ಈ ಸಾಲಿನ ಕ್ರೀಡಾ ಪ್ರಶಸ್ತಿಗಳನ್ನು ಪ್ರಕಟಿಸಿದ ಕೇಂದ್ರ ಸರ್ಕಾರ; ಕ್ರಿಕೆಟರ್ ರೋಹಿತ್ ಶರ್ಮಾಗೆ ಒಲಿದ ಖೇಲ್ ರತ್ನಾ

ಕ್ರಿಕೆಟರ್‌ ರೋಹಿತ್‌ ಶರ್ಮಾ ಅಲ್ಲದೆ ಟಿ-ಪ್ಯಾರಾ ಅಥ್ಲೆಟಿಕ್ಸ್ ಮರಿಯಪ್ಪನ್ , ಟೇಬಲ್ ಟೆನಿಸ್ - ಮಾನಿಕಾ ಬಾತ್ರಾ, ವ್ರೆಸ್ಲಿಂಗ್-ವಿನೇಶ್ ಮತ್ತು ಹಾಕಿ ಕ್ರೀಡೆಯಲ್ಲಿನ ಸಾಧನೆಗಾಗಿ ರಾಣಿ ಎಂಬರಿಗೆ ಖೇಲ್‌ ರತ್ನಾ ಪ್ರಶಸ್ತಿಯನ್ನು ಘೋಷಿಸಲಾಗಿದೆ.

ರೋಹಿತ್‌ ಶರ್ಮಾ.

ರೋಹಿತ್‌ ಶರ್ಮಾ.

 • Share this:
  ನವ ದೆಹಲಿ (ಆಗಸ್ಟ್‌ 21); ಕೇಂದ್ರ ಸರ್ಕಾರ ಈ ಸಾಲಿನ ಕ್ರೀಡಾ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಭಾರತ ಕ್ರಿಕೆಟ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಮತ್ತುಉಪ ನಾಯಕ ರೋಹಿತ್‌ ಶರ್ಮಾ ಅವರಿಗೆ ಕ್ರೀಡಾ ಕ್ಷೇತ್ರದ ಪ್ರತಿಷ್ಠಿತ ಖೇಲ್‌ ರತ್ನಾ ಪ್ರಶಸ್ತಿಯನ್ನು ಘೋಷಿಸಲಾಗಿದೆ. ರೋಹಿತ್‌ ಶರ್ಮಾ ಅಲ್ಲದೆ, ವಿವಿಧ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಒಟ್ಟು ಐವರಿಗೆ ಈ ಬಾರಿಯ ರಾಜೀವ್ ಗಾಂಧಿ ಖೇಲ್‌ ರತ್ನಾ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ

  ಕ್ರಿಕೆಟರ್‌ ರೋಹಿತ್‌ ಶರ್ಮಾ ಅಲ್ಲದೆ ಟಿ-ಪ್ಯಾರಾ ಅಥ್ಲೆಟಿಕ್ಸ್ ಮರಿಯಪ್ಪನ್ , ಟೇಬಲ್ ಟೆನಿಸ್ - ಮಾನಿಕಾ ಬಾತ್ರಾ, ವ್ರೆಸ್ಲಿಂಗ್-ವಿನೇಶ್ ಮತ್ತು ಹಾಕಿ ಕ್ರೀಡೆಯಲ್ಲಿನ ಸಾಧನೆಗಾಗಿ ರಾಣಿ ಎಂಬರಿಗೆ ರಾಜೀವ್ ಗಾಂಧಿ ಖೇಲ್‌ ರತ್ನಾ ಪ್ರಶಸ್ತಿಯನ್ನು ಘೋಷಿಸಲಾಗಿದೆ.

  ಭಾರತದ ಸರ್ಕಾರ ಯುವಜನ ಸೇವಾ ಮತ್ತು ಕ್ರೀಡಾ ಸಚಿವಾಲಯ 2020ನೇ ವರ್ಷಕ್ಕೆ ಸಾಧನೆ ಮಾಡಿದ್ದ ಕ್ರೀಡಾಪಟುಗಳಿಂದ ಪ್ರಶಸ್ತಿಗೆ ಹೆಸರುಗಳನ್ನು ಆಹ್ವಾನಿಸಿತ್ತು. 2016ರ ಜನವರಿ 1 ರಿಂದ 2019ರ ಡಿಸೆಂಬರ್​​ 31ರವರೆಗೆ ಕಾಲಾವಧಿಯನ್ನು ನೀಡಿತ್ತು. ಅದರಂತೆ ಬಿಸಿಸಿಐ ಪ್ರತಿಷ್ಠಿತ ಪ್ರಶಸ್ತಿಗೆ ರೋಹಿತ್‌ ಶರ್ಮಾ ಹೆಸರನ್ನು ಶಿಫಾರಸ್ಸು ಮಾಡಿತ್ತು.

  ಇದನ್ನೂ ಓದಿ : ಸಹಕಾರಿ ಬ್ಯಾಂಕುಗಳನ್ನು ರಕ್ಷಿಸಿ, ಗ್ರಾಮೀಣ ಆರ್ಥಿಕತೆಯನ್ನು ಸಬಲಗೊಳಿಸಿ; ಪ್ರಧಾನಿ ಮೋದಿಗೆ ಶರದ್‌ ಪವಾರ್‌ ಪತ್ರ

  ಹಿಟ್​ ಮ್ಯಾನ್​ ರೋಹಿತ್​ ಶರ್ಮಾ ನಿಯಮಿತ ಓವರ್​ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಏಕದಿನ ಕ್ರಿಕೆಟ್​ನಲ್ಲಿ ಐಸಿಸಿ ವರ್ಷದ ಕ್ರಕೆಟಿನಗಾಗಿ ಗುರುತಿಸಿಕೊಂಡಿದ್ದರು. ಅಷ್ಟೇ ಅಲ್ಲದೆ, ಐಸಿಸಿ ವಿಶ್ವಕಪ್​ನಲ್ಲಿ ಐದು ಶತಕಗಳನ್ನು ಬಾರಿಸಿ ವಿಶ್ವ ದಾಖಲೆ ಬರೆದಿದ್ದರು. ಹೀಗಾಗಿ ರಾಜೀವ್‌ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ರೋಹಿತ್‌ ಶರ್ಮಾ ಅವರನ್ನು ಶಿಫಾರಸು ಮಾಡಲಾಗಿತ್ತು.

  ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಭಾರತ ಸರ್ಕಾರ ನೀಡುವ ಅತ್ಯುನ್ನತ ಗೌರವವಾಗಿದೆ. ಈ ಹಿಂದೆ  ಮಾಸ್ಟರ್‌ ಬ್ಲಾಸ್ಟರ್‌ ಸಚಿನ್ ತೆಂಡೂಲ್ಕರ್ (1998), ಮಹೇಂದ್ರ ಸಿಂಗ್ ಧೋನಿ (2007) ಮತ್ತು ವಿರಾಟ್ ಕೊಹ್ಲಿ(2018) ಗೆ ಖೇಲ್ ರತ್ನ ಗೌರವ ನೀಡಲಾಗಿತ್ತು. ಕ್ರಿಕೆಟ್‌ ಕ್ಷೇತ್ರದಲ್ಲಿ ಮೊದಲ ಬಾರಿಗೆ ಈ ಪ್ರಶಸ್ತಿಗೆ ಭಾಜನರಾದ ಶ್ರೇಯ ಸಚಿನ್‌ ತೆಂಡೂಲ್ಕರ್‌ ಅವರಿಗೆ ಸಲ್ಲುತ್ತದೆ.
  Published by:MAshok Kumar
  First published: