Crypto Currency ನಿಷೇಧಕ್ಕೆ ಮುಂದಾದ ಸರ್ಕಾರ, ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಮಂಡನೆ?

Crypto Currency : ಕ್ರಿಪ್ಟೋ ಕರೆನ್ಸಿಗಳನ್ನು (Cryptocurrency) ನಿಯಂತ್ರಿಸುವ ಸಲುವಾಗಿ ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ (Winter Session) ಮಸೂದೆ ಮಂಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಕ್ರಿಪ್ಟೋಕರೆನ್ಸಿಗೆ ಕಡಿವಾಣ!

ಕ್ರಿಪ್ಟೋಕರೆನ್ಸಿಗೆ ಕಡಿವಾಣ!

  • Share this:
ರಾಜ್ಯದಲ್ಲಿ ಬಿಟ್​ ಕಾಯಿನ್(Bitcoin)​ ಹಗರಣ ಅಲ್ಲೋಲ, ಕಲ್ಲೋಲ ಸೃಷ್ಟಿ ಮಾಡಿತ್ತು.  ಬಿಟ್ ಕಾಯಿನ್ ಸೇರಿದಂತೆ ಕ್ರಿಪ್ಟೋಕರೆನ್ಸಿ(Crypto Currency) ಬಳಕೆ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್(Reserve Bank) ಹೇರಿದ್ದ ನಿಷೇಧವನ್ನು ಸುಪ್ರೀಂಕೋರ್ಟ್(Supreme Court) ತೆರವುಗೊಳಿಸಿದೆ. ಆದರೆ, ಭರ್ಜರಿಯಾಗಿ ವಹಿವಾಟು ಕಾಣುತ್ತಿರುವ ಡಿಜಿಟಲ್ ಕರೆನ್ಸಿ(Digital Currency) ಬಳಸಲು ಸರಿಯಾದ ಮಾರ್ಗಸೂಚಿಯಾಗಲಿ, ಕಾನೂನಾಗಲಿ ಇಲ್ಲ. ಈ ಸಂದರ್ಭದಲ್ಲಿ ಈ ಬಗ್ಗೆ ಕಠಿಣ ನಿರ್ಣಯ ತೆಗೆದುಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ. ಕ್ರಿಪ್ಟೋ ಕರೆನ್ಸಿಗಳನ್ನು (Cryptocurrency) ನಿಯಂತ್ರಿಸುವ ಸಲುವಾಗಿ ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ (Winter Session) ಮಸೂದೆ ಮಂಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಪ್ರಸ್ತಾಪಿತ ಮಸೂದೆ ಅನ್ವಯ, ಸ್ವತಃ ಭಾರತೀಯ ರಿಸರ್ವ್ ಬ್ಯಾಂಕ್‌ (Reserve Bank Of India) ಹೊಸ ಕ್ರಿಪ್ಟೋ ಕರೆನ್ಸಿ ಬಿಡುಗಡೆ ಮಾಡಲಿದೆ. ಮತ್ತೊಂದೆಡೆ ಎಲ್ಲಾ ರೀತಿಯ ಖಾಸಗಿ ಕ್ರಿಪ್ಟೋ ಕರೆನ್ಸಿಗಳ ಮೇಲೆ ಭಾಗಶಃ ನಿಷೇಧ ಹೇರಲಾಗುವುದು (Ban On Cryptocurrency). ನ.29ರಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಅದರಲ್ಲಿ ಕ್ರಿಪ್ಟೋಕರೆನ್ಸಿ ಮಸೂದೆ ಸೇರಿದಂತೆ ಒಟ್ಟು 29 ಮಸೂದೆಗಳನ್ನು ಮಂಡಿಸಲು ಸರ್ಕಾರ ನಿರ್ಧರಿಸಿದೆ. ಇದರಲ್ಲಿ ವಿವಾದಿತ ಮೂರು ಕೃಷಿ ಕಾಯ್ದೆ ರದ್ದು (farm Laws), ವಿದ್ಯುತ್‌ ವಲಯ ಸುಧಾರಣಾ ಮಸೂದೆ ಸೇರಿದಂತೆ ಹಲವು ಪ್ರಮುಖ ಮಸೂದೆಗಳು ಸಹ ಸೇರಿವೆ.

ಕ್ರಿಪ್ಟೋ ಕರೆನ್ಸಿಗೆ ಕೇಂದ್ರ ಸರ್ಕಾರ ಕಡಿವಾಣ!

ಸದ್ಯ ಭಾರತದಲ್ಲಿ ಕ್ರಿಪ್ಟೋ ಕರೆನ್ಸಿಗಳಿಗೆ ಮಾನ್ಯತೆಯೂ ಇಲ್ಲ, ನಿಷೇಧವೂ ಇಲ್ಲ. ಹೀಗಿದ್ದರೂ ಲಕ್ಷಾಂತರ ಭಾರತೀಯರು ಅವುಗಳಲ್ಲಿ ಸಾವಿರಾರು ಕೋಟಿ ರೂ. ಹೂಡಿಕೆ ಮಾಡಿದ್ದಾರೆ ಈಗಲೂ ಮಾಡುತ್ತಿದ್ದಾರೆ. ಜೊತೆಗೆ ಈ ಡಿಜಿಟಲ್‌ ಕರೆನ್ಸಿ, ಅಕ್ರಮ ಹಣ ವರ್ಗಾವಣೆ ಮತ್ತು ಉಗ್ರವಾದಕ್ಕೆ ಹಣ ಪೂರೈಕೆ ಜಾಲವಾಗಿ ಬಳಕೆಯಾಗುತ್ತಿರುವುದು ಕೇಂದ್ರ ಸರ್ಕಾರದ ಗಮನಕ್ಕೆ ಬಂದಿದೆ. ಇದರ ಮೇಲೆ ಈ ಹಿಂದೆಯಿಂದಲೂ  ಕೇಂದ್ರ ಸರ್ಕಾರ ಕಣ್ಣಿಟ್ಟಿತ್ತು.  ಹೀಗಾಗಿ ಇಡೀ ಕ್ರಿಪ್ಟೋ ಕರೆನ್ಸಿ ವಲಯಕ್ಕೆ ಹೊಸ ಕಾನೂನಿನ ಚೌಕಟ್ಟು ಒದಗಿಸುವ ನಿಟ್ಟಿನಲ್ಲಿ ‘ಕ್ರಿಪ್ಟೋ ಕರೆನ್ಸಿ ಮತ್ತು ಅಧಿಕೃತ ಡಿಜಿಟಲ್‌ ಕರೆನ್ಸಿ ನಿಯಂತ್ರಣ ಮಸೂದೆ, 2021’ ಅನ್ನು ಸರ್ಕಾರ ಸಿದ್ಧಪಡಿಸಿದೆ. ಎಲ್ಲಾ ಬಗೆಯ ಖಾಸಗಿ ಕ್ರಿಪ್ಟೋಕರೆನ್ಸಿ ವ್ಯವಹಾರವನ್ನು ಭಾರತದಲ್ಲಿ ನಿಷೇಧಿಸಲು ಮಸೂದೆ ಮಂಡಿಸಲು ಸರ್ಕಾರ ಮುಂದಾಗಿದೆ.

ಇದನ್ನು ಓದಿ : Winter Sessionಗೂ ಮುನ್ನ ನಡೆಯಲಿರುವ ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ಮೋದಿ ಭಾಗಿಯಾಗುವ ಸಾಧ್ಯತೆ

1 ಸುತ್ತಿನ ಸಭೆ ನಡೆಸಿದ್ದಾರಂತೆ ಮೋದಿ!

ಬಿಜೆಪಿಯ ಜಯಂತ್ ಸಿನ್ಹಾ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಕ್ರಿಪ್ಟೋ ವ್ಯವಹಾರ, ಬ್ಲಾಕ್ ಚೇನ್, ಕ್ರಿಪ್ಟೋ ಆಸ್ತಿ, ಕೈಗಾರಿಕಾ ಸಂಸ್ಥೆಗಳು ಸಂಬಂಧಿಸಿದ ಷೇರುದಾರರು ಪಾಲ್ಗೊಂಡಿದ್ದರು. ಹೂಡಿಕೆದಾರರ ಆಕರ್ಷಣೆಗಾಗಿ ದಿಕ್ಕುತಪ್ಪಿಸುವ ಜಾಹೀರಾತು, ಮಾಧ್ಯಮದಲ್ಲಿ ಪ್ರಚಾರ ಹೆಚ್ಚಾಗಿದ್ದು, ಹೂಡಿಕೆಯಾದ ಮೊತ್ತದ ಸುರಕ್ಷತೆ ಬಗ್ಗೆ ಎಲ್ಲರೂ ಕಳವಳ ವ್ಯಕ್ತಪಡಿಸಿದರು. ಇದಾದ ಬಳಿಕ ಪ್ರಧಾನಿ ಮೋದಿ ಕೂಡ ಈ ಬಗ್ಗೆ ಚರ್ಚೆ ನಡೆಸಲು ಒಂದು ಸುತ್ತಿನ ಸಭೆ ಕರೆದು, ಮಸೂದೆ ಬಗ್ಗೆ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನು ಓದಿ : ಭಾರತ ಈಗ ಶಸ್ತ್ರಾಸ್ತ್ರ ವಿಚಾರದಲ್ಲಿ ಸ್ವಾವಲಂಬಿ, ಎಲ್ಲಾ Make in India ಪರಿಣಾಮ

ಆರ್‌ಬಿಐನಿಂದ ಕ್ರಿಪ್ಟೋ ಕರೆನ್ಸಿ!

ಖಾಸಗಿ ಡಿಜಿಟಲ್‌ ಕರೆನ್ಸಿಗೆ ಯಾವುದೇ ಗ್ಯಾರಂಟಿ ಇಲ್ಲ. ಇದರಲ್ಲಿ ಹೂಡಿಕೆ ಮಾಡಿ ಹಣಗಳಿಸದವರ ಸಂಖ್ಯೆಯೂ ಕಡಿಮೆ. ಹೀಗಾಗಿ ಕೇಂದ್ರ ಸರ್ಕಾರ ಹೊಸ ಪ್ಲ್ಯಾನ್​ವೊಂದನ್ನು ಮಾಡಿಕೊಂಡಿದೆ. ಸ್ವತಃ ತಾನೇ ಡಿಜಿಟಲ್‌ ಕರೆನ್ಸಿಯನ್ನು ಬಿಡುಗಡೆ ಮಾಡಲು ಸರ್ಕಾರ ಮುಂದಾಗಿದೆ ಎನ್ನಲಾಗಿದೆ. ಲಕ್ಷ್ಮೇ ಹೆಸರಲ್ಲಿ ಕ್ರಿಪ್ಟೋಕರೆನ್ಸಿ ಬಿಡುಗಡೆಗೆ ಆರ್‌ಬಿಐ ಸಜ್ಜಾಗಿದೆ. ಈ ಬಗ್ಗೆ ಈ ಹಿಂದೆಯೂ ಭಾರೀ ಸುದ್ದಿಯಾಗಿತ್ತು. ಇದೀಗ ಇದು ನಿಜವಾಗಲಿದೆ ಎಂದು ಹೇಳಲಾಗುತ್ತಿದೆ.
Published by:Vasudeva M
First published: