HOME » NEWS » National-international » CENTRAL GOVERNMENT RELEASE STATE WIDE GRANTS TO RURAL LOCAL INSTITUTIONS DBDEL MAK

ಕೇಂದ್ರದಿಂದ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ರಾಜ್ಯವಾರು ಅನುದಾನ ಬಿಡುಗಡೆ; ಕರ್ನಾಟಕಕ್ಕೆ 2412.75 ಕೋಟಿ

ಮೂಲ ಅನುದಾನವನ್ನು ಸ್ಥಳೀಯ ಸಂಸ್ಥೆಗಳು ಸಂಬಳ ಅಥವಾ ಇತರ ವೆಚ್ಚಗಳನ್ನು ಹೊರತುಪಡಿಸಿ ಸ್ಥಳ ನಿರ್ದಿಷ್ಟವಾದ ಕೆಲಸಗಳಿಗೆ ಬಳಸಬಹುದು ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.

news18-kannada
Updated:January 27, 2021, 7:56 PM IST
ಕೇಂದ್ರದಿಂದ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ರಾಜ್ಯವಾರು ಅನುದಾನ ಬಿಡುಗಡೆ; ಕರ್ನಾಟಕಕ್ಕೆ 2412.75 ಕೋಟಿ
ಪ್ರಾತಿನಿಧಿಕ ಚಿತ್ರ.
  • Share this:
ನವದೆಹಲಿ (ಜನವರಿ 27): ಕೇಂದ್ರ ಹಣಕಾಸು ಸಚಿವಾಲಯದ ವೆಚ್ಚ ಇಲಾಖೆಯು ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಅನುದಾನವಾಗಿ 28 ರಾಜ್ಯಗಳಿಗೆ 12,351.5 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಈ ಮೊತ್ತವು 2020-21ರ ಆರ್ಥಿಕ ವರ್ಷದಲ್ಲಿ ಬಿಡುಗಡೆಯಾದ ಮೂಲ ಅನುದಾನದ 2ನೇ ಕಂತಾಗಿದೆ. ಮೊದಲ ಕಂತಿನ ಬಳಕೆ ಪ್ರಮಾಣಪತ್ರವನ್ನು ನೀಡಿದ 18 ರಾಜ್ಯಗಳಿಗೆ ಮತ್ತು ಪಂಚಾಯತಿ ರಾಜ್ ಸಚಿವಾಲಯದ ಶಿಫಾರಸಿನ ಮೇರೆಗೆ ಈ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಸಮುದಾಯ ಸ್ವತ್ತುಗಳನ್ನು ನಿರ್ಮಿಸಲು ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಆರ್ಥಿಕ ಕಾರ್ಯ ಸಾಧ್ಯತೆಯನ್ನು ಸುಧಾರಿಸಲು 15ನೇ ಹಣಕಾಸು ಆಯೋಗದ ಶಿಫಾರಸುಗಳ ಪ್ರಕಾರ ಅನುದಾನವನ್ನು ಬಿಡುಗಡೆ ಮಾಡಲಾಗುತ್ತದೆ.

ಹಳ್ಳಿಗಳು ಮತ್ತು ತಾಲ್ಲೂಕುಗಳಾದ್ಯಂತ ಸಂಪನ್ಮೂಲಗಳನ್ನು ಸಂಗ್ರಹಿಸಲು ಅನುವು ಮಾಡಿಕೊಡಲು ಪಂಚಾಯತಿ ರಾಜ್ ವ್ಯವಸ್ಥೆಯ ಎಲ್ಲಾ ಮೂರು ಹಂತಗಳಿಗೆ - ಗ್ರಾಮ, ತಾಲ್ಲೂಕು ಮತ್ತು ಜಿಲ್ಲೆ- ಅನುದಾನವನ್ನು ನೀಡಲಾಗುತ್ತದೆ. 15ನೇ ಹಣಕಾಸು ಆಯೋಗವು ಆರ್‌ಎಲ್‌ಬಿಗಳಿಗೆ ಮೂಲ ಮತ್ತು ಷರತ್ತಿನ ಅನುದಾನ ಎಂದು ಎರಡು ರೀತಿಯ ಅನುದಾನವನ್ನು ಶಿಫಾರಸು ಮಾಡಿದೆ.

ಮೂಲ ಅನುದಾನವನ್ನು ಸ್ಥಳೀಯ ಸಂಸ್ಥೆಗಳು ಸಂಬಳ ಅಥವಾ ಇತರ ವೆಚ್ಚಗಳನ್ನು ಹೊರತುಪಡಿಸಿ ಸ್ಥಳ ನಿರ್ದಿಷ್ಟವಾದ ಕೆಲಸಗಳಿಗೆ ಬಳಸಬಹುದು. ಷರತ್ತಿನ ಅನುದಾನವನ್ನು (ಎ) ಬಯಲು ಮಲವಿಸರ್ಜನೆ ಮುಕ್ತ (ಒಡಿಎಫ್) ಸ್ಥಿತಿಯ ನೈರ್ಮಲ್ಯ ಮತ್ತು ನಿರ್ವಹಣೆ ಮತ್ತು (ಬಿ) ಕುಡಿಯುವ ನೀರು ಸರಬರಾಜು, ಮಳೆ ನೀರು ಕೊಯ್ಲು ಮತ್ತು ನೀರಿನ ಮರುಬಳಕೆಗಾಗಿ ಬಳಸಬಹುದು.

ಕೇಂದ್ರ ಸರ್ಕಾರ ಪ್ರಾಯೋಜಿತ ಯೋಜನೆಗಳಾದ ಸ್ವಚ್ಛ ಭಾರತ ಮತ್ತು ಜಲ ಜೀವನ್ ಮಿಷನ್ ಅಡಿಯಲ್ಲಿ ಕೇಂದ್ರ ಮತ್ತು ರಾಜ್ಯವು ನೈರ್ಮಲ್ಯ ಮತ್ತು ಕುಡಿಯುವ ನೀರಿಗಾಗಿ ಮೀಸಲಿಟ್ಟಿರುವ ಹಣಕ್ಕೆ ಹೆಚ್ಚುವರಿಯಾಗಿ ಈ ಅನುದಾನ ನೀಡಲಾಗುತ್ತದೆ. ಕೇಂದ್ರ ಸರ್ಕಾರದಿಂದ ಪಡೆದ 10 ದಿನಗಳಲ್ಲಿ ರಾಜ್ಯಗಳು ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಅನುದಾನವನ್ನು ವರ್ಗಾಯಿಸಬೇಕಾಗುತ್ತದೆ. 10 ಕೆಲಸದ ದಿನಗಳನ್ನು ಮೀರಿದರೆ, ರಾಜ್ಯ ಸರ್ಕಾರಗಳು ಅನುದಾನವನ್ನು ವಿಳಂಬದ ಅವಧಿಯ ಬಡ್ಡಿಯೊಂದಿಗೆ ಬಿಡುಗಡೆ ಮಾಡಬೇಕಾಗುತ್ತದೆ.

ಇದಕ್ಕೂ ಮೊದಲು 2020ರ ಜೂನ್‌ನಲ್ಲಿ, ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಮೂಲ ಅನುದಾನದ ಮೊದಲ ಕಂತು ಮತ್ತು 14ನೇ ಹಣಕಾಸು ಆಯೋಗದ ಬಾಕಿ 18,199 ಕೋಟಿ ರೂಪಾಯಿಗಳನ್ನು ಎಲ್ಲಾ ರಾಜ್ಯಗಳಿಗೆ ಬಿಡುಗಡೆ ಮಾಡಲಾಗಿತ್ತು. ನಂತರ, 1ನೇ ಕಂತಿನ ಷರತ್ತಿನ ಅನುದಾನ 15,187.50 ಕೋಟಿ ರೂಪಾಯಿಗಳನ್ನು ಎಲ್ಲಾ ರಾಜ್ಯಗಳಿಗೆ ಬಿಡುಗಡೆ ಮಾಡಲಾಗಯಿತು. ಹೀಗಾಗಿ ವೆಚ್ಚ ಇಲಾಖೆ ಈವರೆಗೆ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗಾಗಿ ರಾಜ್ಯಗಳಿಗೆ ಒಟ್ಟು 45,738 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಿದೆ. ಇದುವರೆಗೆ ಬಿಡುಗಡೆಯಾದ ರಾಜ್ಯವಾರು ಅನುದಾನದ ವಿವರ ಹೀಗಿದೆ:

2020-21 ರಲ್ಲಿ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಬಿಡುಗಡೆಯಾದ ರಾಜ್ಯವಾರು ಅನುದಾನ‌
  • ಆಂಧ್ರಪ್ರದೇಶ- 3137.03 ಕೋಟಿ.

  • ಅರುಣಾಚಲ ಪ್ರದೇಶ- 418.80 ಕೋಟಿ.

  • ಅಸ್ಸಾಂ - 802 ಕೋಟಿ.

  • ಬಿಹಾರ- 3763.50 ಕೋಟಿ.

  • ಚತ್ತೀಸಗಢ- 1090.50 ಕೋಟಿ.

  • ಗೋವಾ- 37.50 ಕೋಟಿ.

  • ಗುಜರಾತ್- 2396.25 ಕೋಟಿ.

  • ಹರಿಯಾಣ- 948 ಕೋಟಿ.

  • ಹಿಮಾಚಲ ಪ್ರದೇಶ- 321.75 ಕೋಟಿ.

  • ಜಾರ್ಖಂಡ್- 1266.75 ಕೋಟಿ.

  • ಕರ್ನಾಟಕ- 2412.75 ಕೋಟಿ.

  • ಕೇರಳ- 1221 ಕೋಟಿ.

  • ಮಧ್ಯಪ್ರದೇಶ- 2988 ಕೋಟಿ.

  • ಮಹಾರಾಷ್ಟ್ರ- 4370.25 ಕೋಟಿ.

  • ಮಣಿಪುರ- 88.50 ಕೋಟಿ.

  • ಮೇಘಾಲಯ- 91 ಕೋಟಿ.

  • ಮಿಜೋರಾಂ- 46.50 ಕೋಟಿ.

  • ನಾಗಾಲ್ಯಾಂಡ್ 62.50 ಕೋಟಿ.

  • ಒಡಿಶಾ- 1693.50 ಕೋಟಿ.

  • ಪಂಜಾಬ್- 2233.91 ಕೋಟಿ.

  • ರಾಜಸ್ಥಾನ- 1931 ಕೋಟಿ.

  • ಸಿಕ್ಕಿಂ- 31.50 ಕೋಟಿ.

  • ತಮಿಳುನಾಡು- 1803.50 ಕೋಟಿ.

  • ತೆಲಂಗಾಣ- 1385.25 ಕೋಟಿ.

  • ತ್ರಿಪುರ- 143.25 ಕೋಟಿ.

  • ಉತ್ತರ ಪ್ರದೇಶ- 7314 ಕೋಟಿ.

  • ಉತ್ತರಾಖಂಡ-  430.50 ಕೋಟಿ.

  • ಪಶ್ಚಿಮ ಬಂಗಾಳ- 3309 ಕೋಟಿ.

  • ಒಟ್ಟು 45,737.99 ಕೋಟಿ.

Published by: MAshok Kumar
First published: January 27, 2021, 7:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories