೇರಳದಲ್ಲಿ ಎನ್ ಡಿಎ ಅಧಿಕಾರಕ್ಕೆ ಬಂದರೆ ಲವ್ ಜಿಹಾದ್ ವಿರುದ್ಧ ಕಾನೂನು: ಸದಾನಂದಗೌಡ

ಕೇರಳದಲ್ಲಿ “ಲವ್-ಜಿಹಾದ್” ಕೂಡಾ ದೊಡ್ಡ ಪಿಡುಗಾಗಿ ಪರಿಣಮಿಸಿದೆ. ಹಿಂದುಗಳಷ್ಟೇ ಅಲ್ಲದೆ ಕ್ರಿಶ್ಚಿಯನ್ ಸಮುದಾಯ ಕೂಡಾ ಈ ಪಿಡುಗಿಗೆ ತುತ್ತಾಗಿದೆ. ನಾವು ಅಧಿಕಾರಕ್ಕೆ ಬಂದರೆ ಉತ್ತರ ಪ್ರದೇಶ ಮಾದರಿಯಲ್ಲಿ ಲವ್ ಜಿಹಾದ್ ವಿರುದ್ಧ ಕಾನೂನು ರೂಪಿಸುತ್ತೇವೆ

ಸದಾನಂದ ಗೌಡ

ಸದಾನಂದ ಗೌಡ

  • Share this:
ತಿರುವನಂತಪುರ (ಮಾ. 22): ಸಿಪಿಐ-ಎಂ ನೇತೃತ್ವದ ಎಡರಂಗ ಸರ್ಕಾರದ ದುರಾಡಳಿತದಿಂದ ಕೇರಳ ಜನತೆ ರೋಸಿಹೋಗಿದ್ದು ಈ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಮುನ್ನಡೆ ಕಾಯ್ದುಕೊಂಡಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದಗೌಡ ಹೇಳಿದರು.  ತಿರುವನಂತಪುರದಲ್ಲಿ ಸಿಪಿಐ-ಎಂ ನೇತೃತ್ವದ ಎಡರಂಗ ಸರ್ಕಾರದ ವಿರುದ್ಧ ಆರೋಪಪಟ್ಟಿ ಬಿಡುಗಡೆ ಮಾಡಿದ ಅವರು, ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆ ಸೇರಿದಂತೆ ಆಡಳಿತದ ಎಲ್ಲ ಮಜಲುಗಳಿಲ್ಲೂ ಎಡರಂಗ ಸರ್ಕಾರ ವಿಫಲಗೊಂಡಿದೆ. ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಸಂಯುಕ್ತ ರಂಗ ಅಧಿಕಾರದಲ್ಲಿರಲಿ ಅಥವಾ ಎಡರಂಗದ ಸರ್ಕಾರ ಇರಲಿ ಕೋಮುಶಕ್ತಿಗಳಿಗೆ ಪುಷ್ಟಿ ನೀಡಲಾಗುತ್ತಿದೆ. ರಾಜಕೀಯ ಕೊಲೆಗಳು ಎಗ್ಗಿಲ್ಲದೆ ನಡೆದಿವೆ. ಕಳೆದೊಂದು ವರ್ಷದಲ್ಲಿ ಕನಿಷ್ಠವೆಂದರೂ 22 ಜನ ಬಿಜೆಪಿ ಕಾರ್ಯಕರ್ತರ ಹತ್ಯೆಯಾಗಿದೆ ಎಂದು ವಿವರಿಸಿದರು.

ಕೇರಳದಲ್ಲಿ “ಲವ್-ಜಿಹಾದ್” ಕೂಡಾ ದೊಡ್ಡ ಪಿಡುಗಾಗಿ ಪರಿಣಮಿಸಿದೆ. ಹಿಂದುಗಳಷ್ಟೇ ಅಲ್ಲದೆ ಕ್ರಿಶ್ಚಿಯನ್ ಸಮುದಾಯ ಕೂಡಾ ಈ ಪಿಡುಗಿಗೆ ತುತ್ತಾಗಿದೆ. ನಾವು ಅಧಿಕಾರಕ್ಕೆ ಬಂದರೆ ಉತ್ತರ ಪ್ರದೇಶ ಮಾದರಿಯಲ್ಲಿ ಲವ್ ಜಿಹಾದ್ ವಿರುದ್ಧ ಕಾನೂನು ರೂಪಿಸುತ್ತೇವೆ ಎಂದು ಅವರು ಹೇಳಿದರು.

ನಾಸ್ತಿಕ ಕಮ್ಯುನಿಸ್ಟರು ರಾಜ್ಯದ ವಿವಿಧ ದೇವಸ್ಥಾನಗಳ ಆಡಳಿತ ಮಂಡಳಿಗಳಲ್ಲಿ ತುಂಬಿಕೊಂಡಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಬಿಜೆಪಿಯ ಹಿರಿಯ ನಾಯಕ, ಪಕ್ಷವು ಅಧಿಕಾರಕ್ಕೆ ಬಂದರೆ ಈ ಎಲ್ಲ ಮಂಡಳಿಗಳನ್ನು ವಿಸರ್ಜಿಸಿ ಆಯಾ ದೇವಸ್ಥಾನಗಳ ಶ್ರದ್ಧಾಳುಗಳನ್ನು ಒಳಗೊಂಡ ನೂತನ ಆಡಳಿತ ಮಂಡಳಿಗಳನ್ನು ರಚಿಸಲಾಗುವುದು. ಅದು ಶಬರಿಮಲೆ ಸ್ವಾಮಿ ಅಯ್ಯಪ್ಪ ಪರಂಪರೆಯೇ ಇರಬಹುದು ಅಥವಾ ಇನ್ಯಾವುದೇ ಹಿಂದು ದೇವಸ್ಥಾನದ ರೀತಿ-ರಿವಾಜುಗಳೇ ಇರಬಹುದು. ಎಡರಂಗ ಸರ್ಕಾರವು ಹಿಂದುಗಳ ಆಸ್ಥೆಗೆ ಎಸಗುತ್ತಿರುವ ಅಪಚಾರ ಕೇರಳದ ಜನರಿಗೆ ಅರ್ಥವಾಗುತ್ತಿದೆ. ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಎನ್ ಡಿಎ ಶೇಕಡಾ 17ರಷ್ಟು ಮತ ಗಳಿಸಿದೆ. ಪಂಡಲಮ್ ನಗರಸಭೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದಿದೆ ಎಂದರು.

ಇದನ್ನು ಓದಿ: ಸಾಮಾನ್ಯ ಗಂಡನಂತೆ ಲಗೇಜ್​ ಹೊತ್ತು ಸಾಗಿದ ವಿರಾಟ್​; ಕೊಹ್ಲಿ ಕಾರ್ಯಕ್ಕೆ ಅಭಿಮಾನಿಗಳ ಮೆಚ್ಚುಗೆ

ಎಡರಂಗ ಆಡಳಿತದಲ್ಲಿ ಭ್ರಷ್ಟಚಾರ ಮಿತಿಮೀರಿದೆ. ಚಿನ್ನ ಕಳ್ಳಸಾಗಣೆ ಸೇರಿದಂತೆ ಹಲವು ಭ್ರಷ್ಟಾಚಾರ ಪ್ರಕರಣಗಳಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಚೇರಿಯ ಹೆಸರು ತಳುಕುಹಾಕಿಕೊಂಡಿದೆ. ಸರ್ಕಾರಿ ನೇಮಕ ಪ್ರಕ್ರಿಯೆಲ್ಲಿಯೂ ತೀವ್ರ ಭ್ರಷ್ಚಾಚಾರ ನಡೆದಿದೆ. ಸಚಿವರು, ಶಾಸಕರು ಮತ್ತು ಎಡಪಂಥೀಯ ನಾಯಕರ ಕೃಪಾಶೀರ್ವಾದ ಇದ್ದವರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ ಎಂದು ಆರೋಪಿಸಿದರು.

ಕೇರಳವು ವಿದ್ಯಾವಂತರ ನಾಡಾಗಿದೆ. ಅದು ಇನ್ನಷ್ಟು ಅಭಿವೃದ್ಧಿಗೆ ಅರ್ಹವಾಗಿದೆ. ಆದರೆ ದಶಕಗಳಿಂದ ದುರಾಡಳಿತದಿಂದ ನಲುಗಿದೆ. ರಾಜ್ಯಕ್ಕೆ ಬದಲಾವಣೆ ಬೇಕು. ನಿಜವಾದ ಪರಿವರ್ತನೆ ಬೇಕು. ಹಾಗಾಗಿ ಎನ್ ಡಿಎಗೆ ಒಂದು ಅವಕಾಶ ನೀಡುವಂತೆ ಕೇರಳದ ಜನತೆಯನ್ನು ಕೋರುತ್ತಿದ್ದೇನೆ ಎಂದು ಸದಾನಂದ ಗೌಡ ಹೇಳಿದರು. ಕೇರಳ ಬಿಜೆಪಿ ಉಸ್ತುವಾರಿ ಸಿ.ಪಿ. ರಾಧಾಕೃಷ್ಣನ್ ಮತ್ತಿತರರಿದ್ದರು.
Published by:Seema R
First published: