Indian Passengers: ಇನ್ಮುಂದೆ ಭಾರತದಿಂದ ಪ್ರಯಾಣಿಸುವ ಅಂತರಾಷ್ಟ್ರೀಯ ವಿಮಾನ ಪ್ರಯಾಣಿಕರು ಈ ಎಲ್ಲಾ ವಿಷಯಗಳನ್ನು ಹಂಚಿಕೊಳ್ಳಬೇಕಂತೆ

ಯಾವುದೇ ವಿಮಾನ ಸಂಸ್ಥೆಯ ವಿಮಾನ ನಿರ್ವಾಹಕರು ತಮ್ಮ ವಿಮಾನ ಹೊರಡುವ ಕನಿಷ್ಠ 24 ಗಂಟೆಗಳ ಮೊದಲು, ಪ್ರಯಾಣಿಕರ ಬಗ್ಗೆ ಸಂಪೂರ್ಣ ಮಾಹಿತಿ ನೀಡುವುದು ಕಡ್ಡಾಯ ಎಂದು ವಿಮಾನಯಾನ ಸಂಸ್ಥೆಗಳಿಗೆ ಸರ್ಕಾರ ಆದೇಶ ಹೊರಡಿಸಿದೆ. ಯಾವುದೇ ಪ್ರಯಾಣಿಕರು ಭಾರತದಿಂದ ಮತ್ತು ಬೇರೆ ದೇಶಕ್ಕೆ ಪ್ರಯಾಣಿಸುವ ಎಲ್ಲ ಅಂತರಾಷ್ಟ್ರೀಯ ಪ್ರಯಾಣಿಕರ ಬಗ್ಗೆ ಅವರ ಪ್ರಯಾಣಕ್ಕೆ ಸಂಬಂಧ ಪಟ್ಟ ಸಂಪೂರ್ಣ ಮಾಹಿತಿ ಹಂಚಿಕೊಳ್ಳಬೇಕು ಎಂದು ತಿಳಿಸಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ನವ ದೆಹಲಿ: ಯಾವುದೇ ವಿಮಾನ ಸಂಸ್ಥೆಯ (Airlines) ವಿಮಾನ ನಿರ್ವಾಹಕರು ತಮ್ಮ ವಿಮಾನ ಹೊರಡುವ ಕನಿಷ್ಠ 24 ಗಂಟೆಗಳ ಮೊದಲು, ಪ್ರಯಾಣಿಕರ ಬಗ್ಗೆ ಸಂಪೂರ್ಣ ಮಾಹಿತಿ ನೀಡುವುದು ಕಡ್ಡಾಯ ಎಂದು ವಿಮಾನಯಾನ ಸಂಸ್ಥೆಗಳಿಗೆ ಸರ್ಕಾರ (Government) ಆದೇಶ ಹೊರಡಿಸಿದೆ. ಯಾವುದೇ ಪ್ರಯಾಣಿಕರು (Passenger) ಭಾರತದಿಂದ ಮತ್ತು ಬೇರೆ ದೇಶಕ್ಕೆ ಪ್ರಯಾಣಿಸುವ ಎಲ್ಲ ಅಂತರಾಷ್ಟ್ರೀಯ ಪ್ರಯಾಣಿಕರ ಬಗ್ಗೆ ಅವರ ಪ್ರಯಾಣಕ್ಕೆ ಸಂಬಂಧ ಪಟ್ಟ ಸಂಪೂರ್ಣ ಮಾಹಿತಿ (Information) ಹಂಚಿಕೊಳ್ಳಬೇಕು ಎಂದು ತಿಳಿಸಿದೆ. ಈ ಮಾಹಿತಿಯನ್ನು ʼಪ್ರಯಾಣಿಕರ ಅಪಾಯದ ವಿಶ್ಲೇಷಣೆʼ ನಡೆಸಲು ಸೆಂಟ್ರಲ್ ಬೋರ್ಡ್ ಆಫ್ ಇನ್‌ಡೈರೆಕ್ಟ್‌ ಟ್ಯಾಕ್ಸ್‌ ಆಂಡ್‌ ಕಸ್ಟಮ್ಸ್ (CBIC)-ಸ್ಥಾಪಿತ ಸಂಸ್ಥೆಯು, ರಾಷ್ಟ್ರೀಯ ಕಸ್ಟಮ್ಸ್ ಟಾರ್ಗೆಟಿಂಗ್ ಸೆಂಟರ್-ಪ್ಯಾಸೆಂಜರ್ (NCTC-P) ಸಂಸ್ಥೆಯೊಂದಿಗೆ ಹಂಚಿಕೊಳ್ಳಬೇಕಾಗುತ್ತದೆ.

ಮಾಹಿತಿಯ ಹಂಚಿಕೆಯ ಎರಡು ಪ್ರಮುಖ ಉದ್ದೇಶ
ಈ ಮಾಹಿತಿಯ ಹಂಚಿಕೆಯು ಪ್ರಮುಖವಾಗಿ ಎರಡು ಉದ್ದೇಶಗಳನ್ನು ಹೊಂದಿದೆ: ಮೊದಲನೆಯದಾಗಿ, ಕಾಯ್ದೆಯ ಅಡಿಯಲ್ಲಿ ಅಪರಾಧಗಳ ತಡೆಗಟ್ಟುವಿಕೆ, ಅಪರಾಧಿಗಳ ಪತ್ತೆ, ತನಿಖೆ ಮತ್ತು ಕಾನೂನು ಕ್ರಮ ಕೈಗೊಳ್ಳುವ ಸಲುವಾಗಿ ಮಾಹಿತಿ ಹಂಚಿಕೊಳ್ಳಲಾಗುತ್ತದೆ. ಇನ್ನು ಎರಡನೆಯದಾಗಿ, ಭಾರತ ಮತ್ತು ವಿದೇಶಗಳಲ್ಲಿ ಇರುವ ಕಾನೂನು ಜಾರಿ ಸಂಸ್ಥೆಗಳು ಮತ್ತು ಸರ್ಕಾರಿ ಇಲಾಖೆಗಳಿಗೆ, ಅಗತ್ಯವಿರುವ ಮಾಹಿತಿ ನೀಡಲು ಇಲ್ಲಿ ಸಿಗುವ ಮಾಹಿತಿ ಹಂಚಿಕೊಳ್ಳಲಾಗುತ್ತದೆ.

ಕೇಂದ್ರ ಹಣಕಾಸು ಸಚಿವಾಲಯದ ಅಡಿಯಲ್ಲಿ ಬರುವ CBIC ಸಂಸ್ಥೆಯು, ಆಗಸ್ಟ್ 8, ಸೋಮವಾರದಂದು 'ಪ್ರಯಾಣಿಕರ ಹೆಸರು ದಾಖಲೆ ಮಾಹಿತಿ ನಿಯಮಗಳು, 2022' ಎಂಬ ಶೀರ್ಷಿಕೆಯ ಗೆಜೆಟ್ ಅಧಿಸೂಚನೆಯನ್ನು ಬಿಡುಗಡೆ ಮಾಡಿತು ಮತ್ತು ಆ ದಿನಾಂಕದಿಂದ ಈ ಅಧಿಸೂಚೆನೆ ಜಾರಿಗೆ ಬಂದಿದೆ. ಪ್ರತಿ ವಿಮಾನ ನಿರ್ವಾಹಕರು ಈಗ NCTC-P ಗೆ ನಿಗದಿತ ನಮೂನೆಯಲ್ಲಿ ಪ್ರಯಾಣಿಕರ ವಿವರಗಳನ್ನು ನೋಂದಾಯಿಸಲು ಮತ್ತು ಒದಗಿಸುವ ಅಗತ್ಯವಿದೆ “ನಿರ್ಗಮನ ಸಮಯಕ್ಕಿಂತ ಇಪ್ಪತ್ತನಾಲ್ಕು ಗಂಟೆಗಳ ನಂತರ ನೋಂದಾಯಿಸಲು ಯಾವುದೇ ಅವಕಾಶ ಇಲ್ಲ. ಆಗ ಎಲ್ಲ ವಿಮಾನಗಳು ನಿರ್ಗಮನ ಮಾಡಿರುತ್ತವೆ. ಆ ಸಮಯದಲ್ಲಿ ಎಲ್ಲ ಪ್ರಯಾಣಿಕರ ಹೆಸರು ನೋಂದಾಯಿಸಲು ಸಾಧ್ಯವಾಗುವುದಿಲ್ಲ" ಎಂಬ ವಿಷಯವನ್ನು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: World's Worst City: ಅಯ್ಯಯ್ಯಪ್ಪಾ, ಈ ಸಿಟಿಯಲ್ಲಿ ಜನ ಹೇಗಿರುತ್ತಾರೋ? ಪಾಕಿಸ್ತಾನದ ಕರಾಚಿ ಈಗ ಜಗತ್ತಿನ ಅತ್ಯಂತ ಕೆಟ್ಟ ನಗರ!

ವಿಮಾನ ಪ್ರಯಾಣಿಕರ ಹೆಸರಿನ ದಾಖಲೆಯ ಮಾಹಿತಿಯು PNR ನಂತಹ ವಿವರಗಳನ್ನು ಒಳಗೊಂಡಿರುತ್ತದೆ. ಟಿಕೆಟ್‌ ಕಾಯ್ದಿರಿಸುವಿಕೆಯ ದಿನಾಂಕ ಮತ್ತು ಟಿಕೆಟ್ ವಿತರಣೆ, ಲಭ್ಯವಿರುವ ಪುನರಾವರ್ತಿತ ಫ್ಲೈಯರ್ ಮತ್ತು ವಿಮಾನ ಪ್ರಯಾಣದ ಪ್ರಯೋಜನ ಮಾಹಿತಿ (ಉಚಿತ ಟಿಕೆಟ್‌ಗಳು, ಅಪ್‌ಗ್ರೇಡ್‌ಗಳಂತಹವು), ಲಭ್ಯವಿರುವ ಎಲ್ಲಾ ಪಾವತಿ/ಬಿಲ್ಲಿಂಗ್ ಮಾಹಿತಿ (ಕ್ರೆಡಿಟ್ ಕಾರ್ಡ್ ಸಂಖ್ಯೆಯಂತೆ), ನಿರ್ದಿಷ್ಟ PNR ಗಾಗಿ ಪ್ರಯಾಣದ ವಿವರ, ಟ್ರಾವೆಲ್ ಏಜೆನ್ಸಿ/ಟ್ರಾವೆಲ್ ಏಜೆಂಟ್ ಮುಂತಾದ ಮಾಹಿತಿಗಳನ್ನು ವಿಮಾನ ನಿರ್ವಾಹಕರು ಹಂಚಿಕೊಳ್ಳಬೇಕಾಗುತ್ತದೆ.

ಯಾವೆಲ್ಲಾ ವಿಷಯಗಳನ್ನು ಹಂಚಿಕೊಳ್ಳಬೇಕು
ಅಧಿಸೂಚನೆ ಪ್ರಕಾರ ಪ್ರಯಾಣಿಕರ ವಿವರಗಳು "ಬೇರೆ / ಬೇರೆಯ ಮಾಹಿತಿಯನ್ನು ಹೊಂದಿರುವ ಟಿಕೆಟ್ ಸಂಖ್ಯೆ, ಏಕಮುಖ ಟಿಕೆಟ್ ಸೇರಿದಂತೆ ಟಿಕೆಟಿಂಗ್ ಮಾಹಿತಿ, ಲಗೇಜುಗಳ ಮಾಹಿತಿ, ಆಸನ ಸಂಖ್ಯೆ, ಪಾಸ್‌ಪೋರ್ಟ್ ಸಂಖ್ಯೆ, ಜನ್ಮ ದಿನಾಂಕ ಮತ್ತು ಲಿಂಗ ಈ ತರದ ಇತರ ಮಾಹಿತಿಗಳನ್ನು ಸಹ ಹಂಚಿಕೊಳ್ಳಬೇಕು” ಎಂದು ಹೇಳಿದೆ.

ಹಾಗೆಯೇ, "ಒಬ್ಬ ವ್ಯಕ್ತಿಯ ಜನಾಂಗ ಅಥವಾ ಜನಾಂಗೀಯ ಮೂಲ, ರಾಜಕೀಯ ಅಭಿಪ್ರಾಯಗಳು, ಧರ್ಮ ಅಥವಾ ತಾತ್ವಿಕ ನಂಬಿಕೆಗಳು, ಟ್ರೇಡ್ ಯೂನಿಯನ್ ಸದಸ್ಯತ್ವ, ಆರೋಗ್ಯ, ಲೈಂಗಿಕ ಜೀವನ ಅಥವಾ ಲೈಂಗಿಕ ದೃಷ್ಟಿಕೋನವನ್ನು ಬಹಿರಂಗಪಡಿಸುವ ಪ್ರಯಾಣಿಕರ ಹೆಸರಿನ ದಾಖಲೆಯ ಮಾಹಿತಿಯನ್ನು ಹಂಚಿಕೊಳ್ಳಲು ಯಾವುದೇ ರೀತಿಯಲ್ಲಿ ಅನುಮತಿ ನೀಡಿಲ್ಲ. ಇದು ಪ್ರಯಾಣಿಕರ ಹಿತ ದೃಷ್ಟಿಯಿಂದ ಮುಂದೆ ಕೂಡ ಇಂತಹ ಮಾಹಿತಿ ಹಂಚಿಕೊಳ್ಳಲು ಅವಕಾಶ ನೀಡುವುದಿಲ್ಲ” ಎಂದು ಅದು ಹೇಳಿದೆ.

ಇದನ್ನೂ ಓದಿ: UK PM Race: ಸೋಲುವ ಮಾತುಗಳನ್ನಾಡಿದ ಇನ್ಫಿ ಮೂರ್ತಿ ಅಳಿಯ ರಿಷಿ ಸುನಕ್, ಕಾರಣವೇನು?

ಈ ಹೊಸ ನಿಯಮವು ಪ್ರಯಾಣಿಕರ ಹೆಸರಿನ ದಾಖಲೆಯ ಮಾಹಿತಿಯು ದುರುಪಯೋಗ ಆಗದಂತೆ ತಡೆಗಟ್ಟಲು ವಾರ್ಷಿಕ ಆಧಾರದ ಮೇಲೆ ವ್ಯಾಪಕ ಸ್ವತಂತ್ರ ಸಿಸ್ಟಮ್ ಆಡಿಟ್ ಮತ್ತು ಭದ್ರತಾ ಲೆಕ್ಕಪರಿಶೋಧನೆಯನ್ನು ಒದಗಿಸುವ ವ್ಯವಸ್ಥೆ ಮಾಡುತ್ತದೆ. ಒಂದು ವೇಳೆ ಪ್ರಯಾಣಿಕರ ಹೆಸರಿನ ದಾಖಲೆಯ ಮಾಹಿತಿಯನ್ನು ವಿಮಾನ ನಿರ್ವಾಹಕರು ಹಂಚಿಕೊಂಡಿದ್ದೇ ಆದರೆ ಅವರಿಗೆ ರೂ. 25,000 ದಂಡ ವಿಧಿಸಲಾಗುವುದು ಎಂದು ಖಡಕ್‌ ವಾರ್ನಿಂಗ್‌ ಕೊಟ್ಟಿದೆ.
Published by:Ashwini Prabhu
First published: