ಆತ್ಮನಿರ್ಭರ್ ಪ್ಯಾಕೇಜ್ ಪ್ರಯೋಜನ ಪಡೆಯಲು ಉದ್ಯಮಿಗಳಿಗೆ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಕರೆ

ಸರ್ಕಾರಿ ಸಂಸ್ಥೆಗಳು 55 ರಾಸಾಯನಿಕಗಳ ದಾಸ್ತಾನಿನ ವೇಳೆ ಸ್ಥಳೀಯ ಉತ್ಪಾದಕರಿಗೆ ಆದ್ಯತೆ ನೀಡುವುದನ್ನು ಕಡ್ಡಾಯಗೊಳಿಸಿ ಸಾರ್ವಜನಿಕ ದಾಸ್ತಾನು ಆದೇಶಗಳ ಅಧಿಸೂಚನೆ ಹೊರಡಿಸಲಾಗಿದೆ.

ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ

ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ

  • Share this:
ನವದೆಹಲಿ(ಜೂ.25): ರಾಸಾಯನಿಕ ಮತ್ತು ಪೆಟ್ರೋ ರಾಸಾಯನಿಕ ಕ್ಷೇತ್ರದಲ್ಲಿ ಅಪಾರ ಸಾಮರ್ಥ್ಯವಿದ್ದು, ಕೈಗಾರಿಕೆಗಳು, ಕೋವಿಡ್ -19ನಿಂದ ಬಾಧಿತವಾಗಿರುವ ಆರ್ಥಿಕತೆಗೆ ಪುನಶ್ಚೇತನ ನೀಡಲು ಪ್ರಕಟಿಸಲಾಗಿರುವ 20 ಲಕ್ಷ ಕೋಟಿ ರೂಪಾಯಿಗಳ ಆತ್ಮನಿರ್ಭರ್ ಭಾರತ ವಿಶೇಷ ಪ್ಯಾಕೇಜ್ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದಗೌಡ ಕರೆ ನೀಡಿದ್ದಾರೆ.

ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಗುರುವಾರ ರಾಸಾಯನಿಕ ಮತ್ತು ಪೆಟ್ರೋ ರಾಸಾಯನಿಕ ಸಲಹಾ ವೇದಿಕೆ ಸಭೆಯ ಅಧ್ಯಕ್ಷತೆ ವಹಿಸಿದ್ದ ಮಾತನಾಡಿದ ಸದಾನಂದಗೌಡ, ಭಾರತ ಸರ್ಕಾರ ಕಳೆದ 2014ರಿಂದಲೂ ದೇಶದಲ್ಲಿ ಸುಗಮ ವಾಣಿಜ್ಯ ನಡೆಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ ಇದರ ಫಲವಾಗಿ ವಿಶ್ವ ಬ್ಯಾಂಕ್ ವರದಿಯಲ್ಲಿ ಭಾರತ 2017ರಲ್ಲಿದ್ದ 130ನೇ ಸ್ಥಾನದಿಂದ 63ನೇ ಶ್ರೇಯಾಂಕ ಪಡೆದಿದೆ ಎಂದು  ತಿಳಿಸಿದರು.

ರಾಸಾಯನಿಕ ಮತ್ತು ಪೆಟ್ರೋ ರಾಸಾಯನಿಕ ಇಲಾಖೆ ಕಳೆದ ಒಂದು ವರ್ಷಗಳ ಅವಧಿಯಲ್ಲಿ ವಲಯದ ಕ್ರಮಬದ್ಧ ಅಭಿವೃದ್ಧಿಗೆ ಬೆಂಬಲ ನೀಡಲು ಹಲವಾರು ಕ್ರಮಗಳನ್ನು ಕೈಗೊಂಡಿದೆ, ಬಿಐಎಸ್ ಮಾನದಂಡವನ್ನು 19 ರಾಸಾಯನಿಕ ಮತ್ತು 5 ಪೆಟ್ರೋ ರಾಸಾಯನಿಕಗಳಿಗೆ ಕಡ್ಡಾಯಗೊಳಿಸಲಾಗಿದೆ. ಸರ್ಕಾರಿ ಸಂಸ್ಥೆಗಳು 55 ರಾಸಾಯನಿಕಗಳ ದಾಸ್ತಾನಿನ ವೇಳೆ ಸ್ಥಳೀಯ ಉತ್ಪಾದಕರಿಗೆ ಆದ್ಯತೆ ನೀಡುವುದನ್ನು ಕಡ್ಡಾಯಗೊಳಿಸಿ ಸಾರ್ವಜನಿಕ ದಾಸ್ತಾನು ಆದೇಶಗಳ ಅಧಿಸೂಚನೆ ಹೊರಡಿಸಲಾಗಿದೆ. ಅತಿ ಹೆಚ್ಚಿನ ಮೌಲ್ಯ ರಾಸಾಯನಿಕ ಇತ್ಯಾದಿಗಳ ಮಾರಾಟಕ್ಕೆ ಪ್ರತ್ಯೇಕ ಎಚ್.ಎಸ್. ಕೋಡ್ ಪಡೆಯುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ವಿವರಿಸಿದರು.

ಸೂಕ್ತ ಪ್ರೋತ್ಸಾಹಕಗಳ ಮಿಶ್ರಣದೊಂದಿಗೆ ಈ ಕೈಗಾರಿಕಾ ಸಮೂಹಗಳ ತ್ವರಿತ ಬೆಳವಣಿಗೆಯನ್ನು ಬೆಂಬಲಿಸಲು ಇಲಾಖೆ ಪರಿಷ್ಕರಿಸಿದ ಪಿಸಿಪಿಐಆರ್ ನೀತಿಯನ್ನು ರೂಪಿಸುತ್ತಿದೆ ಎಂದು ಅವರು ತಿಳಿಸಿದರು. ಮತ್ತೊಂದೆಡೆ, ಕೈಗಾರಿಕೆಗಳು ತಮ್ಮ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಹೆಚ್ಚಿಸುವ ಚಟುವಟಿಕೆ ಮತ್ತು ವೆಚ್ಚದ ಹೆಚ್ಚಳವನ್ನು ಪರಿಗಣಿಸಬೇಕು ಎಂದರು.

ತ್ಯಾಜ್ಯ ಉತ್ಪತ್ತಿಯನ್ನು ಕಡಿಮೆ ಮಾಡಲು, ಸುರಕ್ಷಿತ ದ್ರಾವಣಗಳನ್ನು ಬಳಸಲು ಮತ್ತು ರಾಸಾಯನಿಕ ಮತ್ತು ಪೆಟ್ರೋ ರಾಸಾಯನಿಕಗಳ ಕ್ಷೇತ್ರವನ್ನು ಪರಿಸರಾತ್ಮಕವಾಗಿ ಸುಸ್ಥಿರ ವಲಯವಾಗಿ ಅಭಿವೃದ್ಧಿ ಮಾಡಲು ಪುನರ್ಬಳಕೆಯ ಪೂರಕ ವಸ್ತು ಬಳಸಲು  ಸುಸ್ಥಿರ ಕೆಮಿಸ್ಟ್ರಿ ಎಂದು ಕರೆಯಲಾಗುವ ಹಸಿರು ಕೆಮಿಸ್ಟ್ರಿಯನ್ನು ಕೈಗಾರಿಕೆಗಳು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು.

ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಹಾಯಕ ಸಚಿವ ಮನ್ಸುಖ್ ಮಾಂಡವೀಯ ಮಾತನಾಡಿ ನಮ್ಮ ಉತ್ಪಾದನಾ ನೆಲೆಯನ್ನು ಬಲಪಡಿಸಲು ಮತ್ತು ಹೊಸ ಹೂಡಿಕೆಗಳನ್ನು ಆಕರ್ಷಿಸಲು ಪಿಸಿಪಿಐಆರ್‌ ಗಳ ಅಭಿವೃದ್ಧಿ ಪ್ರಮುಖ ಪೂರ್ವಾಪೇಕ್ಷಿತವಾಗಿದೆ ಎಂದು ತಿಳಿಸಿದರು.

ಕಾರ್ಯದರ್ಶಿ ಆರ್.ಕೆ. ಚೌಧರಿ ಉದ್ಯಮದ ಸಲಹೆಗಳು ಮತ್ತು ಕುಂದುಕೊರತೆಗಳನ್ನು ಗಮನದಲ್ಲಿರಿಸಿಕೊಂಡು ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ಸಮಸ್ಯೆಗಳನ್ನು ಪರಿಹರಿಸಲು ಭಾರತ ಸರ್ಕಾರದ ಇತರ ಇಲಾಖೆಗಳೊಂದಿಗೆ ಸಮನ್ವಯ ಹೊಂದಿರುವವರ ಜೊತೆ ಇಲಾಖೆ ಕೆಲಸ ಮಾಡುತ್ತದೆ ಎಂದು ಹೇಳಿದರು.

ಇದನ್ನೂ ಓದಿ : ಲಾಕ್ ಡೌನ್‌ ಕುರಿತು ಇಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಆಗಿಲ್ಲ ; ಸಚಿವ ಜೆ ಸಿ ಮಾಧುಸ್ವಾಮಿ

ಇದು ವೇದಿಕೆಯ 2ನೇ ಸಭೆಯಾಗಿದ್ದು, ಮೊದಲ ಸಭೆ 2029ರ ಆಗಸ್ಟ್ ನಲ್ಲಿ ನಡೆದಿತ್ತು. ಈ ವೇದಿಕೆ ಕೈಗಾರಿಕೆಗಳಿಗೆ ಸರ್ಕಾರದೊಂದಿಗೆ ತೊಡಕುಗಳ ನಿವಾರಣೆಗೆ, ಸುಗಮ ವಾಣಿಜ್ಯ ಹೆಚ್ಚಳಕ್ಕೆ ಮತ್ತು ವಲಯದಲ್ಲಿ ಹೂಡಿಕೆಗೆ ಅವಕಾಶ ನೀಡುವ ಕುರಿತಂತೆ ನೇರ ಸಂವಾದ ನಡೆಸಲು ಶಾಶ್ವತ ವೇದಿಕೆ ಕಲ್ಪಿಸಿದೆ. ವೇದಿಕೆಯ ಎರಡನೇ ಸಭೆಯಲ್ಲಿ, ವಿವಿಧ ಸಂಘಟನೆಗಳು ಕೈಗಾರಿಕೆಗಳು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಒತ್ತಿ ಹೇಳಿದವು, ದೇಶೀಯ ಉತ್ಪನ್ನ ಮತ್ತು ರಫ್ತು ಉತ್ತೇಜನಕ್ಕೆ ಮತ್ತು ಆಮದು ಅವಲಂಬನೆ ತಗ್ಗಿಸಲು ಸಲಹೆಗಳನ್ನೂ ನೀಡಿದವು.

ಸಭೆಯಲ್ಲಿ ಸಹಾಯಕ ಸಚಿವ ಮತ್ತು ವೇದಿಕೆಯ ಉಪಾಧ್ಯಕ್ಷ ಮನ್ಸುಖ್ ಮಾಂಡವೀಯ, ಕಾರ್ಯದರ್ಶಿ (ರಾಸಾಯನಿಕ) ಆರ್.ಕೆ. ಚೌಧರಿ, ರಾಸಾಯನಿಕ ಮತ್ತು ಪೆಟ್ರೋ ರಾಸಾಯನಿಕ ಇಲಾಖೆ, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ  ಸಚಿವಾಲಯ ಮತ್ತು ವಾಣಿಜ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ವಿವಿಧ ರಾಸಾಯನಿಕ ಮತ್ತು ಪೆಟ್ರೋ ರಾಸಾಯನಿಕ ಕೈಗಾರಿಕಾ ಸಂಸ್ಥೆಗಳಾದ ಸಿಪಿಎಂಎ, ಐಸಿಸಿ, ಎ.ಎಂ.ಎ.ಐ., ಎಐಪಿಎಂಎ, ಸಿಸಿಎಫ್.ಐ., ಪಿಎಂಎಫ್.ಎ.ಐ, ಓಪಿಪಿಐ, ಪ್ಲಾಸ್ಟ್ ಇಂಡಿಯಾ, ಎಎಸ್.ಎಫ್.ಐ, ಎಫ್.ಐ.ಸಿ.ಸಿ.ಐ, ಸಿಐಐ, ಪೆಕ್ಸ್ ಕೌನ್ಸಿಲ್ ಮತ್ತು ಕೆಮೆಕ್ಸಿಲ್ ಪ್ರತಿನಿಧಿಗಳು ಭಾಗಿಯಾಗಿದ್ದರು.
First published: