HOME » NEWS » National-international » CENTRAL GOVERNMENT THINKING OF MAKE TAX AND PENALTY ON CITIZENS GOLD RH

ಕೇಂದ್ರ ಸರ್ಕಾರದ ತಿಜೋರಿ ತುಂಬಿಕೊಳ್ಳಲು ನಾಗರಿಕರ ಚಿನ್ನಕ್ಕೆ ತೆರಿಗೆ ಮತ್ತು ದಂಡ ವಿಧಿಸುವ ಚಿಂತನೆ

ಬೇರೆ ಸಂಪನ್ಮೂಲ ಮೂಲಗಳು ಸಿಗದ ಹಿನ್ನೆಲೆಯಲ್ಲಿ ಜನಸಾಮಾನ್ಯರ ಚಿನ್ನಕ್ಕೆ ತೆರಿಗೆ ಮತ್ತು ದಂಡ ವಿಧಿಸಿ ಬೊಕ್ಕಸ ತುಂಬಿಕೊಳ್ಳಲು‌ ಮುಂದಾಗಿದೆ.‌ ಇಂಥದೊಂದು ಪ್ರಸ್ತಾಪ ಈಗ ಕೇಂದ್ರ ಹಣಕಾಸು ಇಲಾಖೆಯಿಂದ‌ ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ರವಾನೆಯಾಗಿದೆ. ಜನಸಾಮಾನ್ಯರ ಚಿನ್ನದ ಮೇಲೆ ತೆರಿಗೆ ಮತ್ತು ದಂಡ ವಿಧಿಸುವುದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಟ್ಟಿದ್ದು.

news18-kannada
Updated:August 1, 2020, 6:54 AM IST
ಕೇಂದ್ರ ಸರ್ಕಾರದ ತಿಜೋರಿ ತುಂಬಿಕೊಳ್ಳಲು ನಾಗರಿಕರ ಚಿನ್ನಕ್ಕೆ ತೆರಿಗೆ ಮತ್ತು ದಂಡ ವಿಧಿಸುವ ಚಿಂತನೆ
ಚಿನ್ನದ ಸಾಂದರ್ಭಿಕ ಚಿತ್ರ.
  • Share this:
ನವದೆಹಲಿ: ದೇಶದ ಆರ್ಥಿಕ ಸ್ಥಿತಿ ಹದಗೆಟ್ಟಿದೆ ಎಂದು ಎಲ್ಲರಿಗೂ ಗೊತ್ತಿರುವ ಸತ್ಯವೇ.‌ ಆದುದರಿಂದ ಬರಿದಾಗಿರುವ ಬೊಕ್ಕಸ ತುಂಬಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಚಿನ್ನದ ಮೇಲೆ ಕಣ್ಣಿಟ್ಟಿದೆ ಎಂಬ ಮಾಹಿತಿಗಳು ಲಭ್ಯವಾಗುತ್ತಿವೆ.

ಕೊರೋನಾ ಶುರುವಾಗುವ ಮುನ್ನವೇ ದೇಶದ ಆರ್ಥಿಕತೆಯ ಕುಸಿತ ಆರಂಭವಾಗಿತ್ತು.‌ ಅದು ಲಾಕ್ಡೌನ್ ಬಳಿಕ ಇನ್ನೂ‌‌ ದುಸ್ಥಿತಿ ತಲುಪಿದೆ. ಆರ್ಥಿಕ ವಹಿವಾಟು ನಡೆಯದೆ ಜಿಎಸ್ ಟಿ ಸಂಗ್ರಹವೂ ಆಗುತ್ತಿಲ್ಲ.‌ ಇದರಿಂದ ಕೇಂದ್ರ ಸರ್ಕಾರದ ಬೊಕ್ಕಸ ಖಾಲಿಯಾಗಿದೆ. ಪರಿಣಾಮವಾಗಿ ರಾಜ್ಯ ಸರ್ಕಾರಗಳಿಗೆ ನಿಯಮಾನುಸಾರ ಕೊಡಲೇಬೇಕಾದ ಜಿಎಸ್ ಟಿ ಪರಿಹಾರದ ಪಾಲಿನ ಹಣವನ್ನೂ ಕೊಡಲಾಗುತ್ತಿಲ್ಲ. ಹೀಗೆ ಮುಂದುವರೆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ತಿಕ್ಕಾಟ ಶುರುವಾಗಬಹುದು.‌ ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈಗ ಬೊಕ್ಕಸ ‌ತುಂಬಿಸಿಕೊಳ್ಳಲು ಹರಸಾಹಸ ಮಾಡುತ್ತಿದೆ.

ಹೇಗಾದರೂ ಹಣ ಹೊಂದಿಸಲೇಬೇಕಿರುವ ದರ್ದಿನಲ್ಲಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜನರ ಬಳಿ ಇರುವ ಚಿನ್ನಕ್ಕೆ ಕನ್ನ ಹಾಕಲೊರಟಿದೆ ಎಂದು ಹೇಳಲಾಗುತ್ತಿದೆ. ಅದೇಗೆಂದರೆ ಇನ್ನು ಮುಂದೆ ಜನ ತೆರಿಗೆ ಘೋಷಿಸಿದಂತೆ ತಮ್ಮ ಬಳಿ ಎಷ್ಟೆಷ್ಟು ಚಿನ್ನ ಇದೆ ಎಂಬುದನ್ನು ಘೋಷಿಸಿಕೊಳ್ಳಬೇಕು. ತೆರಿಗೆ ಕಟ್ಟದ ಚಿನ್ನ ಅಥವಾ ದಾಖಲೆಯೇ ಇಲ್ಲದ ಚಿನ್ನ ಇದ್ದರೆ ಅದಕ್ಕೆ ತೆರಿಗೆ ಮತ್ತು ದಂಡವನ್ನು ಕಟ್ಟಬೇಕು. ಈ ರೀತಿ ತೆರಿಗೆ ಮತ್ತು ದಂಡದ ಮೂಲಕ ಬರುವ ಹಣದಿಂದ ತಿಜೋರಿ ತುಂಬಿಸಿಕೊಳ್ಳುವುದು ಕೇಂದ್ರ ಸರ್ಕಾರದ ಯೋಜನೆ.

ಸದ್ಯ ಮೋದಿ ಸರ್ಕಾರದ ಮುಂದೆ ಚಿನ್ನ ಕ್ಷಮಾದಾನ ಯೋಜನೆಯನ್ನು ಜಾರಿಗೆ ತರುವ ಪ್ರಸ್ತಾಪ ಇದೆ. ಈ ಪ್ರಸ್ತಾಪದ ಪ್ರಕಾರ, ದೇಶದ ಜನರು ತಮ್ಮ ಬಳಿ ದಾಖಲೆ ಇಲ್ಲದ ಚಿನ್ನವನ್ನು ತೆರಿಗೆ ಅಧಿಕಾರಿಗಳ ಮುಂದೆ ಘೋಷಿಸಿಕೊಂಡು ತೆರಿಗೆ ಕಟ್ಟಬೇಕು. ಜತೆಗೆ ದಂಡವನ್ನು ಕಟ್ಟಬೇಕು. ಈ ಯೋಜನೆ ಈಗಿನ್ನು ಪ್ರಾಥಮಿಕ ಹಂತದಲ್ಲಿದೆ. ಇನ್ನೊಂದು ಸುತ್ತಿನ ಸಮಾಲೋಚಿಸಿ ನಡೆಸಿ ಅಂತಿಮ‌ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು‌‌ ತಿಳಿದುಬಂದಿದೆ.

ನರೇಂದ್ರ ಮೋದಿ ಅವರು ಚಿನ್ನದ ಮೇಲೆ ಕಣ್ಣು ಹಾಕುತ್ತಿರುವುದು ಇದು ಮೋದಲೇನಲ್ಲ. 2015ರಲ್ಲಿ ಜನ ತಮ್ಮ ಬಳಿ ಇರುವ ಚಿನ್ನದ ಪ್ರಮಾಣ ಘೋಷಿಸಿಕೊಳ್ಳುವ ಮತ್ತು ದಾಖಲೆ ಇಲದ ಚಿನ್ನದ ಮೇಲೆ ತೆರಿಗೆ ಮತ್ತು ದಂಡ ವಿಧಿಸಲು ಮುಂದಾಗಿದ್ದರು. ಆದರೆ  ಸಾರ್ವಜನಿಕ ವಲಯದಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ. ಆದುದರಿಂದ ಆ ಪ್ರಸ್ತಾಪವನ್ನು ಕೈಬಿಡಲಾಗಿತ್ತು.

ಇದನ್ನು ಓದಿ: ರಾಜ್ಯ ಬಿಜೆಪಿ ಸಂಘಟನೆಯಲ್ಲಿ ಭಾರೀ ಬದಲಾವಣೆ; ಬಿ.ವೈ ವಿಜಯೇಂದ್ರಗೆ ಕೈ ತಪ್ಪಿದ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆ
ಈಗಾಗಲೇ ಹೇಳಿದಂತೆ ಈಗ ದೇಶ ವಿಪರೀತ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ. ಅದರಿಂದ ಹೊರಬರುವ ಮಾರ್ಗೊಪಾಯಗಳನ್ನು ಹುಡುಕಲಾಗುತ್ತಿದೆ. ಬೇರೆ ಸಂಪನ್ಮೂಲ ಮೂಲಗಳು ಸಿಗದ ಹಿನ್ನೆಲೆಯಲ್ಲಿ ಜನಸಾಮಾನ್ಯರ ಚಿನ್ನಕ್ಕೆ ತೆರಿಗೆ ಮತ್ತು ದಂಡ ವಿಧಿಸಿ ಬೊಕ್ಕಸ ತುಂಬಿಕೊಳ್ಳಲು‌ ಮುಂದಾಗಿದೆ.‌ ಇಂಥದೊಂದು ಪ್ರಸ್ತಾಪ ಈಗ ಕೇಂದ್ರ ಹಣಕಾಸು ಇಲಾಖೆಯಿಂದ‌ ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ರವಾನೆಯಾಗಿದೆ. ಜನಸಾಮಾನ್ಯರ ಚಿನ್ನದ ಮೇಲೆ ತೆರಿಗೆ ಮತ್ತು ದಂಡ ವಿಧಿಸುವುದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಟ್ಟಿದ್ದು.
Published by: HR Ramesh
First published: August 1, 2020, 6:54 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories