ಮುಂದಿನ 10 ವರ್ಷಗಳಿಗೆ ಮೋದಿ ಸರಕಾರದ 10 ಆಯಾಮಗಳು

ಸುಲಭ ಜೀವನ, ಡಿಜಿಟಲ್ ಭಾರತ, ಆರೋಗ್ಯ ಭಾರತ, ಕನಿಷ್ಠ ಸರಕಾರ ಗರಿಷ್ಠ ಆಡಳಿತ, ಸ್ವಚ್ಛ ಭಾರತ ಸೇರಿದಂತೆ 10 ಆಯಾಮಗಳ ಬಗ್ಗೆ ಹಣಕಾಸು ಸಚಿವರು ಮಾತನಾಡಿದರು.

Vijayasarthy SN | news18
Updated:February 1, 2019, 4:55 PM IST
ಮುಂದಿನ 10 ವರ್ಷಗಳಿಗೆ ಮೋದಿ ಸರಕಾರದ 10 ಆಯಾಮಗಳು
ನರೇಂದ್ರ ಮೋದಿ
Vijayasarthy SN | news18
Updated: February 1, 2019, 4:55 PM IST
ನವದೆಹಲಿ(ಫೆ. 01): ರೈತರಿಗೆ ಬಂಪರ್ ಆಫರ್, ಮಧ್ಯಮವರ್ಗದವರಿಗೆ ಟ್ಯಾಕ್ಸ್ ರಿಲೀಫ್ ಇತ್ಯಾದಿ ಜನಪ್ರಿಯ ಘೋಷಣೆಗಳ ಜೊತೆಗೆ ಈ ಬಾರಿಯ ಬಜೆಟ್​ನಲ್ಲಿ ವ್ಯಕ್ತವಾದ ಮತ್ತೊಂದು ಪ್ರಮುಖ ವಿಚಾರವೆಂದರೆ ಅದು ವಿಷನ್ 2030. ಮುಂದಿನ ಹತ್ತು ವರ್ಷದಲ್ಲಿ ಭಾರತ ಯಾವೆಲ್ಲಾ ಕ್ಷೇತ್ರಗಳ ಮೇಲೆ ಹೆಚ್ಚು ಗಮನ ಹರಿಸಲಿದೆ ಎಂಬುದನ್ನು ಹಣಕಾಸು ಸಚಿವ ಪಿಯೂಶ್ ಗೋಯೆಲ್ ವಿವರಿಸಿದರು. ಭಾರತದ ಭವಿಷ್ಯದ 10 ಆಯಾಮಗಳನ್ನ ತೆರೆದಿಟ್ಟ ಹಣಕಾಸು ಸಚಿವರು, ಆಧುನಿಕ ಸಮಾಜ ನಿರ್ಮಾಣಕ್ಕೆ ಈ ಆಯಾಮಗಳು ನೆರವಾಗಲಿವೆ ಎಂದು ತಿಳಿಸಿದರು.

ಹತ್ತು ಆಯಾಮಗಳು: 

1) ಸುಲಭ ಜೀವನಕ್ಕಾಗಿ ರಸ್ತೆ, ರೈಲ್ವೆ, ಬಂದರು, ವಿಮಾನ ನಿಲ್ದಾಣ, ಒಳನಾಡು ಜಲಮಾರ್ಗ ಇತ್ಯಾದಿ ಇರುವ ಎಲ್ಲಾ ವಲಯಗಳಲ್ಲಿ ಅತ್ಯಾಧುನಿಕ (ಮುಂದಿನ ಪೀಳಿಗೆಯ ತಂತ್ರಜ್ಞಾನ) ಮುಲಭೂತ ಸೌಕರ್ಯ ರೂಪಿಸುವುದು.

2) ಅರ್ಥವ್ಯವಸ್ಥೆಯ ಮೂಲೆಮೂಲೆಯನ್ನೂ ಸ್ಪರ್ಶಿಸಬಲ್ಲಂಥ ಹಾಗೂ ದೇಶದ ಪ್ರತಿಯೊಬ್ಬ ನಾಗರಿಕನನ್ನೂ ತಲುಪುವಂಥ ಡಿಜಿಟಲ್ ಇಂಡಿಯಾ ನಿರ್ಮಾಣ.

3) ಸ್ವಚ್ಛ ಮತ್ತು ಹಸಿರು ಭಾರತ – ಸಂಪೂರ್ಣ ಎಲೆಕ್ಟ್ರಿಕ್ ಅಥವಾ ವಿದ್ಯುತ್ ಚಾಲಿತ ವಾಹನಗಳ ಗುರಿ; ಮರುನವೀಕರಣ ಇಂಧನ; ಇಂಧನ ಆಮದಿಗೆ ಕಡಿವಾಣ ಹಾಗೂ ದೇಶದ ಪ್ರತಿಯೊಬ್ಬರಿಗೂ ಹೆಚ್ಚು ಇಂಧನ ಶಕ್ತಿ ಪೂರೈಕೆ.

4) ಅತ್ಯಾಧುನಿಕ ಔದ್ಯಮಿಕ ತಂತ್ರಜ್ಞಾನಗಳ ಮೂಲಕ ಗ್ರಾಮೀಣ ಔದ್ಯಮೀಕರಣಕ್ಕೆ ಪುಷ್ಟಿ: ಮೇಕ್ ಇನ್ ಇಂಡಿಯಾ ಯೋಜನೆ ಮಾದರಿಯಲ್ಲಿ ದೇಶಾದ್ಯಂತ ಕೆಳಹಂತದ ಸಣ್ಣ ವ್ಯವಹಾರಗಳು ಹಾಗೂ ಸ್ಟಾರ್ಟಪ್​ಗಳಿಗೆ ಉತ್ತೇಜನ ಕೊಡುವುದು ಇದರ ಒಂದು ಭಾಗ. ಹಲವು ಕ್ಷೇತ್ರಗಳಲ್ಲಿ ಭಾರತವು ಜಾಗತಿಕ ತಯಾರಿಕಾ ಕೇಂದ್ರವಾಗುವತ್ತ ಸಾಗಿದೆ.
Loading...

5) ಸ್ವಚ್ಛ ನದಿಗಳು: ಕಿರು ನೀರಾವರಿ ತಂತ್ರಗಳ ಮೂಲಕ ಪ್ರತಿಯೊಬ್ಬ ಭಾರತೀಯರಿಗೂ ಸುರಕ್ಷಿತ ಕುಡಿಯುವ ನೀರಿನ ವ್ಯವಸ್ಥೆ.

6) ಸಾಗರ ಮತ್ತು ಕರಾವಳಿ ಭಾಗಗಳ ಅಭಿವೃದ್ಧಿ

7) 2022ರಷ್ಟರಲ್ಲಿ ಭಾರತೀಯ ಗಗನಯಾನಿಯನ್ನು ಬಾಹ್ಯಾಕಾಶಕ್ಕೆ ಕಳುಹಿಸುವುದು.

8) ಆಹಾರದಲ್ಲಿ ಸ್ವಾವಲಂಬನೆ ಸಾಧಿಸುವುದು, ಕೃಷಿ ಉತ್ಪನ್ನಶೀಲತೆ ಹೆಚ್ಚಿಸುವುದು ಹಾಗೂ ಸಾವಯವ ಕೃಷಿ ಆಹಾರಕ್ಕೆ ಒತ್ತು ನೀಡುವುದು.

9) ಆರೋಗ್ಯ ಭಾರತ – ಪ್ರತಿಯೊಬ್ಬ ವ್ಯಕ್ತಿಗೂ ಒತ್ತಡ ರಹಿತ ಜೀವನ ವ್ಯವಸ್ಥೆ ಹಾಗೂ ಸಮಗ್ರ ಶುಶ್ರೂಷಣಾ ವ್ಯವಸ್ಥೆ.

10) ಕನಿಷ್ಠ ಸರಕಾರ, ಗರಿಷ್ಠ ಆಡಳಿತ: ವಿದ್ಯುನ್ಮಾನ ಮೂಲಕ ಆಡಳಿತ ಹಾಗೂ ಅಧಿಕಾರಷಾಹಿಯ ಕಾರ್ಯಕ್ಷಮತೆಯಲ್ಲಿ ಹೆಚ್ಚಳ.
First published:February 1, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626