ತಲ್ಚೇರ್‌ ರಸಗೊಬ್ಬರ ಕಾರ್ಖಾನೆ ಪುನಶ್ಚೇತನಗೊಳಿಸಲು ಕೇಂದ್ರ ಸಚಿವ ಸದಾನಂದಗೌಡ ಸೂಚನೆ

ಟಿಎಫೆಲ್ ಪುನಶ್ಚೇತನ ಯೋಜನೆ ಪೂರ್ಣಗೊಂಡಾಗ ಕಾರ್ಖಾನೆಯು ವಾರ್ಷಿಕವಾಗಿ 12.7 ಲಕ್ಷ ಟನ್‌ ರಸಗೊಬ್ಬರ ವಿಶೇಷವಾಗಿ ಯೂರಿಯಾ ಉತ್ಪಾದನೆ ಮಾಡುತ್ತದೆ

news18-kannada
Updated:June 23, 2020, 9:26 PM IST
ತಲ್ಚೇರ್‌ ರಸಗೊಬ್ಬರ ಕಾರ್ಖಾನೆ ಪುನಶ್ಚೇತನಗೊಳಿಸಲು ಕೇಂದ್ರ ಸಚಿವ ಸದಾನಂದಗೌಡ ಸೂಚನೆ
ಅಧಿಕಾರಿಗಳೊಂದಿಗೆ ಚರ್ಚಿಸುತ್ತಿರುವ ಕೇಂದ್ರ ಸಚಿವ ಸದಾನಂದ ಗೌಡ
  • Share this:
ನವದೆಹಲಿ(ಜೂ.23): ಒಡಿಶಾದ ತಲ್ಚೇರನಲ್ಲಿರುವ ರಸಗೊಬ್ಬರ ಕಾರ್ಖಾನೆಯ (ಟಿಎಎಲ್‌) ಪುನಶ್ಚೇತನ ಕಾಮಗಾರಿಗಳನ್ನು ತ್ವರಿತಗೊಳಿಸುವಂತೆ ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ.ವಿ. ಸದಾನಂದಗೌಡ ಕಾರ್ಖಾನೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಸಚಿವ ಸದಾನಂದಗೌಡ ಅವರು ಟಿಎಫೆಲ್‌ ವ್ಯವಸ್ಥಾಪಕ ನಿರ್ದೇಶಕ ಎಸ್.ಎನ್‌ ಯಾದವ್‌, ನಿರ್ದೇಶಕ ಎಸ್‌. ಗಾವಡೆ ಮತ್ತಿತರ ಹಿರಿಯ ಅಧಿಕಾರಿಗಳ ಜೊತೆ ದೆಹಲಿಯಲ್ಲಿ ಮಂಗಳವಾರ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿದರು.

ಯೋಜನೆಯ ಪ್ರಗತಿ ಬಗ್ಗೆ ವಿವರ ನೀಡಿದ ಯಾದವ್‌, ಕೊರೋನಾ ಹಾಗೂ ಲಾಕ್​ ಡೌನ್​​ ‌ನಿಂದಾಗಿ ಮಾನವ ಸಂಪನ್ಮೂಲ ಹಾಗೂ ಅಗತ್ಯ ಸರಕುಗಳ ಕೊರತೆಯಾಗಿತ್ತು, ಈಗ ಮತ್ತೆ ಕೆಲಸ ಆರಂಭವಾಗಿದೆ‌. ಇದುವರಗಿನ ಪ್ರಗತಿಯ ಪ್ರಕಾರ ಯೋಜನೆ ಪೂರ್ಣಗೊಳ್ಳುವುದು ನಿಗದಿತ ವೇಳಾಪಟ್ಟಿಗಿಂತ (ಸೆಪ್ಟೆಂಬರ್‌ 2023) 6 ತಿಂಗಳು ವಿಳಂಬವಾಗಬಹುದು ಎಂದರು.

ಇದಕ್ಕೆ ಒಪ್ಪದ ಸಚಿವರು ವ್ಯರ್ಥವಾಗಿರುವ ಸಮಯವನ್ನು ತುಂಬಿಕೊಳ್ಳಲ ಏನೆಲ್ಲಾ ಅಗತ್ಯವಿದೆಯೋ ಅದನ್ನು ಮಾಡಿ. ಸರ್ಕಾರದ ಮಟ್ಟದಲ್ಲಿ ಆಗಬೇಕಾದ ಕೆಲಸದಲ್ಲಿ ಸ್ವಲ್ಪವೂ ವಿಳಂಬ ಮಾಡುವಂತಿಲ್ಲ. ಅಗತ್ಯ ಬೆಂಬಲ, ಸಹಕಾರ ನೀಡುತ್ತೇವೆ. ಒಟ್ಟಿನಲ್ಲಿ ನಿಗದಿತ ಅವಧಿಯಲ್ಲಿ ಕಾಮಗಾರಿ ಮುಗಿಯಬೇಕು ಎಂದು ಸೂಚಿಸಿದರು.

ತಲ್ಚೇರನಲ್ಲಿರುವ ರಸಗೊಬ್ಬರ ಕಾರ್ಖಾನೆಯ ಪನಶ್ಚೇತನಕ್ಕಾಗಿ 13,270 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಅತ್ಯಂತ ತಾಂತ್ರಿಕ ಕ್ಷಮತೆಯ ಹಾಗೂ ಪರಿಸರ ಸ್ನೇಹಿ ಇಂಧನ ವ್ಯವಸ್ತೆಯನ್ನು (ಕೋಲ್‌ ಗ್ಯಾಸಿಫಿಕೇಶನ್‌) ಕಾರ್ಖಾನೆಯಲ್ಲಿ ಅಳವಡಿಸಲಾಗುತ್ತಿದೆ.

ಸಭೆಯ ನಂತರ ಹೇಳಿಕೆ ನೀಡಿರುವ ಸಚಿವ ಸದಾನಂದಗೌಡ, ಟಿಎಫೆಲ್ ಪುನಶ್ಚೇತನ ಯೋಜನೆ ಪೂರ್ಣಗೊಂಡಾಗ ಕಾರ್ಖಾನೆಯು ವಾರ್ಷಿಕವಾಗಿ 12.7 ಲಕ್ಷ ಟನ್‌ ರಸಗೊಬ್ಬರ ವಿಶೇಷವಾಗಿ ಯೂರಿಯಾ ಉತ್ಪಾದನೆ ಮಾಡುತ್ತದೆ. ಸಾವಿರಾರು ನೇರ ಹಾಗೂ ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗುತ್ತವೆ ಎಂದರು.

ಇದನ್ನೂ ಓದಿ : ರಾಜ್ಯದಲ್ಲಿ ಇಂದು 322 ಹೊಸ ಪ್ರಕರಣ ದಾಖಲು ; ಸೋಂಕಿತರ ಸಂಖ್ಯೆ 9,721ಕ್ಕೆ ಏರಿಕೆರಸಗೊಬ್ಬರ ಉತ್ಪಾದನೆಯಲ್ಲಿ ಸ್ವಾವಲಂಬನೆ ಗಳಿಸುವುದು ನಮ್ಮ ಉದ್ದೇಶವಾಗಿದೆ. ಇದಕ್ಕಾಗಿ ಅನೇಕ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಎಫ್‌ಸಿಐಲ್‌ ರಸಗೊಬ್ಬರ ಕಾರ್ಖಾನೆಯ ಘೋರಕ್ಪುರ ಹಾಗೂ ಸಿಂದ್ರಿ ಘಟಕಗಳು ಮತ್ತು ಎಚೆಫ್‌ಸಿಎಲ್‌ನ ಬರೌಣಿ ಘಟಕದ ಪುನಶ್ಷೇತನ ಕಾಮಗಾರಿ ಪ್ರಗತಿಯಲ್ಲಿದೆ.

ಇವೆಲ್ಲಾ ಪೂರ್ಣಗೊಂಡಾಗ ಭಾರತವು ರಸಗೊಬ್ಬರ ಸ್ವಾವಲಂಬನೆಯತ್ತ ಮಹತ್ತರ ಹೆಜ್ಜೆ ಇಡಲಿದೆ ಎಂದು ಸಚಿವರು ತಿಳಿಸಿದರು.
First published: June 23, 2020, 9:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading