Delhi Rajpath: ರಾಜಪಥದ ಹೆಸರನ್ನು ಕರ್ತವ್ಯ ಪಥವನ್ನಾಗಿ ಬದಲಾವಣೆಗೆ ಕೇಂದ್ರದ ಪ್ಲ್ಯಾನ್! ಪ್ರತಿಪಕ್ಷಗಳ ನಾಯಕರಿಂದ ಭಾರಿ ಟೀಕೆ

ನವದೆಹಲಿಯ ರಾಜಪಥ ಹಾಗೂ ಸೆಂಟ್ರಲ್ ವಿಸ್ತಾ ಲಾನ್ ಗಳ ಹೆಸರುಗಳನ್ನು ಕರ್ತವ್ಯ ಪಥವನ್ನಾಗಿ ಬದಲಾಯಿಸಲು ಯೋಜಿಸುತ್ತಿದ್ದು ಕೇಂದ್ರದ ಈ ನಡೆಗೆ ಹಲವು ಪ್ರತಿಪಕ್ಷಗಳ ನಾಯಕರಿಂದ ಭಾರಿ ಆಕ್ರೋಶ ವ್ಯಕ್ತವಾಗಿದೆ. ರಾಷ್ಟ್ರೀಯ ಜನತಾದಳ, ತೃಣಮೂಲ್ ಕಾಂಗ್ರೆಸ್ ಸೇರಿದಂತೆ ಹಲವು ಪ್ರತಿಪಕ್ಷಗಳ ಕೆಲ ನಾಯಕರು ಕೇಂದ್ರವು ಹೆಸರು ಬದಲಾಯಿಸಲು ಸಜ್ಜಾಗುತ್ತಿರುವುದಕ್ಕೇ ತೀವ್ರ ಟೀಕೆಗಳನ್ನು ಮಾಡಿದ್ದಾರೆ.

ನವದೆಹಲಿಯ ರಾಜಪಥ

ನವದೆಹಲಿಯ ರಾಜಪಥ

  • Share this:
ಕೇಂದ್ರ ಸರ್ಕಾರವು (Central Government) ಇದೀಗ ನವದೆಹಲಿಯ ರಾಜಪಥ ಹಾಗೂ ಸೆಂಟ್ರಲ್ ವಿಸ್ತಾ ಲಾನ್ ಗಳ ಹೆಸರುಗಳನ್ನು ಕರ್ತವ್ಯ ಪಥವನ್ನಾಗಿ (Kartavya Path) ಬದಲಾಯಿಸಲು ಯೋಜಿಸುತ್ತಿದ್ದು ಕೇಂದ್ರದ ಈ ನಡೆಗೆ ಹಲವು ಪ್ರತಿಪಕ್ಷಗಳ ನಾಯಕರಿಂದ ಭಾರಿ ಆಕ್ರೋಶ ವ್ಯಕ್ತವಾಗಿದೆ. ರಾಷ್ಟ್ರೀಯ ಜನತಾದಳ, ತೃಣಮೂಲ್ ಕಾಂಗ್ರೆಸ್ (Trinamool Congress) ಸೇರಿದಂತೆ ಹಲವು ಪ್ರತಿಪಕ್ಷಗಳ ಕೆಲ ನಾಯಕರು ಕೇಂದ್ರವು ಹೆಸರು ಬದಲಾಯಿಸಲು ಸಜ್ಜಾಗುತ್ತಿರುವುದಕ್ಕೇ ತೀವ್ರ ಟೀಕೆಗಳನ್ನು(Criticism) ಮಾಡಿದ್ದಾರೆ. "ಇದೇನಾಗುತ್ತಿದೆ? ಬಿಜೆಪಿ ಪಕ್ಷವೇನಾದರೂ ಸಂಸ್ಕೃತಿಯನ್ನು ಮತ್ತೆ ಮರುಸೃಷ್ಟಿಸುವುದನ್ನೇ ತಮ್ಮ ಏಕೈಕ ಕರ್ತವ್ಯ ಎಂದು ತಿಳಿದಿರುವರೆ, ಇತಿಹಾಸವನ್ನೆ (History) ಮತ್ತೆ ಬರೆಯಲು ಹವಣಿಸುತ್ತಿರುವಂತಿರುವ ಇದು ಮೆಗಾಲೋಮೆನಿಯಾಕ್ ಹುಚ್ಚುತನವಲ್ಲದೆ ಇನ್ನೇನು" ಎಂದು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಷ್ಟೆ ಅಲ್ಲದೆ, ಹಲವು ಪ್ರತಿಪಕ್ಷಗಳ ನಾಯಕರು ಕೇಂದ್ರದ ಈ ಯೋಜನೆಯ ಬಗ್ಗೆ ತಿಳಿದುಕೊಳ್ಳುತ್ತಿದ್ದಂತೆ ತಮ್ಮ ತಮ್ಮ ಸಾಮಾಜಿಕ ಮಾಧ್ಯಮಗಳನ್ನು ಬಳಸಿ ಕೇಂದ್ರದ ವಿರುದ್ಧ ಹಲವು ಟೀಕೆ-ಟಿಪ್ಪಣಿಗಳನ್ನು ಲಗತ್ತಿಸಲು ಪ್ರಾರಂಭಿಸಿದ್ದಾರೆ ಎನ್ನಬಹುದು.

ಈ ಬಗ್ಗೆ ಆರ್ಜೆಡಿ ಪಕ್ಷದ ಮನೋಜ್ ಝಾ ಅವರ ಟ್ವೀಟ್ ನೋಡಿ 
ಆರ್ಜೆಡಿ ಪಕ್ಷದ ಮನೋಜ್ ಝಾ ಎಂಬುವವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ, "ಮೊದಲಿಗೆ ರೇಸ್ ಕೋರ್ಸ್ ರಸ್ತೆಯನ್ನು ಲೋಕ ಕಲ್ಯಾಣ ಮಾರ್ಗವಾಗಿ ಮಾಡಲಾಯಿತು, ಈಗ ರಾಜಪಥವು ಕರ್ತವ್ಯ ಪಥವಾಗಿದೆ. ಆದರೆ, ಇಂದಿನ ಸಮಯದ ದೊಡ್ಡ ಸಮಸ್ಯೆಗಳಾದ ನಿರುದ್ಯೋಗ, ಹಣದುಬ್ಬರ, ಕ್ಷೀಣಿಸುತ್ತಿರುವ ಸಮಾಜಿಕ ಸಾಮರಸ್ಯ ಮುಂತಾದವುಗಳ ಮೇಲೆ ಏನಾದರೂ ಧನಾತ್ಮಕ ಪರಿಣಾಮ ಬೀರುತ್ತಿದ್ದರೆ ಅದು ಸ್ವೀಕಾರಾರ್ಹವಾಗಬಹುದಿತ್ತು. ಜನರ ಸಮಸ್ಯೆಗಳ ಕುರಿತು ಮೌನದಿಂದಿರುವುದು ಹಾಗೂ ರಸ್ತೆಗಳ ಮೇಲಷ್ಟೆ ಕೆಲಸ ಮಾಡುತ್ತಿರುವ ಸಾಮರ್ಥ್ಯ ತೋರಿಸುವುದು. ನೀವು ಹೆಸರನ್ನು ಬದಲಾಯಿಸಲು ಬಯಸಿದರೆ.." ಹೀಗೆ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Airfare: ವಿಮಾನ ಪ್ರಯಾಣ ದರದಲ್ಲಿ ಭಾರೀ ಕಡಿತ; ಬೇಗ ಫ್ಲೈಟ್​ ಬುಕ್​ ಮಾಡಿ

ಪ್ರತಿಪಕ್ಷಗಳ ಕೆಲ ನಾಯಕರು ಈ ಹಿಂದೆ ಇದನ್ನು ಸ್ವಾಗತಿಸಿದ್ದರು 
ಆದರೆ, ಇಲ್ಲಿ ಗಮನಿಸಬೇಕಾದ ಒಂದು ಅಂಶವೆಂದರೆ ಪ್ರತಿಪಕ್ಷಗಳ ಎಲ್ಲ ನಾಯಕರು ಇದರ ವಿರುದ್ಧ ಇಲ್ಲ ಎಂಬುದು. ಕೆಲ ನಾಯಕರು ಇದನ್ನು ಸ್ವಾಗತ ಸಹ ಮಾಡಿದ್ದಾರೆ. ಮಾಜಿ ಕಾಂಗ್ರೆಸ್ ನಾಯಕರಾದ ಜೈವೀರ್ ಶೇರ್ಗಿಲ್ ಅವರು ಇದನ್ನು ಸ್ವಾಗತಿಸಿದ್ದಾರೆ.

ಈ ಬಗ್ಗೆ ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ, "ರಾಜಪಥದಿಂದ ಕರ್ತವ್ಯಪಥಕ್ಕೆ ಹೆಸರು ಬದಲಾವಣೆ ಮಾಡಿರುವುದು ನಿಜಕ್ಕೂ ಅತ್ಯುತ್ತಮ ವಿಚಾರ, ಇದು ಮೂಲಭೂತ ಅಂಶವಾದ ಕರ್ತವ್ಯ ತತ್ಪರತೆಯನ್ನು ಸ್ಮರಿಸುವಂತಿದೆ ಹಾಗೂ ಆಡಳಿತ "ನಡೆಸುವ ಹಕ್ಕು" ಇದಲ್ಲ ಬದಲಾಗಿ "ಸೇವಾ ಕರ್ತವ್ಯ" ಎಂಬುದನ್ನು ಎದ್ದು ತೋರಿಸುತ್ತದೆ" ಎಂದು ಹೇಳಿದ್ದಾರೆ. ಸರ್ವೋಚ್ಛ ನ್ಯಾಯಾಲಯದ ವಕೀಲರಾಗಿರುವ ಇವರು ಕಳೆದ ತಿಂಗಳಷ್ಟೇ ಪಕ್ಷವನ್ನು ತ್ಯಜಿಸಿದ್ದಾರೆ.

ಹೆಸರು ಬದಲಾವಣೆಗೆ ಸಂಬಂಧಿಸಿದಂತೆ  ಸಭೆ ಕರೆದ ದೆಹಲಿ ಮುನಿಸಿಪಲ್ ಕಾರ್ಪೊರೇಷನ್
ರಾಜಪಥ್ ಈ ಮುಂಚೆ ಕಿಂಗ್ಸ್ ವೇ ಎಂದು ಕರೆಯಲ್ಪಡುತ್ತಿತ್ತು. ವಿಜಯ್ ಚೌಕ್ ನಿಂದ ಇಂಡಿಯಾ ಗೇಟ್ ವರೆಗೆ ವಿಸ್ತರಿಸಿರುವ ಈ ಮಾರ್ಗವು ಜನಪ್ರೀಯ ಮಾರ್ಗವಾಗಿದ್ದು ಪ್ರತಿ ಬಾರಿ ಗಣರಾಜ್ಯೋತ್ಸವದ ಪ್ರತಿಷ್ಠಿತ ಪರೇಡ್ ಅಥವಾ ಕವಾಯತ್ ಈ ಮಾರ್ಗದ ಮೂಲಕವೇ ಸಾಗುತ್ತದೆ. ಸದ್ಯ ಬಲ್ಲ ಮೂಲಗಳ ಪ್ರಕಾರ, ದೆಹಲಿ ಮುನಿಸಿಪಲ್ ಕಾರ್ಪೊರೇಷನ್ ಹೆಸರು ಬದಲಾವಣೆಗೆ ಸಂಬಂಧಿಸಿದಂತೆ ಸೆಪ್ಟೆಂಬರ್ 7 ರಂದು ಮಹತ್ವದ ಸಭೆ ಕರೆದಿದೆ ಎನ್ನಲಾಗಿದೆ.

ಇದನ್ನೂ ಓದಿ:  UP BJP: ಉತ್ತರ ಪ್ರದೇಶವನ್ನು ಮತ್ತೆ ಕೇಸರಿಮಯವಾಗಿಸಲು ಸಜ್ಜಾದ ಬಿಜೆಪಿ, ಮೆಗಾ ಪ್ಲಾನ್​ ರೆಡಿ!

ಈ ಬಾರಿಯ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ದೇಶದ ಪ್ರಧಾನಿ ಅವರು ತಮ್ಮ ಭಾಷಣದಲ್ಲಿ ಪಂಚ ಪ್ರಣಗಳು ಅಂದರೆ ಐದು ಕರ್ತವ್ಯಗಳ ಬಗ್ಗೆ ದೇಶದ ಜನತೆಗೆ ತಿಳಿಸಿದ್ದರು. ಆ ಪ್ರಣಗಳಲ್ಲಿ "ನಾಗರಿಕರ ಕರ್ತವ್ಯ" ಸಹ ಒಂದಾಗಿತ್ತು. ಈ ಸಂದರ್ಭದಲ್ಲಿ ಪ್ರಧಾನಿ ಅವರು ನಮ್ಮ ವಸಾಹತುಶಾಯಿ ಪ್ರಭಾವಗಳನ್ನು ನೆನಪಿಸುವಂತಹ ಎಲ್ಲ ಚಿಹ್ನೆ, ಸಂಕೇತಗಳನ್ನು ಕೈಬಿಡುವ ಕುರಿತು ಮಾತನಾಡಿದ್ದರು ಎಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಈ ಅಂಶಗಳೇ ಸದ್ಯ ಕೇಂದ್ರವು, ರಾಜಪಥ, ಸೆಂಟ್ರಲ್ ವಿಸ್ತಾಗಳ ಹೆಸರನ್ನು ಬದಲಾಯಿಸುವ ಹಿಂದಿರುವ ಪ್ರಮುಖ ಕಾರಣವಾಗಿರಬಹುದು ಎನ್ನಲಾಗುತ್ತಿದೆ.
Published by:Ashwini Prabhu
First published: